Featured

ಮಂಗಳೂರು : ಎನ್‌ಎಂಪಿಟಿಯಲ್ಲಿ ಸಮುದ್ರಕ್ಕೆ ಬಿದ್ದ ಕಂಟೈನರ್ ಲಾರಿ; ಓರ್ವ ಸಾವು, ಮತ್ತೋರ್ವ ನಾಪತ್ತೆ -Vishwanews24

ಮಂಗಳೂರು : ಎನ್‌ಎಂಪಿಟಿಯಲ್ಲಿ ಸಮುದ್ರಕ್ಕೆ ಬಿದ್ದ ಕಂಟೈನರ್ ಲಾರಿ; ಓರ್ವ ಸಾವು, ಮತ್ತೋರ್ವ ನಾಪತ್ತೆ -Vishwanews24

ಮಂಗಳೂರು : ನವಮಂಗಳೂರು ಬಂದರಿನ 14ನೇ ಬರ್ತ್‌ನಲ್ಲಿ 10 ಚಕ್ರದ ಕಂಟೈನರ್ ಲಾರಿಯೊಂದು ನಿಯಂತ್ರಣ ತಪ್ಪಿ ಸಮುದ್ರಕ್ಕೆ ಬಿದ್ದ ಪರಿಣಾಮ ಓರ್ವ ಸಾವನ್ನಪ್ಪಿ ಮತ್ತೋರ್ವ ಕಾಣೆಯಾದ ಘಟನೆ ಭಾನುವಾರ ರಾತ್ರಿ 10.30 ಕ್ಕೆ ನಡೆದಿದೆ.

ಮೃತರನ್ನು ಕಂಟೈನರ್ ಲಾರಿ ಚಾಲಕ ಉತ್ತರ ಕರ್ನಾಟಕ ಮೂಲದ ರಾಜೇಸಾಬ (26) ಎಂದು ಗುರುತಿಸಲಾಗಿದ್ದು, ಲಾರಿ ಕ್ಲೀನರ್ ಭೀಮಪ್ಪ(22) ನಾಪತ್ತೆಯಾಗಿದ್ದಾರೆ.

ಡೆಲ್ಟಾ ಕಂಪನಿಯ ಕೆಎ 22 ಸಿ 8257 ನೋಂದಣಿಯ ಟ್ರಕ್ , ಕಬ್ಬಿಣದ ಅದಿರನ್ನು ಹಡಗಿನಿಂದ ಲೋಡ್ ಮಾಡಲು ಬಂದಿದ್ದ ಈ ವೇಳೆ ಘಟನೆ ನಡೆದಿದೆ. ಇದನ್ನು ಕಂಡು ಅಲ್ಲಿಂದ ಹಾದು ಹೋಗುವ ಟಗ್ ಬೋಟ್ ನ ಪೈಲಟ್ ಘಟನೆ ಬಗ್ಗೆ ವಿಟಿಎಂಎಸ್ ಕ ಟ್ರೋಲ್ ರೂಂಗೆ ಮಾಹಿತಿ ರವಾನಿಸಿದ್ದಾರೆ.

ತಕ್ಷಣ ಸಿಐಎಸ್ಎಫ್ ಕ್ಯೂಆರ್ ಟಿ ಮತ್ತು ಸಿಸ್ಎಫ್ ಗಸ್ತು ದೋಣಿ ಅಲ್ಲಿಗೆ ತಲುಪಿ ಟಗ್ ಬೋಟ್ ಸಹಾಯದಿಂದ ಶೋಧ ಮತ್ತು ರಕ್ಷಣಾ ಕಾರ್ಯಾಚರಣೆಯನ್ನು ನಡೆಸಿದ್ದಾರೆ . ಸುಮಾರು 11.30 ರ ವೇಳೆಗೆ ಸಮುದ್ರಕ್ಕೆ ಬಿದ್ದ ಓರ್ವರನ್ನು ಪತ್ತೆ ಹಚ್ಚಿ ಆಸ್ಪತ್ರೆಗೆ ರವಾನಿಸಿದರೂ ಅದಾಗಲೇ ವೈದ್ಯರು ಮೃತಪಟ್ಟಿದ್ದಾರೆ ಎಂದು ಘೋಷಿಸಿದ್ದಾರೆ .

ಕಾಣೆಯಾದ ಲಾರಿ ಕ್ಲೀನರ್ ಪತ್ತೆಗಾಗಿ ಶೋಧ ಕಾರ್ಯ ಮುಂದುವರಿದೆ. ಮಂಗಳೂರು ಉತ್ತರ ಸಂಚಾರ ಪೊಲೀಸರು ಭೇಟಿ ನೀಡಿ, ಪರಿಶೀಲನೆ ನಡೆಸುತ್ತಿದ್ದಾರೆ.

Vishwa News 24

Recent Posts

ಬಿಜೆಪಿ ಪಕ್ಷಕ್ಕೆ ಸೇರ್ಪಡೆಗೊಂಡ ಟೆನಿಸ್ ಆಟಗಾರ ಲಿಯಾಂಡರ್ ಪೇಸ್ – vishwanews24

ಬಿಜೆಪಿ ಪಕ್ಷಕ್ಕೆ ಸೇರ್ಪಡೆಗೊಂಡ ಟೆನಿಸ್ ಆಟಗಾರ ಲಿಯಾಂಡರ್ ಪೇಸ್ ಹೊಸದಿಲ್ಲಿ: ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆಗೆ ಮುನ್ನ ಟೆನಿಸ್ ಆಟಗಾರ…

22 hours ago

ಬೀದರ್ : ಮಳೆ ಆರ್ಭಟ ; ಸಿಡಿಲು ಬಡಿದು ಯುವಕ ಸಾವು – vishwanews24

ಬೀದರ್ : ಮಳೆ ಆರ್ಭಟ - ಸಿಡಿಲು ಬಡಿದು ಯುವಕ ಸಾವು ಬೀದರ್: ಸಿಡಿಲು ಬಡಿದು ಯುವಕನೊಬ್ಬ ಮೃತಪಟ್ಟ ಘಟನೆ ಔರಾದ್…

23 hours ago

ಬೆಳ್ತಂಗಡಿ:  ಚಲಿಸುತ್ತಿದ್ದ ಕೆಎಸ್ಸಾರ್ಟಿಸಿ ಬಸ್ಸಿನಿಂದ ಎಸೆಯಲ್ಪಟ್ಟು ಇಬ್ಬರು ವಿದ್ಯಾರ್ಥಿನಿಯರಿಗೆ ಗಾಯ – vishwanews24

ಬೆಳ್ತಂಗಡಿ:  ಏಕಾಏಕಿ ತೆರೆಯಲ್ಪಟ್ಟ ಬಸ್ಸಿನ ಬಾಗಿಲು ; ನಿಯಂತ್ರಣ ತಪ್ಪಿ ರಸ್ತೆಗೆ ಎಸೆಯಲ್ಪಟ್ಟು ಇಬ್ಬರು ವಿದ್ಯಾರ್ಥಿನಿಯರಿಗೆ ಗಾಯ ಬೆಳ್ತಂಗಡಿ: ಚಲಿಸುತ್ತಿದ್ದ ಬಸ್ಸಿನಿಂದ…

23 hours ago

ಉಡುಪಿ: ಚಲಿಸುತ್ತಿದ್ದ ರೈಲಿನಿಂದ ಜಿಗಿಯಲು ಯತ್ನ; ಯುವಕನ ರಕ್ಷಣೆ – vishwanews24

ಉಡುಪಿ: ಚಲಿಸುತ್ತಿದ್ದ ರೈಲಿನಿಂದ ಜಿಗಿಯಲು ಯತ್ನ; ಯುವಕನ ರಕ್ಷಣೆ ಉಡುಪಿ: ಟಿಕೆಟ್ ಇಲ್ಲದೆ ಪ್ರಯಾಣಿಸುತ್ತಿದ್ದ ಯುವಕನೊಬ್ಬ ರೈಲಿನಿಂದ ಜಿಗಿಯಲು ಯತ್ನಿಸುತ್ತಿದ್ದ…

23 hours ago

ಕಾಸರಗೋಡು :  ಕೆಟ್ಟು ನಿಂತಿದ್ದ ಪಿಕಪ್ ವ್ಯಾನ್ ಗೆ ಬೈಕ್ ಢಿಕ್ಕಿ: ಸವಾರ ಮೃತ್ಯು – vishwanews24

ಕಾಸರಗೋಡು :  ಕೆಟ್ಟು ನಿಂತಿದ್ದ ಪಿಕಪ್ ವ್ಯಾನ್ ಗೆ ಬೈಕ್ ಢಿಕ್ಕಿ: ಸವಾರ ಮೃತ್ಯು ಕಾಸರಗೋಡು : ರಾಷ್ಟ್ರೀಯ ಹೆದ್ದಾರಿಯ ಬದಿಯಲ್ಲಿ…

1 day ago

ಪ್ರಥಮ ಪಿಯುಸಿ ಫಲಿತಾಂಶ ಪ್ರಕಟ ; ಆನ್‌ಲೈನ್‌ನಲ್ಲಿ ವೀಕ್ಷಿಸುವುದು ಹೇಗೆ? – vishwanews24

ಪ್ರಥಮ ಪಿಯುಸಿ ಫಲಿತಾಂಶ ಪ್ರಕಟ ; ಆನ್‌ಲೈನ್‌ನಲ್ಲಿ ವೀಕ್ಷಿಸುವುದು ಹೇಗೆ? ಬೆಂಗಳೂರು: ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಳಿಯು…

1 day ago