Featured

ಮಂಗಳೂರು : ದೇಶದ ಹಿತಕ್ಕಾಗಿ ಎನ್ ಐಎ ಜತೆ ಉಗ್ರ ನಿರ್ಮೂಲನಕ್ಕೆ ಸಹಕರಿಸಿ  : ಶಾಸಕ ಡಾ. ಭರತ್ ಶೆಟ್ಟಿ – Vishwanews24

ಮುಸ್ಲಿಂ ಯುವಕರಿಗೆ ಉಗ್ರ ಕೃತ್ಯ ನಡೆಸಲು ಹಣಕಾಸು ಬೆಂಬಲ ನೀಡುವ ಜನರನ್ನು, ಹಾಗೂ ಸಂಘಟನೆಗಳನ್ನು ಬಹಿಷ್ಕರಿಸಿ

ದೇಶದ ಹಿತಕ್ಕಾಗಿ ಎನ್ ಐಎ ಜತೆ ಉಗ್ರ ನಿರ್ಮೂಲನಕ್ಕೆ ಸಹಕರಿಸಿ

ಮಂಗಳೂರು: ಮಂಗಳೂರಿನಲ್ಲಿ ನಡೆದ ಉಗ್ರರ ಕೃತ್ಯವನ್ನು ಮುಸ್ಲಿಂ ಜಮಾತ್ ಗಳು, ಮುಸ್ಲಿಂ ಮುಖಂಡರು ಖಂಡಿಸುವ ಮೂಲಕ ಮತ್ತು ಇಂತಹ ಕೃತ್ಯಗಳಿಗಾಗಿ ಮುಸ್ಲಿಂ ಯುವಕರ ತಲೆಯಲ್ಲಿ ಮತಾಂಧತೆಯನ್ನು ತುಂಬಿಸಿ ಉಗ್ರ ಕೃತ್ಯ ನಡೆಸಲು ಹಣಕಾಸು ನೀಡುವ, ಬೆಂಬಲ ನೀಡಿದ ಜನರನ್ನು, ಹಾಗೂ ಸಂಘಟನೆಗಳನ್ನು ಬಹಿಷ್ಕರಿಸಿ ದೂರವಿಡುವ ಮೂಲಕ ದೇಶದ ಹಿತಕ್ಕಾಗಿ ಎನ್ ಐಎ ಜತೆ ಉಗ್ರ ನಿರ್ಮೂಲನಕ್ಕೆ ಸಹಕರಿಸಬೇಕಾಗಿದೆ ಎಂದು ಶಾಸಕ ಡಾ. ಭರತ್ ಶೆಟ್ಟಿ ವೈ ಒತ್ತಾಯಿಸಿದ್ದಾರೆ.

ಮಂಗಳೂರು ಸ್ಪೋಟಕ್ಕೆ ಇಸ್ಲಾಮಿಕ್ ರೆಸಿಸ್ಟನ್ಸ್ ಕೌನ್ಸಿಲ್ ಹೊಣೆ ಹೊತ್ತಿದೆ. ಸರಕಾರ ಉಗ್ರ ನಿಗ್ರಹಕ್ಕೆ ಬೇಕಾದ ಕ್ರಮ ಕೈಗೊಳ್ಳುತ್ತದೆ. ಇದರ ಹಿಂದೆ ಯಾರು ಇದ್ದಾರೆ ಎಂಬುದನ್ನು ಸಮುದಾಯದ ನಾಯಕರು ಗುರುತಿಸಿ ಮಾಹಿತಿ ನೀಡಿ ಇಂತಹ ಕೃತ್ಯ ಮುಂದೆ ನಡೆಯದಂತೆ ಎಚ್ಚೆತ್ತುಕೊಳ್ಳಬೇಕು. ಸಾಮರಸ್ಯ, ಭ್ರಾತೃತ್ವ ಕೇವಲ ಬಾಯಿ ಮಾತಾಗದಿರಲಿ. ಆಡಿದ್ದನ್ನು ಮಾಡಿ ತೋರಿಸುವ ಗುಣವೂ ಇರಬೇಕಿದೆ ಎಂದು ಹೇಳಿದ್ದಾರೆ.

ರಾಜ್ಯದಲ್ಲಿ ಕೆ ಜಿ ಹಳ್ಳಿ, ಡಿ ಜೆ ಹಳ್ಳಿ ಘಟನೆ ನಡೆದಾಗಲೇ ಎಚ್ಚೆತ್ತುಕೊಂಡು ಮುಸ್ಲಿಂ ಮುಖಂಡರು ಸಮುದಾಯದಲ್ಲಿ ಮತಾಂಧತೆಯನ್ನು ಹೆಚ್ಚಿಸಿಕೊಂಡು ದಾರಿ ತಪ್ಪಿದ, ಭಯೋತ್ಪಾದನೆಯಲ್ಲಿ ನಿರತವಾಗಿರುವವರ ಗೌಪ್ಯ ಮಾಹಿತಿಯನ್ನು ಎನ್ ಐಎಗೆ ನೀಡಬೇಕಿತ್ತು. ಇದನ್ನು ಸಮುದಾಯ ನಿರ್ಲಕ್ಷಿಸಿದ್ದರಿಂದಲೇ ಮಂಗಳೂರು ಘಟನೆ ನಡೆಯಲು ಕಾರಣವಾಗಿದೆ.

ದೇಶ, ವಿದೇಶದಿಂದ ಹಣ ಪಡೆದು, ಭಯೋತ್ಪಾದನೆಯನ್ನು ನಡೆಸುತ್ತಿರುವುದರ ಘಟನೆಗಳನ್ನು ಸಮುದಾಯದ ನಾಯಕರು ಗಂಭೀರವಾಗಿ ಪರಿಗಣಿಸದೆ ಇದ್ದ ಪರಿಣಾಮ ಮಂಗಳೂರಿನಲ್ಲಿ ಭಾರೀ ಅನಾಹುತದ ಸಂಚು ರೂಪಿತವಾಗಿದೆ ಎಂದು ಶಾಸಕ ಡಾ.ಭರತ್ ಶೆಟ್ಟಿ ವೈ ಆರೋಪಿಸಿದ್ದಾರೆ.

Vishwa News 24

Recent Posts

ಉಡುಪಿ: ಆಸ್ತಿಯನ್ನು ಬಲವಂತವಾಗಿ ತನ್ನ ಹೆಸರಿಗೆ ವರ್ಗಾಯಿಸಿಕೊಂಡು ವೃದ್ಧ ಪೋಷಕರನ್ನು ಮನೆಯಿಂದ ಹೊರಹಾಕಿದ ಮಗ – vishwanews24

ಉಡುಪಿ: ಆಸ್ತಿಯನ್ನು ಬಲವಂತವಾಗಿ ತನ್ನ ಹೆಸರಿಗೆ ವರ್ಗಾಯಿಸಿಕೊಂಡು ವೃದ್ಧ ಪೋಷಕರನ್ನು ಮನೆಯಿಂದ ಹೊರಹಾಕಿದ ಮಗ ಉಡುಪಿ: ತಾಯಿಯ ಹೆಸರಿನಲ್ಲಿದ್ದ ಆಸ್ತಿಯನ್ನು…

8 hours ago

ವಿಟ್ಲ : ಚಲಿಸುತ್ತಿದ್ದ ಕಾರಿನ ಮೇಲೆ ಬಿದ್ದ ಮರ ಹಾಗೂ ವಿದ್ಯುತ್ ಕಂಬ: ದಂಪತಿ ಅಪಾಯದಿಂದ ಪಾರು – vishwanews24

ವಿಟ್ಲ : ಚಲಿಸುತ್ತಿದ್ದ ಕಾರಿನ ಮೇಲೆ ಬಿದ್ದ ಮರ ಹಾಗೂ ವಿದ್ಯುತ್ ಕಂಬ: ದಂಪತಿ ಅಪಾಯದಿಂದ ಪಾರು ವಿಟ್ಲ: ಮರ ಹಾಗೂ…

10 hours ago

ಮಂಗಳೂರು: ಉದ್ಯಮಿಯ ಕಾರು ಅಡ್ಡಗಟ್ಟಿ ಕಾರು ಸಹಿತ ಚಿನ್ನಾಭರಣ ದರೋಡೆ – vishwanews24

ಮಂಗಳೂರು: ಉದ್ಯಮಿಯ ಕಾರು ಅಡ್ಡಗಟ್ಟಿ ಕಾರು ಸಹಿತ ಚಿನ್ನಾಭರಣ ದರೋಡೆ ಮಂಗಳೂರು: ಕೇರಳ ಮೂಲದ ಉದ್ಯಮಿಯೊಬ್ಬರ ಕಾರನ್ನು ಅಡ್ಡಗಟ್ಟಿ ಕಾರು…

10 hours ago

ವಯೋವಂದನ ಯೋಜನೆ : ವೇದಿಕೆಯ ನೇತೃತ್ವಕ್ಕೆ ಸಮಾಜದ ಸಹಭಾಗಿತ್ವ ಅಗತ್ಯ : ಸಿ ಎಂ ಗುಜ್ಜಾಡಿ ಪ್ರಭಾಕರ್ ನಾಯಕ್ – vishwanews24

ವಯೋವಂದನ ಯೋಜನೆ : ವೇದಿಕೆಯ ನೇತೃತ್ವಕ್ಕೆ ಸಮಾಜದ ಸಹಭಾಗಿತ್ವ ಅಗತ್ಯ : ಸಿ ಎಂ ಗುಜ್ಜಾಡಿ ಪ್ರಭಾಕರ್ ನಾಯಕ್ ಜಿ…

10 hours ago

ಉಡುಪಿ ಮಲಬಾರ್ ಗೋಲ್ಡ್‌ನಲ್ಲಿ ‘ನುವಾ’ ವಜ್ರಾಭರಣ ಅನಾವರಣ – vishwanews24

ಉಡುಪಿ ಮಲಬಾರ್ ಗೋಲ್ಡ್‌ನಲ್ಲಿ ‘ನುವಾ’ ವಜ್ರಾಭರಣ ಅನಾವರಣ ಉಡುಪಿ: ಮಲಬಾರ್ ಗೋಲ್ಡ್ ಆ್ಯಂಡ್ ಡೈಮಂಡ್ಸ್ ಉಡುಪಿ ಶಾಖೆಯಲ್ಲಿ ಮೈನ್ ಬ್ರಾಂಡಿನ…

10 hours ago

ಧರ್ಮಸ್ಥಳ ಮತ್ತು ವೀರೇಂದ್ರ ಹೆಗ್ಗಡೆ ವಿರುದ್ಧ ಅವಹೇಳನಕಾರಿ ಹೇಳಿಕೆ: ವಿಠಲ ಗೌಡ ವಿರುದ್ಧ ಅರೆಸ್ಟ್​​​​​​ ವಾರಂಟ್ – vishwanews24

ಧರ್ಮಸ್ಥಳ ಪ್ರಕರಣ : ವಿಠಲ್‌ ಗೌಡ ವಿರುದ್ಧ ಅರೆಸ್ಟ್‌ ವಾರಂಟ್:‌ ಪೊಲೀಸರಿಂದ ಹುಡುಕಾಟ ಬೆಳ್ತಂಗಡಿ: ಧರ್ಮಸ್ಥಳ ಮತ್ತು ವೀರೇಂದ್ರ ಹೆಗ್ಗಡೆ…

2 days ago