ಮಂಗಳೂರು : ಆ ಬಾವಿಯ ನೀರು ಎಲ್ಲಾ ಬಾವಿಗಳಲ್ಲಿ ಸಿಗುವ ಮಾಮೂಲಿ ನೀರಲ್ಲ. ಬದಲಾಗಿ ಜೀವ ಉಳಿಸುವ ಸಂಜೀವಿನಿ. ಯಾವುದೇ ರೀತಿಯ ವಿಷ ಜಂತುಗಳು ಕಡಿದರೆ ಆ ಬಾವಿಯ ನೀರನ್ನು ಕುಡಿದು, ಅಲ್ಲಿನ ಮಣ್ಣನ್ನು ಹಾಕಿಕೊಂಡರೆ ವಿಷವೆಲ್ಲಾ ಇಳಿಯುತ್ತದೆ. ಏತದ ಮೂಲಕ ನೀರನ್ನು ಎಳೆಯುವ ಈ ಬಾವಿ ಪವಿತ್ರ ಸಂಜೀವಿನಿ ಬಾವಿ.
ಮಂಗಳೂರಿನ ಕಟೀಲು ಸಮೀಪದ ಶಿಬರೂರು ಎಂಬಲ್ಲಿರುವ ಶ್ರೀ ಕೊಡಮಣಿತ್ತಾಯ ದೈವಸ್ಥಾನದ ಪವಿತ್ರ ಬಾವಿ ಇದು. ವರ್ಷಕ್ಕೊಂದು ಬಾರಿ ನಡೆಯುವ ಇಲ್ಲಿನ ವಾರ್ಷಿಕ ಜಾತ್ರಾ ಮಹೋತ್ಸವದ ಎಂಟು ದಿನಗಳ ಕಾಲ ಈ ಬಾವಿಯ ನೀರನ್ನು ಅತೀ ಹೆಚ್ಚು ಭಕ್ತರಿಗೆ ತೆಗೆದುನೀಡಲಾಗುತ್ತದೆ.
ಪುರಾತನ ಕಾಲದಲ್ಲಿ ಸ್ಥಳೀಯ ದೈವೀ ವೈದ್ಯರಾದ ತ್ಯಾಂಪಣ್ಣ ಶೆಟ್ಟಿ ಎಂಬವರು ತನ್ನಲ್ಲಿದ್ದ ವಿಷ ಹೀರುವ ಕಲ್ಲೊಂದನ್ನು ಲೋಕದ ಜನತೆಯ ಒಳಿತಿಗಾಗಿ ಈ ಬಾವಿಗೆ ಹಾಕಿದ್ದಾರೆ. ಹೀಗಾಗಿ ಆ ಶಕ್ತಿಯಿಂದಲೇ ಈ ಬಾವಿಯ ನೀರು ಯಾವುದೇ ರೀತಿಯ ವಿಷವನ್ನು ಹೀರಿಕೊಳ್ಳುತ್ತದೆ ಅನ್ನುವ ನಂಬಿಕೆ ಹಿಂದಿನ ಕಾಲದಿಂದ ಇಂದಿನವರೆಗೂ ಉಳಿದುಕೊಂಡು ಬಂದಿದೆ.
ಜಾತ್ರಾ ಮಹೋತ್ಸವದ 8 ದಿನದಲ್ಲಿ ಈ ದೈವಸ್ಥಾನಕ್ಕೆ ಲಕ್ಷಾಂತರ ಭಕ್ತರು ಬಂದು, ಈ ಪವಿತ್ರ ನೀರನ್ನು ಕೊಂಡೊಯ್ಯತ್ತಾರೆ. ಈ ನೀರನ್ನು ಕುಡಿಯುವುದರಿಂದ ವರ್ಷವಿಡೀ ದೇಹದಲ್ಲಿದ್ದ ವಿಷಕಾರಿ ಅಂಶಗಳು ಹೋಗುತ್ತದೆ. ಜೊತೆಗೆ ವಿಷಜಂತುಗಳು ಕಡಿದಂತಹ ಸಂದರ್ಭದಲ್ಲಿ ತಕ್ಷಣ ಈ ನೀರನ್ನು ಕುಡಿದು ನಂತರ ಈ ಕ್ಷೇತ್ರದಲ್ಲೇ ಸಿಗುವ ಮಣ್ಣನ್ನು ನೀರಲ್ಲಿ ಬೆರಸಿ ಗಾಯಕ್ಕೆ ಹಚ್ಚಿದರೆ ವಿಷ ಕಾರುತ್ತದೆ ಅನ್ನುವ ನಂಬಿಕೆ ಇಂದಿಗೂ ಉಳಿದಿದೆ. ನಾನಾ ಊರುಗಳಿಂದ ಬರುವ ಭಕ್ತರು ಈ ಆಧುನಿಕ ಯುಗದಲ್ಲೂ ಈ ನಂಬಿಕೆಯನ್ನು ಇಟ್ಟು ನೀರು ಹಾಗೂ ಮಣ್ಣನ್ನು ಕೊಂಡೊಯ್ಯಲು ಮುಗಿ ಬೀಳುತ್ತಾರೆ.
ಈ ಪವಿತ್ರ ನೀರಿಗೆ ಒಂದು ವರ್ಷಗಳ ಕಾಲ ಶಕ್ತಿ ಇರುತ್ತದೆ. ಹೀಗಾಗಿ ಪ್ರತಿ ವರ್ಷವೂ ಹೊಸ ನೀರನ್ನು ಹಾಗೂ ಮಣ್ಣನ್ನು ಕೊಂಡೊಯ್ಯಲು ಭಕ್ತರು ಜಾತ್ರಾ ಸಂದರ್ಭದಲ್ಲಿ ಇಲ್ಲಿಗೆ ಬರುತ್ತಾರೆ. ಇಂದಿಗೂ ಹಳ್ಳಿ ಪ್ರದೇಶದ ಜನ ವಿಷ ಜಂತುಗಳ ಕಡಿತಕ್ಕೊಳಗಾದರೆ ಈ ನೀರು ಹಾಗೂ ಮಣ್ಣಿನ ಮೊರೆ ಹೋಗುತ್ತಾರೆಯೇ ಹೊರತು ಆಸ್ಪತ್ರೆಗೆ ಹೋಗೋದಿಲ್ಲ. ಒಟ್ಟಿನಲ್ಲಿ ಈಗಿನ ಕಾಲದಲ್ಲೂ ಇಂತಹ ನಂಬಿಕೆ ಉಳಿಯಬೇಕಿದ್ದರೆ ಈ ಕ್ಷೇತ್ರದಲ್ಲಿ ಹಾಗೂ ಬಾವಿಯಲ್ಲಿ ದೈವಿ ಶಕ್ತಿ ಇದೆ ಎನ್ನುವುದರಲ್ಲಿ ಸಂದೇಹವಿಲ್ಲ.
ಬಿಜೆಪಿ ಕಾರ್ಯಕರ್ತರ ಮೇಲಿನ FIR ರದ್ದಿಗೆ ಆಗ್ರಹ : ರಾಜ್ಯಾದ್ಯಂತ ಹೋರಾಟದ ಎಚ್ಚರಿಕೆ ನೀಡಿದ ಬಿಎಸ್‌ವೈ ಬೆಂಗಳೂರು: ಎಸ್‍ಐಆರ್ ಸಂಬಂಧ…
ಮಂಗಳೂರು: ಮನೆ ಕನ್ನ ಕಳವು ಪ್ರಕರಣ ಭೇದಿಸಿದ ಪೊಲೀಸರು; ದೆಹಲಿ ಮೂಲದ ಇಬ್ಬರ ಬಂಧನ, 18 ಲಕ್ಷ ಮೌಲ್ಯದ ಸೊತ್ತು…
ಏಷ್ಯನ್ ಗೇಮ್ಸ್ : ಕುಸ್ತಿಯಲ್ಲಿ ಚಿನ್ನ ಗೆದ್ದ ಅಮನ್ ಸೆಹ್ರಾವತ್ ನಗೋಯಾ: ಜಪಾನ್‌ನ ಐಚಿ-ನಗೋಯಾದಲ್ಲಿ ನಡೆಯುತ್ತಿರುವ 2026ರ ಏಷ್ಯನ್ ಗೇಮ್ಸ್‌ನಲ್ಲಿ…
ಕಾರ್ಕಳ : ಅ. 05 ರಂದು ರಾಜ್ಯ ಸರ್ಕಾರದ ವಿರುದ್ಧ ಬಿಜೆಪಿಯಿಂದ ಬೃಹತ್ ಪ್ರತಿಭಟನೆ ಕಾರ್ಕಳ: ರಾಜ್ಯ ಕಾಂಗ್ರೆಸ್ ಸರ್ಕಾರದ…
ಮಂಗಳೂರು: ಯುವನಿಧಿ ಫಲಾನುಭವಿಗಳಿಗೆ ಕೌಶಲ ಭಾಗ್ಯ: ಉಚಿತ ತರಬೇತಿ ಮತ್ತು ಉದ್ಯೋಗಾವಕಾಶಕ್ಕಾಗಿ ಅರ್ಜಿ ಆಹ್ವಾನ ಮಂಗಳೂರು: ಕರ್ನಾಟಕ ಸರ್ಕಾರದ ಮಹತ್ವಾಕಾಂಕ್ಷೆಯ…
180 ಜನರ ಪ್ರಾಣ ಉಳಿಸಿದ ಭಾರತೀಯ ಪೈಲಟ್ ಸ್ಮಿತ್ ಮಚ್ಚಾರ್‌ಗೆ 1 ಕೋಟಿ ರೂ. ಘೋಷಣೆ ನವದೆಹಲಿ : ದುಬೈನಿಂದ…