Featured

ಮಂಗಳೂರು: ಇನ್ಮುಂದೆ ಪಾಸ್‌ಪೋರ್ಟ್‌ನಲ್ಲಿ ಸರ್ ನೇಮ್ ಕಡ್ಡಾಯ : ಯುಎಇ – Vishwanews24

ಮಂಗಳೂರು: ಇನ್ಮುಂದೆ ʼ ಪಾಸ್‌ಪೋರ್ಟ್‌ನಲ್ಲಿ ಸರ್ ನೇಮ್ ಕಡ್ಡಾಯʼ : ಯುಎಇ

ಮಂಗಳೂರು: ಪಾಸ್‌ಪೋರ್ಟ್‌ನಲ್ಲಿ ಒಂದೇ ಹೆಸರು ಇರುವವರು ಇನ್ನು ಮುಂದೆ ಯುಎಇಗೆ ಪ್ರವಾಸ, ಸಂದರ್ಶನ ಅಥವಾ ಯಾವುದೇ ಉದ್ದೇಶಕ್ಕೆ ವೀಸಾ ಮೂಲಕ ಪ್ರವೇಶಕ್ಕೆ ಅವಕಾಶ ಇರುವುದಿಲ್ಲ.

ಪಾಸ್‌ ಪೋರ್ಟ್‌ ಮತ್ತು ವೀಸಾದಲ್ಲಿ ಎರಡು ಅಥವಾ ಅದಕ್ಕಿಂತ ಹೆಚ್ಚು ಹೆಸರು ಇರಲೇಬೇಕು. ಇಲ್ಲದಿದ್ದಲ್ಲಿ ಪ್ರವೇಶವಿಲ್ಲ ಎಂದು ಯುಎಇ ಆಡಳಿತ ಸೂಚನೆ ಹೊರಡಿಸಿದ್ದು, ನವೆಂಬರ್ 21 ರಿಂದಲೇ ಈ ನಿಯಮ ಜಾರಿಗೆ ತಂದಿದೆ. ಈ ಮಾಹಿತಿಯನ್ನು ವಿಮಾನ ಯಾನ ಸಂಸ್ಥೆಗಳು ತಮ್ಮ ವೆಬ್‌ಸೈಟ್‌ನಲ್ಲಿ ಹಂಚಿಕೊಂಡಿವೆ.

ಹೀಗಿದ್ದರೂ, ಪಾಸ್‌ಪೋರ್ಟ್‌ನಲ್ಲಿ ಒಂದೇ ಹೆಸರಿದ್ದು, ಅದೇ ಹೆಸರಿನ ನಿವಾಸ ಪರವಾನಗಿ ಅಥವಾ ಉದ್ಯೋಗ ವೀಸಾವಿದ್ದರೆ, ಅಂಥವರು ಅದೇ ಹೆಸರನ್ನು ‘ಮೊದಲ ಹೆಸರು’ ಮತ್ತು ‘ಉಪನಾಮ’ (ಸರ್‌ನೇಮ್‌) ಕಾಲಂನಲ್ಲಿ ನವೀಕರಿಸಿದರೆ ಪ್ರಯಾಣಿಸಲು ಅನುಮತಿ ನೀಡಲಾಗುತ್ತದೆ ಎಂದು ಸೂಚನೆಯಲ್ಲಿ ತಿಳಿಸಲಾಗಿದೆ.

ಒಂದೇ ಹೆಸರು ಇರುವವರಿಗೆ ನಿಬಂಧನೆ ಹೇರಿರುವ ಹಿನ್ನೆಲೆಯಲ್ಲಿ ಪ್ರವಾಸಿ (ಟೂರಿಸ್ಟ್‌) ಅಥವಾ ಸಂದರ್ಶನ (ವಿಸಿಟ್‌) ವೀಸಾದಲ್ಲಿ ಹೆಸರು ಬದಲಾವಣೆ ಮಾಡಿಕೊಳ್ಳಲು ಸೂಚನೆ ನೀಡಲಾಗಿದೆ. ಪಾಸ್‌ಪೋರ್ಟ್‌ನಲ್ಲಿ ವಿಜಯ ಕುಮಾರ್‌ ಎಂಬ ಹೆಸರು ಇರುವವರು ‘ಸರ್‌ ನೇಮ್‌’ ಎಂದು ಇರುವಲ್ಲಿ ಸಂಪೂರ್ಣ ಹೆಸರು ಬರೆದು, ಫಸ್ಟ್‌ ನೇಮ್‌ ಎಂದು ಇರುವಲ್ಲಿ ಖಾಲಿ ಬಿಡುವಂತಿಲ್ಲ.

ಸರ್‌ ನೇಮ್‌ ಇರುವಲ್ಲಿ ‘ಕುಮಾರ್‌’ ಎಂದೂ, ಫಸ್ಟ್‌ ನೇಮ್‌ ಇರುವಲ್ಲಿ ವಿಜಯ್‌ ಎಂದೂ ಬರೆಯಬೇಕು. ವಿಜಯ್‌ ಕುಮಾರ್‌ ಎಂದು ಒಟ್ಟಿಗೆ ‘ಫಸ್ಟ್‌ ನೇಮ್‌’ ಎಂದು ಬರೆಯುವಂತಿಲ್ಲ. ಮಧ್ಯೆ ಜಾಗ ಬಿಟ್ಟು ಬರೆಯಬೇಕು. ವಿಶೇಷವಾಗಿ ‘ಚೆಕ್‌ ಇನ್‌’ ಸಂದರ್ಭ ವಿಜಯ್‌ ಪ್ರಥಮ ಹೆಸರು ಮತ್ತು ಕುಮಾರ್‌ ‘ಕೊನೆಯ ಹೆಸರು’ ಎಂದು ನಮೂದಿಸಬೇಕು.

ದಶಕಗಳ ಹಿಂದೆ ಸೌದಿ ಅರೇಬಿಯಾಕ್ಕೆ ಉದ್ಯೋಗಕ್ಕೆ ತೆರಳುವವರಿಗೆ ಪಾಸ್‌ಪೋರ್ಟ್‌ನಲ್ಲಿ ಮೂರು ಹೆಸರು ಕಡ್ಡಾಯವಾಗಿತ್ತು. ಆಗ ಎಲ್ಲರೂ ಮೂರು ಹೆಸರು ಹಾಕುತ್ತಿದ್ದರು. ಹಿಂದೆ ಇದ್ದ ಒಂದು ಹೆಸರಿಗೆ ಉಪನಾಮ, ತಂದೆಯ ಹೆಸರು, ಊರಿನ ಹೆಸರೂ ಸೇರಿಸುತ್ತಿದ್ದರು. ಅದಕ್ಕಾಗಿ ಅಫಿಡವಿಟ್‌, ಹೆಸರು ಬದಲಾವಣೆ ಮಾಡಿಕೊಳ್ಳುತ್ತಿದ್ದರು. ಮದುವೆಯಾದ ಮಹಿಳೆಯರು ಪತಿಯ ಹೆಸರು ಸೇರಿಸಿ, ಮೂರು ಹೆಸರು ಮಾಡಿಕೊಳ್ಳುತ್ತಿದ್ದರು.

Vishwa News 24

Recent Posts

ಉಳ್ಳಾಲ: ನಾಪತ್ತೆಯಾಗಿದ್ದ ಕುಂದಾಪುರ ಮೂಲದ ಮೀನುಗಾರನ  ಮೃತದೇಹ ಪತ್ತೆ -vishwanews24

ಉಳ್ಳಾಲ: ನಾಪತ್ತೆಯಾಗಿದ್ದ ಕುಂದಾಪುರ ಮೂಲದ ಮೀನುಗಾರನ  ಮೃತದೇಹ ಪತ್ತೆ ಉಳ್ಳಾಲ : ಮೀನುಗಾರಿಕೆಗೆ ತೆರಳಿದ್ದ ವೇಳೆ ದೈತ್ಯ ಗಾತ್ರದ ಅಲೆಗೆ…

23 hours ago

ನಿರೂಪಣಾ ವೃತ್ತಿಗೆ ಅಧಿಕೃತವಾಗಿ ನಿವೃತ್ತಿ ಘೋಷಿಸಿದ ಅನುಪಮಾ ಗೌಡ -vishwanews24

ನಿರೂಪಣಾ ವೃತ್ತಿಗೆ ಅಧಿಕೃತವಾಗಿ ನಿವೃತ್ತಿ ಘೋಷಿಸಿದ ಅನುಪಮಾ ಗೌಡ ಬೆಂಗಳೂರು : ನಟಿ ಅನುಪಮಾ ಗೌಡ ಅವರು ನಟನೆಯ ಮೂಲಕ…

23 hours ago

ಉಪ್ಪೂರು : ವಯೋವಂದನ ಆತಿಥ್ಯ ಗೃಹ “ಸೈಟ್ ಆಫೀಸ್” ಉದ್ಘಾಟನೆ ; ರಾಷ್ಟ್ರಧ್ವಜಾರೋಹಣ, ವೃಕ್ಷಾರೋಪಣ ಕಾರ್ಯಕ್ರಮ -vishwanews24

ಉಪ್ಪೂರು : ವಯೋವಂದನ ಆತಿಥ್ಯ ಗೃಹ "ಸೈಟ್ ಆಫೀಸ್" ಉದ್ಘಾಟನೆ ; ರಾಷ್ಟ್ರಧ್ವಜಾರೋಹಣ, ವೃಕ್ಷಾರೋಪಣ ಕಾರ್ಯಕ್ರಮ ಉಡುಪಿ ಜಿಲ್ಲೆ ಬ್ರಹ್ಮಾವರ…

3 days ago

ಪುತ್ತೂರು:  ಕೆಎಸ್‌ಆರ್‌ಟಿಸಿ ಬಸ್ – ಬೈಕ್ ನಡುವೆ ಭೀಕರ ಅಪಘಾತ : ಸವಾರ ಸ್ಥಳದಲ್ಲೇ ಮೃತ್ಯು – vishwanews24

ಪುತ್ತೂರು:  ಕೆಎಸ್‌ಆರ್‌ಟಿಸಿ ಬಸ್ ಮತ್ತು ಬೈಕ್ ನಡುವೆ  ಭೀಕರ ಅಪಘಾತ: ಸವಾರ ಸ್ಥಳದಲ್ಲೇ ಮೃತ್ಯು ಪುತ್ತೂರು: ಕೆಯ್ಯರು ಗ್ರಾಮದ ಬೊಳಿಕ್ಕಳ…

4 days ago

ಸೆ.30ರೊಳಗೆ ಎಲ್ಲ ಪಡಿತರ ಚೀಟಿದಾರರು e-KYC ಮಾಡಿಸುವುದು ಕಡ್ಡಾಯ : ಸಚಿವ ರಿಜ್ವಾನ್ ಅರ್ಷದ್ – vishwanews24

ಸೆ.30ರೊಳಗೆ ಎಲ್ಲ ಪಡಿತರ ಚೀಟಿದಾರರು e-KYC ಮಾಡಿಸುವುದು ಕಡ್ಡಾಯ : ಸಚಿವ ರಿಜ್ವಾನ್ ಅರ್ಷದ್ ಬೆಂಗಳೂರು : ಕೇಂದ್ರ ಸರಕಾರದ…

4 days ago

ಬೆಂಗಳೂರು: ಕೌಟುಂಬಿಕ ಕಲಹ ; ಹೆಂಡತಿ ಕೊಂದು ಗಂಡ ಆತ್ಮಹತ್ಯೆ – vishwanews24

ಬೆಂಗಳೂರು: ಕೌಟುಂಬಿಕ ಕಲಹ ; ಹೆಂಡತಿ ಕೊಂದು ಗಂಡ ಆತ್ಮಹತ್ಯೆ ಬೆಂಗಳೂರು: ನಗರದ ರಾಜೇಶ್ವರಿ ನಗರದಲ್ಲಿ ಹೆಂಡತಿಯನ್ನು ಕೊಂದು ಗಂಡ…

4 days ago