ಮಂಗಳೂರು: ಪ್ರೀತಿಸಿ ಮತಾಂತರಗೊಂಡು ಮದುವೆಯಾದ ಬಳಿಕ ಮೋಸ ಹೋಗಿ ಸರಿಯಾದ ನೆಲೆಯಿಲ್ಲದೇ ಲಾಡ್ಜ್ ಪಾಲಾಗಿ ಮೋಸ ಮಾಡಿದವನ ವಿರುದ್ಧ ಕಾನೂನು ಹೋರಾಟ ನಡೆಸುತ್ತಿದ್ದ ಮಹಿಳೆಗೆ ಕೊನೆಗೂ ನ್ಯಾಯ ಸಿಗದೇ ಎರಡು ವರ್ಷಗಳ ನಿರಂತರ ಹೋರಾಟಕ್ಕೆ ಪೂರ್ಣ ವಿರಾಮ ಹೇಳಿದ್ದಾರೆ.
ಕೇರಳ ಕಣ್ಣೂರಿನ ಪ್ರತಿಷ್ಠಿತ ಕುಟುಂಬದ ವಿವಾಹಿತ ಮಹಿಳೆ ಶಾಂತಿ ಜೂಬಿಗೂ ಮತ್ತು ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯದ ಇಬ್ರಾಹಿಂ ಖಲೀಲ್ಗೂ ಫೇಸ್ಬುಕ್ ಮೂಲಕ ಪರಿಚಯವಾಗಿತ್ತು. ನಂತರ ಇಬ್ಬರ ಪರಿಚಯ ಪ್ರೀತಿಗೆ ತಿರುಗಿತ್ತು. ಮದುವೆ ವಿಚಾರ ಪ್ರಸ್ತಾಪವಾದಾಗ ವಿವಾಹಕ್ಕೂ ಮುನ್ನ ಮತಾಂತರ ಆಗಬೇಕೆಂಬ ಷರತ್ತನ್ನು ಖಲೀಲ್ ವಿಧಿಸಿದ್ದ. ಅದರಂತೆಯೇ ಮತಾಂತರಗೊಂಡು 2017ರಲ್ಲಿ ಶಾಂತಿ ಜೂಬಿ ಪತಿಯನ್ನು ಬಿಟ್ಟು, ಇಬ್ರಾಹಿಂ ಖಲೀಲ್ ಜತೆ ನಿಖಾ ಆಗಿದ್ದಳು. ಬೆಂಗಳೂರಿನಲ್ಲಿ ಇಬ್ಬರ ನಿಖಾ ನೆರವೇರಿತ್ತು. ಮತಾಂತರ ಬಳಿಕ ಶಾಂತಿ ಜೂಬಿ ಆಸಿಯಾ ಆಗಿ ಹೆಸರು ಬದಲಾಯಿಸಿಕೊಂಡಳು. ಬೆಂಗಳೂರಿನಲ್ಲೇ ಆಸಿಯಾ ವಾಸವಿದ್ದಳು. ಖಲೀಲ್ ಸಹ ಬಂದು ಹೋಗುತ್ತಿದ್ದ. ಆಸಿಯಾ ಕೂಡ ಸುಳ್ಯಕ್ಕೆ ಹೋಗಿ ಬರುತ್ತಿದ್ದಳು. ಆರಂಭದಲ್ಲಿ ಸಂಸಾರದ ಬಂಡಿ ಸುಖವಾಗೇ ಸಾಗುತ್ತಿತ್ತು. ಆದರೆ, ಒಮ್ಮೆ ಇದ್ದಕ್ಕಿದ್ದಂತೆ ಪತಿ ಎಸ್ಕೇಪ್ ಆಗಿದ್ದ.
ಖಲೀಲ್ ಮನೆಯವರನ್ನು ಕೇಳಿದರೆ ಆತನನ್ನು ಬಿಟ್ಟುಬಿಡು ಎಂದು ಬೆದರಿಕೆ ಹಾಕುತ್ತಿದ್ದಾರೆಂದು ಆಸಿಯಾ ದೂರಿದ್ದರು. ಆತನನ್ನು ನಂಬಿ ಬೆಂಗಳೂರಿನ ವಿಜಯನಗರದಲ್ಲಿ ನಾಲ್ಕೈದು ಕೋಟಿ ಬೆಲೆಬಾಳುವ ಮನೆ, ತವರಿನ ಎಲ್ಲ ಆಸ್ತಿಯನ್ನು ಶಾಂತಿ ನೀಡಿದ್ದಳು. ಇತ್ತ ಖಲೀಲ್ ಮನೆಯವರು ಸಹ ಆಸಿಯಾಳನ್ನು ಹೊರಹಾಕಿದ್ದಾರೆ. ಇನ್ನು ಲಾಕ್ಡೌನ್ನಿಂದಾಗಿ ಆಸಿಯಾ ಸುಳ್ಯದ ಲಾಡ್ಜ್ನಲ್ಲಿ ವಾಸವಿದ್ದರು.
ಖಲೀಲ್ ಬಿಟ್ಟ ನಂತರ ಆಸಿಯಾ ಅತಂತ್ರವಾಗಿದ್ದರು. ಆಸೀಯಾ ಜತೆ ಮತ್ತೆ ಜೀವನ ನಡೆಸಲ್ಲ ಎಂದು ಖಲೀಲ್ ಹೇಳಿದ್ದ. ಅಂದಿನಿಂದ ಆಸಿಯಾ ಏಕಾಂಗಿಯಾಗಿ ಜೀವನ ನಡೆಸುತ್ತಾ ಎರಡು ವರ್ಷದಿಂದಲೂ ನ್ಯಾಯಕ್ಕಾಗಿ ಹೋರಾಟ ನಡೆಸುತ್ತಿದ್ದರು. ಗಂಡ ಖಲೀಲ್ ನಿಂದ ಸ್ಪಷ್ಟನೆ ಬೇಕೆಂದು ಪಟ್ಟು ಹಿಡಿದಿದ್ದರು. ಆದರೆ ಆಸೀಯಾರಿಂದ ಗಂಡನನ್ನು ಖಲೀಲ್ ಕುಟುಂಬ ದೂರ ಇರಿಸಿತ್ತು. ಇದೀಗ ಆಸೀಯಾ ಜತೆ ಬಾಳಲ್ಲ ಅಂತಾ ಖಲೀಲ್ ನೇರವಾಗಿ ಹೇಳಿದ್ದಾನೆ. ಈ ಹಿನ್ನಲೆಯಲ್ಲಿ ಖಲೀಲ್ ವಿಚಾರದಲ್ಲಿ ಇನ್ನು ಮುಂದೆ ಮಾತಾಡಲ್ಲ ಎಂದು ಆಸೀಯಾ ಹೇಳಿದ್ದಾರೆ. ಇಸ್ಲಾಂ ಧರ್ಮದಲ್ಲೇ ಇದ್ದು ನನ್ನ ಹಾಗೆ ಅನ್ಯಾಯಕ್ಕೆ ಒಳಗಾದ ಮಹಿಳೆಯರ ಪರ ಹೋರಾಡುತ್ತೇನೆ ಎಂದಿದ್ದಾರೆ. ಅನ್ಯಾಯಕ್ಕೊಳಗಾದರೂ ವ್ಯವಸ್ಥೆಯ ವಿರುದ್ಧ ಹೋರಾಡಲಾಗದೇ ಆಸಿಯಾ ಶಸ್ತ್ರತ್ಯಾಗ ಮಾಡಿದ್ದಾರೆ.
ಕಾಪು : ಟೈಮಿಂಗ್ಸ್ ವಿಚಾರದಲ್ಲಿ ಉದ್ದೇಶಪೂರ್ವಕ ಬಸ್ ನಿಲ್ದಾಣದಲ್ಲಿ ಬಸ್‌ಗಳ ಗುದ್ದಾಟ - ನಾಲ್ವರ ಬಂಧನ ಕಾಪು : ಕಾಪು…
ಯುವಜನರಲ್ಲಿ ಹೆಚ್ಚುತ್ತಿರುವ HIV ಸೋಂಕು: ರಾಜ್ಯದ ಕಾಲೇಜು ವಿದ್ಯಾರ್ಥಿಗಳಿಗೆ ತಪಾಸಣೆ ಕಡ್ಡಾಯ ..! ಬೆಂಗಳೂರು: ಯುವ ಜನರಲ್ಲಿ ಹೆಚ್‌ಐವಿ ಸೋಂಕಿನ…
ಸಚಿವ ಯು.ಟಿ. ಖಾದರ್ ಗೆ AMEC ಗ್ಲೋಬಲ್ ಸಿಟಿಝನ್ ಲೀಡರ್ಶಿಪ್ ಪ್ರಶಸ್ತಿ ಪ್ರದಾನ ಬೆಂಗಳೂರು: ಆರೋಗ್ಯ ಮತ್ತು ಕುಟುಂಬ ಕಲ್ಯಾಣ…
ಸಿ. ಟಿ. ರವಿ ಯವರಿಗೆ ನೋಟೀಸ್ ನೀಡುವ ಮೂಲಕ ಹಿಂದುತ್ವವಾದಿ ನಾಯಕರ ದನಿ ಹತ್ತಿಕ್ಕಲು ಮುಂದಾದ ಕಾಂಗ್ರೆಸ್ ಸರಕಾರ :…
ಮಂಗಳೂರು: ಡಿವೈಡರ್‌ಗೆ ಬಸ್ ಡಿಕ್ಕಿ; 35 ಪ್ರಯಾಣಿಕರು ಅಪಾಯದಿಂದ ಪಾರು ಮಂಗಳೂರು : ಖಾಸಗಿ ಎಕ್ಸ್‌ಪ್ರೆಸ್ ಬಸ್ಸೊಂದು ಮಂಗಳೂರು-ಮೂಡುಬಿದಿರೆ ರಾಷ್ಟ್ರೀಯ…
ಕಾಪು : ಟೈಮಿಂಗ್ಸ್ ವಿಚಾರದಲ್ಲಿ ಜಗಳ: ಎಕ್ಸ್‌ಪ್ರೆಸ್ ಬಸ್ ನಿಲ್ದಾಣದಲ್ಲಿ ಬಸ್‌ಗಳ ಗುದ್ದಾಟ ಕಾಪು: ಎರಡು ಎಕ್ಸ್‌ಪ್ರೆಸ್ ಬಸ್ಸುಗಳು ಪ್ರಯಾಣಿಕರು…