Featured

ಮಂಗಳೂರು: ಡೆತ್ ನೋಟ್ ಬರೆದಿಟ್ಟು ಯುವಕ ನೇಣು ಬಿಗಿದು ಆತ್ಮಹತ್ಯೆ – Vishwanews24

ಮಂಗಳೂರು: ಡೆತ್ ನೋಟ್ ಬರೆದಿಟ್ಟು ಯುವಕ ನೇಣು ಬಿಗಿದು  ಆತ್ಮಹತ್ಯೆ

ಮಂಗಳೂರು: ಯುವಕನೋರ್ವ ಡೆತ್ ನೋಟ್ ಬರೆದಿಟ್ಟು ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ತೊಕ್ಕೊಟ್ಟು ಸಮೀಪದ ಕಾಪಿಕಾಡು, ಸತ್ಯನಾರಾಯಣ ಕಂಪೌಂಡ್ ನಲ್ಲಿ ನಡೆದಿದೆ.

ಮೃತ ಯುವಕನನ್ನು ಕಾಪಿಕಾಡು, ಸತ್ಯನಾರಾಯಣ ನಿವಾಸಿ ನಿತಿನ್ ಪೂಜಾರಿ (36) ಎಂದು ಗುರುತಿಸಲಾಗಿದೆ.

ನಿತಿನ್ ಬುಧವಾರ ಮಧ್ಯಾಹ್ನ ಮನೆಯ ಕೋಣೆಯೊಳಗೆ ಸೇರಿದ್ದ ಎನ್ನಲಾಗಿದೆ. ನೆರೆಯ ಮನೆಯಲ್ಲಿ ಬೀಡಿ ಕಟ್ಟುತ್ತಿದ್ದ ಆತನ ತಾಯಿ ಬಂದು ಕೋಣೆಯ ಬಾಗಿಲು ಬಡಿದಿದ್ದು, ಬಾಗಿಲು ತೆರೆಯಲಿಲ್ಲ. ಇದರಿಂದ ಸಂಶಯಗೊಂಡ ಅವರು ಬಾಗಿಲ ಎಡೆಯಿಂದ ನೋಡಿದಾಗ ಮಗ ಫ್ಯಾನಿಗೆ ನೇಣು ಬಿಗಿದ ವಿಚಾರ ಬೆಳಕಿಗೆ ಬಂದಿದೆ.

ಮೃತ ನಿತಿನ್ ಡೆತ್ ನೋಟ್ ಒಂದನ್ನ ಬರೆದಿದ್ದು ಅದರಲ್ಲಿ ನನ್ನ ಸಾವಿಗೆ ಪ್ರವೀಣ್ ಶೆಟ್ಟಿ ಚೆಂಬುಗುಡ್ಡೆ ನೇರ ಕಾರಣ. ಇವರಿಂದ ಮಾನಸಿಕವಾಗಿ ಮನನೊಂದು ಆತ್ಮ ಹತ್ಯೆ ಮಾಡಿಕೊಂಡಿರುತ್ತೇನೆ.ಇವರಿಗೆ ಕಠಿಣ ಶಿಕ್ಷೆಯನ್ನ ನೀಡಬೇಕಾಗಿ ವಿನಂತಿ ಎಂದು ಉಲ್ಲೇಖಿಸಿದ್ದಾರೆ.

ಮೃತ ನಿತಿನ್ ಈ ಮೊದಲು ಮಾಂಡೊವಿ ಕಂಪನಿಯಲ್ಲಿ ಉದ್ಯೋಗಿಯಾಗಿದ್ದು,ಈಗ ಸಿಕ್ಕಿದ ಸಣ್ಣ,ಪುಟ್ಟ ಕೆಲಸಕ್ಕೆ ತೆರಳುತ್ತಿದ್ದನಂತೆ.ನಿತಿನ್ ಅಕ್ಕ,ಬಾವ,ಅಮ್ಮನನ್ನ ಅಗಲಿದ್ದಾರೆ.

ಸ್ಥಳಕ್ಕೆ ಬಂದ ಉಳ್ಳಾಲ ಪೊಲೀಸರು ಮೃತ ದೇಹವನ್ನ ಮರಣೋತ್ತರ ಪರೀಕ್ಷೆಗೆ ರವಾಣಿಸಿದ್ದು ಪ್ರಕರಣ ದಾಖಲಿಸಿ ತನಿಖೆ ಕೈಗೆತ್ತಿ ಕೊಂಡಿದ್ದಾರೆ.

Vishwa News 24

Recent Posts

ಅರೆಂಜ್‌ ಅಲರ್ಟ್‌ ಹಿನ್ನೆಲೆ : ದ.ಕ ಜಿಲ್ಲೆಯಲ್ಲಿ ನಾಳೆ ( ಜು.3) ಶಾಲಾ ಕಾಲೇಜಿಗೆ ರಜೆ ಘೋಷಣೆ -vishwanews24

ಅರೆಂಜ್‌ ಅಲರ್ಟ್‌ ಹಿನ್ನೆಲೆ : ದ.ಕ ಜಿಲ್ಲೆಯಲ್ಲಿ ನಾಳೆ ( ಜು.3) ಶಾಲಾ ಕಾಲೇಜಿಗೆ ರಜೆ ಘೋಷಣೆ ಮಂಗಳೂರು :…

12 hours ago

ಜುಲೈ ತಿಂಗಳಲ್ಲಿ ಮೀಟರ್ ರೀಡಿಂಗ್ ಇರುವುದಿಲ್ಲ: ಬೆಸ್ಕಾಂ – vishwanews24

ಜುಲೈ ತಿಂಗಳಲ್ಲಿ ಮೀಟರ್ ರೀಡಿಂಗ್ ಇರುವುದಿಲ್ಲ: ಬೆಸ್ಕಾಂ ಕಳೆದ 3 ತಿಂಗಳ ಸರಾಸರಿ ವಿದ್ಯುತ್​ ಬಳಕೆಯ ಆಧಾರದ ಮೇಲೆ ಜುಲೈ…

18 hours ago

ಶಿರ್ವ : ಕಾರಿಗೆ ಡೀಸೆಲ್ ತುಂಬಿಸಿಕೊಂಡು ಹಣ ಪಾವತಿಸದೆ ಪರಾರಿ ; ಮೂವರು ಆರೋಪಿಗಳ ಬಂಧನ – vishwanews24

 ಶಿರ್ವ : ಕಾರಿಗೆ ಡೀಸೆಲ್ ತುಂಬಿಸಿಕೊಂಡು ಹಣ ಪಾವತಿಸದೆ ಪರಾರಿ ; ಮೂವರು ಆರೋಪಿಗಳ ಬಂಧನ ಉಡುಪಿ: ಕಾರಿಗೆ ಫುಲ್…

18 hours ago

ಸತೀಶ್ ಕಡತನಮಲೆ 6 ವರ್ಷ ಬಿಜೆಪಿ ಪಕ್ಷದಿಂದ ಉಚ್ಛಾಟನೆ  – vishwanews24

ಬಿಜೆಪಿ ರೈತ ಮೋರ್ಚಾ ರಾಜ್ಯ ಪ್ರಧಾ‌ನ ಕಾರ್ಯದರ್ಶಿ ಸತೀಶ್ ಕಡತನಮಲೆ 6 ವರ್ಷ ಪಕ್ಷದಿಂದ ಉಚ್ಛಾಟನೆ  ಬೆಂಗಳೂರು: ರಾಜ್ಯ ರೈತ…

19 hours ago

ಕ್ವಾರಿ ದುರಂತ : ಅಧಿಕೃತ ವರದಿ ಪಡೆದ ಬಳಿಕ ಅಗತ್ಯ ಕ್ರಮಗಳ ಬಗ್ಗೆ ತೀರ್ಮಾನ: ಸಿಎಂ ಡಿ.ಕೆ.ಶಿ – vishwanews24

ಕ್ವಾರಿ ದುರಂತ : ಅಧಿಕೃತ ವರದಿ ಪಡೆದ ಬಳಿಕ ಅಗತ್ಯ ಕ್ರಮಗಳ ಬಗ್ಗೆ ತೀರ್ಮಾನ: ಸಿಎಂ ಡಿ.ಕೆ.ಶಿವಕುಮಾರ್ ಬೆಂಗಳೂರು: “ಮಾಗಡಿ…

20 hours ago

ಅಬುಧಾಬಿಯಲ್ಲಿ ಲೋಕೋ ಪೈಲಟ್ ಆಗಿ ಕೊಡಗಿನ ರಿಯಾಝ್ – vishwanews24

ಅಬುಧಾಬಿಯಲ್ಲಿ ಲೋಕೋ ಪೈಲಟ್ ಆಗಿ ಕೊಡಗಿನ ರಿಯಾಝ್ ಮಡಿಕೇರಿ : ಯುನೈಟೆಡ್ ಅರಬ್ ಎಮಿರೇಟ್ಸ್‌ನಲ್ಲಿ ಆರಂಭವಾದ 'ಇತ್ತಿಹಾದ್' ರೈಲು ಸೇವೆಯ…

20 hours ago