ಮಂಗಳೂರು: ಅಚ್ಚುಕಟ್ಟಾದ ಬಟ್ಟೆ ಧರಿಸಿ, ಟೈ ಕಟ್ಟಿ ಕೂದಲಿಗೆ ಬಣ್ಣ ಹಚ್ಚಿಕೊಂಡು ಹಣ ಕೇಳಲು ಬರುವ ಹುಡುಗಿಯರ ಮೇಲೆ ಕರುಣೆ ತೋರಿ ಹಣ ಕೊಟ್ಟಿರಾ ಜೋಕೆ! ಯಾಕಂದ್ರೆ ಇಂತಹ ಯುವತಿಯರ ಗುಂಪು ಮಂಗಳೂರಿನಲ್ಲಿ ಈಗ ಭಿಕ್ಷಾಟನೆಯಲ್ಲಿ ತೊಡಗಿದೆ.
ಜೀನ್ಸ್ ಪ್ಯಾಂಟ್, ಶರ್ಟ್, ಕೊರಳಿಗೊಪ್ಪುವ ಟೈ, ಬಣ್ಣ ಹಚ್ಚಿ ಮಾಡಿದ ಕೆಂಬಣ್ಣದ ಕೂದಲು, ತಳಕು ಬಳಕು ಮೈಮಾಟ…ಪಕ್ಕನೆ ನೋಡಿದರೆ ಇವರು ಲುಕ್ ನಲ್ಲಿ ತೀರಾ ಹೈಫೈ..ಆದರೆ ಕೆಲಸ ಮಾತ್ರ ಭಿಕ್ಷಾಟನೆ.. ಒಂಥರಾ ಹೈಟೆಕ್ ನಂತಹ ಭಿಕ್ಷಾಟನೆ ಅಂದರೂ ತಪ್ಪಿಲ್ಲ..ಮಾತಿನಲ್ಲೇ ಮೋಡಿ ಮಾಡಿ ಸಾರ್ವಜನಿಕರಿಂದ ಸಾವಿರಾರು ರೂ. ವಸೂಲಿ ಮಾಡುವ ಮೂಲಕ ಹೈಟೆಕ್ ಭಿಕ್ಷಾಟನೆಯಲ್ಲಿ ತೊಡಗಿದ್ದ ೮ ಮಂದಿ ಲಲನೆಯರು ಇದೀಗ ಪೊಲೀಸರ ಅತಿಥಿಗಳಾದ ಘಟನೆ ಮಂಗಳೂರಿನ ಕದ್ರಿ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ನಡೆದಿದೆ.
ರಾಜಸ್ಥಾನದ ರಾಣಿಪುರದವರು ಎಂದು ಹೇಳಿಕೊಳ್ಳುವ ಈ ತಂಡ, ಭಿಕ್ಷಾಟನೆಯಲ್ಲಿ ಸಕ್ರಿಯವಾಗಿದೆ. ತಮ್ಮ ಊರಿನಲ್ಲಿ ನೆರೆ ಬಂದಿದ್ದು, ಆಸ್ತಿ ಪಾಸ್ತಿ ಕಳೆದುಕೊಂಡಿದ್ದೇವೆ. ಆಹಾರ ಬಟ್ಟೆ ಬರೆ ಇಲ್ಲದೆ ಸಂತ್ರಸ್ತರಾಗಿರುವ ನಮಗೆ ಧನ ಸಹಾಯ ನೀಡಿ ಎಂದು ಪಾಂಪ್ಲೆಟ್ಸ್ ಹಂಚುತ್ತಿದ್ದಾರೆ. ಕಳೆದ 8 ತಿಂಗಳಿನಿಂದ ನಗರದಲ್ಲಿ ಭಿಕ್ಷಾಟನೆ ಮಾಡುತ್ತಿದ್ದಾರೆ. ಸದ್ಯ ಮಹಿಳೆಯರ ಗುಂಪನ್ನು ಮಂಗಳೂರಿನ ಸಾಮಾಜಿಕ ಹೋರಾಟಗಾರ ಸೌರಜ್, ಕದ್ರಿ ಠಾಣಾ ಪೊಲೀಸರಿಗೆ ಹಿಡಿದುಕೊಟ್ಟಿದ್ದಾರೆ. ಈ ಸಂಬಂಧ ಯುವತಿಯರ ಮೇಲೆ ಪ್ರಕರಣ ದಾಖಲಾಗಿದೆ.
ಕುಂದಾಪುರ: ಹೋಂ ಸ್ಟೇ ಎನ್ ಒಸಿ ನೀಡಲು ಲಂಚ ಪಡೆದ ಆರೋಪ ; ಗ್ರಾಮ ಲೆಕ್ಕಿಗ ಲೋಕಾಯುಕ್ತ ಬಲೆಗೆ ಕುಂದಾಪುರ…
ಉಡುಪಿ ಉಚ್ಚಿಲ ದಸರಾದಲ್ಲಿ ಮಹಿಳಾ ದಸರಾ ಉದ್ಘಾಟಿಸಿದ ಸಿಎಂ ಕರಾವಳಿ ಕರ್ನಾಟಕ ‘ಜಾಗತಿಕ ಟೂರಿಸಂ ಹಬ್’ ಆಗಿ ಅಭಿವೃದ್ಧಿ :…
ಮಂಗಳೂರು: ಅಪ್ರಾಪ್ತ ಬಾಲಕನಿಗೆ ಲೈಂಗಿಕ ಕಿರುಕುಳ ಆರೋಪ : ಚರ್ಚ್ ಫಾದರ್ ವಿರುದ್ಧ ಪೋಕ್ಸೋ ಪ್ರಕರಣ ದಾಖಲು ಮಂಗಳೂರು: ಮಂಗಳೂರು…
ಉಡುಪಿ: ಪಡಿತರ ಚೀಟಿಯ ಫಲಾನುಭವಿಗಳಿಗೆ ಇ-ಕೆವೈಸಿ ಮಾಡಿಸಲು ಅ. 20 ರ ವರೆಗೆ ಅವಕಾಶ ಉಡುಪಿ: ಸಾರ್ವಜನಿಕ ವಿತರಣಾ ವ್ಯವಸ್ಥೆಯಡಿ…
ಈ ಬಾರಿ ದಸರಾ ಮಹೋತ್ಸವದಲ್ಲಿ ಅಂಬಾರಿ ಹೊತ್ತು ಸಾಗಲಿರುವ ದುಬಾರೆ ವೀರ ಪ್ರಶಾಂತ ಆನೆ ಮೈಸೂರು: ವಿಶ್ವವಿಖ್ಯಾತ ನಾಡಹಬ್ಬ ಮೈಸೂರು…
ಬೆಳ್ತಂಗಡಿ: ನಾವೂರಿನ ಆರೋಗ್ಯ ಕ್ಲಿನಿಕ್ಗೆ ಬೆಂಕಿ ಹಚ್ಚಿದ ಪ್ರಕರಣ; ಓರ್ವನ ಬಂಧನ, ಇಬ್ಬರು ವಶಕ್ಕೆ ಬೆಳ್ತಂಗಡಿ: ನಾವೂರು ಗ್ರಾಮದ ಸ್ವಾತಿ…