ಮಂಗಳೂರು: ನಗರದ ಹೊರವಲಯದ ಕೊಣಾಜೆಯಲ್ಲಿ ಆತಂಕ ಮೂಡಿಸಿದ್ದ ಹಲವು ದೇವಾಸ್ಥಾನಗಳ ಕಾಣಿಕೆ ಹುಂಡಿ ಕಳವು ಮತ್ತು ಭಗವಧ್ವಜ ಅಪವಿತ್ರಗೊಳಿಸಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದೆ.
ಮಾಧ್ಯಮಗಳನ್ನು ಉದ್ದೇಶಿಸಿ ಮಾತನಾಡಿದ ಅವರು, ”ತಲಪಾಡಿ ನಿವಾಸಿಗಳಾದ ಮಹಮ್ಮದ್ ಸುಹೈಲ್ (19) ಮತ್ತು ನಿಜಾಮುದ್ದೀನ್ (21) ಬಂಧಿತ ಆರೋಪಿಗಳು. ಆರು ಜನರ ತಂಡ ಈ ಕೃತ್ಯವನ್ನು ಎಸಗಿದ್ದು ಇನ್ನೂ ನಾಲ್ವರನ್ನು ಬಂಧನವಾಗಬೇಕಿದೆ” ಎಂದು ಮಾಹಿತಿ ನೀಡಿದರು.
”ವಿಚಾರಣೆಯ ಬಳಿಕ ಆರೋಪಿಗಳು, 2020 ನೇ ನವೆಂಬರ್‌ನಲ್ಲಿ ಕೊಣಾಜೆ ಮುಲಾರದ ಅರಸು ಮುಂಡಿತ್ತಾಯ ದೈವಸ್ಥಾನದ ಕಾಣಿಕೆ ಡಬ್ಬಿ ಕಳವು ಮಾಡಿರುವುದಾಗಿ ಒಪ್ಪಿಕೊಂಡಿದ್ದಾರೆ. ಹಾಗೆಯೇ ಜನವರಿ 15 ರಂದು ಮಾಡೂರಿನಲ್ಲಿ ರಸ್ತೆ ಬದಿಯಲ್ಲಿದ್ದ ಕಾಣಿಕೆ ಡಬ್ಬಿಯನ್ನು ಕಳವು ಮಾಡಿರುವುದಾಗಿ ಒಪ್ಪಿಕೊಂಡಿದ್ದಾರೆ. ಇನ್ನು ದೇರಳಕಟ್ಟೆಯ ಅಯ್ಯಪ್ಪ ಸ್ಥಾಮಿ ದೇವಸ್ಥಾನದ ಸೇವಾ ಕೌಂಟರ್‌ಗೆ ನುಗ್ಗಿ ಕಳವು ಮಾಡಿದ ಬಗ್ಗೆ, ಪೆರಂಡೆಯಲ್ಲಿರುವ ಗೋಪಾಲಕೃಷ್ಣ ಮಂದಿರಕ್ಕೆ ಹೋಗಿ ಕೇಸರಿ ಧ್ವಜ ಕಲುಷಿತಗೊಳಿಸಿದ ಬಗ್ಗೆ ತಪ್ಪೊಪ್ಪಿಕೊಂಡಿದ್ದಾರೆ. ಕುತ್ತಾರು ಆದಿಸ್ಥಳದ ಕೊರಗಜ್ಜ ದೈವಸ್ಥಾನಕ್ಕೆ ಹೋಗಿ ಕಳ್ಳತನಕ್ಕೆ ಯತ್ನಿಸಿದ ಬಗ್ಗೆಯೂ ತಪ್ಪೊಪ್ಪಿಕೊಂಡುದ್ದಾರೆ” ಎಂದು ಆಯುಕ್ತರು ತಿಳಿಸಿದರು.
”ಆರೋಪಿಗಳ ವಿರುದ್ದ ಪುಂಜಲಕಟ್ಟೆ, ಬಂಟ್ವಾಳ, ಮಂಗಳೂರು ಗ್ರಾಮಾಂತರ, ಕಂಕನಾಡಿ, ಉಳ್ಳಾಲ ಪೊಲೀಸ್ ಠಾಣೆಯಲ್ಲಿ ಒಟ್ಟು 9 ಪ್ರಕರಣಗಳು ದಾಖಲಾಗಿವೆ. 9 ಪ್ರಕರಣಗಳಲ್ಲಿ ಐದು ದೇವಾಲಯದ ಕಳ್ಳತನ ಪ್ರಕರಣವಾಗಿದ್ದು ಇತರ ಪ್ರಕರಣದಲ್ಲಿ ಪೆಟ್ರೋಲ್ ಪಂಪ್ ಕಳ್ಳತನ ಪ್ರಕರಣವೂ ಸೇರಿದೆ. ಅಪರಾಧ ಮಾಡಲು ಬಳಸಿದ ಸ್ಕೂಟರ್, ದೇವಾಲಯಗಳ ಹುಂಡಿ ಪೆಟ್ಟಿಗೆಗಳು, ಚಾಕು ಮತ್ತು ಸ್ಪ್ಯಾನರ್ ಅನ್ನು ನಾವು ವಶಪಡಿಸಿಕೊಂಡಿದ್ದೇವೆ. ವಶಪಡಿಸಿಕೊಂಡ ಎಲ್ಲಾ ವಸ್ತುಗಳ ಒಟ್ಟು ಮೌಲ್ಯ 35,000 ರೂ. ಆಗಿದೆ” ಎಂದು ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಕಾನೂನು ಮತ್ತು ಸುವ್ಯವಸ್ಥೆ ವಿಭಾಗದ ಡಿಸಿಪಿ ಹರಿರಾಂ ಶಂಕರ್ ಹಾಗೂ ಅಪರಾಧ ಮತ್ತು ಸಂಚಾರ ವಿಭಾಗದ ಡಿಸಿಪಿ ವಿನಯ್ ಗಾಂವ್ಕರ್ ಉಪಸ್ಥಿತರಿದ್ದರು.
ಕಾಸರಗೋಡು : ಕೆಟ್ಟು ನಿಂತಿದ್ದ ಪಿಕಪ್ ವ್ಯಾನ್ ಗೆ ಬೈಕ್ ಢಿಕ್ಕಿ: ಸವಾರ ಮೃತ್ಯು ಕಾಸರಗೋಡು : ರಾಷ್ಟ್ರೀಯ ಹೆದ್ದಾರಿಯ ಬದಿಯಲ್ಲಿ…
ಪ್ರಥಮ ಪಿಯುಸಿ ಫಲಿತಾಂಶ ಪ್ರಕಟ ; ಆನ್‌ಲೈನ್‌ನಲ್ಲಿ ವೀಕ್ಷಿಸುವುದು ಹೇಗೆ? ಬೆಂಗಳೂರು: ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಳಿಯು…
ಮಂಗಳೂರಿನಲ್ಲಿ ಹಜ್ ಭವನ, ಹಜ್ ಯಾತ್ರೆಗೆ ನೇರ ವಿಮಾನ ಸೌಲಭ್ಯ ಒದಗಿಸುವಂತೆ ಎಸ್‌ಡಿಪಿಐ ಆಗ್ರಹ ಮಂಗಳೂರು: ಮಂಗಳೂರಿನಲ್ಲಿ ಹಜ್ ಭವನ…
ಕಟಪಾಡಿ : ಶೀಘ್ರ ಒಂದು ಭಾಗದಲ್ಲಿ ವಾಹನ ಸಂಚಾರಕ್ಕೆ ಮುಕ್ತ ಕಟಪಾಡಿಯಲ್ಲಿ ರಾಷ್ಟ್ರೀಯ ಹೆದ್ದಾರಿಯ ಅಂಡರ್‌ಪಾಸ್ ಕಾಮಗಾರಿ ವೇಗದಲ್ಲಿ ನಡೆಯುತಿದ್ದು,…
ಉಡುಪಿ: ಸಂತೆಕಟ್ಟೆ ಅಂಡರ್‌ಪಾಸ್‌ನ ಮೇಲ್ಸೇತುವೆ ವಾಹನ ಸಂಚಾರಕ್ಕೆ ಮುಕ್ತ ; ಶೀಘ್ರವೇ ಅಧಿಕೃತ ಉದ್ಘಾಟನೆ: ಸಂಸದ ಕೋಟ ಶ್ರೀನಿವಾಸ ಪೂಜಾರಿ…
ಈಸ್ಟರ್ ಪ್ರಯುಕ್ತ ಯಶವಂತಪುರ-ಮಡಗಾಂವ್ ಮಧ್ಯೆ ವಿಶೇಷ ರೈಲು ಉಡುಪಿ: ಮುಂಬರುವ ಗುಡ್‌ಫ್ರೈಡೇ ಹಾಗೂ ಈಸ್ಟರ್ ಪ್ರಯುಕ್ತ ಜನರ ವಿಶೇಷ ಒತ್ತಡವನ್ನು…