Featured

ಮಂಗಳೂರು ತಾಲೂಕಿನಲ್ಲಿ ಸೆ.28 ರಿಂದ ಅಕ್ಟೋಬರ್ 16 ರವರೆಗೆ ದಸರಾ ರಜೆ ಘೋಷಣೆ  – Vishwanews24

ಮಂಗಳೂರು ತಾಲೂಕಿನಲ್ಲಿ ಸೆ.28 ರಿಂದ ಅಕ್ಟೋಬರ್ 16 ರವರೆಗೆ ದಸರಾ ರಜೆ ಘೋಷಣೆ ..

ರಾಜ್ಯದಲ್ಲಿ ದಸರಾ ರಜೆಯನ್ನು ಅಕ್ಟೋಬರ್ 3 ರಿಂದ ಅಕ್ಟೋಬರ್ 16 ರವರೆಗೆ..

ಮಂಗಳೂರು : ಮಂಗಳೂರು ತಾಲೂಕಿನಲ್ಲಿ ಸೆ.28 ರಿಂದ ಅಕ್ಟೋಬರ್ 16 ರವರೆಗೆ ದಸರಾ ರಜೆ ಘೋಷಣೆ ಮಾಡಲಾಗಿದೆ. ಮಂಗಳೂರು ದಸರಾ ಸೆಪ್ಟೆಂಬರ್ 28ರಿಂದ ಆರಂಭಗೊಳ್ಳಲಿರುವ ಹಿನ್ನೆಲೆಯಲ್ಲಿ ಹೆಚ್ಚುವರಿ ರಜೆ ಘೋಷಣೆ ಮಾಡಲಾಗಿದೆ.

ರಾಜ್ಯದಲ್ಲಿ ದಸರಾ ರಜೆಯನ್ನು ಅಕ್ಟೋಬರ್ 3 ರಿಂದ ಅಕ್ಟೋಬರ್ 16 ರವರೆಗೆ ನೀಡಲಾಗಿದೆ. ಆದರೆ ಮಂಗಳೂರು ದಸರಾ ಆರಂಭಗೊಳ್ಳುವ ಸಂದರ್ಭದಲ್ಲೇ ನಗರದಲ್ಲಿ ಶಾಲಾ ಕಾಲೇಜುಗಳಿಗೆ ರಜೆ ನೀಡಬೇಕೆಂದು ಆಗ್ರಹಗಳು ಕೇಳಿಬಂದಿತ್ತು.

ಇದನ್ನೂ ಓದಿ : ಸಮಸ್ಯೆ ಗಳಿಗೆ ಶೀಘ್ರ ಪರಿಹಾರ.. ನೋಡಿ ಇಂದಿನ ದಿನ ಭವಿಷ್ಯ.. ಜ್ಯೋತಿಷ್ಯರು ವಿದ್ವಾನ್ ವಿದ್ಯಾಧರ್ ತಂತ್ರಿ ನಂ:- 9686268564

ಇದೀಗ ತಾಲೂಕಿನಲ್ಲಿ ಹೆಚ್ಚುವರಿ ನಾಲ್ಕು ದಿನ ರಜೆ ಘೋಷಿಸಲು ಶಿಕ್ಷಣ ಸಚಿವರು ಸೂಚಿಸಿದ ಹಿನ್ನೆಲೆ ಮಂಗಳೂರು ತಾಲೂಕಿನಲ್ಲಿ ಮಾತ್ರ ಸೆ. 28 ರಿಂದ ಅಕ್ಟೋಬರ್ 1ರ ತನಕ ಹೆಚ್ಚುವರಿ ರಜೆ ನೀಡಲಾಗಿದ್ದು, ಆ ಮೂಲಕ ಅಕ್ಟೋಬರ್ 16ರವರೆಗೆ ದಸರಾ ರಜೆ ನೀಡಿದಂತಾಗಿದೆ.

ಅಕ್ಟೋಬರ್ 2ರಂದು ಮಹಾತ್ಮ ಗಾಂಧಿ ಜಯಂತಿಯನ್ನು ಕಡ್ಡಾಯವಾಗಿ ಆಚರಿಸಲು ಸೂಚಿಸಲಾಗಿದೆ. ಹಾಗೂ ಮಂಗಳೂರಿನಲ್ಲಿ ಹೆಚ್ಚುವರಿಯಾಗಿ ನೀಡಿರುವ 4 ದಿನಗಳ ರಜೆಯನ್ನು ನವೆಂಬರ್ (2022) ತಿಂಗಳಲ್ಲಿ ನಾಲ್ಕು ಶನಿವಾರ ಪೂರ್ಣದಿನದ ತರಗತಿಗಳನ್ನು ಹಾಗೂ ಎರಡು ಭಾನುವಾರ ಪೂರ್ಣ ಶಾಲಾ ಕೆಲಸದ ದಿನಗಳಾಗಿ ನಡೆಸಿ ಸರಿದೂಗಿಸಲು ಶಿಕ್ಷಣ ಇಲಾಖೆ ಆದೇಶ ಹೊರಡಿಸಿದೆ.

ಶರ್ಟ್ ತೆಗೆದು ದೇವಾಲಯಗಳ ಒಳಗೆ ಹೋಗುದರಿಂದ ಒಬ್ಬರ ಮೈ ಇನ್ನೊಬ್ಬರಿಗೆ ತಾಗಿ ಚರ್ಮ ರೋಗ ಬರುತ್ತದೆ..

Vishwa News 24

Recent Posts

ಭೀಕರ ರಸ್ತೆ ಅಪಘಾತ : ‘ಹಳ್ಳಿ ಹೈದ ಪ್ಯಾಟೆಗೆ ಬಂದ’ ಸೀಸನ್-3ರ ಸ್ಪರ್ಧಿ ಬಾವತೀಶ್ ಸಾವು – vishwanews24

ಭೀಕರ ರಸ್ತೆ ಅಪಘಾತ : ‘ಹಳ್ಳಿ ಹೈದ ಪ್ಯಾಟೆಗೆ ಬಂದ’ ಸೀಸನ್-3ರ ಸ್ಪರ್ಧಿ ಬಾವತೀಶ್ ಸಾವು ಯಲ್ಲಾಪುರ : ಉತ್ತರ ಕನ್ನಡ…

3 hours ago

ಕುಂದಾಪುರ: ರಸ್ತೆ ಅಪಘಾತ ; ಗಾಣಿಗ ಸಂಘದ ಮಾಜಿ ಅಧ್ಯಕ್ಷ ಶ್ರೀನಿವಾಸ ಗಾಣಿಗ ಸಾವು – vishwanews24

ಕುಂದಾಪುರ: ರಸ್ತೆ ಅಪಘಾತ ; ಗಾಣಿಗ ಸಂಘದ ಮಾಜಿ ಅಧ್ಯಕ್ಷ ಶ್ರೀನಿವಾಸ ಗಾಣಿಗ ಸಾವು ಕುಂದಾಪುರ: ಇಲ್ಲಿನ ರಾಷ್ಟ್ರೀಯ ಹೆದ್ದಾರಿ…

3 hours ago

ಅಕ್ಷಯ್‌ ಕಲ್ಲೇಗ ಕೊಲೆ ಪ್ರಕರಣ : 3 ಮತ್ತು 4ನೇ ಆರೋಪಿಗಳಿಗೆ ಷರತ್ತುಬದ್ಧ ಜಾಮೀನು ಮಂಜೂರು – vishwanews24

ಪುತ್ತೂರು: ಅಕ್ಷಯ್‌ ಕಲ್ಲೇಗ ಕೊಲೆ ಪ್ರಕರಣ: 3ನೇ ಮತ್ತು 4ನೇ ಆರೋಪಿಗಳಿಗೆ ಷರತ್ತುಬದ್ಧ ಜಾಮೀನು ಮಂಜೂರು ಪುತ್ತೂರು: ಕಲ್ಲೇಗ ಟೈಗರ್ಸ್…

3 hours ago

ಎಲ್​ಪಿಜಿ ಸಿಲಿಂಡರ್ ಬುಕಿಂಗ್ ನಿಯಮಗಳಲ್ಲಿ ಯಾವುದೇ ಬದಲಾವಣೆ ಇಲ್ಲ : ಕೇಂದ್ರ ಸ್ಪಷ್ಟನೆ – vishwanews24

ಎಲ್​ಪಿಜಿ ಸಿಲಿಂಡರ್ ಬುಕಿಂಗ್ ನಿಯಮಗಳಲ್ಲಿ ಯಾವುದೇ ಬದಲಾವಣೆ ಇಲ್ಲ : ಕೇಂದ್ರ ಸ್ಪಷ್ಟನೆ ನವದೆಹಲಿ: ಎಲ್​ಪಿಜಿ(LPG) ಸಿಲಿಂಡರ್ ಬುಕಿಂಗ್ ನಿಯಮಗಳಲ್ಲಿ…

3 hours ago

ಸುಳ್ಯ : ಕಂಬಕ್ಕೆ ಬೈಕ್ ಡಿಕ್ಕಿ; ಮೆಸ್ಕಾಂ ಸಿಬ್ಬಂದಿ ಮೃತ್ಯು – vishwanews24

ಸುಳ್ಯ : ಕಂಬಕ್ಕೆ ಬೈಕ್ ಡಿಕ್ಕಿ; ಮೆಸ್ಕಾಂ ಸಿಬ್ಬಂದಿ ಮೃತ್ಯು ಸುಳ್ಯ,: ತಾಲೂಕಿನ ನಿಂತಿಕಲ್ಲು ಬಳಿ ವಿದ್ಯುತ್ ಕಂಬಕ್ಕೆ ಬೈಕ್…

3 hours ago

13 ವರ್ಷದ ಕೋಮಾ ಜೀವನ ಅಂತ್ಯ : ದಯಾಮರಣಕ್ಕೆ ಅನುಮತಿ ಪಡೆದಿದ್ದ ಹರೀಶ್ ರಾಣಾ ನಿಧನ – vishwanews24

13 ವರ್ಷದ ಕೋಮಾ ಜೀವನ ಅಂತ್ಯ : ದಯಾಮರಣಕ್ಕೆ ಅನುಮತಿ ಪಡೆದಿದ್ದ ಹರೀಶ್ ರಾಣಾ ನಿಧನ ಹೊಸದಿಲ್ಲಿ: 13 ವರ್ಷಗಳಿಂದ…

5 hours ago