Featured

ಮಂಗಳೂರು: ಕಾರಣಿಕ ಮೆರೆದ ಕೊರಗಜ್ಜ ; ತನ್ನ ಕ್ಷೇತ್ರ ಮಾಲಿನ್ಯ ಮಾಡಿದ ಓರ್ವನ ಸಾವು ,ಇಬ್ಬರಿಂದ ತಪ್ಪು ಕಾಣಿಕೆ -Vishwanews24

ಮಂಗಳೂರು: ಕಾರಣಿಕ ಮೆರೆದ ಕೊರಗಜ್ಜ ; ತನ್ನ ಕ್ಷೇತ್ರ ಮಾಲಿನ್ಯ ಮಾಡಿದ ಓರ್ವನ ಸಾವು ,ಇಬ್ಬರಿಂದ ತಪ್ಪು ಕಾಣಿಕೆ -Vishwanews24

ಕೊರಗಜ್ಜನ ಕಾಣಿಕೆ ಡಬ್ಬ ಅಪವಿತ್ರಗೈದ ಆರೋಪಿ ಸಾವು..

ಆತಂಕಗೊಂಡ ಇನ್ನುಳಿದ ಆರೋಪಿಗಳಿಂದ ಕ್ಷಮಾಪಣೆ..

ಮಂಗಳೂರು: ನಗರದ ಎಮ್ಮೆಕೆರೆ ಸೇರಿದಂತೆ ಹಲವೆಡೆ ದೈವಸ್ಥಾನಗಳಿಗೆ ತೆರಳಿ ಕ್ಷೇತ್ರವನ್ನು ಅಪವಿತ್ರಗೊಳಿಸಿದ ಆರೋಪಿಗಳ ಪೈಕಿ ಒಬ್ಬಾತ ಮೃತಪಟ್ಟಿದ್ದು, ಉಳಿದ ಇಬ್ಬರು ಆರೋಪಿಗಳು ಕೊರಗಜ್ಜ ಕೋಲೋತ್ಸವದಲ್ಲಿ ಕ್ಷಮಾಪಣೆ ಕೇಳಲು ಬಂದ ಕುತೂಹಲಕಾರಿ ಘಟನೆ ನಗರದ ಎಮ್ಮೆಕೆರೆಯಲ್ಲಿ ಬುಧವಾರ ರಾತ್ರಿ ನಡೆದಿದೆ.

ನಗರದ ಎಮ್ಮೆಕೆರೆ ಬಬ್ಬುಸ್ವಾಮಿ ಪರಿವಾರ ದೈವಗಳ ಕ್ಷೇತ್ರ ಸೇರಿದಂತೆ ನಗರ ಹಲವು ದೈವಸ್ಥಾನದ ಕಾಣಿಕೆ ಡಬ್ಬಿಗಳಿಗೆ ಅಶ್ಲೀಲ ಸೊತ್ತುಗಳನ್ನು ಹಾಕಿ ಅಪವಿತ್ರಗೊಳಿಸಲಾಗಿತ್ತು. ಕಿಡಿಗೇಡಿಗಳು ಗಲಭೆ ಸೃಷ್ಟಿಸಿ, ಶಾಂತಿ ಕದಡುವ ಉದ್ದೇಶದಿಂಧ ಈ ಕೃತ್ಯವೆಸಗಿದ್ದರು. ಒಂದು ತಿಂಗಳ ಹಿಂದೆ ಕಾಣಿಕೆ ಡಬ್ಬಿ ತೆರೆದು ನೋಡುವಾಗ ಈ ಕೃತ್ಯ ಬಯಲಿಗೆ ಬಂದಿದ್ದು, ಈ ಬಗ್ಗೆ ಹಲವು ದೈವಸ್ಥಾನಗಳ ಆಡಳಿತ ಮಂಡಳಿ ಪೊಲೀಸ್ ಠಾಣೆಗಳಿಗೆ ದೂರು ಕೂಡಾ ನೀಡಿತ್ತು.ಅದರಂತೆ ಪೊಲೀಸರು ತನಿಖೆ ನಡೆಸುತ್ತಿದ್ದರು.

ಉಡುಪಿ: ವಿದೇಶದಲ್ಲಿ ಕೆಲಸ ಕೊಡಿಸುವುದಾಗಿ ನಂಬಿಸಿ ಹಣ ಪಡೆದು ವಂಚನೆ -Vishwanews24

ಆಘಾತಗೊಂಡ ಭಕ್ತಾದಿಗಳು ಕ್ಷೇತ್ರದಲ್ಲಿ ವಿಶೇಷ ಪ್ರಾರ್ಥನೆ ನಡೆಸಿ, ತಪ್ಪಿತಸ್ಥರಿಗೆ ಸರಿಯಾದ ಶಿಕ್ಷೆಯಾಗಲಿ ಎಂದು ಕೊರಗಜ್ಜನಲ್ಲಿ ಬೇಡಿಕೆ ಇಟ್ಟಿದ್ದರು. ಇದು ಮಾತ್ರವಲ್ಲದೆ ಹಿಂದೂ ಸಂಘಟನೆಗಳು ದೈವಸ್ಥಾಗಳನ್ನು ಅಪವಿತ್ರಗೊಳಿಸುವವರಿಗೆ ದೇವರು ತಕ್ಕ ಶಾಸ್ತಿಯನ್ನು ನೀಡಲಿ ಎಂದು ಪ್ರಾರ್ಥಿಸಿದ್ದಲ್ಲದೆ, ಪ್ರತಿಭಟನಾರ್ಥವಾಗಿ ಕೊರಗಜ್ಜ ಮೂಲ ಕ್ಷೇತ್ರಕ್ಕೆ ಪಾದಯಾತ್ರೆಯನ್ನು ಮಾಡಿದ್ದರು.

ನಗರದ ಎಮ್ಮೆಕೆರೆಯಲ್ಲಿರುವ ಕೊರಗಜ್ಜನ ಕ್ಷೇತ್ರವನ್ನು ಮೂತ್ರ ಮಾಡಿ ಗಲೀಜು ಮಾಡಿದ್ದಲ್ಲದ್ದೆ ಲಕ್ಷಾಂತರ ಕೊರಗಜ್ಜನ ಭಕ್ತರಿಗೆ ನೋವುಂಟು ಮಾಡಿದ ಆರೋಪಿಗಳಿಗೆ ಕಾರಣಿಕ ಶಕ್ತಿ ಕೊರಗಜ್ಜನ ಮಹಿಮೆ ಅರಿವಾಗಿದ್ದು ,ಅಪರಾಧಿಗಳಲ್ಲಿ ಓರ್ವ ಹುಚ್ಚು ಹಿಡಿದು ಸಾವನ್ನಪ್ಪಿದ್ದರೆ,ಉಳಿದಿಬ್ಬರು ಪ್ರಾಣ ಭೀತಿಯಿಂದ ಬುಧವಾರ ಕ್ಷೇತ್ರದಲ್ಲಿ ಕೋಲ ನಡೆಯುವ ಸಂದರ್ಭ ಆಗಮಿಸಿ ಕೊರಗಜ್ಜನ ಮುಂದೆ ತಪ್ಪು ಕೇಳಿದ್ದಾರೆ.ಇನ್ನೋರ್ವ ಅಸೌಖ್ಯದಿಂದ ತಪ್ಪು ಕೇಳುವ ಕಾರ್ಯದಿಂದ ದೂರ ಉಳಿದಿದ್ದಾನೆ.
ಕಳೆದ ತಿಂಗಳು ಈ ಘಟನೆ ನಡೆದಿತ್ತು.ಬಳಿಕ ಹಿಂದೂ ಸಂಘಟನೆಗಳು ಕಾಲ್ನಡಿಗೆ ಜಾಥಾ ಸಹಿತ ಹಲವು ಕಾರ್ಯಕ್ರಮ ಹಮ್ಮಿಕೊಂಡು ಕ್ಷೇತ್ರಕ್ಕೆ ಅಪಚಾರ ಮಾಡಿದವರಿಗೆ ತಕ್ಕ ಶಾಸ್ತಿಯಾಗಲಿ ಎಂದು ಹರಕೆ ,ದೂರು ಸಲ್ಲಿದ್ದನ್ನು ಸ್ಮರಿಸಬಹುದು.ಕಾಕತಾಳೀಯ ಎಂಬಂತೆ ಓರ್ವ ಅಪರಾಧಿ ಮೂರ್ನಾಲ್ಕು ದಿನಗಳ ಹಿಂದೆ ಮನೆಯಲ್ಲಿಯೇ ತಲೆಯನ್ನು ಗೋಡೆಗೆ ಬಡಿದುಕೊಂಡು ಮೃತಪಟ್ಟಿದ್ದಾನೆ.ಇದೀಗ ಕ್ಷೇತ್ರದ ಕಾರಣಿಕ ಗೋಚರಿಸಿದ್ದು ಅಪರಾಧಿಗಳು ದೈವದ ಮುಂದೆ ಕ್ಷಮಾಪಣೆಗೆ ಮುಂದಾಗಿದ್ದಾರೆ
ಅಂದಾಜು 25-35ರ ಹರೆಯದ ಯುವಕರೇ ಗಲಬೆ ಸೃಷ್ಟಿಸುವ ಉದ್ದೇಶ ಇಲ್ಲವೇ ಧಾರ್ಮಿಕ ಭಾವನೆಗೆ ಧಕ್ಕೆ ಉಂಟು ಮಾಡುವ ಉದ್ದೇಶದಿಂದ
ಬೇರೆ ಕೋಮಿನ ಒಟ್ಟು ಹದಿಮೂರು ಜನರ ತಂಡ ಕೊರಗಜ್ಜ ಕ್ಷೇತ್ರ ಅಪವಿತ್ರಗೊಳಿಸುವ ಈ ಕೃತ್ಯ ಎಸಗಿರುವುದು ಕಂಡು ಬಂದಿದ್ದು,ಕ್ಷಮಾಪಣೆ ಆದ ಕೂಡಲೇ ಪೊಲೀಸರ ತಂಡ ಆರೋಪಿಗಳನ್ನು ವಶಕ್ಕೆ ಪಡೆದಿದೆ.ಸ್ಥಳದಲ್ಲಿ ಇದ್ದ ಭಜರಂಗದಳದ ಕಾರ್ಯಕರ್ತರು ಆರೋಪಿಗಳ ಮೇಲೆ ಹಲ್ಲೆಗೆ ಮುಂದಾದ ಘಟನೆಯೂ ನಡೆಯಿತು.

ಸಿಡಿ ಪ್ರಕರಣ : ಯುವತಿ ನೀಡಿದ್ದ ಪ್ರಮಾಣೀಕೃತ ಹೇಳಿಕೆಯನ್ನು ರದ್ದುಗೊಳಿಸುವಂತೆ ಹೈಕೋರ್ಟ್ ಮೆಟ್ಟಿಲೇರಿದ ಪೋಷಕರು -Vishwanews24

 

Vishwa News 24

Recent Posts

ಅ.15ರಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ದ.ಕ. ಮತ್ತು ಉಡುಪಿ ಪ್ರವಾಸ -vishwanews24

ಅ.15ರಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ದ.ಕ. ಮತ್ತು ಉಡುಪಿ ಪ್ರವಾಸ ಮಂಗಳೂರು ಉಚ್ಚಿಲ ದಸರಾ ನವರಾತ್ರಿ ಮಹೋತ್ಸವ ದಲ್ಲಿ ಭಾಗಿ…

10 hours ago

ಉಡುಪಿ ಉಚ್ಚಿಲ ದಸರಾ -2026 ರಾಜ್ಯ ಮಟ್ಟದ ನೃತ್ಯ ಸ್ಪರ್ಧೆ ; ಟ್ರೋಫಿ ಗೆದ್ದುಕೊಂಡ ಉಡುಪಿಯ ಎಕ್ಸ್‌ಟ್ರಿಮ್ ಡ್ಯಾನ್ಸ್ ಅಕಾಡೆಮಿ – vishwanews24

ಉಡುಪಿ ಉಚ್ಚಿಲ ದಸರಾ -2026 ರಾಜ್ಯ ಮಟ್ಟದ ನೃತ್ಯ ಸ್ಪರ್ಧೆ ; ಟ್ರೋಫಿ ಗೆದ್ದುಕೊಂಡ ಉಡುಪಿಯ ಎಕ್ಸ್‌ಟ್ರಿಮ್ ಡ್ಯಾನ್ಸ್ ಅಕಾಡೆಮಿ…

19 hours ago

ಉಡುಪಿ: ‘ಭಾರತ್ ಮಾತಾ ಕೀ ಜೈ’ ಘೋಷಣೆ ಕೂಗಿದ ವಿದ್ಯಾರ್ಥಿಗಳ ಮೇಲೆ ಹಲ್ಲೆ ಆರೋಪ; ಪೊಲೀಸ್ ಅಧಿಕಾರಿಯ ವಿರುದ್ಧ ಕಠಿಣ ಕ್ರಮಕ್ಕೆ ಶಾಸಕ ಯಶ್‌ಪಾಲ್ ಸುವರ್ಣ ಆಗ್ರಹ – vishwanews24

ಉಡುಪಿ: ‘ಭಾರತ್ ಮಾತಾ ಕೀ ಜೈ’ ಘೋಷಣೆ ಕೂಗಿದ ವಿದ್ಯಾರ್ಥಿಗಳ ಮೇಲೆ ಹಲ್ಲೆ ಆರೋಪ; ಪೊಲೀಸ್ ಅಧಿಕಾರಿಯ ವಿರುದ್ಧ ಕಠಿಣ…

19 hours ago

ದಸರಾ ರಜೆ ವೇಳೆ ಪರೀಕ್ಷೆ ವಿವಾದ: ಅ.19 ಮತ್ತು 22ರ ಪರೀಕ್ಷೆ ಮುಂದೂಡಿದ ಸೈಂಟ್ ಆಗ್ನೆಸ್ ಕಾಲೇಜು – vishwanews24

ದಸರಾ ರಜೆ ವೇಳೆ ಪರೀಕ್ಷೆ ವಿವಾದ: ಅ.19 ಮತ್ತು 22ರ ಪರೀಕ್ಷೆ ಮುಂದೂಡಿದ ಸೈಂಟ್ ಆಗ್ನೆಸ್ ಕಾಲೇಜು ಮಂಗಳೂರು: ದಸರಾ…

19 hours ago

`ಬ್ರೇಕಿಂಗ್ ಬ್ಯಾಡ್’ ಖ್ಯಾತಿಯ ಹಾಲಿವುಡ್ ನಟ ಆರ್‌ಜೆ ಮಿಟ್ಟೆ ನಿಧನ – vishwanews24

`ಬ್ರೇಕಿಂಗ್ ಬ್ಯಾಡ್' ಖ್ಯಾತಿಯ ಹಾಲಿವುಡ್ ನಟ ಆರ್‌ಜೆ ಮಿಟ್ಟೆ ನಿಧನ ಅಮೆರಿಕದ ಜನಪ್ರಿಯ ಟಿವಿ ಸರಣಿ `ಬ್ರೇಕಿಂಗ್ ಬ್ಯಾಡ್’ನಲ್ಲಿ ವಾಲ್ಟರ್…

19 hours ago

ಮಂಗಳೂರಿನಲ್ಲಿ ಹೈಕೋರ್ಟ್ ಪೀಠ ಸ್ಥಾಪನೆಗೆ ಅಧಿಕಾರಿಗಳ ಸಮಿತಿ ರಚನೆ: ಸಚಿವ ಯು.ಟಿ. ಖಾದರ್ – vishwanews24

ಮಂಗಳೂರಿನಲ್ಲಿ ಹೈಕೋರ್ಟ್ ಪೀಠ ಸ್ಥಾಪನೆಗೆ ಅಧಿಕಾರಿಗಳ ಸಮಿತಿ ರಚನೆ: ಸಚಿವ ಯು.ಟಿ. ಖಾದರ್ ಮಂಗಳೂರು: ಮಂಗಳೂರಿನಲ್ಲಿ ಹೈಕೋರ್ಟ್‌ ಪೀಠ ಸ್ಥಾಪನೆ…

2 days ago