ಮಂಗಳೂರು: ಚಿನ್ನವನ್ನು ಅಕ್ರಮ ಸಾಗಾಟ ಮಾಡುವವರು ಹೊಸ ಹೊಸ ವಿಧಾನ ಹುಡುಕುತ್ತಲ್ಲೇ ಇದ್ದಾರೆ. ಆರೋಪಿಗಳು ಅಕ್ರಮ ಚಿನ್ನ ಸಾಗಾಟ ಮಾಡಲು ಬೋಳಿಸಿದ ತಲೆಗೆ ಹಾಕಿದ್ದ ವಿಗ್ ಅನ್ನು ಬಳಸಿದ್ದಾರೆ. ಹಾಗೆಯೇ ಇನ್ನೊಂದು ಪ್ರಕರಣದಲ್ಲಿ ಟೇಪ್ ಮಾದರಿಯನ್ನು ಬಳಸಿದ್ದು ಕಾರ್ಯಾಚರಣೆ ನಡೆಸಿದ ಕಸ್ಟಮ್ಸ್ ಅಧಿಕಾರಿಗಳು 21.33 ಲಕ್ಷ ಮೌಲ್ಯದ 554.90 ಗ್ರಾಂ ಚಿನ್ನವನ್ನು ವಶಕ್ಕೆ ಪಡೆದಿದ್ದಾರೆ.
ಮೊದಲ ಪ್ರಕರಣದಲ್ಲಿ ಆರೋಪಿಯು ಬೋಳಿಸಿದ ತಲೆಗೆ ವಿಗ್ ಅಂಟಿಸಿ ಅದರೊಳಗೆ ಅಕ್ರಮ ಚಿನ್ನ ಸಾಗಾಟ ಮಾಡಲು ಯತ್ನಿಸಿದ್ದು ತಿಳಿದುಬಂದಿದೆ. ಆರೋಪಿಯು ಮಂಗಳವಾರ ದುಬೈನಿಂದ ವಿಮಾನದ ಮೂಲಕ ಆಗಮಿಸಿದ್ದು ನಿರ್ಗಮನ ಸಂದರ್ಭ ತಪಾಸಣೆ ವೇಳೆ ಆತ 24 ಕ್ಯಾರೆಟ್ ಶುದ್ಧತೆಯ 247.70 ಗ್ರಾಂ ತೂಕದ 9.57 ಲಕ್ಷ ರೂ ಬೆಲೆಯ ಚಿನ್ನವನ್ನು ಸಣ್ಣ ತುಂಡುಗಳ ರೂಪದಲ್ಲಿ ಬಕ್ಕ ತಲೆಯೊಳಗೆ ಅಂಟಿಸಿ ಕೂದಲಿನಿಂದ ಮುಚ್ಚಿರುವುದು ಗಮನಕ್ಕೆ ಬಂದಿದೆ.
ಇನ್ನೊಂದು ಪ್ರಕರಣದಲ್ಲಿ ಅಬುದಾಭಿಯಿಂದ ವಿಮಾನದಲ್ಲಿ ಮಂಗಳೂರಿಗೆ ಸೋಮವಾರ ಆಗಮಿಸಿದ್ದ ಆರೋಪಿ 307.90 ಗ್ರಾಂನ 24 ಕ್ಯಾರೆಟ್ ಶುದ್ಧತೆಯ 11.76 ಲಕ್ಷ ಮೌಲ್ಯದ ಚಿನ್ನವನ್ನು ಅಳತೆಗೆ ಬಳಸುವ ಟೇಪ್ ಮಾದರಿಯ ಒಳಗೆ ಚಿನ್ನದ ಪಟ್ಟಿಯನ್ನು ಮರೆಮಾಚಿ ಸಾಗಾಟಕ್ಕೆ ಯತ್ನಿಸಲಾಗಿದೆ.
ನಕಲಿ ಔಷಧಿ ಜಾಲದಲ್ಲಿ ದೊಡ್ಡ ದೊಡ್ಡ ಖಾಸಗಿ ಆಸ್ಪತ್ರೆಗಳು , ಮೆಡಿಕಲ್ ಸ್ಟೋರ್‌ಗಳು : ಶೀಘ್ರವೇ ತಪ್ಪಿತಸ್ಥ ಆಸ್ಪತ್ರೆಗಳ ಲಿಸ್ಟ್…
ಉಚ್ಚಿಲ ಮೊಗವೀರ ಭವನದಲ್ಲಿ ಕೀರ್ತಿಶೇಷ ಮಾಧವ ಮಂಗಲ ಪೂಜಾರ್ಯರ ಕಂಚಿನ ಪುತ್ಥಳಿ ಅನಾವರಣ ಉಚ್ಚಿಲ : ಮೊಗವೀರ ಸಮಾಜದ ಗುರು…
ಮೈಸೂರು ದಸರಾದಲ್ಲಿ ಕರಾವಳಿಯ ಕಂಬಳ; ಅ. 18-19ರಂದು ‘ವಿಜಯ ದಶಮಿ’ ಜೋಡುಕರೆ ಕಂಬಳ ಮಂಗಳೂರು: ಮೈಸೂರು ದಸರಾ ಉತ್ಸವದ ಅಂಗವಾಗಿ…
2028ಕ್ಕೂ ಡಿಕೆ ಶಿವಕುಮಾರ್ ಅವರೇ ಮುಖ್ಯಮಂತ್ರಿ ಆಗಲಿ, ಅವರಿಂದಲೇ ಪಕ್ಷ ಅಧಿಕಾರಕ್ಕೆ ಬರಲಿ : ಸತೀಶ್ ಜಾರಕಿಹೊಳಿ ಮೈಸೂರು: 2028ಕ್ಕೂ…
ಶಿರ್ವ, ಉಡುಪಿಯಲ್ಲಿ ಮಾದಕ ವಸ್ತು ಮಾರಾಟ ಪ್ರಕರಣ : ಬಂಧಿತರ ಪೈಕಿ ಹಲವರು ಅಪರಾಧ ಕೃತ್ಯಗಳಲ್ಲಿ ಭಾಗಿ ಉಡುಪಿ: ಉಡುಪಿ…
ಕುಂದಾಪುರ: ಶಾರ್ಜಾದಲ್ಲಿ ಕೊಲೆಯಾದ ಅಲ್ವಿನ್ ಪ್ರಕಾಶ್ ಕುಂದರ್ ಅಂತ್ಯಸಂಸ್ಕಾರ ; ಕುಟುಂಬಸ್ಥರ ಆಕ್ರಂದನ ಕುಂದಾಪುರ: ಶಾರ್ಜಾದಲ್ಲಿ ಅಮಾನುಷವಾಗಿ ಕೊಲೆಯಾದ ಕುಂದಾಪುರ…