ಮಂಗಳೂರು/ಉಡುಪಿ: ರಾಜ್ಯದಲ್ಲಿ ಆಹಾರೋತ್ಪಾದನೆಯಲ್ಲಿ ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಅಗ್ರಸ್ಥಾನದಲ್ಲಿದೆ. ಕರಾವಳಿಯ ಖಾದ್ಯ, ಆಹಾರಕ್ಕೆ ಫಿದಾ ಆಗದವರೇ ಇಲ್ಲ. ಆದರೆ ಇಷ್ಟೆಲ್ಲ ವೈಶಿಷ್ಟ್ಯತೆ ಇರುವ ಕರಾವಳಿ ಜಿಲ್ಲೆಯಲ್ಲಿ ಒಂದೇ ಒಂದು ಆಹಾರ ಮತ್ತು ನೀರು ವಿಶ್ಲೇಷಣೆ ಪ್ರಯೋಗಾಲಯವೇ ಇಲ್ಲ.
ಮಂಗಳೂರಿನ ಶಕ್ತಿನಗರದ ಖಾಸಗಿ ನರ್ಸಿಂಗ್ ಕಾಲೇಜಿನ 140ಕ್ಕೂ ಅಧಿಕ ವಿದ್ಯಾರ್ಥಿಗಳು ವಿಷಾಹಾರ ಸೇವನೆಯಿಂದ ಸೋಮವಾರ ನಗರದ ಆಸ್ಪತ್ರೆಗಳಿಗೆ ದಾಖಲಾಗಿದ್ದರು. ಅವರು ಸೇವಿಸುವ ಆಹಾರದ ಮಾದರಿಯನ್ನು ಬೆಂಗಳೂರಿನ ಆಹಾರ ಮತ್ತು ನೀರಿನ ಪರೀಕ್ಷಾ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ. ಅಧಿಕಾರಿಗಳ ಮೂಲಗಳ ಪ್ರಕಾರ, ವರದಿ ಬರಲು ಕನಿಷ್ಠ ಒಂದು ವಾರ ಬೇಕಾಗಬಹುದು. ನಗರದಲ್ಲೇ ಇಂತಹ ಪ್ರಯೋಗಾಲಯಗಳಿದ್ದಿದ್ದರೆ ಕ್ಷಿಪ್ರ ವರದಿ ಕೈ ಸೇರುವುದು ಸಾಧ್ಯವಾಗುತ್ತಿತ್ತು ಎಂಬುದು ಸಾರ್ವಜನಿಕರ ಅಸಮಾಧಾನ.
ಆಹಾರ ಸುರಕ್ಷತೆ ನಿಯಮಗಳ ಪ್ರಕಾರ, ಯಾವುದೇ ಆಹಾರವನ್ನು ಮಾರುಕಟ್ಟೆಗೆ ಬಿಡುಗಡೆ ಮಾಡುವ ಮೊದಲು ಅಥವಾ ಯಾವುದೇ ಆಹಾರ, ಹೊಟೇಲ್ ಅಥವಾ ಅಡುಗೆ ಉದ್ಯಮವನ್ನು ಪ್ರಾರಂಭಿಸುವ ಮೊದಲು, ಅವರು ಆಹಾರ ಸುರಕ್ಷತಾ ವಿಭಾಗದಿಂದ ಪ್ರಮಾಣಪತ್ರವನ್ನು ಪಡೆಯಬೇಕು. ಪರೀಕ್ಷೆ ಮತ್ತು ಮಾಪನಾಂಕ ನಿರ್ಣಯ ಪ್ರಯೋಗಾಲಯ ಅಥವಾ ಎನ್‌ಎಎಬಿಗಾಗಿ ರಾಷ್ಟ್ರೀಯ ಮಾನ್ಯತೆ ಮಂಡಳಿಯಿಂದ ಗುರುತಿಸಲ್ಪಟ್ಟ ಆಹಾರ ಮತ್ತು ನೀರಿನ ಪರೀಕ್ಷಾ ಪ್ರಯೋಗಾಲಯ ಇದಕ್ಕೆ ಅಗತ್ಯವಿದೆ.
ರಾಜ್ಯದಲ್ಲಿ ನಾಲ್ಕು ಪ್ರಯೋಗಾಲಯ
ಕರ್ನಾಟಕದಲ್ಲಿ ಮೈಸೂರು, ಬೆಂಗಳೂರು, ಹುಬ್ಬಳ್ಳಿ-ಧಾರವಾಡ ಮತ್ತು ಬೆಳಗಾವಿಯಲ್ಲಿ ಕೇವಲ ನಾಲ್ಕು ಆಹಾರ ಮತ್ತು ನೀರಿನ ಮಾದರಿ ಪರೀಕ್ಷಾ ಪ್ರಯೋಗಾಲಯಗಳಿವೆ. ಪ್ರತಿ ಜಿಲ್ಲೆಗೆ ಒಂದೊಂದು ಪ್ರಯೋಗಾಲಯ ಆರಂಭಿಸುವ ಪ್ರಸ್ತಾವನೆ ಇದ್ದರೂ ಅದಕ್ಕೆ ಮಹತ್ವ ನೀಡಿಲ್ಲ.
ದ.ಕ.ದಲ್ಲಿ ಒಬ್ಬರೇ ಅಧಿಕಾರಿ
ಜತೆಗೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಆಹಾರ ಸುರಕ್ಷತೆ ತಪಾಸಣೆಗೆ ಒಬ್ಬರೇ ಅಧಿಕಾರಿ ಇದ್ದಾರೆ. ಆಹಾರ ಉದ್ಯಮ ಮತ್ತು ಘಟಕಗಳಿಗೆ ಅನುಮತಿ ನೀಡುವುದರ ಜೊತೆಗೆ, ಪ್ರತಿ ಜವಾಬ್ದಾರಿಯನ್ನು ಅವರು ಹೊರಬೇಕು. ತಾಲೂಕು ಮಟ್ಟದಲ್ಲಿ ಈ ಜವಾಬ್ದಾರಿಯನ್ನು ಟಿಎಚ್‌ಒಗಳು ನೋಡಿಕೊಳ್ಳಬೇಕು.
ದರ್ಶನ್ ಪುತ್ರನಿದ್ದ ಕಾರು ಅಪಘಾತ : ವಿನೀಶ್ ವಾಹನ ಚಲಾಯಿಸಿಲ್ಲ: ವಿಜಯಲಕ್ಷ್ಮಿ ಸ್ಪಷ್ಟನೆ ಬೆಂಗಳೂರು: ನಟ ದರ್ಶನ್ ಅವರ ಪುತ್ರ…
ಧರ್ಮಸ್ಥಳ ಶ್ರೀ ಮಂಜುನಾಥ ಸ್ವಾಮಿಯ ದರ್ಶನ ಪಡೆದ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಧರ್ಮಸ್ಥಳ: ದೆಹಲಿ ಪ್ರವಾಸ ಮುಗಿಸಿ ನೇರವಾಗಿ ಧರ್ಮಸ್ಥಳಕ್ಕೆ…
ಆಗುಂಬೆ ಘಾಟಿ : ಭಾರಿ ವಾಹನಗಳ ಸಂಚಾರ ನಿಷೇಧ ಉಡುಪಿ : ರಾಷ್ಟ್ರೀಯ ಹೆದ್ದಾರಿ 169ಎ ರ ತೀರ್ಥಹಳ್ಳಿ –…
ಉಡುಪಿ : ಗ್ಯಾರಂಟಿ ಯೋಜನೆಯ ಸೌಲಭ್ಯಗಳು ಅರ್ಹರಿಗೆ ತಲುಪಲು ಪರಿಣಾಮಕಾರಿ ಕೆಲಸ ಮಾಡಿ : ರಮೇಶ್ ಕಾಂಚನ್ ಉಡುಪಿ :…
ತುಳುನಾಡಿನ ಸಾಂಪ್ರದಾಯಿಕ ಆಚರಣೆಗಳಲ್ಲಿ ಒಂದಾದ ಪ್ರೇತ ಮದುವೆ : ಸತ್ತು 25 ವರ್ಷ ಆದ್ಮೇಲೆ ಒಂದಾದ ಜೋಡಿ ತುಳುನಾಡಿನ ಸಾಂಪ್ರದಾಯಿಕ…
ಮಂಗಳೂರಿಗೆ ಆಗಮಿಸಿದ ಬಾಲಿವುಡ್ ನಟ ಶಾರುಖ್ ಖಾನ್ ಮಂಗಳೂರು: ನಗರದಲ್ಲಿ ಆಯೋಜಿಸಲಾಗಿರುವ ಕಾರ್ಯಕ್ರಮದಲ್ಲಿ ಭಾಗವಹಿಸಲು ಬಾಲಿವುಡ್ ನಟ ಶಾರುಖ್ ಖಾನ್…