Featured

ಮಂಗಳೂರು: ಆ.1 ರಿಂದ ಮೀನುಗಾರಿಗೆ ಋುತು ಆರಂಭ: ಆ. 9ರ ಸಮುದ್ರ ಪೂಜೆಯ ನಂತರ ಪರ್ಸಿನ್‌ ಮೀನುಗಾರಿಕೆ  – vishwanews24

ಮಂಗಳೂರು: ಆ.1 ರಿಂದ ಮೀನುಗಾರಿಗೆ ಋುತು ಆರಂಭ: ಆ. 9ರ ಸಮುದ್ರ ಪೂಜೆಯ ನಂತರ ಪರ್ಸಿನ್‌ ಮೀನುಗಾರಿಕೆ

ಮಂಗಳೂರು: 2 ತಿಂಗಳ ನಿಷೇಧದ ಬಳಿಕ ಕರಾವಳಿಯಲ್ಲಿ ಆಗಸ್ಟ್ 1 ರಿಂದ 2025ರ ಸಾಲಿನ ಮೀನುಗಾರಿಕೆ ಋತು ಆರಂಭವಾಗಲಿದೆ. ಹವಾಮಾನದ ವೈಪರೀತ್ಯಗಳನ್ನು ಗಮನದಲ್ಲಿಟ್ಟುಕೊಂಡು ಟ್ರಾಲ್ ಬೋಟ್‌ಗಳು ಮೀನುಗಾರಿಕೆಗೆ ಸಿದ್ಧವಾಗುತ್ತಿವೆ. ಆದರೆ ಪರ್ಸಿನ್ ಬೋಟ್‌ಗಳು ಆಗಸ್ಟ್ 9ರ ಸಮುದ್ರ ಪೂಜೆಯ ನಂತರವಷ್ಟೇ ಸಮುದ್ರಕ್ಕೆ ಇಳಿಯಲು ನಿರ್ಧರಿಸಿವೆ. ಈ ಬಾರಿ ಉತ್ತಮ ಮೀನುಗಾರಿಕೆ ನಿರೀಕ್ಷೆಯಲ್ಲಿದ್ದಾರೆ.

ಒಂದೂವರೆ ತಿಂಗಳಿಂದ ಭಾರಿ ಮಳೆ ಗಾಳಿ ಇತ್ತಾದರೂ, ಎರಡು ದಿನಗಳಿಂದ ಬಿಸಿಲು ಬಂದಿದ್ದು, ಮೀನುಗಾರಿಕೆ ಅನುಕೂಲವಾಗಿದೆ..ಫೆಬ್ರವರಿ ತಿಂಗಳನಿಂದಲೇ ಬಿಸಿಲಿನ ಝಳದಿಂದಾಗಿ ಮೀನು ಸಂಗ್ರಹದಲ್ಲಿ ತೀವ್ರ ಇಳಿಕೆಯಾಗಿ ಮೀನುಗಾರರು ಕಂಗಾಲಾಗಿದ್ದರು. ಸರಕಾರಿ ನಿಯಮದಂತೆ ಆ.1ರಿಂದ ಮೀನುಗಾರಿಕೆ ಆರಂಭಗೊಳ್ಳಲಿದೆ. ಟ್ರಾಲ್‌ ಬೋಟ್‌ಗಳು ಅಂದು ಹವಾಮಾನ ಇಲಾಖೆಯ ವರದಿ ಗಮನಿಸಿ ಮೀನುಗಾರಿಕೆಗೆ ತೆರಳಲಿದ್ದಾರೆ.

ಮೀನುಗಾರಿಕೆ ಇಲಾಖೆ ನಿಯಮದಂತೆ ಆ.1ರಿಂದ ಮೀನುಗಾರಿಕೆ ಆರಂಭಿಸಬಹುದು. ಅಂದೇ ತೆರಿಗೆ ರಹಿತ ಡೀಸೆಲ್‌ ಪೂರೈಕೆ ಮಾಡಲಿದ್ದು, ಟ್ರಾಲ್‌ ಬೋಟ್‌ನವರು ಕಡಲಿಗೆ ಇಳಿಯಲಿದ್ದು, ಮಂಜುಗಡ್ಡೆ ತುಂಬಿಸುವ, ಬಲೆ ಸರಿಪಡಿಸುವ ಕಾರ್ಯ ನಡೆಯುತ್ತಿದೆ.

ಒಂದೂವರೆ ತಿಂಗಳಿಂದ ಭಾರಿ ಮಳೆ ಗಾಳಿ ಇತ್ತಾದರೂ, ಎರಡು ದಿನಗಳಿಂದ ಬಿಸಿಲು ಬಂದಿದ್ದು, ಮೀನುಗಾರಿಕೆ ಅನುಕೂಲವಾಗಿದೆ. ರಜೆಯಲ್ಲಿ ಊರಿಗೆ ಮರಳಿದ್ದ ಹೊರ ರಾಜ್ಯಗಳ ಕಾರ್ಮಿಕರು ವಾಪಸಾಗುತ್ತಿದ್ದು, ದಕ್ಕೆ ಪ್ರದೇಶಗಳಲ್ಲಿ ಟ್ರಾಲ್‌ ಹಾಗೂ ಪರ್ಸೀನ್‌ ಬೋಟ್‌ಗಳನ್ನು ಸಿದ್ಧಗೊಳಿಸಲಾಗುತ್ತಿದೆ.

ಕಳೆದ ಅವಧಿಯಲ್ಲಿ ಹವಾಮಾನ ವೈಪರೀತ್ಯದ ಜತೆಗೆ ಫೆಬ್ರವರಿ ತಿಂಗಳನಿಂದಲೇ ಬಿಸಿಲಿನ ಝಳದಿಂದಾಗಿ ಮೀನು ಸಂಗ್ರಹದಲ್ಲಿ ತೀವ್ರ ಇಳಿಕೆಯಾಗಿ ಮೀನುಗಾರರು ಕಂಗಾಲಾಗಿದ್ದರು. ಈ ಬಾರಿ ಉತ್ತಮ ಮೀನುಗಾರಿಕೆಯ ನಿರೀಕ್ಷೆಯೊಂದಿಗೆ ಧಕ್ಕೆ ಪ್ರದೇಶಗಳಲ್ಲಿ ಮೀನುಗಾರರು ಪೈಂಟಿಂಗ್‌, ಎಂಜಿನ್‌ ದುರಸ್ತಿ, ಬಲೆ ದುರಸ್ತಿ, ಡೀಸೆಲ್‌ ಪಡೆಯಲು ಬೇಕಾದ ಪ್ರಕ್ರಿಯೆಗಳು ಸೇರಿದಂತೆ ಬೋಟುಗಳನ್ನು ಕಡಲಿಗಿಳಿಸಲು ಪೂರ್ವ ಸಿದ್ಧತೆಗಳನ್ನು ನಡೆಸುತ್ತಿದ್ದಾರೆ.

ಯಾಂತ್ರೀಕೃತ ಮೀನುಗಾರಿಕೆ ನಿಷೇಧ ಸಂದರ್ಭ ಕರಾವಳಿಯಲ್ಲಿ ಸಾಂಪ್ರದಾಯಿಕ ದೋಣಿಗಳ ಮೂಲಕ ನಡೆಸಲಾಗುವ ನಾಡದೋಣಿ ಮೀನುಗಾರಿಕೆ ಚುರುಕು ಪಡೆಯುತ್ತದೆ. ಎರಡು ತಿಂಗಳ ಅವಧಿಯಲ್ಲಿಹವಾಮಾನ ವೈಪರೀತ್ಯದ ಹಿನ್ನೆಲೆಯಲ್ಲಿ ನಾಡದೋಣಿ ಮೀನುಗಾರಿಕೆಯೂ ಕ್ಷೀಣವಾಗಿದೆ.

ಮಾರುಕಟ್ಟೆಗಳಲ್ಲಿ ತಾಜಾ ಮೀನಿನ ಕೊರತೆ ಜತೆಗೆ ಮೀನಿನ ದರವೂ ಮೀನು ಪ್ರಿಯರನ್ನು ಕಂಗೆಡಿಸಿದೆ. ಪ್ಯಾಕ್‌ ಮಾಡಿ ಐಸ್‌ನಲ್ಲಿಇರಿಸಲಾದ ಮೀನಿನ ಜತೆಗೆ ತಮಿಳುನಾಡು, ಆಂಧ್ರಪ್ರದೇಶ, ಗುಜರಾತ್‌, ಒಡಿಸಾ ರಾಜ್ಯಗಳ ತಾಜಾ ಮೀನು ಮಾರುಕಟ್ಟೆಗೆ ಬರುತ್ತಿದೆ. ದರವೂ ಏರಿಳಿತ ಕಾಣುತ್ತಿದೆ.

2024-25ನೇ ಸಾಲಿನ ಆಗಸ್ಟ್‌ನಿಂದ ಮಾರ್ಚ್ ವರೆಗೆ ಮೀನುಗಾರಿಕೆಯಲ್ಲಿ ಭಾರಿ ಕುಸಿತ ಕಂಡು ಬಂದಿತ್ತು. ಮೀನುಗಾರಿಕಾ ಇಲಾಖೆ ಮಾಹಿತಿ ಪ್ರಕಾರ, 2025ರ ಏಪ್ರಿಲ್‌ನಲ್ಲಿ 7100 ಮೆಟ್ರಿಕ್‌ ಟನ್‌ ಮೀನು ಸಂಗ್ರಹವಾಗಿದ್ದರೆ, ಮೇ ತಿಂಗಳಲ್ಲಿ 6210 ಮೆಟ್ರಿಕ್‌ ಟನ್‌ ಮೀನುಗಾರಿಕೆಯಾಗಿದೆ. 2023-24ರಲ್ಲಿ 2.39 ಲಕ್ಷ ಟನ್‌, 2024-25ರಲ್ಲಿ 1.72 ಲಕ್ಷ ಟನ್‌ ಮೀನುಗಾರಿಕೆಯಾಗಿದೆ.

ಮಂಗಳೂರು ದಕ್ಕೆಯನ್ನು ಪ್ರಧಾನ ಮಂತ್ರಿ ಮತ್ಸ್ಯ ಸಮೃದ್ಧಿ ಯೋಜನೆಯಡಿ 37.50 ಕೋಟಿ ರೂ. ಮೊತ್ತದಲ್ಲಿಆಧುನೀಕರಣ ಮತ್ತು ಮೂರನೇ ಹಂತದ ದಕ್ಕೆ ಕಾಮಗಾರಿ ಕೂಡಾ ನಡೆಯಲಿದೆ. ಬಹಳ ಹಳೆಯ ಹರಾಜು ಪ್ರಾಂಗಣ ತೆರವು ಮಾಡಲಾಗಿದೆ. ರಸ್ತೆ ದುರಸ್ತಿ ಕಾಮಗಾರಿ ನಡೆಯುತ್ತಿದ್ದು, ಮೀನುಗಾರಿಕೆ ಆರಂಭದ ವೇಳೆ ಅಡಚಣೆಯಾಗಲಿದೆ.

ಈ ಪ್ರಕರಣವನ್ನು ಮುಂಬೈ ಭಯೋತ್ಪಾದಕ ನಿಗ್ರಹ ಪಡೆ ಪ್ರಾಥಮಿಕ ತನಿಖೆ ನಡೆಸಿತ್ತು. ನಂತರ ತನಿಖೆಯ ಹೊಣೆಯನ್ನು ಎನ್‌ಐಎ ವಹಿಸಿಕೊಂಡಿತ್ತು. ಬಿಜೆಪಿ ಮಾಜಿ ಸಂಸದೆ ಪ್ರಜ್ಞಾಸಿಂಗ್ ಠಾಕೂರ್, ಮಾಜಿ ಸೇನಾಧಿಕಾರಿ ಪ್ರಸಾದ್ ಪುರೋಹಿತ್ (ನಿವೃತ್ತ), ಮೇಜರ್ ರಮೇಶ್ ಉಪಾಧ್ಯಾಯ (ನಿವೃತ್ತ) ಸೇರಿದಂತೆ ಏಳು ಮಂದಿ ಆರೋಪಿಗಳ ಮೇಲೆ ಐಪಿಸಿ, ಯುಎಪಿಎ ಅನ್ವಯ ಆರೋಪ ಹೊರಿಸಲಾಗಿತ್ತು.

Vishwa News 24

Recent Posts

ನಕಲಿ ಔಷಧಿ ಜಾಲದಲ್ಲಿ ದೊಡ್ಡ ದೊಡ್ಡ ಖಾಸಗಿ ಆಸ್ಪತ್ರೆಗಳು , ಮೆಡಿಕಲ್ ಸ್ಟೋರ್‌ಗಳು: ಯು.ಟಿ.ಖಾದರ್ – vishwanews24

ನಕಲಿ ಔಷಧಿ ಜಾಲದಲ್ಲಿ ದೊಡ್ಡ ದೊಡ್ಡ ಖಾಸಗಿ ಆಸ್ಪತ್ರೆಗಳು ,  ಮೆಡಿಕಲ್ ಸ್ಟೋರ್‌ಗಳು : ಶೀಘ್ರವೇ ತಪ್ಪಿತಸ್ಥ ಆಸ್ಪತ್ರೆಗಳ ಲಿಸ್ಟ್…

2 days ago

ಉಚ್ಚಿಲ : ಮೊಗವೀರ ಕುಲಗುರು ಕೀರ್ತಿಶೇಷ ಶ್ರೀ ಮಾಧವ ಮಂಗಲ ಪೂಜಾರ್ಯರ ಕಂಚಿನ ಪುತ್ಥಳಿ ಅನಾವರಣ – vishwanews24

ಉಚ್ಚಿಲ ಮೊಗವೀರ ಭವನದಲ್ಲಿ ಕೀರ್ತಿಶೇಷ ಮಾಧವ ಮಂಗಲ ಪೂಜಾರ್ಯರ ಕಂಚಿನ ಪುತ್ಥಳಿ ಅನಾವರಣ ಉಚ್ಚಿಲ : ಮೊಗವೀರ ಸಮಾಜದ ಗುರು…

2 days ago

ಮೈಸೂರು ದಸರಾದಲ್ಲಿ ಕರಾವಳಿಯ ಕಂಬಳ : ಅ. 18-19ರಂದು ವಿಜಯ ದಶಮಿ ಕರೆಯಲ್ಲಿ ಜೋಡುಕರೆ ಕಂಬಳ – vishwanews24

ಮೈಸೂರು ದಸರಾದಲ್ಲಿ ಕರಾವಳಿಯ ಕಂಬಳ; ಅ. 18-19ರಂದು ‘ವಿಜಯ ದಶಮಿ’ ಜೋಡುಕರೆ ಕಂಬಳ ಮಂಗಳೂರು: ಮೈಸೂರು ದಸರಾ ಉತ್ಸವದ ಅಂಗವಾಗಿ…

2 days ago

2028ಕ್ಕೂ ಡಿಕೆ ಶಿವಕುಮಾರ್‌ ಅವರೇ ಮುಖ್ಯಮಂತ್ರಿ ಆಗಲಿ, ಅವರಿಂದಲೇ ಪಕ್ಷ ಅಧಿಕಾರಕ್ಕೆ ಬರಲಿ : ಸತೀಶ್ ಜಾರಕಿಹೊಳಿ – vishwanews24

2028ಕ್ಕೂ ಡಿಕೆ ಶಿವಕುಮಾರ್‌ ಅವರೇ ಮುಖ್ಯಮಂತ್ರಿ ಆಗಲಿ, ಅವರಿಂದಲೇ ಪಕ್ಷ ಅಧಿಕಾರಕ್ಕೆ ಬರಲಿ : ಸತೀಶ್ ಜಾರಕಿಹೊಳಿ ಮೈಸೂರು: 2028ಕ್ಕೂ…

2 days ago

ಶಿರ್ವ, ಉಡುಪಿಯಲ್ಲಿ ಮಾದಕ ವಸ್ತು ಮಾರಾಟ ಪ್ರಕರಣ : ಬಂಧಿತರ ಪೈಕಿ ಹಲವರು ಅಪರಾಧ ಕೃತ್ಯಗಳಲ್ಲಿ ಭಾಗಿ – vishwanews24

ಶಿರ್ವ, ಉಡುಪಿಯಲ್ಲಿ ಮಾದಕ ವಸ್ತು ಮಾರಾಟ ಪ್ರಕರಣ : ಬಂಧಿತರ ಪೈಕಿ ಹಲವರು ಅಪರಾಧ ಕೃತ್ಯಗಳಲ್ಲಿ ಭಾಗಿ ಉಡುಪಿ: ಉಡುಪಿ…

2 days ago

ಕುಂದಾಪುರ:  ಶಾರ್ಜಾದಲ್ಲಿ ಕೊಲೆಯಾದ ಅಲ್ವಿನ್ ಪ್ರಕಾಶ್ ಕುಂದರ್ ಅಂತ್ಯಸಂಸ್ಕಾರ ; ಕುಟುಂಬಸ್ಥರ ಆಕ್ರಂದನ – vishwanews24

ಕುಂದಾಪುರ:  ಶಾರ್ಜಾದಲ್ಲಿ ಕೊಲೆಯಾದ ಅಲ್ವಿನ್ ಪ್ರಕಾಶ್ ಕುಂದರ್ ಅಂತ್ಯಸಂಸ್ಕಾರ ; ಕುಟುಂಬಸ್ಥರ ಆಕ್ರಂದನ ಕುಂದಾಪುರ: ಶಾರ್ಜಾದಲ್ಲಿ ಅಮಾನುಷವಾಗಿ ಕೊಲೆಯಾದ ಕುಂದಾಪುರ…

2 days ago