ಮಂಗಳೂರು: ನಗರದ ಬಲ್ಮಠ ರಸ್ತೆಯಲ್ಲಿ ಕಟ್ಟಡದ ಮಣ್ಣು ಕುಸಿದು ಬಿಹಾರ ಮೂಲದ ಇಬ್ಬರು ಕಾರ್ಮಿಕರು ಮಣ್ಣಿನಡಿ ಸಿಲುಕಿದ ಘಟನೆ ನಡೆದಿದೆ.
ಚಂದನ್ ಕುಮಾರ್ (30) ಮತ್ತು ರಾಜಕುಮಾರ್ (18) ಮಣ್ಣಿನಡಿ ಸಿಲುಕಿರುವ ಕಾರ್ಮಿಕರು. ಘಟನಾ ಸ್ಥಳದ ಬಳಿ ಸಹ ಕಾರ್ಮಿಕರು ಅಳುತ್ತಿದ್ದಾರೆ. ಘಟನೆಯಲ್ಲಿ ಓರ್ವ ಕಾರ್ಮಿಕ ರಾಜ್ ಕುಮಾರ್ ಅವರನ್ನು ರಕ್ಷಣಾ ತಂಡ ಮೇಲಕೆತ್ತಿದೆ. ಬಳಿಕ ಆರೋಗ್ಯ ಇಲಾಖೆ ಸಿಬ್ಬಂದಿ ಆಸ್ಪತ್ರೆಗೆ ಸಾಗಿಸಿದೆ.
ಮಣ್ಣಿನ ಅಡಿಯಲ್ಲಿ ಸಿಲುಕಿರುವ ಮತ್ತೋರ್ವ ಕಾರ್ಮಿಕನಿಗಾಗಿ ರಕ್ಷಣಾ ಕಾರ್ಯಾಚರಣೆ ಮುಂದುವರಿದಿದೆ. ಕ್ರೇನ್ ಮೂಲಕ ಜೆಸಿಬಿಯನ್ನು ಕೆಳಗಿಸುವ ಕಾರ್ಯ ಆರಂಭವಾಗಿದೆ. ಘಟನಾ ಸ್ಥಳಕ್ಕೆ ಎನ್‍ಡಿಆರ್ ಎಫ್ ತಂಡ ಭೇಟಿ ಕೊಟ್ಟಿದೆ.
ಭಾರೀ ಮಳೆಯ ನಡುವೆಯೂ ಕಾರ್ಯಾಚರಣೆ ಮುಂದುವರಿದಿದೆ. ಕಾಂಕ್ರೀಟ್ ಗೋಡೆಗೆ ರಂಧ್ರ ತೆಗೆದು ಕಾರ್ಮಿಕನ ರಕ್ಷಣಾ ತಂಡ ಪತ್ತೆಹಚ್ಚಿದೆ. ನಿರಂತರವಾಗಿ ಮಣ್ಣು ತೆಗೆಯುತ್ತಿರುವ ರಕ್ಷಣಾ ತಂಡದ ಸಿಬ್ಬಂದಿ ಮಣ್ಣಿನಡಿ ಸಿಲುಕಿರುವ ಕಾರ್ಮಿಕನಿಗೆ ಕಾಂಕ್ರಿಟ್ ಕೊರೆದು ಚಿಕಿತ್ಸೆ ನೀಡಲಾಗುತ್ತಿದೆ.
ಸದ್ಯ ಚಂದನ್ ಕುಮಾರ್ ಪ್ರಜ್ಞಾಹೀನ ಸ್ಥಿತಿಯಲ್ಲಿ ಮಣ್ಣಿನಡಿಯಲ್ಲಿ ಸಿಲುಕಿದ್ದಾರೆ. ಜಿಲ್ಲಾ ಆರೋಗ್ಯಾಧಿಕಾರಿ ಡಾ.ತಿಮ್ಮಯ್ಯ ನೇತೃತ್ವದಲ್ಲಿ ಕಾರ್ಮಿಕನ ಆರೋಗ್ಯ ತಪಾಸಣೆ ನಡೆಯುತ್ತಿದೆ.
ಬೆಳಪು ಪ್ರದೇಶದಲ್ಲಿ ಎಲ್ಲಾ ಅಗತ್ಯ ಸೌಲಭ್ಯಗಳೊಂದಿಗೆ ಘಟಕ ನಿರ್ಮಿಸಿದರೆ ನಮ್ಮಿಂದ ಯಾವುದೇ ವಿರೋಧ ಇರುವುದಿಲ್ಲ : ದೇವಿಪ್ರಸಾದ್ ಶೆಟ್ಟಿ ಮೂಳೂರು…
ಪ್ರಿಯಕರನ ಜೊತೆ ಸೇರಿ ಗಂಡನ ಮನೆಗೆ ಕನ್ನಹಾಕಿದ ಪತ್ನಿ; 21 ಲಕ್ಷ ಮೌಲ್ಯದ ಚಿನ್ನಾಭರಣ ಕಳ್ಳತನ ಬೆಳಗಾವಿ: ಪ್ರಿಯಕರನ ಜೊತೆ…
ದೇಶದ ಜಾತ್ಯತೀತ ಮೌಲ್ಯಗಳನ್ನು ರಕ್ಷಿಸಲು ಕಾಂಗ್ರೆಸ್ ಪಕ್ಷ ಸದಾ ಸಮಾನ ಚಿಂತನೆಯ ಪಕ್ಷಗಳೊಂದಿಗೆ ಕೈಜೋಡಿಸಿದೆ : ಬಿ.ಕೆ.ಹರಿಪ್ರಸಾದ್ ಬೆಂಗಳೂರು: ‘ಬಿಜೆಪಿ…
ಪಡುಬಿದ್ರಿ: ಕಿಶೋರ್ ಆಳ್ವ ಅವರಿಗೆ ಪ್ರತಿಷ್ಠಿತ ಮಹಾತ್ಮ ಗಾಂಧಿ ಸಬರಮತಿ ಸಂತ ಪ್ರಶಸ್ತಿ ಪ್ರದಾನ ಪಡುಬಿದ್ರಿ: ಸನಾತನ ಫೌಂಡೇಶನ್‌ನ ಅಧ್ಯಕ್ಷ,…
ವಿವಾಹಿತ ಮಹಿಳೆ ಜತೆ ಲಿವ್ ಇನ್ ರಿಲೇಶನ್‌ಶಿಪ್‌ನಲ್ಲಿದ್ದ ಯುವಕ ಶವವಾಗಿ ಪತ್ತೆ ಬೆಂಗಳೂರು: ಲಿವ್ ಇನ್ ರಿಲೇಶನ್‌ಶಿಪ್‌ನಲ್ಲಿದ್ದ ಯುವಕ ನೇಣುಬಿಗಿದ…
ಪಶ್ಚಿಮ ಬಂಗಾಳದ ರಾಜಕೀಯ ಇತಿಹಾಸದಲ್ಲಿ ಹೊಸ ಪರ್ವ.. ಬಿಜೆಪಿ ಮೊದಲ ಸಿಎಂ ಆಗಿ ಪ್ರಮಾಣ ಸ್ವೀಕಾರ.. ಐತಿಹಾಸಿಕ ಕ್ಷಣಕ್ಕೆ ಮೋದಿ,…