Featured

ಮಂಗಳೂರು ಕುಕ್ಕರ್ ಸ್ಫೋಟ ಪ್ರಕರಣ: ಚಾಲಕ ಪುರುಷೋತ್ತಮ ಪೂಜಾರಿ ಅವರಿಗೆ ರಿಕ್ಷಾ ಹಸ್ತಾಂತರ – Vishwanews24

ಮಂಗಳೂರು ಕುಕ್ಕರ್ ಪ್ರಕರಣ: ಚಾಲಕ ಪುರುಷೋತ್ತಮ ಪೂಜಾರಿ ಅವರಿಗೆ ರಿಕ್ಷಾ ಹಸ್ತಾಂತರ

ಮಂಗಳೂರು : ಮಂಗಳೂರು ನಗರದ ಕಂಕನಾಡಿ ಗರೋಡಿಯ ಬಳಿ ಸಂಭವಿಸಿದ ಕುಕ್ಕರ್ ಬಾಂಬ್ ಸ್ಫೋಟದಲ್ಲಿ ಗಂಭೀರವಾಗಿ ಗಾಯಗೊಂಡು, ಗುಣಮುಖರಾದ ರಿಕ್ಷಾ ಚಾಲಕ ಪುರುಷೋತ್ತಮ ಪೂಜಾರಿ ಅವರಿಗೆ ಬಿಜೆಪಿ ಪಕ್ಷದ ವತಿಯಿಂದ ನೂತನ ಆಟೋ ರಿಕ್ಷಾ ಮತ್ತು 5 ಲಕ್ಷ ರೂಪಾಯಿ ಮೌಲ್ಯದ ಚೆಕ್ ಹಸ್ತಾಂತರಿಸಲಾಯಿತು.

ಈ ವೇಳೆ ಮಾತನಾಡಿದ ಸಂಸದ, ಬಿಜೆಪಿ ರಾಜ್ಯಾಧ್ಯಕ್ಷರಾದ ನಳಿನ್ ಕುಮಾರ್ ಕಟೀಲ್ ಅವರು ಕುಕ್ಕರ್ ಬಾಂಬ್ ಸ್ಫೋಟಿಸುವ ಮೂಲಕ ಭಾರತವನ್ನು ಇಸ್ಲಾಮಿಕ್ ರಾಷ್ಟ್ರ ಮಾಡುವ ಹುನ್ನಾರ ಈಗಾಗಲೇ ಬಯಲಾಗಿದೆ. ಎನ್‌ಐಎ ಅಧಿಕಾರಿಗಳೇ ಇದನ್ನು ಬಹಿರಂಗ ಪಡಿಸಿದ್ದು, ಕೃತ್ಯದ ಕುರಿತು ಅಪಹಾಸ್ಯ ಮಾಡಿದವರು, ಸ್ಫೋಟ ಮಾಡಿದವರನ್ನು ಅಮಾಯಕರು ಎಂದು ಹೇಳಿದ್ದ ಕಾಂಗ್ರೆಸಿಗರು ಈಗ ಏನು ಹೇಳುತ್ತಾರೆ ಎಂದು ವ್ಯಂಗ್ಯವಾಡಿದರು.

ಇದೇ ವೇಳೆ ಮತನಾಡಿದ ಅವರು ಇದೇ ಮತಬ್ಯಾಂಕ್, ತುಷ್ಠೀಕರಣದ ರಾಜಕೀಯವನ್ನು ಬಿಜೆಪಿ ಸಹಿಸುವುದಿಲ್ಲ ಎಂದರು. ಕಳೆದ ವರ್ಷ ನವೆಂಬರ್ 19 ರಂದು ಕಂಕನಾಡಿ ಗರೋಡಿ ಬಳಿ ಆಟೋದಲ್ಲಿ ಸಂಭವಿಸಿತ್ತು. ಘಟನೆಯಲ್ಲಿ ರಿಕ್ಷಾ ಚಾಲಕ ಪುರುಷೋತ್ತಮ ಪೂಜಾರಿ ಅವರು ಗಂಭೀರವಾಗಿ ಗಾಯಗೊಂಡಿದ್ದರು.

ಈ ಸಂದರ್ಭ ಶಾಸಕ ವೇದವ್ಯಾಸ ಕಾಮತ್, ಮೇಯರ್ ಜಯಾನಂದ ಅಂಚನ್, ಉಪಮೇಯರ್ ಪೂರ್ಣಿಮಾ, ಮುಡಾ ಅಧ್ಯಕ್ಷ ರವಿಶಂಕರ್ ಮಿಜಾರ್, ನಿತಿನ್ ಕುಮಾರ್, ಪ್ರೇಮಾನಂದ ಶೆಟ್ಟಿ, ಸಂದೀಪ್ ಗರೋಡಿ, ಸುಧೀರ್ ಶೆಟ್ಟಿ, ಶರಣ್ ಪಂಪ್‌ವೆಲ್ ಮೊದಲಾದವರು ಉಪಸ್ಥಿತರಿದ್ದರು.

Vishwa News 24

Recent Posts

ಯೋಗೀಶ್‌ ಗೌಡ ಕೊಲೆ ಪ್ರಕರಣ : ವಿನಯ್‌ ಕುಲಕರ್ಣಿ ಸೇರಿ 16 ಅಪರಾಧಿಗಳಿಗೆ ಜೀವಾವಧಿ ಶಿಕ್ಷೆ – vishwanews24

ಯೋಗೀಶ್‌ ಗೌಡ ಕೊಲೆ ಪ್ರಕರಣ : ವಿನಯ್‌ ಕುಲಕರ್ಣಿ ಸೇರಿ 16 ಅಪರಾಧಿಗಳಿಗೆ ಜೀವಾವಧಿ ಶಿಕ್ಷೆ ಬೆಂಗಳೂರು: ಯೋಗೇಶ್ ಗೌಡ…

36 minutes ago

ಜಮೀರ್ ಅಹ್ಮದ್ ಅವರು ಪಕ್ಷಕ್ಕಾಗಿ ಪ್ರಾಮಾಣಿಕವಾಗಿ ದುಡಿದಿದ್ದಾರೆ : ಯತೀಂದ್ರ ಸಿದ್ದರಾಮಯ್ಯ – vishwanews24

ಜಮೀರ್ ಅಹ್ಮದ್ ಅವರು ಪಕ್ಷಕ್ಕಾಗಿ ಪ್ರಾಮಾಣಿಕವಾಗಿ ದುಡಿದಿದ್ದಾರೆ : ಯತೀಂದ್ರ ಸಿದ್ದರಾಮಯ್ಯ ಬೆಳಗಾವಿ : ಜಮೀರ್ ಅಹ್ಮದ್ ಅವರು ನಮ್ಮ…

2 hours ago

ಮಂಗಳೂರು: 16 ವರ್ಷದ ಬಾಲಕಿ ನಾಪತ್ತೆ; ಪೊಲೀಸರಿಂದ ಲುಕ್‌ಔಟ್ ನೋಟಿಸ್ ಜಾರಿ – vishwanews24

ಮಂಗಳೂರು: 16 ವರ್ಷದ ಬಾಲಕಿ ನಾಪತ್ತೆ; ಪೊಲೀಸರಿಂದ ಲುಕ್‌ಔಟ್ ನೋಟಿಸ್ ಜಾರಿ ಮಂಗಳೂರು: ಕೊಣಜೆ ಪೊಲೀಸ್ ಠಾಣಾ ವ್ಯಾಪ್ತಿಯ ಪಜೀರು…

2 hours ago

ಪಡುಬಿದ್ರಿ ಮಹಾಗಣಪತಿ ದೇವಸ್ಥಾನದ ಬ್ರಹ್ಮಕಲಶೋತ್ಸವ : ಪೂರ್ವಭಾವಿ ಸಭೆ – vishwanews24

ಪಡುಬಿದ್ರಿ ಮಹಾಗಣಪತಿ ದೇವಸ್ಥಾನದ ಬ್ರಹ್ಮಕಲಶೋತ್ಸವ : ಪೂರ್ವಭಾವಿ ಸಭೆ ಪಡುಬಿದ್ರಿ: ಪಡುಬಿದ್ರಿ ಶ್ರೀ ಮಹಾಲಿಂಗೇಶ್ವರ ಮಹಾಗಣಪತಿ ದೇವರ ಬ್ರಹ್ಮಕಲಾಶೋತ್ಸವದ ಪ್ರಯುಕ್ತ…

4 hours ago

ಯಾದಗಿರಿ: ಬಸ್- ಕಾರು ಮಧ್ಯೆ ಭೀಕರ ಅಪಘಾತ; 6 ಮಂದಿ ಸಜೀವ ದಹನ – vishwanews24

ಯಾದಗಿರಿ: ಬಸ್- ಕಾರು ಮಧ್ಯೆ ಭೀಕರ ಅಪಘಾತ; 6 ಮಂದಿ ಸಜೀವ ದಹನ ಸುರಪುರ : ಬಸ್ ಮತ್ತು ಕಾರಿನ…

5 hours ago

ಚಿಕನ್ ಪ್ರಿಯರೇ ಎಚ್ಚರ : ರಾಜ್ಯಕ್ಕೆ ಕಾಲಿಟ್ಟ ಹಕ್ಕಿ ಜ್ವರ – vishwanews24

ಚಿಕನ್ ಪ್ರಿಯರೇ ಎಚ್ಚರ : ರಾಜ್ಯಕ್ಕೆ ಕಾಲಿಟ್ಟ ಹಕ್ಕಿ ಜ್ವರ ಬೆಂಗಳೂರು: ಚಿಕನ್ ಪ್ರಿಯರೇ ಎಚ್ಚರವಾಗೀರಿ. ರಾಜ್ಯಕ್ಕೆ H5N1 ವೈರಸ್…

6 hours ago