ಮಂಗಳೂರು: ಪರಿಸರ ಉಳಿಯಲು ವನಸಂರಕ್ಷಣೆ ಎಷ್ಟು ಮುಖ್ಯವೋ ಗೋ ಸಂರಕ್ಷಣೆ ಕೂಡ ಅಷ್ಟೇ ಮುಖ್ಯ ಎಂದು ಶ್ರೀ ರಾಮಚಂದ್ರಾಪುರ ಮಠದ ಯತಿವರ್ಯರಾದ ಶ್ರಿ ರಾಘವೇಶ್ವರ ಭಾರತೀ ಸ್ವಾಮೀಜಿ ತಮ್ಮ ಅನುಗ್ರಹ ಭಾಷಣದಲ್ಲಿ ಹೇಳಿದರು.
ಮಂಗಳೂರಿನ ಕುಂಜತ್ತಬೈಲಿನ ಮಾರುತಿ ಬಡಾವಣೆಯಲ್ಲಿ ಪೂಜ್ಯರು ಗೋಸಂರಕ್ಷಣೆ ಬಗ್ಗೆ ಪ್ರವಚನ ನೀಡುತ್ತಿದ್ದರು.
ಗೋವನ್ನು ನಾವು ಕಾಪಾಡಿದರೆ ಗೋವು ನಮ್ಮನ್ನು ಕಾಪಾಡುತ್ತದೆ. ಇಡೀ ಸೃಷ್ಟಿಯೇ ಒಬ್ಬರನ್ನೊಬ್ಬರು ಅನುಸರಿಸಿ ಬಾಳುವುದನ್ನು ಹೇಳಿಕೊಡುತ್ತದೆ. ನಾವು ಸೃಷ್ಟಿಯ ವಿರುದ್ಧ ಹೋಗುತ್ತಿದ್ದೇವೆ. ಇದು ಒಳ್ಳೆಯದಲ್ಲ. ಪ್ರಕೃತಿ, ಪರಿಸರ, ಪ್ರಾಣಿ-ಪಕ್ಷಿಗಳನ್ನು ಈ ರೀತಿ ನಾಶ ಮಾಡುತ್ತ ಹೋದರೆ ನಮ್ಮ ವಿನಾಶವನ್ನು ನಾವೇ ತಂದುಕೊಂಡಂತೆ ಎಂದು ಶ್ರೀಗುರುಗಳು ಹೇಳಿದರು.
ಮನುಕುಲದ ವಿಕಾಸದ ಕಾಲದಿಂದಲೂ ಗೋವು ಮನುಷ್ಯನ ಸಹವರ್ತಿಯಾಗಿ ಬದುಕಿದ ಅತ್ಯಂತ ಸಾಧು ಸ್ವಭಾವದ ಪ್ರಾಣಿ. ದೇವತೆಗಳ ಸಕಲ ಅಂಶಗಳನ್ನೂ ಹೊಂದಿರುವ ಪೂಜನೀಯ ಪ್ರಾಣಿ. ಆಧುನಿಕ ನಾಗರಿಕತೆಯ ಹೆಸರಿನಲ್ಲಿ ಸಾಕ್ಷರ ರಾಕ್ಷಸರಾದ ನಾವು ಅವುಗಳನ್ನು ಕೊಂದು ತಿಂದು ಅವುಗಳ ಸಂತತಿಯನ್ನೇ ನಾಶ ಪಡಿಸುವ ಹಂತಕ್ಕೆ ಬಂದು ನಿಂತಿದ್ದೇವೆ. ಹಸುಗಳು ಅಳಿದರೆ ಮನುಷ್ಯರೂ ಉಳಿಯುವುದಿಲ್ಲ ಎಂದು ಪೂಜ್ಯ ಶ್ರೀ ರಾಘವೇಶ್ವರ ಭಾರತೀ ಶ್ರೀಪಾದರು ನುಡಿದರು.
ಪ್ರಜೆಗಳೆಲ್ಲರೂ ಸರಕಾರದ ಮೇಲೆ ಒಕ್ಕೊರಲ ಒತ್ತಡ ಹಾಕಿ ಗೋ ಸಂರಕ್ಷಣೆ ಮಾಡುವ ಶಪಥ ಹಾಕಬೇಕು ಎಂದು ಪೂಜ್ಯರು ಒತ್ತಾಯಿಸಿದರು.
ಕುಂಜತ್ ಬೈಲ್ ವೃತ್ತದಿಂದ ಮಾರುತಿ ಬಡಾವಣೆಯ ವರೆಗೆ ಸುಮಾರು ಒಂದು ಕಿ. ಮೀ. ದೂರ ಕಲಶ ಹಿಡಿದ ಮಹಿಳೆಯರು, ಮಕ್ಕಳು, ಸಾರ್ವಜನಿಕರು ಚೆಂಡೆ ವಾದ್ಯಗಳ ಬೃಹತ್ ಶೋಭಾಯಾತ್ರೆಯಲ್ಲಿ ಶ್ರೀಗಳವರನ್ನು ತೆರೆದ ವಾಹನದಲ್ಲಿ ವೇದಿಕೆಯ ವರೆಗೆ ಕರೆದೊಯ್ದರು. ಕುಂಜತ್ ಬೈಲ್ ಪರಿಸರದ ಸಾವಿರಾರು ಮಂದಿ ವೈಭವದ ಶೋಭಾಯಾತ್ರೆಯಲ್ಲಿ ಪಾಲ್ಗೊಂಡಿದ್ದು ವಿಶೇಷವಾಗಿತ್ತು.
ಇಲ್ಲಿಯವರೆಗೂ ಏಷ್ಟೋ ದೈವ ದೇವರು ಜ್ಯೋತಿಷ್ಯರಲ್ಲಿ ಕೇಳಿ ಸರಿಯಾದ ಪರಿಹಾರ ಸಿಗದೆ ನೊಂದಿದ್ದರೆ.ಅಂತಃಹ ಯಾವುದೇ ಕಠಿಣ ಸಮಸ್ಯೆ ಗಳಿದ್ದರು ಉತ್ತಮ ಸಲಹೆ ಹಾಗೂ ಶಾಶ್ವತ ಪರಿಹಾರ ತಿಳಿಸುತ್ತಾರೆ.
ಇಂದೇ ಸಂಪರ್ಕಿಸಿ ಪಂಡಿತ್ ವೈದಿಕ ಶ್ರೀ ಗಣಪತಿ ಭಟ್
8088827292
ನಕಲಿ ಔಷಧಿ ಜಾಲದಲ್ಲಿ ದೊಡ್ಡ ದೊಡ್ಡ ಖಾಸಗಿ ಆಸ್ಪತ್ರೆಗಳು , ಮೆಡಿಕಲ್ ಸ್ಟೋರ್‌ಗಳು : ಶೀಘ್ರವೇ ತಪ್ಪಿತಸ್ಥ ಆಸ್ಪತ್ರೆಗಳ ಲಿಸ್ಟ್…
ಉಚ್ಚಿಲ ಮೊಗವೀರ ಭವನದಲ್ಲಿ ಕೀರ್ತಿಶೇಷ ಮಾಧವ ಮಂಗಲ ಪೂಜಾರ್ಯರ ಕಂಚಿನ ಪುತ್ಥಳಿ ಅನಾವರಣ ಉಚ್ಚಿಲ : ಮೊಗವೀರ ಸಮಾಜದ ಗುರು…
ಮೈಸೂರು ದಸರಾದಲ್ಲಿ ಕರಾವಳಿಯ ಕಂಬಳ; ಅ. 18-19ರಂದು ‘ವಿಜಯ ದಶಮಿ’ ಜೋಡುಕರೆ ಕಂಬಳ ಮಂಗಳೂರು: ಮೈಸೂರು ದಸರಾ ಉತ್ಸವದ ಅಂಗವಾಗಿ…
2028ಕ್ಕೂ ಡಿಕೆ ಶಿವಕುಮಾರ್ ಅವರೇ ಮುಖ್ಯಮಂತ್ರಿ ಆಗಲಿ, ಅವರಿಂದಲೇ ಪಕ್ಷ ಅಧಿಕಾರಕ್ಕೆ ಬರಲಿ : ಸತೀಶ್ ಜಾರಕಿಹೊಳಿ ಮೈಸೂರು: 2028ಕ್ಕೂ…
ಶಿರ್ವ, ಉಡುಪಿಯಲ್ಲಿ ಮಾದಕ ವಸ್ತು ಮಾರಾಟ ಪ್ರಕರಣ : ಬಂಧಿತರ ಪೈಕಿ ಹಲವರು ಅಪರಾಧ ಕೃತ್ಯಗಳಲ್ಲಿ ಭಾಗಿ ಉಡುಪಿ: ಉಡುಪಿ…
ಕುಂದಾಪುರ: ಶಾರ್ಜಾದಲ್ಲಿ ಕೊಲೆಯಾದ ಅಲ್ವಿನ್ ಪ್ರಕಾಶ್ ಕುಂದರ್ ಅಂತ್ಯಸಂಸ್ಕಾರ ; ಕುಟುಂಬಸ್ಥರ ಆಕ್ರಂದನ ಕುಂದಾಪುರ: ಶಾರ್ಜಾದಲ್ಲಿ ಅಮಾನುಷವಾಗಿ ಕೊಲೆಯಾದ ಕುಂದಾಪುರ…