ಮಂಗಳೂರು : ಕಾಂತಾರ ಸಿನಿಮಾದಲ್ಲಿ ದಲಿತರಿಗೆ ಮತ್ತು ಮಹಿಳೆಯರನ್ನು ಅವಹೇಳನ ಮಾಡಲಾಗಿದ್ದು, ಕಾಂತಾರ ಸಿನಿಮಾ ಪ್ರದರ್ಶನವನ್ನು ಸ್ಥಗಿತಗೊಳಿಸಬೇಕು ಎಂದು ಸಮತಾ ಸೈನಿಕ ದಳ ಆಗ್ರಹಿಸಿದೆ.
ರಿಷಬ್ ಶೆಟ್ಟಿ ನಿರ್ದೇಶನ ಮತ್ತು ನಟನೆಯ ಕಾಂತಾರ ಸಿನಿಮಾದಲ್ಲಿ ದಲಿತರು ಮತ್ತು ಮಹಿಳೆಯರನ್ನು ಅವಹೇಳನ ಮಾಡಲಾಗಿದೆ. ಈ ದೃಶ್ಯಗಳಿಗೆ ಕತ್ತರಿ ಹಾಕುವಲ್ಲಿ ಸೆನ್ಸಾರ್ ಮಂಡಳಿ ಸಂಪೂರ್ಣ ವಿಫಲವಾಗಿದೆ. ಆದ್ದರಿಂದ ಕೂಡಲೇ ಕಾಂತಾರ ಸಿನಿಮಾ ಪ್ರದರ್ಶನ ಸ್ಥಗಿತಗೊಳಿಸಲು ಕ್ರಮ ಕೈಗೊಳಳಬೇಕು ಎಂದು ಸಮತಾ ಸೈನಕ ದಳ ಒತ್ತಾಯಿಸಿದೆ.
ಈ ಬಗ್ಗೆ ಸಮತಾ ಸೈನಿಕದಳದ ರಾಜ್ಯ ಕಾರ್ಯದರ್ಶಿ ಲೋಲಾಕ್ಷ ಮಾತನಾಡಿ, ಕಾಂತಾರ ಸಿನಿಮಾದ ಕೆಲವೊಂದು ಪಾತ್ರಗಳಲ್ಲಿ ದಲಿತ ವಿರೋಧಿ ವಿಚಾರಗಳಿದ್ದು, ಇದು ದೈವಾರಾಧನೆಯಲ್ಲಿ ತೊಡಗಿರುವ ದಲಿತರ ಭಾವನೆಗಳಿಗೆ ಧಕ್ಕೆಯುಂಟಾಗಿದೆ ಎಂದು ಆರೋಪಿಸಿದ್ದಾರೆ.
ಕಾಂತಾರ ಸಿನಿಮಾದಲ್ಲಿ ದಲಿತರು ಹಣ, ಹೆಂಡ ಕೊಟ್ಟರೆ ಏನು ಬೇಕಾದ್ರೂ ಮಾಡುತ್ತಾರೆ ಎಂಬಂತೆ ಚಿತ್ರಿಸಲಾಗಿದೆ. ದೈವ ನರ್ತಕರೂ ಕೂಡ ನಮ್ಮ ಜೊತೆಗೆ ನೋವು ತೋಡಿಕೊಂಡಿದ್ದಾರೆ. ದಲಿತರಷ್ಟೇ ಅಲ್ಲದೇ ದೈವ ನರ್ತಕರ ಕುಟುಂಬಗಳಿಗೂ ಅವಮಾನ ಮಾಡಲಾಗಿದೆ. ಸೆನ್ಸಾರ್ ಮಂಡಳಿ ಮತ್ತೆ ಕಾಂತಾರ ಸಿನಿಮಾ ಪರಿಶೀಲನೆ ಮಾಡಬೇಕು ಎಂದು ಸಮತಾ ಸೈನಿಕ ದಳ ರಾಜ್ಯ ಪ್ರಧಾನ ಕಾರ್ಯದರ್ಶಿ ಲೋಲಾಕ್ಷ ಅವರು ಮನವಿ ಮಾಡಿದ್ದಾರೆ.
ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ ಭೇಟಿ ನೀಡಿದ ತಮಿಳು ನಟ ವಿಶಾಲ್ – Vishwanews24
ಎಲ್ಲಾ ಸಮುದಾಯದ ಜನರು ಅನೋನ್ಯರಾಗಿದ್ದಾರೆ. ಆದರೆ ಚಿತ್ರದಲ್ಲಿ ಸಮಾಜದಲ್ಲಿ ಒಡಕನ್ನು ಮಾಡಲಾಗಿದೆ. ನಲಿಕೆ,ಪಂಬಂಧ,ಪರವ ಸಮುದಾಯವನ್ನು ಅವಮಾನ ಮಾಡಲಾಗಿದೆ. ದೈವ ನರ್ತಕನ ತಾಯಿಯ ಬಾಯಿಯಲ್ಲಿ ಅಸಂವಿಧಾನಿಕ ಪದವನ್ನು ಬಳಸಲಾಗಿದೆ. ಚಿತ್ರದಲ್ಲಿ ಹುಡುಗರು ಕೆಟ್ಟ ಭಾಷೆಯಲ್ಲಿ ಮಾತನಾಡುತ್ತಾರೆ. ಆದರೆ ನರ್ತಕ ಕುಟುಂಬದಲ್ಲಿ ಆ ರೀತಿಯ ಕೆಟ್ಟ ಶಬ್ಧ ಬಳಕೆ ಮಾಡುವುದಿಲ್ಲ. ಊರಿನ ಯಜಮಾನ ಗಂಡ ಸತ್ತವರಿಗೆ ನಾನೇ ಇದ್ದೇನೆ ಅಂತಾ ಹೇಳೋದು ದುಃಖ ತಂದಿದೆ. ಎಲ್ಲಾ ನರ್ತಕ ಸಮುದಾಯ ಭಲಾಡ್ಯ ಸಮುದಾಯವನ್ನು ನಂಬಿ ಕೊಂಡಿದೆ. ಸೆನ್ಸಾರ್ ಮಂಡಳಿ ಕಾನೂನು ಚೌಕಟ್ಟಿನಲ್ಲಿ ಆ ಚಿತ್ರವನ್ನು ನೋಡಬೇಕಿತ್ತು. ಆ ಚಿತ್ರಕ್ಕೆ ಸೆನ್ಸರ್ ಒಂದು ಕಟ್ ಕೂಡಾ ಮಾಡಿಲ್ಲ ಎನ್ನುವುದನ್ನು ರಿಷಬ್ ಶೆಟ್ಟಿ ಹೇಳಿದ್ದರು. ಕಾನೂನಿನ ಚೌಕಟ್ಟಿನಲ್ಲಿ ಪರಿಶೀಲನೆ ಮಾಡಬೇಕಾದ ಸೆನ್ಸಾರ್ ಮಂಡಳಿ ಪರಿಶೀಲನೆ ಮಾಡಬೇಕು ಅಂತಾ ಜಿಲ್ಲಾಡಳಿತಕ್ಕೆ ದಲಿತ ಸಂಘಟನೆಗಳು ಒತ್ತಾಯ ಮಾಡಿದೆ.
ಚಿತ್ರದಲ್ಲಿ ದಲಿತ ಹುಡುಗರನ್ನು ಕೀಳಾಗಿ ಕಾಣಲಾಗಿದೆ. ಧಣಿ ಬಡ ಹೆಣ್ಣು ಮಗಳ ಮನೆಗೆ ಹೋಗುವಾಗ ಹೀರೋ ಕಾವಲು ಕಾಯುತ್ತೇನೆ. ಅದನ್ನು ವಿಜೃಂಭಣೆ ಮಾಡುವ ನಾವು ಇಂತಹ ಕೀಳು ಮಟ್ಟಕ್ಕೆ ಹೋಗಿದ್ದೇವೆ. ಹೊರದೇಶದಲ್ಲಿ ಇದನ್ನು ಭಾರತದ ಸಂಸ್ಕೃತಿ ಎಂದು ಹೇಳೋದು ದುರಂತವಾಗಿದೆ. ವ್ಯಕ್ತಿಗತವಾಗಿ ರಿಷಬ್ ಶೆಟ್ಟಿ ಒಳ್ಳೆಯವರು, ಆದರೆ ಚಿತ್ರವನ್ನು ಕಾನೂನು ಚೌಕಟ್ಟಿನಲ್ಲಿ ನೋಡಬೇಕಾಗುತ್ತದೆ. ಜಿಲ್ಲಾ ಮ್ಯಾಜಿಸ್ಟ್ರೇಟ್ ಗೆ ಮನವಿ ಮಾಡುತ್ತೇವೆ. ಇದು ಹಿಂಸೆಗೆ ಪ್ರಚೋದನೆ ನೀಡುತ್ತದೆ. ಹೀಗಾಗಿ ಆಕ್ಷೇಪಾರ್ಹ ಸೀನ್‌ಗೆ ಕತ್ತರಿ ಹಾಕಬೇಕು. ಗುಳಿಗ ಕೋಲ ಕಾಂತಾರ ಚಿತ್ರದಲ್ಲಿ ಇರುವ ರೀತಿಯೇ ಬೇಕು ಎನ್ನುವ ಬೇಡಿಕೆಯೂ ಬರುತ್ತಿದೆ. ಆರಾಧಾನಾ ಕ್ರಮವನ್ನು ವಿಕೃತಿಗೊಳಿಸುತ್ತಿದೆ ಎಂದು ದಕ್ಷಿಣ ಕನ್ನಡ ಜಿಲ್ಲಾ ನಲಿಕೆ ಸೇವಾ ಸಮಾಜದ ಜಿಲ್ಲಾಧ್ಯಕ್ಷ ಪದ್ಮನಾಭ ಮೂಡುಬಿದಿರೆ ಬೇಸರ ವ್ಯಕ್ತಪಡಿಸಿದ್ದಾರೆ.
ಬೈಂದೂರು: ಕಾಂಗ್ರೆಸ್ ಪಕ್ಷದ ಟಿಕೆಟ್ ಆಕಾಂಕ್ಷಿಯಾಗಿ ಕೆ ಗೋಪಾಲ ಪೂಜಾರಿ ಅರ್ಜಿ ಸಲ್ಲಿಕೆ – Vishwanews24
ರೇಣುಕಾಸ್ವಾಮಿ ಕೊಲೆ ಪ್ರಕರಣ : ದರ್ಶನ್ ಅರ್ಜಿ ವಿಚಾರಣೆಗೆ ಅರ್ಹವಲ್ಲ: ಮತ್ತೊಮ್ಮೆ ಜಾಮೀನು ತಿರಸ್ಕರಿಸಿದ ಸುಪ್ರೀಂ ನಟ ದರ್ಶನ್ ರೇಣುಕಾ…
ಗೃಹ ಜ್ಯೋತಿ ಪರಿಶೀಲನೆ: ಪ್ರವರ್ಗ ಮಾಹಿತಿ (ಜಾತಿ ಪ್ರಮಾಣಪತ್ರ) ಕಡ್ಡಾಯವಲ್ಲ ಬೆಂಗಳೂರು: ರಾಜ್ಯಾದ್ಯಂತ ಜುಲೈ 1 ರಿಂದ ಆರಂಭಗೊಂಡಿರುವ ಗೃಹ ಜ್ಯೋತಿ…
ಎಸ್ಐಆರ್ ಪ್ರಕ್ರಿಯೆಯಲ್ಲಿ ಭಾರೀ ಅಕ್ರಮ : ಸಮಗ್ರ ತನಿಖೆಗೆ ಪ್ರಲ್ಹಾದ ಜೋಶಿ ಆಗ್ರಹ ನವದೆಹಲಿ: ರಾಮನಗರ ಜಿಲ್ಲೆಯಲ್ಲಿ ನಡೆದ ಮತದಾರರ…
ಅಕ್ರಮ ಎಸ್ಐಆರ್ ಪ್ರಕ್ರಿಯೆ : 2028ರ ಚುನಾವಣೆ ಗೆಲ್ಲಲು ಬಾಂಗ್ಲಾದೇಶಿಯರ ಸಕ್ರಮಕ್ಕೆ ಕಾಂಗ್ರೆಸ್ ಸಂಚು : ಶೋಭಾ ಕರಂದ್ಲಾಜೆ ಗಂಭೀರ…
ಮೂಲ ನೆಲದಿಂದ ಬೇರ್ಪಡಿಸಿ ಕರಾವಳಿಯ ಮಣ್ಣಿನ ಸಂಸ್ಕೃತಿಯ ಪಾವಿತ್ರ್ಯಕ್ಕೆ ಧಕ್ಕೆ ತರಬೇಡಿ .. ಕರಾವಳಿ ಕಂಬಳವು ತನ್ನದೇ ಆದ ಆಳವಾದ ಸಾಂಪ್ರದಾಯಿಕ…
ಮಂಗಳೂರು:ಸಾಮಾಜಿಕ ಜಾಲತಾಣಗಳಲ್ಲಿ ಸೆಲಿನಾ ಟ್ರಾವೆಲ್ಸ್ ವಿರುದ್ಧ ಹರಿದಾಡಿದ ಕರಪತ್ರ : ಪೊಲೀಸ್ ಇಲಾಖೆ ಸ್ಪಷ್ಟನೆ ಮಂಗಳೂರು: ಖಾಸಗಿ ಸಾರಿಗೆ ಸಂಸ್ಥೆಯಾದ…