ಮಂಗಳೂರು : ಆದಿತ್ಯನಿಗೂ ನಮಗೂ ಯಾವುದೇ ಸಂಬಂಧ ಇಲ್ಲ. ಆತನ ತಪ್ಪುಗಳಿಗೆ ನಾವು ಜವಾಬ್ದಾರರಲ್ಲ. ನಾವು ಅವನ ಕೃತ್ಯಕ್ಕೆ ಸಪೋರ್ಟ್ ಕೂಡ ಮಾಡುವುದಿಲ್ಲ. ನಮ್ಮ ಅನ್ನಕ್ಕಾಗಿ ನಾವು ದುಡಿಯುತ್ತಿದ್ದೇವೆ. ಆತ ನನ್ನ ಅಣ್ಣ ಹೌದು.. ಆದ್ರೇ ಆತನೊಂದಿಗೆ ಈ ಹಿಂದೆ ಇಂತಹ ಕೃತ್ಯ ಎಸಗಿದ ನಂತ್ರ ಮಾತನಾಡುತ್ತಿಲ್ಲ ಎಂಬುದಾಗಿ ಆದಿತ್ಯ ರಾವ್ ಸಹೋದರ ಅಕ್ಷತ್ ಸ್ಪಷ್ಟ ಪಡಿಸಿದ್ದಾರೆ.
ಈ ಕುರಿತಂತೆ ಸುದ್ದಿಗಾರರೊಂದಿಗೆ ಮಾತನಾಡಿದ ಆದಿತ್ಯ ರಾವ್ ತಮ್ಮ ಅಕ್ಷತ್, ನಾವು ನಮ್ಮ ಅನ್ನಕ್ಕಾಗಿ ದುಡಿಯುತ್ತಿದ್ದೇವೆ. ಆತನಿಗೆ ಎಷ್ಟೇ ಬುದ್ಧಿ ಹೇಳಿದರೂ ಬದಲಾಗಲಿಲ್ಲ. ಇದೇ ವಿಚಾರದಲ್ಲಿ ಅಪ್ಪ ತುಂಬಾ ಸಾರಿ ಅವನನ್ನು ಬದಲಾಯಿಸಲು ಪ್ರಯತ್ನ ಪಟ್ಟರು ಆದ್ರೇ ಬದಲಾಗಲಿಲ್ಲ. ಹೀಗಾಗಿ ಅವನ ಸಂಪರ್ಕದಲ್ಲಿಯೇ ನಾವು ಇಲ್ಲ ಎಂದು ತಿಳಿಸಿದರು.
ಆತನು ನಾನು ಹೈಸ್ಕೂಲ್ ವರೆಗೆ ಜೊತೆಗೆ ಬೆಳೆದೆವು. ಕಾಲೇಜು ಸಮಯದಲ್ಲಿ ಆತ ಹಾಸ್ಟೆಲ್ ಗೆ ಸೇರಿದ. ಆನಂತ್ರ ಆತನ ಸಂಪರ್ಕ ನನ್ನೊಂದಿಗೆ ಕಡಿಮೆ ಆಯಿತು. ಕಳೆದ ಬಾರಿ ಬಾಂಬ್ ಬೆದರಿಕೆ ಕರೆಯ ನಂತ್ರ ಬುದ್ದಿ ಹೇಳಲಾಗಿತ್ತು. ಆದ್ರೇ ತಿದ್ದಿಕೊಳ್ಳಲಿಲ್ಲ. ನಾನು ಅವನೊಂದಿಗೆ ಸಂಪರ್ಕ ಬಿಟ್ಟೆವು. ಮನೆಯಲ್ಲಿ ಅಮ್ಮ ತೀರಿಕೊಂಡಾಗಲೂ ತಿಳಿಸಿದ್ರೂ ಬರಲಿಲ್ಲ. ನಾನೇ ಅಮ್ಮನ ತಿಥಿಕಾರ್ಯ ಮಾಡಿದೆ ಎಂದರು.
2019 ಫೆಬ್ರವರಿ ಕೊನೇ, ನಮ್ಮ ಕುಟುಂಬದ ನಾನಾಗಲೀ, ನಮ್ಮ ತಂದೆಯಾಗಲೀ ಆತನ ಸಂಪರ್ಕದಲ್ಲಿ ಇಲ್ಲ. ಆತ ಜೈಲಿಗೆ ಹೋದಾಗಲೂ ಬೇಲ್ ಗೆ ನಾವು ಸಹಕರಿಸಿಲ್ಲ. ಅವನಿಗೂ ನಮಗೂ ಯಾವುದೇ ಸಂಬಂಧ ಇಲ್ಲ ಎಂದು ಪೊಲೀಸರಿಗೆ ತಿಳಿಸಿದ್ದೇವೆ. ಪೊಲೀಸರ ತನಿಖೆಗೆ ಎಲ್ಲಾ ರೀತಿಯ ಸಹಕಾರ ನೀಡುತ್ತೇವೆ. ಅವನ ಯಾವುದೇ ಕೃತ್ಯಕ್ಕೂ ನಾವು ಸಪೋರ್ಟ್ ಮಾಡಿಲ್ಲ ಎಂಬುದಾಗಿ ಸ್ಪಷ್ಟ ಪಡಿಸಿದರು.
ಇಲ್ಲಿಯವರೆಗೂ ಏಷ್ಟೋ ದೈವ ದೇವರು ಜ್ಯೋತಿಷ್ಯರಲ್ಲಿ ಕೇಳಿ ಸರಿಯಾದ ಪರಿಹಾರ ಸಿಗದೆ ನೊಂದಿದ್ದರೆ.ಅಂತಃಹ ಯಾವುದೇ ಕಠಿಣ ಸಮಸ್ಯೆ ಗಳಿದ್ದರು ಉತ್ತಮ ಸಲಹೆ ಹಾಗೂ ಶಾಶ್ವತ ಪರಿಹಾರ ತಿಳಿಸುತ್ತಾರೆ.
ಇಂದೇ ಸಂಪರ್ಕಿಸಿ ಪಂಡಿತ್ ವೈದಿಕ ಶ್ರೀ ಗಣಪತಿ ಭಟ್
8088827292
ನಕಲಿ ಔಷಧಿ ಜಾಲದಲ್ಲಿ ದೊಡ್ಡ ದೊಡ್ಡ ಖಾಸಗಿ ಆಸ್ಪತ್ರೆಗಳು , ಮೆಡಿಕಲ್ ಸ್ಟೋರ್‌ಗಳು : ಶೀಘ್ರವೇ ತಪ್ಪಿತಸ್ಥ ಆಸ್ಪತ್ರೆಗಳ ಲಿಸ್ಟ್…
ಉಚ್ಚಿಲ ಮೊಗವೀರ ಭವನದಲ್ಲಿ ಕೀರ್ತಿಶೇಷ ಮಾಧವ ಮಂಗಲ ಪೂಜಾರ್ಯರ ಕಂಚಿನ ಪುತ್ಥಳಿ ಅನಾವರಣ ಉಚ್ಚಿಲ : ಮೊಗವೀರ ಸಮಾಜದ ಗುರು…
ಮೈಸೂರು ದಸರಾದಲ್ಲಿ ಕರಾವಳಿಯ ಕಂಬಳ; ಅ. 18-19ರಂದು ‘ವಿಜಯ ದಶಮಿ’ ಜೋಡುಕರೆ ಕಂಬಳ ಮಂಗಳೂರು: ಮೈಸೂರು ದಸರಾ ಉತ್ಸವದ ಅಂಗವಾಗಿ…
2028ಕ್ಕೂ ಡಿಕೆ ಶಿವಕುಮಾರ್ ಅವರೇ ಮುಖ್ಯಮಂತ್ರಿ ಆಗಲಿ, ಅವರಿಂದಲೇ ಪಕ್ಷ ಅಧಿಕಾರಕ್ಕೆ ಬರಲಿ : ಸತೀಶ್ ಜಾರಕಿಹೊಳಿ ಮೈಸೂರು: 2028ಕ್ಕೂ…
ಶಿರ್ವ, ಉಡುಪಿಯಲ್ಲಿ ಮಾದಕ ವಸ್ತು ಮಾರಾಟ ಪ್ರಕರಣ : ಬಂಧಿತರ ಪೈಕಿ ಹಲವರು ಅಪರಾಧ ಕೃತ್ಯಗಳಲ್ಲಿ ಭಾಗಿ ಉಡುಪಿ: ಉಡುಪಿ…
ಕುಂದಾಪುರ: ಶಾರ್ಜಾದಲ್ಲಿ ಕೊಲೆಯಾದ ಅಲ್ವಿನ್ ಪ್ರಕಾಶ್ ಕುಂದರ್ ಅಂತ್ಯಸಂಸ್ಕಾರ ; ಕುಟುಂಬಸ್ಥರ ಆಕ್ರಂದನ ಕುಂದಾಪುರ: ಶಾರ್ಜಾದಲ್ಲಿ ಅಮಾನುಷವಾಗಿ ಕೊಲೆಯಾದ ಕುಂದಾಪುರ…