ಮಂಗಳೂರು : ಟೆಲಿಗ್ರಾಂ ಆ್ಯಪ್ ಮೂಲಕ ಪಾರ್ಟ್ ಟೈಂ ಜಾಬ್ ಎಂದು ರೇಟಿಂಗ್ ನೀಡುವ ಟಾಸ್ಕ್ ನೀಡಿ ವ್ಯಕ್ತಿಯೊರ್ವರಿಗೆ 27.56 ಲಕ್ಷ ರೂ. ವಂಚನೆ ಮಾಡಿರುವ ಘಟನೆ ನಡೆದಿದೆ.
ಜೂ.19ರಂದು ದೂರುದಾರರಿಗೆ ಟೆಲಿಗ್ರಾಂನಲ್ಲಿ ಹೊಟೇಲ್ ಮತ್ತು ಹೋಮ್ ಸ್ಟೇಗಳಿಗೆ ರೇಟಿಂಗ್ ನೀಡುವ ಟಾಸ್ಕ್ ಪೂರ್ಣಗೊಳಿಸುವ ಪಾರ್ಟ್ ಟೈಂ ಜಾಬ್ ಮಾಡಿ ಹಣ ಗಳಿಸಬಹುದೆಂದು ಅಪರಿಚಿತ ವ್ಯಕ್ತಿಯೋರ್ವನಿಂದ ಸಂದೇಶ ಬಂದಿತ್ತು ಎನ್ನಲಾಗಿದೆ.
ಅಪರಿಚಿತ ವ್ಯಕ್ತಿಯ ಸಂದೇಶವನ್ನು ನಂಬಿದ ದೂರುದಾರರು ‘ಅಧಿತಿ ಎಮ್ ಎಮ್ ಟಿ’ ಎಂಬ ಗ್ರೂಪ್ ನಲ್ಲಿ 30 ಟಾಸ್ಕ್ ಪೂರ್ಣಗೊಳಿಸಿದ್ದರು. ಇದಕ್ಕಾಗಿ ಆ ವ್ಯಕ್ತಿ ಲಾಭಾಂಶವೆಂದು 900 ರೂ. ನೀಡಿದ್ದ. ಮತ್ತದೇ ದಿನ ದೂರುದಾರಿಂದ ಪುನಃ 11 ಸಾವಿರ ರೂ. ಹೂಡಿಕೆ ಮಾಡಿಸಿದ ವಂಚಕ ಒಮ್ಮೆ 20 ಸಾವಿರ ಹಾಗೂ ಮತ್ತೊಮ್ಮೆ 70 ಸಾವಿರ ರೂ. ಗಳನ್ನು ಲಾಭಾಂಶವೆಂದು ನೀಡಿರುತ್ತಾನೆ ಎಂದು ದೂರಿನಲ್ಲಿ ತಿಳಿಸಲಾಗಿದೆ.
ಇದೇ ರೀತಿ ಹಣ ಹೂಡಿಕೆ ಮಾಡಿದಲ್ಲಿ ಹೆಚ್ಚು ಲಾಭಾಂಶ ನೀಡುವುದಾಗಿ ವಂಚಕ ನಂಬಿಸಿದ್ದಾನೆ. ಅದರಂತೆ ಜೂ.19ರಿಂದ ಆ.26ರವರೆಗೆ ಹಂತಹಂತ ವಾಗಿ ಒಟ್ಟು 27,56,129 ರೂ.ಗಳನ್ನು ಬೇರೆ ಬೇರೆ ಖಾತೆಗಳಿಗೆ ವರ್ಗಾಯಿಸಿಕೊಂಡ ಆತ ಯಾವುದೇ ಲಾಭಾಂಶ ನೀಡದೇ ವಂಚಿಸಿರುತ್ತಾನೆ. ಈ ಬಗ್ಗೆ ಮಂಗಳೂರಿನ ಸೈಬರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಉಡುಪಿ: ಆಸ್ತಿಯನ್ನು ಬಲವಂತವಾಗಿ ತನ್ನ ಹೆಸರಿಗೆ ವರ್ಗಾಯಿಸಿಕೊಂಡು ವೃದ್ಧ ಪೋಷಕರನ್ನು ಮನೆಯಿಂದ ಹೊರಹಾಕಿದ ಮಗ ಉಡುಪಿ: ತಾಯಿಯ ಹೆಸರಿನಲ್ಲಿದ್ದ ಆಸ್ತಿಯನ್ನು…
ವಿಟ್ಲ : ಚಲಿಸುತ್ತಿದ್ದ ಕಾರಿನ ಮೇಲೆ ಬಿದ್ದ ಮರ ಹಾಗೂ ವಿದ್ಯುತ್ ಕಂಬ: ದಂಪತಿ ಅಪಾಯದಿಂದ ಪಾರು ವಿಟ್ಲ: ಮರ ಹಾಗೂ…
ಮಂಗಳೂರು: ಉದ್ಯಮಿಯ ಕಾರು ಅಡ್ಡಗಟ್ಟಿ ಕಾರು ಸಹಿತ ಚಿನ್ನಾಭರಣ ದರೋಡೆ ಮಂಗಳೂರು: ಕೇರಳ ಮೂಲದ ಉದ್ಯಮಿಯೊಬ್ಬರ ಕಾರನ್ನು ಅಡ್ಡಗಟ್ಟಿ ಕಾರು…
ವಯೋವಂದನ ಯೋಜನೆ : ವೇದಿಕೆಯ ನೇತೃತ್ವಕ್ಕೆ ಸಮಾಜದ ಸಹಭಾಗಿತ್ವ ಅಗತ್ಯ : ಸಿ ಎಂ ಗುಜ್ಜಾಡಿ ಪ್ರಭಾಕರ್ ನಾಯಕ್ ಜಿ…
ಉಡುಪಿ ಮಲಬಾರ್ ಗೋಲ್ಡ್‌ನಲ್ಲಿ ‘ನುವಾ’ ವಜ್ರಾಭರಣ ಅನಾವರಣ ಉಡುಪಿ: ಮಲಬಾರ್ ಗೋಲ್ಡ್ ಆ್ಯಂಡ್ ಡೈಮಂಡ್ಸ್ ಉಡುಪಿ ಶಾಖೆಯಲ್ಲಿ ಮೈನ್ ಬ್ರಾಂಡಿನ…
ಧರ್ಮಸ್ಥಳ ಪ್ರಕರಣ : ವಿಠಲ್ ಗೌಡ ವಿರುದ್ಧ ಅರೆಸ್ಟ್ ವಾರಂಟ್: ಪೊಲೀಸರಿಂದ ಹುಡುಕಾಟ ಬೆಳ್ತಂಗಡಿ: ಧರ್ಮಸ್ಥಳ ಮತ್ತು ವೀರೇಂದ್ರ ಹೆಗ್ಗಡೆ…