Featured

ಮಂಗಳೂರು: ಕದ್ರಿ ಮಂಜುನಾಥ ದೇವಸ್ಥಾನಕ್ಕೆ ಸಿಎಂ ಡಿ.ಕೆ. ಶಿವಕುಮಾರ್ ಭೇಟಿ  – vishwanews24

ಮಂಗಳೂರು: ಕದ್ರಿ ಮಂಜುನಾಥ ದೇವಸ್ಥಾನಕ್ಕೆ ಸಿಎಂ ಡಿ.ಕೆ. ಶಿವಕುಮಾರ್ ಭೇಟಿ

ಮಂಗಳೂರು: ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಮಂಗಳೂರಲ್ಲಿ ನಡೆಯಲಿರುವ ಸಚಿವ ಸಂಪುಟ ಸಭೆಗೂ ಮುನ್ನ ತಮ್ಮ ಸಂಪುಟ ಸಹೋದ್ಯೋಗಿಗಳ ಜೊತೆಗೆ ಕದ್ರಿಯ ಮಂಜುನಾಥ ಸ್ವಾಮಿ ದೇಗುಲಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಿದ್ದಾರೆ.

ಕದ್ರಿ ಸರ್ಕ್ಯೂಟ್ ಹೌಸ್ ನಿಂದ ವಾಹನದಲ್ಲಿ ದೇವಾಲಯಕ್ಕೆ ಬಂದ ಅವರನ್ನು ಚೆಂಡೆ ವಾದನ, ಯಕ್ಷಗಾನ ವೇಷದೊಂದಿಗೆ ಹೂಮಳೆ ಗರೆದು ಸ್ವಾಗತಿಸಲಾಯಿತು.

ಮುಖ್ಯಮಂತ್ರಿ, ಸಚಿವರ ಭೇಟಿಯ ಕಾರಣಕ್ಕೆ ದೇವಾಲಯದ ಆವರಣದಲ್ಲಿ ಭದ್ರತಾ ವ್ಯವಸ್ಥೆ ಬಿಗಿಗೊಳಿಸಲಾಗಿತ್ತು. ಬೆಳಿಗ್ಗೆ 8.30ರಿಂದಲೇ ಪಕ್ಷದ ಕಾರ್ಯಕರ್ತರು ದೇವಸ್ಥಾನದ ಬಳಿ ಸೇರಿ ಕಾಯುತ್ತಿದ್ದರು. 9 ಗಂಟೆಗೆ ಅವರ ಭೇಟಿ ನಿಗದಿಯಾಗಿತ್ತು. 11.15ರ ಸುಮಾರಿಗೆ ಮುಖ್ಯಮಂತ್ರಿ, ಸಚಿವರು ದೇವಾಲಯಕ್ಕೆ ಬಂದರು.

‘ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಕದ್ರಿ ದೇವಸ್ಥಾನ ಕ್ಕೆ ಭೇಟಿ ನೀಡುವ ಪ್ರಯುಕ್ತ ಅವರ ಹೆಸರಿನಲ್ಲಿ ಸಂಕಲ್ಪ ಮಾಡಿ, ಕದ್ರಿ ಮಂಜುನಾಥ ದೇವರಿಗೆ ಮಧ್ಯಾಹ್ನ ಏಕದಶರುದ್ರಾಭಿಷೇಕ, ಪಂಚಾಮೃತ ಪುರಸರ ಸೇವೆಯನ್ನು ನೆರವೇರಿಸಲಾಗುತ್ತದೆ. ಶುಕ್ರವಾರದ ಅನ್ನದಾನ ಸೇವೆಯೂ ಅವರ ಹೆಸರಿನಲ್ಲಿ ನಡೆಯುತ್ತದೆ’ ಎಂದು ಅರ್ಚಕ ಕೃಷ್ಣ ಅಡಿಗ ತಿಳಿಸಿದರು.

Vishwa News 24

Recent Posts

ಉಡುಪಿ: ಹುಲಿ ಕುಣಿತಕ್ಕೆ ಮನಸೋತ ಯತ್ನಾಳ್ ; ಹುಲಿ ವೇಷಧಾರಿಗಳೊಂದಿಗೆ ಭರ್ಜರಿ ಸ್ಟೆಪ್ – vishwanews24

ಉಡುಪಿ: ಹುಲಿ ಕುಣಿತಕ್ಕೆ ಮನಸೋತ ಯತ್ನಾಳ್ ; ಹುಲಿ ವೇಷಧಾರಿಗಳೊಂದಿಗೆ ಭರ್ಜರಿ ಸ್ಟೆಪ್ ಉಡುಪಿ: ಹುಲಿ ಕುಣಿತಕ್ಕೆ ಮನಸೋತ ಶಾಸಕ ಬಸನಗೌಡ ಪಾಟೀಲ್…

4 seconds ago

ಮಂಗಳೂರು ಜಿಲ್ಲಾ ಕಾರಾಗೃಹದ ಸುತ್ತ ಮೊಬೈಲ್ ನೆಟ್‌ವರ್ಕ್ ಸಮಸ್ಯೆ; ತಾಂತ್ರಿಕ ಪರಿಹಾರಕ್ಕೆ ಸರ್ಕಾರ ಕ್ರಮ: ಪ್ರಿಯಾಂಕ್ ಖರ್ಗೆ – vishwanews24

ಮಂಗಳೂರು ಜಿಲ್ಲಾ ಕಾರಾಗೃಹದ ಸುತ್ತ ಮೊಬೈಲ್ ನೆಟ್‌ವರ್ಕ್ ಸಮಸ್ಯೆ; ತಾಂತ್ರಿಕ ಪರಿಹಾರಕ್ಕೆ ಸರ್ಕಾರ ಕ್ರಮ: ಸಚಿವ ಪ್ರಿಯಾಂಕ್ ಖರ್ಗೆ ಬೆಂಗಳೂರು…

28 minutes ago

ಉಡುಪಿ ಜಿಲ್ಲೆಯಲ್ಲಿ ವೈದ್ಯಕೀಯ ಕಾಲೇಜು ಸ್ಥಾಪನೆಗೆ ಸರ್ಕಾರದ ಚಿಂತನೆ : ಡಿಸಿಎಂ ಡಾ.ಜಿ.ಪರಮೇಶ್ವರ್ – vishwanews24

ಸಚಿವ ಸಂಪುಟ ಸಭೆಯಲ್ಲಿ ಕರಾವಳಿ ಭಾಗದ ಅಭಿವೃದ್ಧಿ, ಪ್ರವಾಸೋದ್ಯಮಕ್ಕೆ ಆದ್ಯತೆ : ಡಿಸಿಎಂ ಡಾ.ಜಿ.ಪರಮೇಶ್ವರ್ ಉಡುಪಿ : ಉಡುಪಿ ಜಿಲ್ಲೆಯ…

35 minutes ago

ಕರಾವಳಿಯ ವಾತಾವರಣ ಕೆಡಿಸಲು ಹಾಗೂ ವೋಟ್ ಬ್ಯಾಂಕ್‌ಗಾಗಿ ಕ್ಯಾಬಿನಟ್‌ ಸಭೆ : ಯತ್ನಾಳ್ ಲೇವಡಿ  – vishwanews24

ಕರಾವಳಿಯ ವಾತಾವರಣ ಕೆಡಿಸಲು ಹಾಗೂ ವೋಟ್ ಬ್ಯಾಂಕ್‌ಗಾಗಿ ಕ್ಯಾಬಿನಟ್‌ ಸಭೆ : ಯತ್ನಾಳ್ ಲೇವಡಿ  ಉಡುಪಿ: ಕರಾವಳಿಯಲ್ಲಿ ನಡೆಯಲಿರುವ ಸಚಿವ…

1 hour ago

ಉಡುಪಿ:  ವಿದ್ಯಾರ್ಥಿಗಳಿಗೆ MDMA ಮಾರಾಟ: ಇಬ್ಬರ ಬಂಧನ – vishwanews24

ಉಡುಪಿ:  ವಿದ್ಯಾರ್ಥಿಗಳಿಗೆ MDMA ಮಾರಾಟ: ಇಬ್ಬರ ಬಂಧನ ಉಡುಪಿ: ವಿದ್ಯಾರ್ಥಿಗಳಿಗೆ MDMA ಮಾದಕ ವಸ್ತು ಮಾರಾಟ ಮಾಡುತ್ತಿದ್ದ ಆರೋಪದ ಮೇಲೆ…

1 hour ago

ಮಂಗಳೂರಿನ ಜನರ ಉಜ್ವಲ ಭವಿಷ್ಯಕ್ಕಾಗಿ ಹಲವು ಐತಿಹಾಸಿಕ ನಿರ್ಧಾರಗಳನ್ನು ಕೈಗೊಳ್ಳಲಾಗಿದೆ : ಸಚಿವ ಯು.ಟಿ.ಖಾದರ್ – vishwanews24

‘ನವ ಮಂಗಳೂರು’ ನಿರ್ಮಾಣ, ಕರಾವಳಿಯ ಸರ್ವಾಂಗೀಣ ಪ್ರಗತಿಗೆ ರಾಜ್ಯ ಸರಕಾರ ಬದ್ಧ : ಸಚಿವ ಯು.ಟಿ.ಖಾದರ್ ಮಂಗಳೂರು : ಮಂಗಳೂರಿನ…

1 hour ago