Featured

ಮಂಗಳೂರು: ಉಪನ್ಯಾಸಕಿಗೆ ಕಿರುಕುಳ ಪ್ರಕರಣ; ಆರೋಪಿಗಳಿಗೆ ಜಾಮೀನು – Vishwanews24

ಮಂಗಳೂರು: ಉಪನ್ಯಾಸಕಿಗೆ ಕಿರುಕುಳ ಪ್ರಕರಣ; ಆರೋಪಿಗಳಿಗೆ ಜಾಮೀನು

ಮಂಗಳೂರು: ಬಂಟ್ವಾಳದ ಕಾಲೇಜೊಂದರ ಉಪನ್ಯಾಸಕಿಯ ಬಗ್ಗೆ ಮಾನಹಾನಿಕರ ಪತ್ರ ಬರೆದು ಮಾನಸಿಕ ಕಿರುಕುಳ ನೀಡುತ್ತಿದ್ದ ಪ್ರಕರಣಕ್ಕೆ ಸಂಬಂಧಿಸಿ ಪೊಲೀಸ್ ಕಸ್ಟಡಿಯಲ್ಲಿದ್ದ ಕಾಲೇಜಿನ ಅರ್ಥಶಾಸ್ತ್ರ ಉಪನ್ಯಾಸಕ ಬಂಟ್ವಾಳ ಸಿದ್ದಕಟ್ಟೆಯ ಮೇಗಿನ ಉಳಿರೋಡಿ ನಿವಾಸಿ ಪ್ರದೀಪ್ ಪೂಜಾರಿ ಹಾಗೂ ದೈಹಿಕ ಶಿಕ್ಷಣ ನಿರ್ದೇಶಕ ತಾರಾನಾಥ (32) ನ್ಯಾಯಾಲಯ ಜಾಮೀನು ನೀಡಿದೆ.

ಇನ್ನೋರ್ವ ಆರೋಪಿ ಕಾಲೇಜೊಂದರ ಸಂಚಾಲಕ ಪ್ರಕಾಶ್ ಶೆಣೈ ಗೆ ನ್ಯಾಯಾಲಯ ಕಳೆದ ಶುಕ್ರವಾರ ಜಾಮೀನು ನೀಡಿತ್ತು. ಉಳಿದ ಇಬ್ಬರು ಆರೋಪಿಗಳನ್ನು ಹೆಚ್ಚಿನ ವಿಚಾರಣೆಗೆ ಸಿಸಿಬಿ ಪೊಲೀಸರು ಮರಳಿ ಕಸ್ಟಡಿಗೆ ಪಡೆದಿದ್ದರು.

 

ಈ ಮೂವರು ಆರೋಪಿಗಳು ಹಾಗೂ 58 ವರ್ಷದ ಉಪನ್ಯಾಸಕಿ ಬಂಟ್ವಾಳದಲ್ಲಿ ಕಾಲೇಜೊಂದರಲ್ಲಿ ಸಹೋದೋಗ್ಯಿಗಳಾಗಿದ್ದರು. ನಾಲ್ಕು ವರ್ಷಗಳ ಹಿಂದೆ ಕಾಲೇಜು ಆಡಳಿತ ಮಂಡಳಿಯೊಂದಿಗಿನ ಭಿನ್ನಾಭಿಪ್ರಾಯದಿಂದಾಗಿ ಡೆಪ್ಯೂಟೇಷನ್ ನಲ್ಲಿ ಮಂಗಳೂರಿನ ಸರ್ಕಾರಿ ಕಾಲೇಜಿನಲ್ಲಿ ಕಾರ್ಯನಿರ್ವಹಿಸುತ್ತಿದ್ದರು.

ಆ ಬಳಿಕ ಆರೋಪಿಗಳು ವಿವಿಧ ಕಡೆಯ ಪಬ್ಲಿಕ್ ಟಾಯ್ಲೆಟ್​ನಲ್ಲಿ ಈ ಉಪನ್ಯಾಸಕಿ ಫೋನ್ ನಂಬರ್ ಹಾಗೂ ಇ-ಮೇಲ್ ಐಡಿ ಹಾಕಿದ್ದರು. 10 ದಿನಗಳ ಅವಧಿಯಲ್ಲಿ ಸುಮಾರು 800 ಅಶ್ಲೀಲ ಕರೆಗಳು ಬಂದಿದ್ದು, ಕಿರುಕುಳ ಸಹಿಸಿಕೊಳ್ಳಲಾಗದೆ ಉಪನ್ಯಾಸಕಿ ಪೊಲೀಸರಿಗೆ ದೂರು ದಾಖಲಿಸಿದಾಗ ಆರೋಪಿಗಳ ಕೃತ್ಯ ಬೆಳಕಿಗೆ ಬಂದಿತ್ತು.

Vishwa News 24

Recent Posts

ಉಡುಪಿ : 61 ದಿನಗಳ ಕಾಲ ಯಾಂತ್ರೀಕೃತ ಮೀನುಗಾರಿಕೆ ನಿಷೇಧ -vishwanews24

  ಉಡುಪಿ : 61 ದಿನಗಳ ಕಾಲ ಯಾಂತ್ರೀಕೃತ ಮೀನುಗಾರಿಕೆ ನಿಷೇಧ ಉಡುಪಿ : ಕರ್ನಾಟಕ ಕಡಲ ಮೀನುಗಾರಿಕೆ ನಿಯಂತ್ರಣ…

2 hours ago

ಉಡುಪಿ : ಯುವತಿ ನಾಪತ್ತೆ -vishwanews24

ಉಡುಪಿ : ಯುವತಿ ನಾಪತ್ತೆ ಉಡುಪಿ: ಉಡುಪಿ ತಾಲೂಕು ಶಿವಳ್ಳಿ ಗ್ರಾಮದ ಇಂದ್ರಾಳಿ ದೇವಸ್ಥಾನದ ಬಳಿ ಬಾಡಿಗೆ ಮನೆಯೊಂದರಲ್ಲಿ ವಾಸವಿದ್ದ…

2 hours ago

ಮುಂದಿನ ದಿನಗಳಲ್ಲಿ ಬಿಜೆಪಿಯನ್ನು ಅಧಿಕಾರದಿಂದ ಕಿತ್ತೆಸೆಯುತ್ತೇವೆ : ಮಮತಾ ಬ್ಯಾನರ್ಜಿ -vishwanews24

ಮುಂದಿನ ದಿನಗಳಲ್ಲಿ ಬಿಜೆಪಿಯನ್ನು ಅಧಿಕಾರದಿಂದ ಕಿತ್ತೆಸೆಯುತ್ತೇವೆ : ಮಮತಾ ಬ್ಯಾನರ್ಜಿ ಹೊಸದಿಲ್ಲಿ: ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರವನ್ನು ಭವಿಷ್ಯದಲ್ಲಿ ಅಧಿಕಾರದಿಂದ…

10 hours ago

ಇ-ಫಾರ್ಮಸಿ ವಿರೋಧಿಸಿ ಇಂದು ದೇಶಾದ್ಯಂತ ಮೆಡಿಕಲ್ ಶಾಪ್‌ಗಳು ಬಂದ್ -vishwanews24

ಇ-ಫಾರ್ಮಸಿ ವಿರೋಧಿಸಿ ಇಂದು ದೇಶಾದ್ಯಂತ ಮೆಡಿಕಲ್ ಶಾಪ್‌ಗಳು ಬಂದ್ ಬೆಂಗಳೂರು : ಕರ್ನಾಟಕ ಸೇರಿದಂತೆ ದೇಶಾದ್ಯಂತ ಮೆಡಿಕಲ್ ಶಾಪ್‌ಗಳು ಬಂದ್…

10 hours ago

ಬೆಳ್ತಂಗಡಿ: ನೇತ್ರಾವತಿ ನದಿಯಲ್ಲಿ ಮುಳುಗಿ ಇಂಜಿನಿಯರಿಂಗ್ ವಿದ್ಯಾರ್ಥಿ ಸಾವು -vishwanews24

ಬೆಳ್ತಂಗಡಿ: ನೇತ್ರಾವತಿ ನದಿಯಲ್ಲಿ ಮುಳುಗಿ ಇಂಜಿನಿಯರಿಂಗ್ ವಿದ್ಯಾರ್ಥಿ ಸಾವು ಬೆಳ್ತಂಗಡಿ : ಇಂಜಿನಿಯರಿಂಗ್ ವಿದ್ಯಾರ್ಥಿಗಳ ಏಳು ಜನರ ತಂಡವೊಂದು ಈಜಲು…

11 hours ago

ಉಡುಪಿ ಮಲಬಾರ್ ಗೋಲ್ಡ್ ನಲ್ಲಿ `ಆನಿಕಾ’ ವಜ್ರಾಭರಣ ಅನಾವರಣ -vishwanews24

ಉಡುಪಿ ಮಲಬಾರ್ ಗೋಲ್ಡ್ ನಲ್ಲಿ `ಆನಿಕಾ' ವಜ್ರಾಭರಣ ಅನಾವರಣ ಉಡುಪಿ : ಮಲಬಾರ್ ಗೋಲ್ಡ್ ಆ್ಯಂಡ್ ಡೈಮಂಡ್ಸ್ ಉಡುಪಿ ಶಾಖೆಯಲ್ಲಿ…

2 days ago