Featured

ಮಂಗಳೂರು: ಡಿ.17 ರಿಂದ ಮಂಗಳೂರು-ಮುಂಬೈ ನಡುವಿನ ಮತ್ಸ್ಯಗಂಧ ರೈಲು ಸಂಚಾರ ಆರಂಭ -Vishwanews24

ಮಂಗಳೂರು: ಡಿ.17 ರಿಂದ ಮಂಗಳೂರು-ಮುಂಬೈ ನಡುವಿನ ಮತ್ಸ್ಯಗಂಧ ರೈಲು ಸಂಚಾರ ಆರಂಭ -Vishwanews24

ಮಂಗಳೂರು: ಮಂಗಳೂರು-ಮುಂಬೈ ನಡುವಿನ ಮತ್ಸ್ಯಗಂಧ ರೈಲು ಡಿ.17ರಂದು ಸಂಚಾರ ಆರಂಭಿಸಲಿದೆ. ಕೊರೊನಾ ಹಿನ್ನೆಲೆ ಸ್ಥಗಿತಗೊಂಡಿದ್ದ ರೈಲಿನ ಸಂಚಾರ ಪುನರಾರಂಭಕ್ಕೆ ರೈಲ್ವೆ ಮಂಡಳಿ ಒಪ್ಪಿಗೆ ಸೂಚಿಸಿದೆ.

ಮಂಗಳೂರು – ಲೋಕಮಾನ್ಯ ತಿಲಕ್ ಎಕ್ಸ್‌ಪ್ರೆಸ್ ರೈಲು ಪ್ರಾರಂಭಿಸಲು ರೈಲ್ವೆ ಮಂಡಳಿ ಅನುಮತಿ ನೀಡಿರುವುದರಿಂದ, ದಕ್ಷಿಣ ರೈಲ್ವೆ, 15 ದಿನಗಳ ಕಾಲ ಉತ್ಸವ ರೈಲು ರೂಪದಲ್ಲಿ ರೈಲು ಚಲಾಯಿಸಲು ನಿರ್ಧರಿಸಿದೆ.

ನಂ. 02620 ಮಂಗಳೂರು ಸೆಂಟ್ರಲ್ – ಎಲ್‌ಟಿಟಿ ರೈಲು ಮತ್ತು ನಂ. 02619 ಎಲ್‌ಟಿಟಿ – ಮಂಗಳೂರು ಸೆಂಟ್ರಲ್ ರೈಲು ಡಿಸೆಂಬರ್ 17 ರಿಂದ 31ರವರೆಗೆ ಚಲಿಸಲಿದೆ. ಎರಡೂ ರೈಲುಗಳು ತಲಾ 15 ಟ್ರಿಪ್‌ಗಳನ್ನು ಕೈಗೊಳ್ಳಲಿವೆ ಎಂದು ದಕ್ಷಿಣ ರೈಲ್ವೆ ತಿಳಿಸಿದೆ.

02620ರ ರೈಲು ಮಧ್ಯಾಹ್ನ 2.25 ಕ್ಕೆ ಸೆಂಟ್ರಲ್ ನಿಲ್ದಾಣದಿಂದ ಹೊರಟು ಮರುದಿನ ಬೆಳಿಗ್ಗೆ 6.35 ಕ್ಕೆ ಎಲ್‌ಟಿಟಿಯನ್ನು ತಲುಪುತ್ತದೆ. ರೈಲು ನಂ. 02619 ಮಧ್ಯಾಹ್ನ 3.20 ಕ್ಕೆ ಎಲ್‌ಟಿಟಿಯಿಂದ ಹೊರಟು ಬೆಳಿಗ್ಗೆ 7.30 ಕ್ಕೆ ಮಂಗಳೂರು ಸೆಂಟ್ರಲ್‌‌ಗೆ ತಲುಪಲಿದೆ. ಈ ರೈಲು ಸುರತ್ಕಲ್‌‌, ಮುಲ್ಕಿ, ಉಡುಪಿ, ಕುಂದಾಪುರ, ಬೈಂದೂರು, ಭಟ್ಕಳ, ಮುರುಡೇಶ್ವರ, ಹೊನ್ನಾವರ, ಕುಮಟಾ, ಗೋಕರ್ಣ ರೋಡ್‌‌, ಅಂಕೋಲ, ಕಾರವಾರ, ಮಡಗಾಂವ್‌‌, ಕುಡಾಳ್‌, ರತ್ನಗಿರಿ, ಚಿಪ್ಲುನ್‌‌‌, ಖೇಡ್‌‌, ಮನಗಾಂವ್‌‌ ಹಾಗೂ ಪನ್ವೆಲ್‌‌‌ ಥಾಣೆಗಳನ್ನು ನಿಲುಗಡೆ ಹೊಂದಿದೆ.

Vishwa News 24

Recent Posts

ಬಿಜೆಪಿ ಪಕ್ಷಕ್ಕೆ ಸೇರ್ಪಡೆಗೊಂಡ ಟೆನಿಸ್ ಆಟಗಾರ ಲಿಯಾಂಡರ್ ಪೇಸ್ – vishwanews24

ಬಿಜೆಪಿ ಪಕ್ಷಕ್ಕೆ ಸೇರ್ಪಡೆಗೊಂಡ ಟೆನಿಸ್ ಆಟಗಾರ ಲಿಯಾಂಡರ್ ಪೇಸ್ ಹೊಸದಿಲ್ಲಿ: ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆಗೆ ಮುನ್ನ ಟೆನಿಸ್ ಆಟಗಾರ…

20 hours ago

ಬೀದರ್ : ಮಳೆ ಆರ್ಭಟ ; ಸಿಡಿಲು ಬಡಿದು ಯುವಕ ಸಾವು – vishwanews24

ಬೀದರ್ : ಮಳೆ ಆರ್ಭಟ - ಸಿಡಿಲು ಬಡಿದು ಯುವಕ ಸಾವು ಬೀದರ್: ಸಿಡಿಲು ಬಡಿದು ಯುವಕನೊಬ್ಬ ಮೃತಪಟ್ಟ ಘಟನೆ ಔರಾದ್…

21 hours ago

ಬೆಳ್ತಂಗಡಿ:  ಚಲಿಸುತ್ತಿದ್ದ ಕೆಎಸ್ಸಾರ್ಟಿಸಿ ಬಸ್ಸಿನಿಂದ ಎಸೆಯಲ್ಪಟ್ಟು ಇಬ್ಬರು ವಿದ್ಯಾರ್ಥಿನಿಯರಿಗೆ ಗಾಯ – vishwanews24

ಬೆಳ್ತಂಗಡಿ:  ಏಕಾಏಕಿ ತೆರೆಯಲ್ಪಟ್ಟ ಬಸ್ಸಿನ ಬಾಗಿಲು ; ನಿಯಂತ್ರಣ ತಪ್ಪಿ ರಸ್ತೆಗೆ ಎಸೆಯಲ್ಪಟ್ಟು ಇಬ್ಬರು ವಿದ್ಯಾರ್ಥಿನಿಯರಿಗೆ ಗಾಯ ಬೆಳ್ತಂಗಡಿ: ಚಲಿಸುತ್ತಿದ್ದ ಬಸ್ಸಿನಿಂದ…

21 hours ago

ಉಡುಪಿ: ಚಲಿಸುತ್ತಿದ್ದ ರೈಲಿನಿಂದ ಜಿಗಿಯಲು ಯತ್ನ; ಯುವಕನ ರಕ್ಷಣೆ – vishwanews24

ಉಡುಪಿ: ಚಲಿಸುತ್ತಿದ್ದ ರೈಲಿನಿಂದ ಜಿಗಿಯಲು ಯತ್ನ; ಯುವಕನ ರಕ್ಷಣೆ ಉಡುಪಿ: ಟಿಕೆಟ್ ಇಲ್ಲದೆ ಪ್ರಯಾಣಿಸುತ್ತಿದ್ದ ಯುವಕನೊಬ್ಬ ರೈಲಿನಿಂದ ಜಿಗಿಯಲು ಯತ್ನಿಸುತ್ತಿದ್ದ…

22 hours ago

ಕಾಸರಗೋಡು :  ಕೆಟ್ಟು ನಿಂತಿದ್ದ ಪಿಕಪ್ ವ್ಯಾನ್ ಗೆ ಬೈಕ್ ಢಿಕ್ಕಿ: ಸವಾರ ಮೃತ್ಯು – vishwanews24

ಕಾಸರಗೋಡು :  ಕೆಟ್ಟು ನಿಂತಿದ್ದ ಪಿಕಪ್ ವ್ಯಾನ್ ಗೆ ಬೈಕ್ ಢಿಕ್ಕಿ: ಸವಾರ ಮೃತ್ಯು ಕಾಸರಗೋಡು : ರಾಷ್ಟ್ರೀಯ ಹೆದ್ದಾರಿಯ ಬದಿಯಲ್ಲಿ…

23 hours ago

ಪ್ರಥಮ ಪಿಯುಸಿ ಫಲಿತಾಂಶ ಪ್ರಕಟ ; ಆನ್‌ಲೈನ್‌ನಲ್ಲಿ ವೀಕ್ಷಿಸುವುದು ಹೇಗೆ? – vishwanews24

ಪ್ರಥಮ ಪಿಯುಸಿ ಫಲಿತಾಂಶ ಪ್ರಕಟ ; ಆನ್‌ಲೈನ್‌ನಲ್ಲಿ ವೀಕ್ಷಿಸುವುದು ಹೇಗೆ? ಬೆಂಗಳೂರು: ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಳಿಯು…

23 hours ago