Featured

ಮಂಗಳೂರು: ಆಶ್ರಮದಿಂದ ಯುವತಿ ನಾಪತ್ತೆ ; ಪೋಲಿಸರಿಂದ ಲುಕ್‌ಔಟ್ ನೋಟಿಸ್ – vishwanews24

ಮಂಗಳೂರು: ಆಶ್ರಮದಿಂದ ಯುವತಿ ನಾಪತ್ತೆ ; ಪೋಲಿಸರಿಂದ ಲುಕ್‌ಔಟ್ ನೋಟಿಸ್

ಮಂಗಳೂರು:  ಮಹಿಳಾ ಆಶ್ರಯ ಕೇಂದ್ರದಲ್ಲಿ ದಾಖಲಾಗಿದ್ದ ಒಡಿಶಾ ಮೂಲದ ಯುವತಿಯೊಬ್ಬಳು ಕೌಂಪೌಂಡ್ ಹಾರಿ ಪರಾರಿಯಾಗಿದ್ದಾಳೆ. ಈಕೆಯ ಪತ್ತೆಗಾಗಿ ಪೋಲೀಸರು ಲುಕ್‌ಔಟ್ ನೋಟಿಸ್ ಹೊರಡಿಸಿದ್ದಾರೆ.

ಒಡಿಷಾ ಮೂಲದ ತ್ರಿಶಾ (22) ನಾಪತ್ತೆಯಾದ ಯುವತಿ.

ಕಳೆದ ವರ್ಷ ತ್ರಿಶಾ ಉದ್ಯೋಗದ ಹುಡುಕಾಟದಲ್ಲಿ ಮಂಗಳೂರಿಗೆ ಬಂದಿದ್ದಳು ಎನ್ನಲಾಗಿದ್ದು ಬಳಿಕ, ಇತ್ತೀಚೆಗೆ ಮಡಿಪುವಿನ ಪ್ರಜ್ಞಾ ಆಶ್ರಯ ಮಂದಿರದಲ್ಲಿ ವಾಸವಾಗಿದ್ದಳು. ಈಕೆ ಜುಲೈ 30 ರಂದು ರಾತ್ರಿ ಅಡುಗೆ ಕೋಣೆಯ ಬಾಗಿಲು ತೆರೆದು ಕೌಂಪೌಂಡ್ ಹಾರಿ ನಾಪತ್ತೆಯಾದ್ದಾಳೆ.

ತ್ರಿಶಾ ಆಕಾಶ್ ಮತ್ತು ಮಾನನಿ ದಂಪತಿ ಮಗಳು. ಆಕೆ ಸುಮಾರು 4 ಅಡಿ ಎತ್ತರ, ಕಪ್ಪು ಮೈಬಣ್ಣ ಮತ್ತು ಸದೃಢ ದೇಹವನ್ನು ಹೊಂದಿದ್ದಾಳೆ. ಆಕೆಯ ಕೂದಲು ಕಪ್ಪಗಿದೆ. ಆಕೆ 5ನೇ ತರಗತಿಯವರೆಗೆ ಓದಿದ್ದು, ಹಿಂದಿ ಮತ್ತು ಒಡಿಯಾ ಭಾಷೆಗಳನ್ನು ಮಾತನಾಡುತ್ತಾಳೆ. ತಪ್ಪಿಸಿಕೊಳ್ಳುವಾಗ ಆಕೆ ಬಿಳಿ ಚೂಡಿದಾರ್ ಟಾಪ್ ಮತ್ತು ನೀಲಿ ಲೆಗ್ಗಿಂಗ್ಸ್ ಧರಿಸಿದ್ದಳು.

ಈ ಬಗ್ಗೆ ಆಶ್ರಮದ ಅಧೀಕ್ಷಕಿ ನೀಡಿದ ದೂರಿನ ಮೇರೆಗೆ, ಕೊಣಾಜೆ ಪೊಲೀಸ್ ಠಾಣೆಯಲ್ಲಿ ನಾಪತ್ತೆ ಪ್ರಕರಣ ದಾಖಲಾಗಿದೆ.

ಅವಳ ಬಗ್ಗೆ ಯಾವುದೇ ಮಾಹಿತಿ ಇದ್ದರೆ ಸಾರ್ವಜನಿಕರು ನೀಡುವಂತೆ ಪೊಲೀಸರು ಮನವಿ ಮಾಡಿದ್ದಾರೆ. ತ್ರಿಶಾ ಪತ್ತೆಯಾದಲ್ಲಿ, ಕೊಣಾಜೆ ಪೊಲೀಸ್ ಠಾಣೆಯ ಇನ್ಸ್ಪೆಕ್ಟರ್ ಅವರನ್ನು 9480802315, 9019873901, ಅಥವಾ 0824-2220536 ಸಂಖ್ಯೆಗಳಲ್ಲಿ ಸಂಪರ್ಕಿಸಲು ವಿನಂತಿಸಲಾಗಿದೆ. konajemgc@ksp.gov.in ಗೆ ಇ-ಮೇಲ್ ಮೂಲಕವೂ ಮಾಹಿತಿಯನ್ನು ನೀಡಬಹುದು.

Vishwa News 24

Recent Posts

ಶಿಳ್ಳೆ ಹಾಕಿದ ಪ್ರೇಕ್ಷಕನಿಗೆ ರಂಗಸ್ಥಳದಲ್ಲೇ ತರಾಟೆ: ಉಜಿರೆ ಅಶೋಕ್ ಭಟ್ ಸಮರ್ಥನೆ – vishwanews24

ಶಿಳ್ಳೆ ಹಾಕಿದ ಪ್ರೇಕ್ಷಕನಿಗೆ ರಂಗಸ್ಥಳದಲ್ಲೇ ತರಾಟೆ: ಉಜಿರೆ ಅಶೋಕ್ ಭಟ್ ಸಮರ್ಥನೆ ಬೆಳ್ತಂಗಡಿ: ಕಲೆಯ ಪ್ರದರ್ಶನದಲ್ಲಿ ಕೆಲವೊಮ್ಮೆ ಪ್ರೇಕ್ಷಕರ ವರ್ತನೆ…

4 hours ago

ಮಂಗಳೂರು: ಯಕ್ಷಗಾನ ಪ್ರದರ್ಶನ ನಡೆಯುತ್ತಿದ್ದಾಗ  ಶಿಳ್ಳೆ  ಹಾಕಿದ್ದಕ್ಕೆ ಪ್ರೇಕ್ಷಕರ ವಿರುದ್ಧ ಕಲಾವಿದ ಉಜಿರೆ ಅಶೋಕ್‌ ಭಟ್‌ ಗರಂ – vishwanews24

ಮಂಗಳೂರು: ಯಕ್ಷಗಾನ ಪ್ರದರ್ಶನ ನಡೆಯುತ್ತಿದ್ದಾಗ  ಶಿಳ್ಳೆ  ಹಾಕಿದ್ದಕ್ಕೆ ಪ್ರೇಕ್ಷಕರ ವಿರುದ್ಧ ಕಲಾವಿದ ಉಜಿರೆ ಅಶೋಕ್‌ ಭಟ್‌ ಗರಂ ಮಂಗಳೂರು: ಯಕ್ಷಗಾನ…

1 day ago

ನೇಪಾಳದ ನೂತನ ಪ್ರಧಾನಿಯಾಗಿ ಬಾಲೇಂದ್ರ ಶಾ ಪ್ರಮಾಣ ವಚನ ಸ್ವೀಕಾರ – vishwanews24

ನೇಪಾಳದ ನೂತನ ಪ್ರಧಾನಿಯಾಗಿ ಬಾಲೇಂದ್ರ ಶಾ ಪ್ರಮಾಣ ವಚನ ಸ್ವೀಕಾರ ಕಠ್ಮಂಡು: ಬಾಲೇಂದ್ರ ಶಾ ಅವರು ಶುಕ್ರವಾರ ನೇಪಾಳದ ನೂತನ…

1 day ago

SSLC ಪರೀಕ್ಷೆ 625 ಅಂಕದಿಂದ 525ಕ್ಕೆ ಇಳಿಕೆ : ಈ ವರ್ಷದಿಂದ ತೃತೀಯ ಭಾಷೆ ಕಡ್ಡಾಯವಲ್ಲ – vishwanews24

SSLC ಪರೀಕ್ಷೆ 625 ಅಂಕದಿಂದ 525ಕ್ಕೆ ಇಳಿಕೆ : ಈ ವರ್ಷದಿಂದ ತೃತೀಯ ಭಾಷೆ ಕಡ್ಡಾಯವಲ್ಲ ಬೆಂಗಳೂರು: ಇನ್ನು ಮುಂದೆ…

1 day ago

ಹರೇಕಳ ಹಾಜಬ್ಬ, ಸೂರಿಕುಮೇರು ಗೋವಿಂದ ಭಟ್, ರವೀಶ್ ಪಡುಮಲೆಗೆ ಮಂಗಳೂರು ವಿವಿ ಗೌರವ ಡಾಕ್ಟರೇಟ್ – vishwanews24

ಮಾ.28ರಂದು ಮಂಗಳೂರು ವಿವಿ 44ನೇ ಘಟಿಕೋತ್ಸವ  :ಹರೇಕಳ ಹಾಜಬ್ಬ, ಸೂರಿಕುಮೇರು ಗೋವಿಂದ ಭಟ್, ರವೀಶ್ ಪಡುಮಲೆಗೆ  ಗೌರವ ಡಾಕ್ಟರೇಟ್ ಮಂಗಳೂರು…

1 day ago

ದ.ಕ ಜಿಲ್ಲೆಯಲ್ಲಿ ಜೆಡಿಎಸ್ ಪಕ್ಷ ಬಲವರ್ಧನೆಗೆ ಹೆಚ್ಚಿನ ಒತ್ತು : ಅಕ್ಷಿತ್ ಸುವರ್ಣ – vishwanews24

ದ.ಕ ಜಿಲ್ಲೆಯಲ್ಲಿ ಜೆಡಿಎಸ್ ಪಕ್ಷ ಬಲವರ್ಧನೆಗೆ ಹೆಚ್ಚಿನ ಒತ್ತು : ಅಕ್ಷಿತ್ ಸುವರ್ಣ ಮಂಗಳೂರು: ಯುವ ಜನತಾದಳ (ಜಾ) ದಕ್ಷಿಣ…

1 day ago