ಮಂಗಳೂರು: ಬಜಪೆಯ ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಮತ್ತು ನವಿ ಮುಂಬೈ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಗಳ ನಡುವೆ ಕ್ರಿಸ್‌ಮಸ್ ದಿನದಂದು ( ಇದೇ 25) ದೈನಂದಿನ ನೇರ ವಿಮಾನ ಸೇವೆ ಆರಂಭವಾಗಲಿದೆ. ಇಂಡಿಗೊ ವಿಮಾನಯಾನ ಸಂಸ್ಥೆಯ ವಿಮಾನಗಳು ದಿನದಲ್ಲಿ ನಾಲ್ಕು ಬಾರಿ ಹಾಗೂ ಏರ್ ಇಂಡಿಯಾ ಎಕ್ಸ್‌ಪ್ರೆಸ್‌ನ ಒಂದು ವಿಮಾನ ದಿನದಲ್ಲಿ ಒಮ್ಮೆ ಮಂಗಳೂರು – ಗ್ರೀಫ್ ಫೀಲ್ಡ್ ವಿಮಾನನಿಲ್ದಾಣ ಎಂಬ ಹೆಗ್ಗಳಿಕೆಗೆ ಪಾತ್ರವಾದ ನವಿ ಮುಂಬೈ ನಡುವೆ ಸಂಚಾರ ನಡೆಸಲಿವೆ.
ನವಿ ಮುಂಬೈನಿಂದ ಮಂಗಳೂರಿಗೆ (6ಇ 865) ಬೆಳಗ್ಗೆ 10.40ಕ್ಕೆ ಬಂದಿಳಿಯುವ ವಿಮಾನವು ಮಧ್ಯಾಹ್ನ 12.10ಕ್ಕೆ ನವಿಮುಂಬೈಗೆ ತೆರಳಲಿದೆ. ಸೋಮವಾರ ಮತ್ತು ಗುರುವಾರ ನವಿ ಮುಂಬೈನಿಂದ ಮಂಗಳೂರಿಗೆ ಸಂಜೆ 4.05ಕ್ಕೆ ಬಂದಿಳಿಯುವ ವಿಮಾನವು ಮಂಗಳೂರು – ನವಿ ಮುಂಬೈ (6ಇ 866) ನಡುವೆ ಸಂಜೆ 5.45ಕ್ಕೆ ಇಲ್ಲಿಂದ ನವಿಮುಂಬೈಗೆ ತೆರಳಲಿದೆ.
ಮಂಗಳವಾರ, ಬುಧವಾರ, ಶುಕ್ರವಾರ, ಶನಿವಾರ, ಭಾನುವಾರ ನವಿ ಮುಂಬೈನಿಂದ ಮಂಗಳೂರಿಗೆ ಮಧ್ಯಾಹ್ನ 12.40ಕ್ಕೆ ಬಂದಿಳಿಯುವ ವಿಮಾನ (6E 866) ಮಧ್ಯಾಹ್ನ 2.20ಕ್ಕೆ ಇಲ್ಲಿಂದ ನವಿಮುಂಬೈಗೆ ಹೊರಡಲಿದೆ. ಈ ಹೊಸ ವಿಮಾನ ಸೇವೆಯಿಂದ ವ್ಯಾಪಾರಿಗಳು, ಪ್ರವಾಸಿಗರು ಹಾಗೂ ಕರಾವಳಿ-ಮುಂಬೈ ನಡುವೆ ಸಂಚರಿಸುವ ಸಾವಿರಾರು ಮಂದಿಗೆ ಅನುಕೂಲವಾಗಲಿದೆ. ಮಂಗಳೂರು ವಿಮಾನ ನಿಲ್ದಾಣದಿಂದ ಬೆಂಗಳೂರು, ಚೆನ್ನೈ, ದೆಹಲಿ, ಹೈದರಾಬಾದ್, ಮುಂಬೈ (ಛತ್ರಪತಿ ಶಿವಾಜಿ) ಹಾಗೂ ತಿರುವನಂತಪುರ ಸೇರಿ ದೇಶದ ಆರು ನಗರಗಳಿಗೆ ತಾಣಗಳಿಗೆ ವಿಮಾನ ಸಂಪರ್ಕವಿದೆ. ನವಿ ಮುಂಬೈ ಮಂಗಳೂರಿನಿಂದ ನೇರ ವಿಮಾನ ಸಂಪರ್ಕ ಏಳನೇ ದೇಸಿ ವಿಮಾನನಿಲ್ದಾಣ ಎಂದು ಮಂಗಳೂರು ವಿಮಾನ ನಿಲ್ದಾಣದ ಮೂಲಗಳು ತಿಳಿಸಿವೆ.
ನಕಲಿ ಔಷಧಿ ಜಾಲದಲ್ಲಿ ದೊಡ್ಡ ದೊಡ್ಡ ಖಾಸಗಿ ಆಸ್ಪತ್ರೆಗಳು , ಮೆಡಿಕಲ್ ಸ್ಟೋರ್‌ಗಳು : ಶೀಘ್ರವೇ ತಪ್ಪಿತಸ್ಥ ಆಸ್ಪತ್ರೆಗಳ ಲಿಸ್ಟ್…
ಉಚ್ಚಿಲ ಮೊಗವೀರ ಭವನದಲ್ಲಿ ಕೀರ್ತಿಶೇಷ ಮಾಧವ ಮಂಗಲ ಪೂಜಾರ್ಯರ ಕಂಚಿನ ಪುತ್ಥಳಿ ಅನಾವರಣ ಉಚ್ಚಿಲ : ಮೊಗವೀರ ಸಮಾಜದ ಗುರು…
ಮೈಸೂರು ದಸರಾದಲ್ಲಿ ಕರಾವಳಿಯ ಕಂಬಳ; ಅ. 18-19ರಂದು ‘ವಿಜಯ ದಶಮಿ’ ಜೋಡುಕರೆ ಕಂಬಳ ಮಂಗಳೂರು: ಮೈಸೂರು ದಸರಾ ಉತ್ಸವದ ಅಂಗವಾಗಿ…
2028ಕ್ಕೂ ಡಿಕೆ ಶಿವಕುಮಾರ್ ಅವರೇ ಮುಖ್ಯಮಂತ್ರಿ ಆಗಲಿ, ಅವರಿಂದಲೇ ಪಕ್ಷ ಅಧಿಕಾರಕ್ಕೆ ಬರಲಿ : ಸತೀಶ್ ಜಾರಕಿಹೊಳಿ ಮೈಸೂರು: 2028ಕ್ಕೂ…
ಶಿರ್ವ, ಉಡುಪಿಯಲ್ಲಿ ಮಾದಕ ವಸ್ತು ಮಾರಾಟ ಪ್ರಕರಣ : ಬಂಧಿತರ ಪೈಕಿ ಹಲವರು ಅಪರಾಧ ಕೃತ್ಯಗಳಲ್ಲಿ ಭಾಗಿ ಉಡುಪಿ: ಉಡುಪಿ…
ಕುಂದಾಪುರ: ಶಾರ್ಜಾದಲ್ಲಿ ಕೊಲೆಯಾದ ಅಲ್ವಿನ್ ಪ್ರಕಾಶ್ ಕುಂದರ್ ಅಂತ್ಯಸಂಸ್ಕಾರ ; ಕುಟುಂಬಸ್ಥರ ಆಕ್ರಂದನ ಕುಂದಾಪುರ: ಶಾರ್ಜಾದಲ್ಲಿ ಅಮಾನುಷವಾಗಿ ಕೊಲೆಯಾದ ಕುಂದಾಪುರ…