Featured

ಮಂಗಳೂರು : ಖಾಸಗಿ ಬಸ್‌ಗಳಲ್ಲಿ ಕಂಡಕ್ಟರ್‌ ಟಿಕೆಟ್‌ ನೀಡದಿದ್ದರೆ ಉಚಿತವಾಗಿ ಪ್ರಯಾಣಿಸಿ : ಪೊಲೀಸ್‌ ಆಯುಕ್ತ ಡಾ| ಹರ್ಷ -Vishwanews24

ಮಂಗಳೂರು: ಖಾಸಗಿ ಬಸ್‌ಗಳಲ್ಲಿ ಕಂಡಕ್ಟರ್‌ ಟಿಕೆಟ್‌ ನೀಡದಿದ್ದರೆ ಪ್ರಯಾಣ ದರವನ್ನು ನೀಡದೆ ಉಚಿತವಾಗಿ ಪ್ರಯಾಣಿಸಿ. ನಿರ್ವಾಹಕರು ಕಿರುಕುಳ ನೀಡಿದಲ್ಲಿ ಬಸ್‌ ಮಾಲಕರ ಸಂಘದ ಮುಖ್ಯಸ್ಥರ ವಾಟ್ಸಾಪ್‌ ನಂಬರಿಗೆ ಬಸ್‌ ನಂಬರು ಸಹಿತ ದೂರು ನೀಡಿ ಎಂದು ಪೊಲೀಸ್‌ ಆಯುಕ್ತ ಡಾ| ಹರ್ಷ ಖಡಕ್‌ ಸೂಚನೆ ನೀಡಿದ್ದಾರೆ.

ಶುಕ್ರವಾರ ತಮ್ಮ ಕಚೇರಿಯಲ್ಲಿ ನಡೆದ ಫೋನ್‌ ಇನ್‌ ಕಾರ್ಯಕ್ರಮದಲ್ಲಿ ಸುದ್ದಿ ಗಾರರ ಪ್ರಶ್ನೆಗೆ ಉತ್ತರಿಸಿ  ‘ಮೋಟಾರು ವಾಹನ ಕಾಯ್ದೆ ಮತ್ತು ನಿಯಮಗಳ ಪ್ರಕಾರ ಬಸ್‌ಗಳಲ್ಲಿ ಪ್ರಯಾಣಿಕರಿಗೆ ಟಿಕೆಟ್‌ ನೀಡುವುದು ಕಡ್ಡಾಯ. ವಾಟ್ಸ್‌ ಆ್ಯಪ್‌ ಸಂಖ್ಯೆ 7996999977 ಮೂಲಕ ಪ್ರಯಾಣಿಕರು ದಕ್ಷಿಣ ಕನ್ನಡ ಜಿಲ್ಲಾ ಬಸ್‌ ಮಾಲೀಕರ ಸಂಘಕ್ಕೆ ದೂರು ಸಲ್ಲಿಸಬಹುದು’ ಎಂದರು.

ನಗರದ ವ್ಯಾಪ್ತಿಯಲ್ಲಿ ಖಾಸಗಿ ಬಸ್‌ಗಳಲ್ಲಿ ಟಿಕೆಟ್‌ ಕೊಡದಿದ್ದರೆ ಪ್ರಯಾಣಿಕರು ಬಸ್‌ ಮಾಲೀಕರ ಸಂಘದ ಮೊಬೈಲ್‌ ಸಂಖ್ಯೆಗೆ ನೇರವಾಗಿ ದೂರು ಕೊಡಬಹುದು. ಸಂಚಾರ ವಿಭಾಗದ ಪೊಲೀಸ್‌ ಇನ್‌ಸ್ಪೆಕ್ಟರ್‌ಗಳು ವಾರಕ್ಕೊಮ್ಮೆ ಈ ದೂರುಗಳನ್ನು ಪರಿಶೀಲಿಸಿ ಕ್ರಮ ಜರುಗಿಸುತ್ತಾರೆ. ‘ನಿರ್ವಾಹಕರು ಟಿಕೆಟ್‌ ನೀಡಿದಿದ್ದರೆ ಹಣ ನೀಡಬೇಡಿ’ ಎಂದು ಬಸ್‌ ಮಾಲೀಕರ ಸಂಘ ಸೆಪ್ಟೆಂಬರ್‌ ತಿಂಗಳಿನಲ್ಲೇ ಮನವಿ ಮಾಡಿತ್ತು. ಆದರೂ, ಟಿಕೆಟ್‌ ನೀಡದೇ ಬಸ್‌ ಓಡಿಸುವ ಪ್ರವೃತ್ತಿ ನಗರದಲ್ಲಿ ಯಥಾವತ್ತಾಗಿ ಮುಂದುವರಿದಿದೆ.

ಟಿಕೆಟ್‌ ರಹಿತ ಪ್ರಯಾಣವನ್ನು ಅಕ್ರಮ ಎಂದು ಪರಿಗಣಿಸಲಾಗುತ್ತದೆ. ನಗರ ಸಾರಿಗೆ ಬಸ್‌ಗಳಲ್ಲಿ ನಿರ್ವಾಹಕರು ಹಣ ಪಡೆದು ಟಿಕೆಟ್‌ ನೀಡುವುದಿಲ್ಲ ಎಂಬುದಾಗಿ ನಿತ್ಯವೂ ಹತ್ತಾರು ದೂರು ಗಳು ಬರುತ್ತಿವೆ. ಇದನ್ನು ಗಂಭೀರವಾಗಿ ಪರಿಗಣಿಸಲಾಗಿದೆ ಎಂದು ಹೇಳಿದರು.

ರಾಜವರ್ಮ ಬಲ್ಲಾಳ್‌, ದಿಲ್‌ರಾಜ್‌ ಆಳ್ವ, ಡಿಸಿಪಿಗಳಾದ ಅರುಣಾಂಶು ಗಿರಿ, ಲಕ್ಷ್ಮೀ ಪ್ರಸಾದ್‌, ಎಸಿಪಿಗಳಾದ ಮಂಜುನಾಥ ಶೆಟ್ಟಿ, ವಿನಯ್‌ ಎ. ಗಾಂವ್‌ಕರ್‌, ಪೊಲೀಸ್‌ ಇನ್‌ಸ್ಪೆಕ್ಟರ್‌ಗಳಾದ ಜಿ.ಕೆ. ಭಟ್‌, ಅಮಾನುಲ್ಲಾ, ಮೋಹನ್‌ ಕೊಟ್ಟಾರಿ, ಗುರುದತ್ತ ಕಾಮತ್‌, ಎಎಸ್‌ಐ ಬಾಲಕೃಷ್ಣ, ಹೆಡ್‌ ಕಾನ್‌ ಸ್ಟೆಬಲ್‌ ಪುರುಷೋತ್ತಮ ಉಪಸ್ಥಿತರಿದ್ದರು.

Vishwa News 24

Recent Posts

ಕುಂದಾಪುರ: ಹೋಂಸ್ಟೇ ಎನ್‌ ಒಸಿ ನೀಡಲು ಲಂಚ ಪಡೆದ ಆರೋಪ ; ಗ್ರಾಮ ಲೆಕ್ಕಿಗ ಲೋಕಾಯುಕ್ತ ಬಲೆಗೆ – vishwanews24

ಕುಂದಾಪುರ: ಹೋಂ ಸ್ಟೇ ಎನ್‌ ಒಸಿ ನೀಡಲು ಲಂಚ ಪಡೆದ ಆರೋಪ ; ಗ್ರಾಮ ಲೆಕ್ಕಿಗ ಲೋಕಾಯುಕ್ತ ಬಲೆಗೆ ಕುಂದಾಪುರ…

9 hours ago

ಉಚ್ಚಿಲ : ಕರಾವಳಿ ಭಾಗವಿಲ್ಲದೇ ರಾಜ್ಯಕ್ಕೆ ಹೆಚ್ಚಿನ ಬೆಲೆಯೇ ಇರುವುದಿಲ್ಲ :  ಮುಖ್ಯಮಂತ್ರಿ ಡಿ.ಕೆ.ಶಿ – vishwanews24

ಉಡುಪಿ ಉಚ್ಚಿಲ ದಸರಾದಲ್ಲಿ ಮಹಿಳಾ ದಸರಾ ಉದ್ಘಾಟಿಸಿದ ಸಿಎಂ ಕರಾವಳಿ ಕರ್ನಾಟಕ ‘ಜಾಗತಿಕ ಟೂರಿಸಂ ಹಬ್’ ಆಗಿ ಅಭಿವೃದ್ಧಿ  :…

13 hours ago

ಮಂಗಳೂರು: ಅಪ್ರಾಪ್ತ ಬಾಲಕನಿಗೆ ಲೈಂಗಿಕ ಕಿರುಕುಳ ಆರೋಪ ; ಚರ್ಚ್ ಫಾದರ್ ವಿರುದ್ಧ ಪೋಕ್ಸೋ ಪ್ರಕರಣ ದಾಖಲು – vishwanews24

ಮಂಗಳೂರು: ಅಪ್ರಾಪ್ತ ಬಾಲಕನಿಗೆ ಲೈಂಗಿಕ ಕಿರುಕುಳ ಆರೋಪ  : ಚರ್ಚ್ ಫಾದರ್ ವಿರುದ್ಧ ಪೋಕ್ಸೋ ಪ್ರಕರಣ ದಾಖಲು ಮಂಗಳೂರು: ಮಂಗಳೂರು…

14 hours ago

ಉಡುಪಿ:  ಪಡಿತರ ಚೀಟಿಯ ಫಲಾನುಭವಿಗಳಿಗೆ ಇ-ಕೆವೈಸಿ ಮಾಡಿಸಲು ಅ. 20 ರ ವರೆಗೆ ಅವಕಾಶ – vishwanews24

ಉಡುಪಿ:  ಪಡಿತರ ಚೀಟಿಯ ಫಲಾನುಭವಿಗಳಿಗೆ ಇ-ಕೆವೈಸಿ ಮಾಡಿಸಲು ಅ. 20 ರ ವರೆಗೆ ಅವಕಾಶ    ಉಡುಪಿ: ಸಾರ್ವಜನಿಕ ವಿತರಣಾ ವ್ಯವಸ್ಥೆಯಡಿ…

14 hours ago

ಈ ಬಾರಿ ದಸರಾ ಮಹೋತ್ಸವದಲ್ಲಿ ಅಂಬಾರಿ ಹೊತ್ತು ಸಾಗಲಿರುವ ದುಬಾರೆ ವೀರ ಪ್ರಶಾಂತ​ ಆನೆ – vishwanews24

ಈ ಬಾರಿ ದಸರಾ ಮಹೋತ್ಸವದಲ್ಲಿ ಅಂಬಾರಿ ಹೊತ್ತು ಸಾಗಲಿರುವ ದುಬಾರೆ ವೀರ ಪ್ರಶಾಂತ​ ಆನೆ ಮೈಸೂರು: ವಿಶ್ವವಿಖ್ಯಾತ ನಾಡಹಬ್ಬ ಮೈಸೂರು…

2 days ago

ಬೆಳ್ತಂಗಡಿ: ನಾವೂರಿನ ಆರೋಗ್ಯ ಕ್ಲಿನಿಕ್‌ಗೆ ಬೆಂಕಿ ಹಚ್ಚಿದ ಪ್ರಕರಣ; ಓರ್ವನ ಬಂಧನ, ಇಬ್ಬರು ವಶಕ್ಕೆ – vishwanews24

ಬೆಳ್ತಂಗಡಿ: ನಾವೂರಿನ ಆರೋಗ್ಯ ಕ್ಲಿನಿಕ್‌ಗೆ ಬೆಂಕಿ ಹಚ್ಚಿದ ಪ್ರಕರಣ; ಓರ್ವನ ಬಂಧನ, ಇಬ್ಬರು ವಶಕ್ಕೆ ಬೆಳ್ತಂಗಡಿ: ನಾವೂರು ಗ್ರಾಮದ ಸ್ವಾತಿ…

2 days ago