ಮಂಗಳೂರು, : ಕೊರೋನ ಹಿನ್ನೆಲೆಯಲ್ಲಿ ಯೆನೆಪೊಯ (ಡೀಮ್ಡ್ ಟು ಬಿ ಯುನಿವರ್ಸಿಟಿ) ತನ್ನ 9 ಶಿಕ್ಷಣ ಸಂಸ್ಥೆಗಳನ್ನು ತಾತ್ಕಾಲಿಕವಾಗಿ ಸೋಮವಾರ(ಮಾ.15)ದಿಂದ ಸ್ವಯಂಪ್ರೇರಿತವಾಗಿ ಬಂದ್ ಮಾಡಿ ಆದೇಶಿಸಿದೆ.
ಈ ನಡುವೆ ಸಂಸ್ಥೆಯ ವಿದ್ಯಾರ್ಥಿಗಳಿಗೆ ತೊಂದರೆಯಾಗದಂತೆ ಆನ್‌ಲೈನ್ ತರಗತಿಗಳನ್ನು ಮುಂದುವರಿಸಲಾಗಿದೆ.
ಯೆನೆಪೊಯ ಮೆಡಿಕಲ್ ಕಾಲೇಜು, ಡೆಂಟಲ್, ನರ್ಸಿಂಗ್, ಫಿಸಿಯೋಥೆರಪಿ, ಫಾರ್ಮಸಿ ಕಾಲೇಜು ಮತ್ತು ರಿಸರ್ಚ್ ಸೆಂಟರ್, ಹೆಲ್ತ್ ಕೇರ್ ಪ್ರೊಫೆಶನಲ್ಸ್, ಆಯುರ್ವೇದ ಕಾಲೇಜು, ನ್ಯಾಚುರೋಪತಿ ಕಾಲೇಜುಗಳನ್ನು ಬಂದ್ ಮಾಡಲಾಗಿದೆ. ಇದೇ ವೇಳೆ ಇಂಟರ್ನಿಗಳು, ಪಿಜಿ ವಿದ್ಯಾರ್ಥಿಗಳು ಮತ್ತು ನರ್ಸಿಂಗ್ ಸಿಬ್ಬಂದಿ ತಮ್ಮ ಸೇವೆಗಳಿಗೆ ಹಾಜರಾಗಬಹುದಾಗಿದೆ. ಮೆಡಿಕಲ್ ಕಾಲೇಜು ಆಸ್ಪತ್ರೆಯೂ ಕಾರ್ಯಾಚರಿಸುತ್ತಿದ್ದು, ಶಿಕ್ಷಕ ಮತ್ತು ಶಿಕ್ಷಕೇತರ ಸಿಬ್ಬಂದಿ ತಮ್ಮ ಕೆಲಸಗಳಿಗೆ ಹಾಜರಾಗಬಹುದು. ನಿಗದಿಗೊಂಡಿರುವ ಪರೀಕ್ಷೆಗಳಿಗೆ ಸಂಬಂಧಿಸಿ ಪರೀಕ್ಷಾ ನಿಯಂತ್ರಕರು ಪ್ರತ್ಯೇಕ ಸುತ್ತೋಲೆಯನ್ನು ಹೊರಡಿಸುವುದಾಗಿಯೂ ಯೆನೆಪೊಯ ವಿಶ್ವವಿದ್ಯಾನಿಲಯದ ರಿಜಿಸ್ಟ್ರಾರ್ ಡಾ. ಗಂಗಾಧರ ಸೋಮಯಾಜಿ ಕೆ.ಎಸ್. ಸುತ್ತೋಲೆಯಲ್ಲಿ ತಿಳಿಸಿದ್ದಾರೆ.
ಉಡುಪಿ ಜಿಲ್ಲೆಯ ನಿರ್ಲಕ್ಷ್ಯ : ಮೇ 16ರಂದು ಜಿಲ್ಲಾ ಉಸ್ತುವಾರಿ ಸಚಿವರಿಗೆ ಕಪ್ಪು ಬಾವುಟ ಪ್ರದರ್ಶಿಸಿ ಪ್ರತಿಭಟನೆ : ಪೃಥ್ವಿರಾಜ್…
ಸಾಂಪ್ರದಾಯಿಕ ಧಾರ್ಮಿಕ ಸಂಕೇತಗಳನ್ನು ಧರಿಸಬಹುದು, ಹೊಸದಾಗಿ ಮಾಡುವಂತಿಲ್ಲ : ಸಿಎಂ ಸ್ಪಷ್ಟನೆ ಮೈಸೂರು : "ಪ್ರಾಥಮಿಕ ತರಗತಿಯಿಂದ 12ನೇ ತರಗತಿಯವರೆಗೆ…
ಮದ್ಯ ಖರೀದಿ, ಮಾರಾಟ ಮಾಡಲು 21 ವರ್ಷ ಕಡ್ಡಾಯ : ಸಿಎಂ ವಿಜಯ್ ಸರ್ಕಾರ ಆದೇಶ ಚೆನ್ನೈ: ಇನ್ನು ಮುಂದೆ…
ಇಂದಿರಾ ಗಾಂಧಿ ನಂತರ ಯಾರಾದ್ರೂ ಮಾಸ್ ಲೀಡರ್ ಇದ್ರೆ, ಅದು ಮೋದಿ ಮಾತ್ರ: ಕೆ.ಎನ್ ರಾಜಣ್ಣ ನಾನು ಮೋದಿಯವರನ್ನು ಹೊಗಳುತ್ತಿಲ್ಲ.…
ಸಕ್ಕರೆ ರಫ್ತಿಗೆ ಸೆ.30 ರವರೆಗೆ ಸಂಪೂರ್ಣ ನಿಷೇಧ ಹೇರಿದ ಸರ್ಕಾರ ನವದೆಹಲಿ: ದೇಶೀಯ ಮಾರುಕಟ್ಟೆಯಲ್ಲಿ ಸಕ್ಕರೆ ಬೆಲೆಯನ್ನು ನಿಯಂತ್ರಿಸಲು ಮತ್ತು…
ಹಿಜಬ್ ಬಗ್ಗೆ ಮಾತಾಡುವ ಬಿಜೆಪಿಯವರು ನೀಟ್ ಬಗ್ಗೆ ಮಾತಾಡಲಿ : ಮಧು ಬಂಗಾರಪ್ಪ ಆಕ್ರೋಶ ಬೆಂಗಳೂರು: ಹಿಜಬ್ ಬಗ್ಗೆ ಮಾತಾಡುವ…