ದಕ್ಷಿಣ ಕನ್ನಡ

ಮಂಗಳೂರು: ತಂಗಿಯನ್ನು ಕೊಲೆಗೈದ ಪ್ರಕರಣ :ಆರೋಪಿ ಅಣ್ಣನಿಗೆ 4 ವರ್ಷ ಜೈಲುಶಿಕ್ಷೆ – vishwanews24

ಮಂಗಳೂರು: ತಂಗಿಯನ್ನು ಕೊಲೆಗೈದ ಪ್ರಕರಣ :ಆರೋಪಿ ಅಣ್ಣನಿಗೆ 4 ವರ್ಷ ಜೈಲುಶಿಕ್ಷೆ

ಮಂಗಳೂರು : ಕ್ಷುಲ್ಲಕ ಕಾರಣಕ್ಕಾಗಿ ತನ್ನ ಸ್ವಂತ ತಂಗಿಯನ್ನೇ ಸುತ್ತಿಗೆಯಿಂದ ಹೊಡೆದು ಭೀಕರವಾಗಿ ಕೊಲೆ ಮಾಡಿದ್ದ ಆರೋಪಿಗೆ ಮಂಗಳೂರಿನ 2ನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯ ಶಿಕ್ಷೆ ವಿಧಿಸಿ ತೀರ್ಪು ನೀಡಿದೆ. ಕೊಣಾಜೆ ಪೊಲೀಸ್ ಠಾಣಾ ವ್ಯಾಪ್ತಿಯ ಕಂಬಳಪದವು ನಿವಾಸಿ ಸ್ಯಾಮ್ಸನ್ ಫ್ರಾನ್ಸಿಸ್ ಕುಟಿನ್ಹಾ ಶಿಕ್ಷೆಗೆ ಗುರಿಯಾದ ಅಪರಾಧಿಯಾಗಿದ್ದಾನೆ.

ನ್ಯಾಯಾಲಯವು ಐಪಿಸಿ ಕಲಂ 304 (II) ಅನ್ವಯ ಅಪರಾಧಿಗೆ 4 ವರ್ಷಗಳ ಸಜಾ ಶಿಕ್ಷೆ ಹಾಗೂ ₹10,000 ದಂಡ ಮತ್ತು ಸಾಕ್ಷ್ಯ ನಾಶಪಡಿಸಿದ ಐಪಿಸಿ ಕಲಂ 201ರ ಅನ್ವಯ 1 ವರ್ಷ ಶಿಕ್ಷೆ ಹಾಗೂ ₹1,000 ದಂಡ ವಿಧಿಸಿ ಸೋಮವಾರ ಆದೇಶ ಹೊರಡಿಸಿದೆ.

2019ರ ಆಕ್ಟೋಬರ್‌ 8 ರ ಮಧ್ಯಾಹ್ನ ಸುಮಾರು 12 ಗಂಟೆಗೆ ಕಂಬಳಪದವಿನಲ್ಲಿರುವ ತನ್ನ ಮನೆಯಲ್ಲಿ ಆರೋಪಿ ಸ್ಯಾಮ್ಸನ್, ತನ್ನ ತಂಗಿ ಫಿಯೋನಾ ಸ್ವೀಡಲ್ ಕುಟಿನ್ಹಾ ಬಳಿ ಮೊಬೈಲ್ ಫೋನ್ ಬಳಸಲು ನೀಡುವಂತೆ ಕೇಳಿದ್ದ. ಈ ವಿಚಾರವಾಗಿ ಇಬ್ಬರ ನಡುವೆ ಮಾತಿಗೆ ಮಾತು ಬೆಳೆದು ಜಗಳ ನಡೆದಿತ್ತು.

ಇದನ್ನೂ ಓದಿ:

ಈ ವೇಳೆ ತೀವ್ರ ಕೋಪಗೊಂಡ ಸ್ಯಾಮ್ಸನ್, ಸುತ್ತಿಗೆಯಿಂದ ತಂಗಿಯ ತಲೆಗೆ ಬಲವಾಗಿ ಹಲ್ಲೆ ನಡೆಸಿ ಆಕೆಯನ್ನು ಕೊಲೆ ಮಾಡಿದ್ದ. ಬಳಿಕ ಸಾಕ್ಷ್ಯ ನಾಶಪಡಿಸುವ ಉದ್ದೇಶದಿಂದ ಆಕೆಯ ಮೃತದೇಹವನ್ನು ಮನೆಯ ಹಿಂಭಾಗದ ಪೊದೆಯಲ್ಲಿ ಬಚ್ಚಿಟ್ಟಿದ್ದನು.

ಘಟನೆಯ ಬಳಿಕ ಮಗಳು ಕಾಣೆಯಾಗಿದ್ದಾಳೆ ಎಂದು ಮೃತ ಫಿಯೋನಾರ ತಂದೆ ಫ್ರಾನ್ಸಿಸ್ ಕುಟಿನ್ಹಾ ಅವರು ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಈ ದೂರಿನ ಅನ್ವಯ ಪೊಲೀಸರು ಅಪಹರಣ ಪ್ರಕರಣ (ಕಲಂ 363 ಐಪಿಸಿ) ದಾಖಲಿಸಿಕೊಂಡಿದ್ದರು.

ಇದನ್ನೂ ಓದಿ:

ಪ್ರಕರಣದ ತನಿಖೆಯನ್ನು ಕೈಗೆತ್ತಿಕೊಂಡ ಮಂಗಳೂರು ದಕ್ಷಿಣ ಉಪವಿಭಾಗದ ಅಂದಿನ ಎಸಿಪಿ ಟಿ. ಕೋದಂಡ ರಾಮ್ ಅವರು, ತನಿಖೆ ನಡೆಸಿ ಕೊಲೆ ರಹಸ್ಯವನ್ನು ಬಯಲಿಗೆಳೆದಿದ್ದರು. ತನಿಖೆ ಪೂರ್ಣಗೊಳಿಸಿದ ಪೊಲೀಸರು, 2020ರ ಜನವರಿ 10 ರಂದು ನ್ಯಾಯಾಲಯಕ್ಕೆ ಕಲಂ 302 ಮತ್ತು 201 ಐಪಿಸಿ ಅಡಿಯಲ್ಲಿ ದೋಷಾರೋಪಣಾ ಪಟ್ಟಿ ಸಲ್ಲಿಸಿದ್ದರು.

ಪ್ರಕರಣದ ಸಮಗ್ರ ವಿಚಾರಣೆ ನಡೆಸಿದ ಮಂಗಳೂರಿನ 2ನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯವು, ದಿನಾಂಕ 24-08-2026 ರಂದು ಆರೋಪಿಗೆ ಶಿಕ್ಷೆ ಪ್ರಕಟಿಸಿದೆ. ಅಭಿಯೋಜನ ಪರವಾಗಿ ಜ್ಯೋತಿ ಪ್ರಮೋದ ನಾಯಕ್ ವಾದ ಮಂಡಿಸಿದ್ದರು.

Vishwa News 24

Recent Posts

ಕಟಪಾಡಿ:  ಮಟ್ಟು ಬೀಚ್‌ನಲ್ಲಿ ತೀವ್ರಗೊಂಡ ಕಡಲ್ಕೊರೆತ : ತುರ್ತು  ಸುರಕ್ಷ ಕಾಮಗಾರಿ ಆರಂಭ – vishwanews24

ಕಟಪಾಡಿ:  ಮಟ್ಟು ಬೀಚ್‌ನಲ್ಲಿ ತೀವ್ರಗೊಂಡ ಕಡಲ್ಕೊರೆತ : ತುರ್ತು  ಸುರಕ್ಷ ಕಾಮಗಾರಿ ಆರಂಭ ಕಟಪಾಡಿ: ಕಾಪು ತಾಲೂಕು ಕೋಟೆ ಗ್ರಾ.…

4 minutes ago

ನೇಪಾಳ ಪ್ರವಾಹ: ನಾಪತ್ತೆಯಾದ ಕನ್ನಡಿಗರ ಮಾಹಿತಿ ನೀಡಲು ಸರ್ಕಾರ ಮನವಿ – vishwanews24

ನೇಪಾಳ ಪ್ರವಾಹ: ನಾಪತ್ತೆಯಾದ ಕನ್ನಡಿಗರ ಮಾಹಿತಿ ನೀಡಲು ಸರ್ಕಾರ ಮನವಿ ಬೆಂಗಳೂರು: ನೇಪಾಳದಲ್ಲಿ ಸಂಭವಿಸಿದ ಪ್ರಕೃತಿ ವಿಕೋಪ ಹಾಗೂ ದಿಢೀರ್…

13 minutes ago

ಈ ಬಾರಿಯ ದಸರಾದಲ್ಲಿ ಕಂಬಳ ಇರುತ್ತದೆ: ಯತೀಂದ್ರ – vishwanews24

ಈ ಬಾರಿಯ ದಸರಾದಲ್ಲಿ ಕಂಬಳ ಇರುತ್ತದೆ: ಯತೀಂದ್ರ ಮೈಸೂರು: ಈ ಬಾರಿಯ ದಸರಾದಲ್ಲಿ ಕಂಬಳ ಇರುತ್ತದೆ ಎಂದು ಸಚಿವ ಡಾ.…

21 minutes ago

ಉಡುಪಿ:  ಸೆ. 8 ರಂದು ಕ್ರೈಸ್ತರ ಮೊಂತಿ ಫೆಸ್ತ್ ಗೆ ಸರ್ಕಾರಿ ರಜೆ ನೀಡುವಂತೆ ಸಿಎಂ ಗೆ ಕಥೊಲಿಕ್ ಸಭಾ ಮನವಿ – vishwanews24

ಉಡುಪಿ:  ಸೆ. 8 ರಂದು ಕ್ರೈಸ್ತರ ಮೊಂತಿ ಫೆಸ್ತ್ ಗೆ ಸರ್ಕಾರಿ ರಜೆ ನೀಡುವಂತೆ ಸಿಎಂ ಗೆ ಕಥೊಲಿಕ್ ಸಭಾ…

1 hour ago

ಭಾರತ್ ಜೋಡೋ ಯುವ ಸಂಘಕ್ಕೆ ನೋಂದಣಿ – vishwanews24

ಭಾರತ್ ಜೋಡೋ ಯುವ ಸಂಘಕ್ಕೆ ನೋಂದಣಿ ಮಂಗಳೂರು,: ಯುವಜನರಲ್ಲಿ ಕ್ರೀಡೆ, ಸಂಸ್ಕøತಿ, ವೈಜ್ಞಾನಿಕ ಮನೋಭಾವ ಹಾಗೂ ಸಾಮುದಾಯಿಕ ಸಾಮಾಜಿಕ ಸಾಮರಸ್ಯವನ್ನು…

1 hour ago

ಉಡುಪಿ: ಬಹು ಸಂಖ್ಯಾತ ಹಿಂದೂಗಳಿಗೆ ಈ ಸರ್ಕಾರದಲ್ಲಿ ರಕ್ಷಣೆಯೇ ಇಲ್ಲ : ಯಶ್ಪಾಲ್ ಸುವರ್ಣ ಆಕ್ರೋಶ – vishwanews24

ಉಡುಪಿ: ಬಹು ಸಂಖ್ಯಾತ ಹಿಂದೂಗಳಿಗೆ ಈ ಸರ್ಕಾರದಲ್ಲಿ ರಕ್ಷಣೆಯೇ ಇಲ್ಲ : ಯಶ್ಪಾಲ್ ಸುವರ್ಣ ಆಕ್ರೋಶ ಉಡುಪಿ: ರಾಜ್ಯ ಕಾಂಗ್ರೆಸ್…

1 hour ago