Featured

ಮಂಗಳೂರು: ಕಾಲೇಜಿನಿಂದ ಟಿಸಿ ಹಿಂಪಡೆದ 145 ಮುಸ್ಲಿಂ ವಿದ್ಯಾರ್ಥಿನಿಯರು.. Vishwanews24

ಇದಕ್ಕೆಲ್ಲಾ ಶಿಕ್ಷಣ ಸಚಿವರೇ ಕಾರಣ ..

ತುಂಡು ಬಟ್ಟೆಯನ್ನೇ ದೊಡ್ಡ ವಿವಾದವನ್ನಾಗಿ ಮಾಡಿದ್ದಾರೆ..

ಇದರಿಂದ ಸರ್ಕಾರಕ್ಕೇ ನಷ್ಟವಾಗಲಿದೆ. ಹಲವು ಸರ್ಕಾರಿ ಕಾಲೇಜುಗಳು ಮುಚ್ಚಲಿದೆ..

ಹಿಜಾಬ್‌ ಹೋರಾಟಗಾರ್ತಿ ಗೌಸಿಯಾ..

ಮಂಗಳೂರು: ಕಾಲೇಜುಗಳಲ್ಲಿ ಹಿಜಾಬ್ ವಿಚಾರವಾಗಿ ವಿವಾದ ಅಂತ್ಯಗೊಂಡಿಲ್ಲ. ಹಿಜಾಲ್‌ ಧರಿಸಲು ಕಾಲೇಜು ಅವಕಾಶ ನೀಡದ ಹಿನ್ನೆಲೆಯಲ್ಲಿ ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಯಲ್ಲಿ 145 ಮುಸ್ಲಿಂ ವಿದ್ಯಾರ್ಥಿನಿಯರು ಕಾಲೇಜಿನಿಂದ ಟಿಸಿ ಪಡೆದಿದ್ದಾರೆ. ಟಿಸಿ ಪಡೆಯಬಹುದು ಅಂತಾ ಮಂಗಳೂರು ವಿಶ್ವವಿದ್ಯಾನಿಲಯದ ಉಪಕುಲಪತಿ ಪಿ.ಎಸ್ ಯಡಪಡಿತ್ತಾಯ ಹೇಳಿದ್ದರು.

ಈ ಹಿನ್ನೆಲೆಯಲ್ಲಿ ದ.ಕನ್ನಡ, ಉಡುಪಿ ಜಿಲ್ಲೆಯ 900 ವಿದ್ಯಾರ್ಥಿನಿಯರ ಪೈಕಿ 145 ಮುಸ್ಲಿಂ ವಿದ್ಯಾರ್ಥಿನಿಯರು ಟಿಸಿ ಪಡೆದಿದ್ದಾರೆ. ಸರ್ಕಾರಿ ಕಾಲೇಜಿನಿಂದ 34%, ಅನುದಾನಿತ ಕಾಲೇಜಿನಿಂದ 13% ವಿದ್ಯಾರ್ಥಿನಿಯರಿಂದ ಟಿಸಿ ಹಿಂಪಡೆಯಲಾಗಿದೆ. ಈ ಕುರಿತಾಗಿ ಆರ್​ಟಿಐ ಪ್ರಶ್ನೆಗೆ ಶಿಕ್ಷಣ ಇಲಾಖೆ ಉತ್ತರ ನೀಡಿದೆ.

ಇದಕ್ಕೆಲ್ಲಾ ಶಿಕ್ಷಣ ಸಚಿವರೇ ಕಾರಣ ಅಂತ ಹಿಜಾಬ್‌ ಹೋರಾಟಗಾರ್ತಿ ಗೌಸಿಯಾ ಹೇಳಿದ್ದಾರೆ. ಹಿಜಾಬ್ ಧರಿಸಲು ಅವಕಾಶ ಇಲ್ಲದ ಕಾರಣ ಕಾಲೇಜಿನಿಂದ ಗೌಸಿಯಾ ಟಿಸಿ ಪಡೆದಿದ್ದಾಳೆ. ಈ ಎಲ್ಲಾ ಘಟನೆಗಳಿಗೆ ಸಚಿವ ಬಿ.ಸಿ ನಾಗೇಶ್ ಕಾರಣ. ಸಂವಿಧಾನ ನೀಡಿರುವ ಹಕ್ಕಿನ ಪ್ರಕಾರ ಶಿಕ್ಷಣ ಪಡೆಯಲು ನಾಗೇಶ್ ಬಿಡಲಿಲ್ಲ.

ತುಂಡು ಬಟ್ಟೆಯನ್ನೇ ದೊಡ್ಡ ವಿವಾದವನ್ನಾಗಿ ನಾಗೇಶ್ ಮಾಡಿದ್ದಾರೆ. ಇದರಿಂದ ಸರ್ಕಾರಕ್ಕೇ ನಷ್ಟವಾಗಲಿದೆ. ಹಲವು ಸರ್ಕಾರಿ ಕಾಲೇಜುಗಳು ಮುಚ್ಚಲಿದೆ. ಇಡೀ ರಾಜ್ಯಾದ್ಯಂತ 30% ಅಧಿಕ ವಿದ್ಯಾರ್ಥಿನಿಯರು ಕಾಲೇಜು ಬಿಟ್ಟಿದ್ದಾರೆ. ರಾಜ್ಯಕ್ಕೆ ಇದು ಜಲ್ವಂತ ಸಮಸ್ಯೆಯಾಗಲಿದೆ ಎಂದು ಕಾಲೇಜಿನಿಂದ ಟಿಸಿ ಪಡೆದ ವಿದ್ಯಾರ್ಥಿನಿ ಗೌಸಿಯಾ ಹೇಳಿಕೆ ನೀಡಿದ್ದಾಳೆ.

ಭಟ್ಕಳ: ಬ್ರೆಡ್ ತರಲು ಹೋಗಿ ನಾಪತ್ತೆಯಾಗಿದ್ದ ಬಾಲಕ ಗೋವಾದಲ್ಲಿ ಪತ್ತೆ..

Vishwa News 24

Recent Posts

ಉದ್ಯಾವರ : ಪಾಪನಾಶಿನಿ ಹೊಳೆಯ ಸೇತುವೆಯ ಮೇಲೆ ಸ್ಕೂಟರ್ ಪತ್ತೆ ; ವ್ಯಕ್ತಿ ಹೊಳೆಗೆ ಹಾರಿರುವ ಶಂಕೆ -vishwanews24

ಉದ್ಯಾವರ : ಪಾಪನಾಶಿನಿ ಹೊಳೆಯ ಸೇತುವೆಯ ಮೇಲೆ ಸ್ಕೂಟರ್ ಪತ್ತೆ ; ವ್ಯಕ್ತಿ ಹೊಳೆಗೆ ಹಾರಿರುವ ಶಂಕೆ ಉಡುಪಿ: ಉದ್ಯಾವರ…

4 hours ago

ಮಂಗಳೂರು: ಕಾಂಗ್ರೆಸ್ ಗಾಗಿ ಕೆಲಸ ಮಾಡದವರು ಪಕ್ಷದ ಬಗ್ಗೆ ಮಾತನಾಡುವುದು ಬೇಡ: ಸಚಿವ ಯು.ಟಿ.ಖಾದರ್ -vishwanews24

ಮಂಗಳೂರು: ಕಾಂಗ್ರೆಸ್ ಗಾಗಿ ಕೆಲಸ ಮಾಡದವರು ಪಕ್ಷದ ಬಗ್ಗೆ ಮಾತನಾಡುವುದು ಬೇಡ: ಸಚಿವ ಯು.ಟಿ.ಖಾದರ್ ಮಂಗಳೂರು: ಕಾಂಗ್ರೆಸ್ ಪಕ್ಷಕ್ಕಾಗಿ ಕೆಲಸ…

5 hours ago

ಉಡುಪಿ: ನೀಟ್ ಪರೀಕ್ಷೆಗೆ ತಡವಾಗಿ ಬಂದ ವಿದ್ಯಾರ್ಥಿನಿಗೆ ಪರೀಕ್ಷೆ ಬರೆಯಲು ಅವಕಾಶ ಕಲ್ಪಿಸಿದ ಶಾಸಕ ಯಶ್‌ಪಾಲ್ ಸುವರ್ಣಗೆ ವ್ಯಾಪಕ ಶ್ಲಾಘನೆ -vishwanews24

ಉಡುಪಿ: ನೀಟ್ ಪರೀಕ್ಷೆಗೆ ತಡವಾಗಿ ಬಂದ ವಿದ್ಯಾರ್ಥಿನಿಗೆ ಪರೀಕ್ಷೆ ಬರೆಯಲು ಅವಕಾಶ ಕಲ್ಪಿಸಿದ ಶಾಸಕ ಯಶ್‌ಪಾಲ್ ಸುವರ್ಣಗೆ ವ್ಯಾಪಕ ಶ್ಲಾಘನೆ…

5 hours ago

ಕಾರ್ಕಳ : ಯಕ್ಷರಂಗಾಯಣದ ಹೆಸರನ್ನು ಬದಲಾಯಿಸಿರುವುದು ಅತ್ಯಂತ ಬೇಜವಾಬ್ದಾರಿ ಹಾಗೂ ಏಕಪಕ್ಷೀಯ ನಿರ್ಧಾರ : ಸುನಿಲ್‌ ಕುಮಾರ್‌ ಆಕ್ರೋಶ -vishwanews24

ಕಾರ್ಕಳ :ಯಕ್ಷರಂಗಾಯಣ ದ ಹೆಸರು ಬದಲಾವಣೆಗೆ ಶಾಸಕ ಸುನಿಲ್‌ ಕುಮಾರ್‌ ಆಕ್ರೋಶ ಮೂಲ ಹೆಸರನ್ನೇ ಉಳಿಸಿಕೊಳ್ಳಲು ಸರಕಾರಕ್ಕೆ ಆಗ್ರಹ ಕಾರ್ಕಳ:…

8 hours ago

ಟಿಎಂಸಿ ಅಧ್ಯಕ್ಷ ಸ್ಥಾನದಿಂದ ಮಮತಾ ಬ್ಯಾನರ್ಜಿ ವಜಾ -vishwanews24

ಟಿಎಂಸಿ ಅಧ್ಯಕ್ಷ ಸ್ಥಾನದಿಂದ ಮಮತಾ ಬ್ಯಾನರ್ಜಿ ವಜಾ ಕೋಲ್ಕತ್ತಾ : ಪಶ್ಚಿಮ ಬಂಗಾಳದ ಮಾಜಿ ಸಿಎಂ ಮಮತಾ ಬ್ಯಾನರ್ಜಿ ಅವರನ್ನು…

8 hours ago

ಉಡುಪಿ : ಹೆಣ್ಣು ಮಗುವಿನ ಅಕ್ರಮ ಮಾರಾಟ ಪ್ರಕರಣ ; ವೈದ್ಯ ಸಹಿತ ನಾಲ್ವರು ಆರೋಪಿಗಳ ಬಂಧನ -vishwanews24

ಉಡುಪಿ : ಹೆಣ್ಣು ಮಗುವಿನ ಅಕ್ರಮ ಮಾರಾಟ ಪ್ರಕರಣ ; ವೈದ್ಯ ಸಹಿತ ನಾಲ್ವರು ಆರೋಪಿಗಳ ಬಂಧನ ಉಡುಪಿ :…

9 hours ago