Featured

ಮಂಗಳೂರು-ಕಾರ್ಕಳ ನಡುವೆ ಕೆಎಸ್‌ಆರ್‌ಟಿಸಿ ಬಸ್ ಸಂಚಾರ ..! vishwanews24

ಮಂಗಳೂರು-ಕಾರ್ಕಳ ನಡುವೆ ಕೆಎಸ್‌ಆರ್‌ಟಿಸಿ ಬಸ್ ಸಂಚಾರ

ಮಂಗಳೂರು: ದಶಕಗಳ ಹೋರಾಟಕ್ಕೆ ಜಯ ಸಂದಿದೆ. ಮಂಗಳೂರು-ಕಾರ್ಕಳ ನಡುವೆ ಕಡೆಗೂ ಕೆಎಸ್‌ಆರ್‌ಟಿಸಿ ಬಸ್ ಸಂಚಾರ ಆರಂಭಗೊಂಡಿದೆ. ಸದ್ಯ ನಾಲ್ಕು ಬಸ್‌ಗಳು ಮಾತ್ರ ಸಂಚರಿಸಲಿವೆ. ಪ್ರತಿದಿನ ಮಂಗಳೂರು ಕಡೆಯಿಂದ ಎರಡು ಬಸ್‌ಗಳು ಮತ್ತು ಕಾರ್ಕಳ ಕಡೆಯಿಂದ ಎರಡು ಬಸ್‌ಗಳು ಸೇವೆ ನೀಡಲಿವೆ. ಒಂದು ಬಸ್‌ ದಿನಕ್ಕೆ 7 ಟ್ರಿಪ್‌ನಂತೆ ನಾಲ್ಕು ಬಸ್‌ಗಳು ಒಟ್ಟು 28 ಟ್ರಿಪ್‌ ಈ ಮಾರ್ಗದಲ್ಲಿ ನಡೆಸಲಿವೆ.

ಮಂಗಳೂರಿನಿಂದ ಮೂಡುಬಿದಿರೆ ಮೂಲಕ ಕಾರ್ಕಳಕ್ಕೆ ಸರಕಾರಿ ಬಸ್‌ ಸೇವೆ ಆರಂಭಿಸುವ ಹಲವು ವರ್ಷಗಳ ಬೇಡಿಕೆ ಕೊನೆಗೂ ಈಡೇರುತ್ತಿದೆ. ಖಾಸಗಿ ಬಸ್‌ ಮಾಲೀಕರ ಭಾರಿ ಲಾಬಿಯ ಹೊರತಾಗಿಯೂ, ತಾತ್ಕಾಲಿಕ ಎರಡು ಪರ್ಮಿಟ್‌ನಡಿ ನಾಲ್ಕು ಬಸ್‌ಗಳ ಓಡಾಟ ಡಿ.11ರಿಂದ ಆರಂಭಗೊಳ್ಳಲಿದೆ.

ಆ ಮೂಲಕ ರಾಜ್ಯ ಸರಕಾರದ ಮಹತ್ವಾಕಾಂಕ್ಷೆಯ ಪಂಚ ಗ್ಯಾರಂಟಿಗಳಲ್ಲೊಂದಾದ ಶಕ್ತಿ ಯೋಜನೆಯ ಪ್ರಯೋಜನ ಮೊದಲ ಬಾರಿಗೆ ಮಂಗಳೂರು, ಕೈಕಂಬ, ಎಡಪದವು, ಮೂಡುಬಿದಿರೆ, ಬೆಳುವಾಯಿ ಪ್ರದೇಶದ ಜನರಿಗೂ ತಲುಪಲಿದೆ.

ಸಾರ್ವಜನಿಕರ ಹಲವು ದಶಕಗಳ ಬೇಡಿಕೆ, ಪ್ರಾದೇಶಿಕ ಸಾರಿಗೆ ಪ್ರಾಧಿಕಾರದ ದಶಕದ ಪ್ರಸ್ತಾವನೆಯ ತೀರ್ಪು ಬಾಕಿ ಇರುವಾಗಲೇ ಮಂಗಳೂರು ಪ್ರಾದೇಶಿಕ ಸಾರಿಗೆ ಉಪ ಆಯುಕ್ತರ ಕಚೇರಿಯಿಂದ ನಾಲ್ಕು ಬಸ್‌ಗಳ ಸೇವೆ ಆರಂಭಿಸಲು ಎರಡು ಪರ್ಮಿಟ್‌ನ ನಡವಳಿ ಸೋಮವಾರ ಸಿದ್ಧಪಡಿಸಲಾಗಿದೆ. ಎಲ್ಲ ಬಸ್‌ಗಳು ಸಂಚರಿಸುವ ಸ್ಟೇಟ್‌ ಬ್ಯಾಂಕ್‌ ಪ್ರದೇಶದಿಂದ ಹೊಸ ಬಸ್‌ ಸಂಚಾರ ಆರಂಭಿಸಲು 1993ರ ಜಿಲ್ಲಾದಂಡಾಧಿಕಾರಿ ಅಧಿಸೂಚನೆ(ಡಿಎಂ ನೋಟಿಫಿಕೇಶನ್‌) ಅಡ್ಡಿಯಾಗಿರುವ ಹಿನ್ನೆಲೆಯಲ್ಲಿ ಸದ್ಯ ಬಿಜೈ ಕೆಎಸ್‌ಆರ್‌ಟಿಸಿ ಬಸ್‌ ನಿಲ್ದಾಣದಿಂದಲೇ ಬಸ್‌ ಸೇವೆ ಆರಂಭಗೊಳ್ಳಲಿದೆ.

ಒಂದು ವೇಳೆ ಸ್ಟೇಟ್‌ಬ್ಯಾಂಕ್‌ ಪರಿಸರದಿಂದ ಅನುಮತಿ ಕೇಳಿ, ಬಸ್‌ ಸಂಚಾರ ಆರಂಭಿಸಿದರೆ, ಡಿಎಂ ನೋಟಿಫಿಕೇಶನ್‌ ಮೂಲಕ ಕಾನೂನು ತೊಡಕು ಸಂಭವಿಸಿ, ಖಾಸಗಿಯವರು ನ್ಯಾಯಾಲಯದಲ್ಲಿ ಪ್ರಶ್ನಿಸಿ, ಸಂಚಾರಕ್ಕೆ ಅಡ್ಡಿ ಮಾಡುವ ಆತಂಕವಿರುವ ಹಿನ್ನೆಲೆಯಲ್ಲಿ ಬಿಜೈಯಿಂದ ಸಂಚಾರ ಆರಂಭಿಸಲು ಅನುಮತಿ ಕೋರಲಾಗಿತ್ತು.

ಸದ್ಯ ನಾಲ್ಕು ಬಸ್‌ಗಳು ಮಾತ್ರ ಸಂಚರಿಸಲಿವೆ. ಪ್ರತಿದಿನ ಮಂಗಳೂರು ಕಡೆಯಿಂದ ಎರಡು ಬಸ್‌ಗಳು ಮತ್ತು ಕಾರ್ಕಳ ಕಡೆಯಿಂದ ಎರಡು ಬಸ್‌ಗಳು ಸೇವೆ ನೀಡಲಿವೆ. ಒಂದು ಬಸ್‌ ದಿನಕ್ಕೆ 7 ಟ್ರಿಪ್‌ನಂತೆ ನಾಲ್ಕು ಬಸ್‌ಗಳು ಒಟ್ಟು 28 ಟ್ರಿಪ್‌ ನಡೆಸಲಿವೆ. ಕೆಎಸ್‌ಆರ್‌ಟಿಸಿ ಹಿರಿಯ ಪ್ರಾದೇಶಿಕ ನಿಯಂತ್ರಕರ ಕಚೇರಿಯಿಂದ ಡಿ.10ರಂದು ಎರಡು ಬಸ್‌ಗಳ ನೋಂದಣಿ ಸಂಖ್ಯೆ ಕೊಟ್ಟು ಪರ್ಮಿಟ್‌ ಪಡೆಯಲಿದ್ದು, ಬಸ್‌ ಸಂಚಾರ ಡಿ.11ರಿಂದ ಆರಂಭಿಸಲು ಬಸ್‌ ಮತ್ತು ಸಿಬ್ಬಂದಿಗೆ ವ್ಯವಸ್ಥೆ ಮಾಡಲಾಗಿದೆ.

ಮಂಗಳೂರು-ಮೂಡುಬಿದಿರೆ-ಕಾರ್ಕಳ ಮಧ್ಯೆ 8 ಬಸ್‌ಗಳ ಏಳು ಸಿಂಗಲ್‌ ಟ್ರಿಪ್‌ಗೆ ಕೆಎಸ್‌ಆರ್‌ಟಿಸಿಯಿಂದ 2014ರಲ್ಲಿಅರ್ಜಿ ಸಲ್ಲಿಸಿರುವ ವಿಷಯ ಬಗ್ಗೆ ನ.5ರಂದು ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್‌ ಅಧ್ಯಕ್ಷತೆಯಲ್ಲಿಆರ್‌ಟಿಎ ಸಭೆ ನಡೆದು, ಪರ-ವಿರೋಧ ವಾದ ಮಂಡನೆಯಾಗಿತ್ತು. ಉಭಯ ಕಡೆಯ ವಾದ ಆಲಿಸಿದ ಡಿಸಿ, ಆದೇಶ ಕಾಯ್ದಿರಿಸಿದ್ದಾರೆ.

ನಾವು ಎಂಟು ಬಸ್‌ಗಳ ಸಂಚಾರಕ್ಕೆ ಅನುಮತಿ ಕೋರಿದ್ದು, ಅದರ ವಿಚಾರಣೆ ನ.5ರ ಆರ್‌ಟಿಎ ಸಭೆಯಲ್ಲಿ ನಡೆದು, ತೀರ್ಪು ಇನ್ನಷ್ಟೇ ಬರಬೇಕಿದೆ. ಈ ಮಧ್ಯೆ ನಾಲ್ಕು ತಿಂಗಳ ಅವಧಿಗೆ ನಾಲ್ಕು ಬಸ್‌ಗಳಿಗೆ ಅನುಮತಿ ಸಿಕ್ಕಿದೆ. ಒಂದೆರಡು ದಿನಗಳಲ್ಲಿ ಬಸ್‌ ಓಡಿಸುತ್ತೇವೆ ಎಂದು ರಾಜೇಶ್‌ ಶೆಟ್ಟಿ, ಹಿರಿಯ ಪ್ರಾದೇಶಿಕ ನಿಯಂತ್ರಕ, ಕೆಎಸ್‌ಆರ್‌ಟಿಸಿ ತಿಳಿಸಿದ್ದಾರೆ.

Vishwa News 24

Recent Posts

ನಕಲಿ ಔಷಧಿ ಜಾಲದಲ್ಲಿ ದೊಡ್ಡ ದೊಡ್ಡ ಖಾಸಗಿ ಆಸ್ಪತ್ರೆಗಳು , ಮೆಡಿಕಲ್ ಸ್ಟೋರ್‌ಗಳು: ಯು.ಟಿ.ಖಾದರ್ – vishwanews24

ನಕಲಿ ಔಷಧಿ ಜಾಲದಲ್ಲಿ ದೊಡ್ಡ ದೊಡ್ಡ ಖಾಸಗಿ ಆಸ್ಪತ್ರೆಗಳು ,  ಮೆಡಿಕಲ್ ಸ್ಟೋರ್‌ಗಳು : ಶೀಘ್ರವೇ ತಪ್ಪಿತಸ್ಥ ಆಸ್ಪತ್ರೆಗಳ ಲಿಸ್ಟ್…

3 days ago

ಉಚ್ಚಿಲ : ಮೊಗವೀರ ಕುಲಗುರು ಕೀರ್ತಿಶೇಷ ಶ್ರೀ ಮಾಧವ ಮಂಗಲ ಪೂಜಾರ್ಯರ ಕಂಚಿನ ಪುತ್ಥಳಿ ಅನಾವರಣ – vishwanews24

ಉಚ್ಚಿಲ ಮೊಗವೀರ ಭವನದಲ್ಲಿ ಕೀರ್ತಿಶೇಷ ಮಾಧವ ಮಂಗಲ ಪೂಜಾರ್ಯರ ಕಂಚಿನ ಪುತ್ಥಳಿ ಅನಾವರಣ ಉಚ್ಚಿಲ : ಮೊಗವೀರ ಸಮಾಜದ ಗುರು…

3 days ago

ಮೈಸೂರು ದಸರಾದಲ್ಲಿ ಕರಾವಳಿಯ ಕಂಬಳ : ಅ. 18-19ರಂದು ವಿಜಯ ದಶಮಿ ಕರೆಯಲ್ಲಿ ಜೋಡುಕರೆ ಕಂಬಳ – vishwanews24

ಮೈಸೂರು ದಸರಾದಲ್ಲಿ ಕರಾವಳಿಯ ಕಂಬಳ; ಅ. 18-19ರಂದು ‘ವಿಜಯ ದಶಮಿ’ ಜೋಡುಕರೆ ಕಂಬಳ ಮಂಗಳೂರು: ಮೈಸೂರು ದಸರಾ ಉತ್ಸವದ ಅಂಗವಾಗಿ…

3 days ago

2028ಕ್ಕೂ ಡಿಕೆ ಶಿವಕುಮಾರ್‌ ಅವರೇ ಮುಖ್ಯಮಂತ್ರಿ ಆಗಲಿ, ಅವರಿಂದಲೇ ಪಕ್ಷ ಅಧಿಕಾರಕ್ಕೆ ಬರಲಿ : ಸತೀಶ್ ಜಾರಕಿಹೊಳಿ – vishwanews24

2028ಕ್ಕೂ ಡಿಕೆ ಶಿವಕುಮಾರ್‌ ಅವರೇ ಮುಖ್ಯಮಂತ್ರಿ ಆಗಲಿ, ಅವರಿಂದಲೇ ಪಕ್ಷ ಅಧಿಕಾರಕ್ಕೆ ಬರಲಿ : ಸತೀಶ್ ಜಾರಕಿಹೊಳಿ ಮೈಸೂರು: 2028ಕ್ಕೂ…

3 days ago

ಶಿರ್ವ, ಉಡುಪಿಯಲ್ಲಿ ಮಾದಕ ವಸ್ತು ಮಾರಾಟ ಪ್ರಕರಣ : ಬಂಧಿತರ ಪೈಕಿ ಹಲವರು ಅಪರಾಧ ಕೃತ್ಯಗಳಲ್ಲಿ ಭಾಗಿ – vishwanews24

ಶಿರ್ವ, ಉಡುಪಿಯಲ್ಲಿ ಮಾದಕ ವಸ್ತು ಮಾರಾಟ ಪ್ರಕರಣ : ಬಂಧಿತರ ಪೈಕಿ ಹಲವರು ಅಪರಾಧ ಕೃತ್ಯಗಳಲ್ಲಿ ಭಾಗಿ ಉಡುಪಿ: ಉಡುಪಿ…

3 days ago

ಕುಂದಾಪುರ:  ಶಾರ್ಜಾದಲ್ಲಿ ಕೊಲೆಯಾದ ಅಲ್ವಿನ್ ಪ್ರಕಾಶ್ ಕುಂದರ್ ಅಂತ್ಯಸಂಸ್ಕಾರ ; ಕುಟುಂಬಸ್ಥರ ಆಕ್ರಂದನ – vishwanews24

ಕುಂದಾಪುರ:  ಶಾರ್ಜಾದಲ್ಲಿ ಕೊಲೆಯಾದ ಅಲ್ವಿನ್ ಪ್ರಕಾಶ್ ಕುಂದರ್ ಅಂತ್ಯಸಂಸ್ಕಾರ ; ಕುಟುಂಬಸ್ಥರ ಆಕ್ರಂದನ ಕುಂದಾಪುರ: ಶಾರ್ಜಾದಲ್ಲಿ ಅಮಾನುಷವಾಗಿ ಕೊಲೆಯಾದ ಕುಂದಾಪುರ…

3 days ago