Featured

ಮಂಗಳೂರು : ಕಂದಾವರ ಪದವು ಶ್ರೀ ಕೋಡ್ದಬ್ಬು ದೈವಸ್ಥಾನ : ಉರಿಯುತ್ತಿದ್ದ ದೀಪವನ್ನು ನಂದಿಸಿ , ದೈವದ ಕಲ್ಲಿಗೆ ರಕ್ತ ಹರಿಸಿದ್ದ ವ್ಯಕ್ತಿ ಬಂಧನ – Vishwanews24

ಮತ್ತೊಮ್ಮೆ ಕಾರಣಿಕ ಮೆರೆದ ಕಂದಾವರ ಪದವಿನ ಶ್ರೀ ಕೋಡ್ದಬ್ಬು ಮತ್ತು ರಾಹುದೈವ..

ಕೈಕಂಬ ; ಮಂಗಳೂರು ತಾಲೂಕಿನ ಕಂದಾವರ ಗ್ರಾಮ ಪಂಚಾಯತ್ ವ್ಯಾಪ್ತಿಗೊಳಪಡುವ ಕಂದಾವರ ಪದವಿನ ಶ್ರೀ ಕೋಡ್ದಬ್ಬು ದೈವಸ್ಥಾನದಲ್ಲಿ ದಿನಾಂಕ 20.03.2022 ರಂದು ರಾತ್ರಿ ದುಶ್ಕರ್ಮಿಯೋರ್ವ ದೈವಸ್ಥಾನಕ್ಕೆ ಅಕ್ರಮವಾಗಿ ಪ್ರವೇಶಿಸಿ, ರಾಹು ದೈವದ ಗುಡಿಯಲ್ಲಿ ಉರಿಯುತ್ತಿದ್ದ ದೀಪವನ್ನು ನಂದಿಸಿ, ಅದನ್ನು ಕವಚಿ ಅದಕ್ಕೆ ರಕ್ತವನ್ನು ಹರಿಸಿ, ನಂತರ ದೈವಸ್ಥಾನದ ಬಲಬದಿಯಲ್ಲಿರುವ ಆಯದಕಲ್ಲಿಗೆ ರಕ್ತದ ಬಿಂದು ಹರಿಸುತ್ತಾ ಸುತ್ತು ಬಂದು ನಂತರ ಇಡೀ ಅಂಗಣದ ಸುತ್ತಲೂ ರಕ್ತದ ಬಿಂದು ಸುರಿಸಿದ್ದಾನೆ.

ಬೆಳಿಗ್ಗೆ ದೈವದ ಚಾಕರಿಯವರೋರ್ವರು ದೈವಸ್ಥಾನಕ್ಕೆ ಬಂದಾಗ ಸಂಗತಿ ಬೆಳಕಿಗೆ ಬಂತು.

ಕ್ಷಣ ಮಾತ್ರದಲ್ಲಿ ಸಧ್ಭಕ್ತರು ದೈವಸ್ಥಾನದ ಅಂಗಣದಲ್ಲಿ ನೆರೆದು ಮಧ್ಯಾಹ್ನವೇ ಶ್ರೀ ಬಬ್ಬು ಸ್ವಾಮಿಯ ದರ್ಶನಕ್ಕೆ ಸಮಯ ನಿಗದಿಪಡಿಸಿ, ದರ್ಶನದ ಸಮಯದೊಳಗೆ ದುಷ್ಕರ್ಮಿ ದೈವಸ್ಥಾನಕ್ಕೆ ಬರಬೇಕೆಂದು ಪ್ರಾರ್ಥಿಸಿದರು.

ತದನಂತರ ಬಜ್ಪೆ ಠಾಣೆಗೆ ದೂರು ನೀಡಲಾಗಿ ಪೊಲೀಸರು ಅಗಮಿಸಿ, ಕೇವಲ ಒಂದುಗಂಟೆಯೊಳಗೆ ದುಷ್ಕರ್ಮಿಯನ್ನು ಬಂಧಿಸಿದರು.

ಸ್ಥಳೀಯ ನಿವಾಸಿ ಸಾಹುಲ್ ಎಂಬಾತನನ್ನು ಪೋಲಿಸರು ಆತನ ಮನೆಯಿಂದ ವಶಪಡಿಸಿಕೊಂಡಿದ್ದಾರೆ.

ಪ್ರಕರಣ ಬೆಳಕಿಗೆ ಬರುತ್ತಿದ್ದಂತೆ ಬಬ್ಬುಸ್ವಾಮಿಯ ದರ್ಶನ ಆಯೋಜಿಸಿರುವ ಭಕ್ತರು‌ ದುಷ್ಕರ್ಮಿ ಪತ್ತೆಯಾಗಬೇಕೆಂದು ಮನವಿ ಮಾಡಿದ್ದರು. ಇದೀಗ ದೂರು ದಾಖಲಾದ ಒಂದೇ ಗಂಟೆಯಲ್ಲೇ ಆರೋಪಿಯನ್ನು ಬಜ್ಪೆ ಪೊಲೀಸರು ಬಂಧಿಸಿದ್ದಾರೆ. ಆರೋಪಿಗೆ ನ್ಯಾಯಾಂಗ ಬಂಧನ ವಿಧಿಸಲಾಗಿದೆ.

ಳೆದ 2020 ರಲ್ಲಿ ದೈವಸ್ಥಾನವನ್ನು ಪುನರ್ ನಿರ್ಮಿಸಿ, ಪಂಚವಿಂಶತಿ ಕಲಶಾಭಿಷೇಕ ನಡೆದು ಶ್ರೀ ದೈವಗಳ ಕಾರಣಿಕ ದಿನದಿಂದ ದಿನಕ್ಕೆ ವಿಜೃಂಬಿಸುತ್ತಿದ್ದು, ಇಂದಿನ ಘಟನೆ ಶ್ರೀ ಬಬ್ಬು ಸ್ವಾಮಿ ಮತ್ತು ರಾಹುದೈವದ ಕಾರಣಿಕಕ್ಕೆ ಮತ್ತೊಂದು ಗರಿ.

Vishwa News 24

Recent Posts

ತುಳುನಾಡಿನ ಸಾಂಪ್ರದಾಯಿಕ ಆಚರಣೆಗಳಲ್ಲಿ ಒಂದಾದ ಪ್ರೇತ ಮದುವೆ : ಸತ್ತು 25 ವರ್ಷ ಆದ್ಮೇಲೆ ಒಂದಾದ ಜೋಡಿ – vishwanews24

ತುಳುನಾಡಿನ ಸಾಂಪ್ರದಾಯಿಕ ಆಚರಣೆಗಳಲ್ಲಿ ಒಂದಾದ ಪ್ರೇತ ಮದುವೆ : ಸತ್ತು 25 ವರ್ಷ ಆದ್ಮೇಲೆ ಒಂದಾದ ಜೋಡಿ ತುಳುನಾಡಿನ ಸಾಂಪ್ರದಾಯಿಕ…

9 hours ago

ಮಂಗಳೂರಿಗೆ ಆಗಮಿಸಿದ ಬಾಲಿವುಡ್ ನಟ ಶಾರುಖ್ ಖಾನ್ – vishwanews24

ಮಂಗಳೂರಿಗೆ ಆಗಮಿಸಿದ ಬಾಲಿವುಡ್ ನಟ ಶಾರುಖ್ ಖಾನ್ ಮಂಗಳೂರು: ನಗರದಲ್ಲಿ ಆಯೋಜಿಸಲಾಗಿರುವ ಕಾರ್ಯಕ್ರಮದಲ್ಲಿ ಭಾಗವಹಿಸಲು ಬಾಲಿವುಡ್ ನಟ ಶಾರುಖ್ ಖಾನ್…

9 hours ago

ರಾಜ್ಯದ 13 ಸಚಿವರಿಗೆ ಜಿಲ್ಲಾ ಉಸ್ತುವಾರಿ ಹಂಚಿಕೆ: ಉಡುಪಿ, ದಕ್ಷಿಣ ಕನ್ನಡ ಜಿಲ್ಲೆಗಳ ಉಸ್ತುವಾರಿಯಾಗಿ ಯು.ಟಿ ಖಾದರ್ – vishwanews24

ರಾಜ್ಯದ 13 ಸಚಿವರಿಗೆ ಜಿಲ್ಲಾ ಉಸ್ತುವಾರಿ ಹಂಚಿಕೆ.. ಉಡುಪಿ, ದಕ್ಷಿಣ ಕನ್ನಡ, ಉತ್ತರ ಕನ್ನಡ ಮತ್ತು ಕೊಡಗು ಜಿಲ್ಲೆಗಳ ಉಸ್ತುವಾರಿಯಾಗಿ…

9 hours ago

ಪಠ್ಯಪುಸ್ತಕ ವಿವಾದದ ಬೆನ್ನಲ್ಲೇ NCERT ಸ್ಪಷ್ಟನೆ – vishwanews24

ಪಠ್ಯಪುಸ್ತಕ ವಿವಾದದ ಬೆನ್ನಲ್ಲೇ NCERT ಸ್ಪಷ್ಟನೆ ನವದೆಹಲಿ: 6ನೇ ತರಗತಿಯ ಕನ್ನಡ ಪಠ್ಯಪುಸ್ತಕ ‘ಕೃಷ್ಣ’ ಕುರಿತು ಎದ್ದಿರುವ ವಿವಾದಕ್ಕೆ NCERT(ರಾಷ್ಟ್ರೀಯ…

9 hours ago

ಮುಲ್ಕಿ : ಗಾಂಜಾ ಮಾರಾಟ ಹಾಗೂ ಸಾಗಾಟ ಮಾಡುತ್ತಿದ್ದ ಆರೋಪಿಯ ಬಂಧನ ; 4 ಕೆ.ಜಿ ಗಾಂಜಾ ವಶ – vishwanews24

ಮುಲ್ಕಿ : ಗಾಂಜಾ ಮಾರಾಟ ಹಾಗೂ ಸಾಗಾಟ ಮಾಡುತ್ತಿದ್ದ ಆರೋಪಿಯ ಬಂಧನ ; 4 ಕೆ.ಜಿ ಗಾಂಜಾ ವಶ ಮುಲ್ಕಿ:…

10 hours ago

ಎನ್‌ಸಿಇಆರ್‌ಟಿ ಬಿಡುಗಡೆ ಮಾಡಿದ ಕನ್ನಡ ಪಠ್ಯಪುಸ್ತಕಕ್ಕೆ ಮಧು ಬಂಗಾರಪ್ಪ ವಿರೋಧ – vishwanews24

ಎನ್‌ಸಿಇಆರ್‌ಟಿ ಬಿಡುಗಡೆ ಮಾಡಿದ ಕನ್ನಡ ಪಠ್ಯಪುಸ್ತಕಕ್ಕೆ ಮಧು ಬಂಗಾರಪ್ಪ ವಿರೋಧ ಬೆಂಗಳೂರು: 6ನೇ ತರಗತಿಗಾಗಿ ಎನ್‌ಸಿಇಆರ್‌ಟಿ (ರಾಷ್ಟ್ರೀಯ ಶೈಕ್ಷಣಿಕ ಸಂಶೋಧನೆ…

10 hours ago