Featured

ಮಂಗಳೂರು : ಕಳ್ಳತನ ಅಥವಾ ಕಳೆದುಕೊಂಡ ಫೋನ್‌ ಬ್ಲಾಕ್‌ ಮಾಡಲು ಹೊಸ ವಿಧಾನ ಜಾರಿ : ದ.ಕ.ಎಸ್ಪಿ – Vishwanews24

ಕಳ್ಳತನ ಅಥವಾ ಕಳೆದುಕೊಂಡ ಫೋನ್‌ ಬ್ಲಾಕ್‌ ಮಾಡಲು ಹೊಸ ವಿಧಾನ ಜಾರಿ : ದ.ಕ.ಎಸ್ಪಿ

ಮಂಗಳೂರು : ಕಳುವಾದ ಕಾಣೆಯಾದ/ಸುಲಿಗೆಯಾದ ಮೊಬೈಲ್ ಫೋನ್ ಗಳನ್ನು ಬ್ಲಾಕ್ ಮಾಡುವ ಹೊಸ ವಿಧಾನವನ್ನು ಪೋಲಿಸ್ ಇಲಾಖೆ ಜಾರಿಗೊಳಿಸಿದ್ದು, ಈ ಬಗ್ಗೆ ದಕ್ಷಿಣ ಕನ್ನಡ ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ಅಮಾತೆ ವಿಕ್ರಮ್ ಪ್ರಕಟಣೆ ಹೊರಡಿಸಿದ್ದಾರೆ.

ಇತ್ತೀಚಿನ ದಿನಗಳಲ್ಲಿ ಕಳುವಾದ/ಕಾಣೆಯಾದ/ಸುಲಿಗೆಯಾದ Mobile Phone ಗಳು ಸೈಬರ್ ಅಪರಾಧ ನಾರ್ಕೋಟಿಕ್ಸ್ ಅಪರಾಧ ಸರಿದಂತೆ ಇತರ ಗಂಭೀರ ಅಪರಾಧಗಳಲ್ಲಿ ಬಳಕೆಯಾಗುತ್ತಿರುವುದು ಗಣನೀಯವಾಗಿ ಕಂಡುಬಂದಿರುತ್ತದೆ. ಇಂತಹ Mobile Phone ಗಳ ದುರ್ಬಳಕೆಯನ್ನು ತಡೆಗಟ್ಟಲು ಕೇಂದ್ರ ಟೆಲಿಕಮ್ಯುನಿಕೇಶನ್ ಇಲಾಖೆಯಿಂದ ಕಳುವಾದ/ಕಾಣಿಯಾದ/ಸುಲಿಗೆಯಾದ Mobile Phone ಗಳನ್ನು ಬ್ಲಾಕ್ ಮಾಡುವ ವ್ಯವಸ್ಥೆಯನ್ನು ಜಾರಿಗೆ ತರಲಾಗಿರುತ್ತದೆ ಹಾಗೂ ಪೊಲೀಸ್ ಇಲಾಖೆಯಿಂದ ಕೂಡಾ ಈ ವ್ಯವಸ್ಥೆಯನ್ನು ಪರಿಣಾಮಕಾರಿಯಾಗಿ ಜಾರಿಗೆ ತರಲಾಗುತ್ತಿದೆ.

ಈ ಕೆಳಕಂಡ ವಿಧಾನಗಳನ್ನು ಅನುಸರಿಸುವುದರ ಮೂಲಕ ಕಳುವಾದ ಕಾಣೆಯಾದ ಸುಲಿಗೆಯಾದ Mobile Phone ಗಳನ್ನು ಬ್ಲಾಕ್ ಮಾಡಬಹುದಾಗಿದೆ.

➡️ ನಿಮ್ಮ Mobile Phone ಕಳುವು ಕಾಣೆಯಾದರೆ/ಸುಲಿಗೆಯಾದರೆ ತಾವು ತಕ್ಷಣವೇ KSP E-Lost ಅಪ್ಲಿಕೇಶನ್ ನಲ್ಲಿ ದೂರನ್ನು ಸಲ್ಲಿಸಿ Digital E Acknowledgement ಪಡೆದುಕೊಳ್ಳಬೇಕು, ಅಥವಾ ಹತ್ತಿರದ ಪೊಲೀಸ್ ಠಾಣೆಗೆ ತೆರಳಿ ದೂರನ್ನು ಸಲ್ಲಿಸಿ ಸ್ವೀಕೃತಿಯನ್ನು ಪಡೆದುಕೊಳ್ಳುವುದು, ಸ್ವೀಕೃತಿಯ ಪ್ರತಿಯನ್ನು ತಮ್ಮ ಬಳಿ ಇಟ್ಟುಕೊಂಡಿರಬೇಕು.]

➡️ ನೀವು ಕಳೆದುಕೊಂಡಿರುವ ಸಿಮ್ ಕಾರ್ಡ್ ಅನ್ನು ಸಂಬಂಧಪಟ್ಟ ಸರ್ವಿಸ್ ಪ್ರೊವೈಡರ್ ನಿಂದ ಮತ್ತೆ ಪಡೆದುಕೊಂಡು, ಒಟಿಪಿ ಪಡೆಯಲು ಸದರಿ ಸಿಮ್‌ ಕಾರ್ಡನ್ನು ಚಾಲನೆಯಲ್ಲಿ ಇಟ್ಟುಕೊಳ್ಳುವುದು. CEIR PORTAL ನಲ್ಲಿ ಒಟಿಪಿ ಪಡೆಯಲು ಇದು ಅನುಕೂಲವಾಗುತ್ತದೆ.

➡️ www.ceir.gov.in ವೆಬ್ ಸೈಟ್‌ಗೆ ಹೋಗಿ ತಮ್ಮ ಕಳುವಾದ/ಕಾಣೆಯಾದ/ಸುಲಿಗೆಯಾದ Mobile Phone ಗಳ ಮಾಹಿತಿಯನ್ನು ನಮೂದಿಸಬೇಕು. ಸದರಿ ಮಾಹಿತಿ ನಮೂದಿಸಿದ 24 ಗಂಟೆಗಳಲ್ಲಿ ತಮ್ಮ Mobile Phone ಬ್ಲಾಕ್ ಆಗುತ್ತದೆ. ನಂತರ ಯಾರೂ ಕೂಡಾ ಆ Mobile ಅನ್ನು ದುರ್ಬಳಕೆ ಮಾಡಲು ಸಾಧ್ಯವಿರುವುದಿಲ್ಲ.

➡️ ಕಳುವಾದ/ಕಾಣೆಯಾದ ಸುಲಿಗೆಯಾದ Mobile Phone ಪತ್ತೆಯಾದರೆ ಈಗಾಗಲೇ ತಿಳಿಸಿರುವ CEIR PORTAL ನಲ್ಲಿ ಲಾಗಿನ್ ಆಗಿ Unblock ಮಾಡಿ ಉಪಯೋಗಿಸಬಹುದು.

➡️ ಹಾಗೆಯೇ ಸಾರ್ವಜನಿಕರು ಪೊಲೀಸ್ ಠಾಣೆಯನ್ನು ಸಂಪರ್ಕಿಸಿದರೆ EIR PORTAL ಮೂಲಕ ಕಳುವಾದ/ಕಾಣೆಯಾದ Mobile Phone ಅನ್ನು Block ಮಾಡಲಾಗುವುದು ಹಾಗೂ ಸದರಿ Mobile Phone ಪತ್ತೆಯಾದಲ್ಲಿ Unblock ಮಾಡಲಾಗುವುದು ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Vishwa News 24

Recent Posts

ಸುಳ್ಯ:  ಶಾಸಕಿ ಭಾಗೀರಥಿ ಮುರುಳ್ಯ ಕಾರು ಅಪಘಾತ – vishwanews24

ಸುಳ್ಯ:  ಶಾಸಕಿ ಭಾಗೀರಥಿ ಮುರುಳ್ಯ ಕಾರು ಅಪಘಾತ ಸುಳ್ಯ: ಸುಳ್ಯ ಶಾಸಕಿ ಭಾಗೀರಥಿ ಮುರುಳ್ಯ ಅವರು ಪ್ರಯಾಣಿಸುತ್ತಿದ್ದ ಇನ್ನೋವಾ ಕಾರು…

9 hours ago

ಸ್ವಾಮೀಜಿಗಳು ನನ್ನ ಸೇವೆ ಮಾಡಲಿ ಅಂತ ಹೇಳಿಲ್ಲ ; ನನ್ನ ಹೇಳಿಕೆಯನ್ನು ತಿರುಚಲಾಗಿದೆ : ಸಿಎಂ  – vishwanews24

ಸ್ವಾಮೀಜಿಗಳು ನನ್ನ ಸೇವೆ ಮಾಡಲಿ ಅಂತ ಹೇಳಿಲ್ಲ ; ನನ್ನ ಹೇಳಿಕೆ ತಿರುಚಲಾಗಿದೆ : ಸಿಎಂ  ಬೆಂಗಳೂರು: ನನಗೆ ಮದ…

9 hours ago

ಎಚ್ಚರ ತಪ್ಪಿದರೆ ಎಂಆರ್‌ಪಿಎಲ್ ಯಾವತ್ತಿಗೂ ಜೀವಂತ ಜ್ವಾಲಾಮುಖಿ: ಸತ್ಯಜಿತ್ ಸುರತ್ಕಲ್ – vishwanews24

ಎಂಆರ್‌ಪಿಎಲ್‌ ಜೀವಂತ ಜ್ವಾಲಾಮುಖಿಯಾಗದಂತೆ ಎಚ್ಚರ ವಹಿಸಿ: ಸತ್ಯಜಿತ್ ಸುರತ್ಕಲ್ ಮಂಗಳೂರು: ಎಂಆರ್‌ಪಿಎಲ್‌ನಂತಹ ಸಂಸ್ಥೆ ಕರಾವಳಿಯಲ್ಲಿರುವುದು ಹೆಮ್ಮೆಯ ವಿಚಾರವಾದರೂ, ಆಡಳಿತ ವರ್ಗ…

10 hours ago

ಡೆಲ್ಲಿ ಕ್ಯಾಪಿಟಲ್ಸ್ ತಂಡದ ನೂತನ ಮುಖ್ಯ ಕೋಚ್ ಆಗಿ ಸೌರವ್ ಗಂಗೂಲಿ ನೇಮಕ – vishwanews24

ಡೆಲ್ಲಿ ಕ್ಯಾಪಿಟಲ್ಸ್ ತಂಡದ ನೂತನ ಮುಖ್ಯ ಕೋಚ್ ಆಗಿ ಸೌರವ್ ಗಂಗೂಲಿ ನೇಮಕ ನವದೆಹಲಿ: ಭಾರತ ಕ್ರಿಕೆಟ್ ತಂಡದ ಮಾಜಿ…

10 hours ago

ಕಾರ್ಕಳ: ಉದ್ಯಮಿ ನೇಣು ಬಿಗಿದು ಆತ್ಮಹತ್ಯೆ – vishwanews24

ಕಾರ್ಕಳ: ಉದ್ಯಮಿ ಮಂಜುನಾಥ್ ಪೈ ನೇಣು ಬಿಗಿದು ಆತ್ಮಹತ್ಯೆ ಕಾರ್ಕಳ: ಜೋಡು ರಸ್ತೆಯ ಅಪಾರ್ಟ್‌ಮೆಂಟ್ ಕಟ್ಟಡದ ಕೆಳಭಾಗದಲ್ಲಿ ಉದ್ಯಮಿ ಮಂಜುನಾಥ್…

11 hours ago

ಸುಪ್ರೀಂ ಕೋರ್ಟ್‌ನ ನಕಲಿ ಆದೇಶ ಸೃಷ್ಟಿಸಿ ಜೀವಾವಧಿ ಕೈದಿ ಬಿಡುಗಡೆ ಮಾಡಿದ ಆರೋಪ : ಡಿಐಜಿ ಸೋಮಶೇಖರ್ ಬಂಧನ – vishwanews24

ಸುಪ್ರೀಂ ಕೋರ್ಟ್‌ನ ನಕಲಿ ಆದೇಶ ಸೃಷ್ಟಿಸಿ ಜೀವಾವಧಿ ಕೈದಿ ಬಿಡುಗಡೆ ಮಾಡಿದ ಆರೋಪ : ಡಿಐಜಿ ಸೋಮಶೇಖರ್ ಬಂಧನ ಬೆಂಗಳೂರು:…

11 hours ago