Featured

ಮಂಗಳೂರು : ದೈವಗಳ ವೇಷಹಾಕಿ ಅಶ್ಲೀಲ ನೃತ್ಯ –  ಕೇಸ್ ಹಾಕುವುದಾಗಿ ಎಚ್ಚರಿಕೆ ನೀಡಿದ ದೈವ ಆರಾಧಕರು – vishwanews24

ತುಳುನಾಡಿನ ಜನರು ಆರಾಧನೆ ಮಾಡುವ ದೈವಗಳಿಗೆ ಭಾರೀ ಅವಮಾನ..

ಮನರಂಜನೆಗಾಗಿ ತುಳುನಾಡಿನ ದೈವಾರಾಧನೆ ಬಳಕೆ..

ಭೂತ ಬಿಡಿಸಲು ತುಳುನಾಡ ದೈವಗಳಂತೆ ವೇಷತೊಟ್ಟು ನರ್ತನ..

ಕೆಲವು ಕಿಡಿಗೇಡಿಗಳಿಂದ ಹಣ ಸಂಪಾದನೆಗೆ ದೈವಗಳ‌ ವೇಷ..

ದೈವಗಳಿಗೆ ಅವಮಾನಿಸುವವರ ವಿರುದ್ಧ ಅಟ್ರಾಸಿಟಿ ಕೇಸ್ ಹಾಕುವುದಾಗಿ ​ದಯಾನಂದ ಕತ್ತಲ್ಸಾರ್ ಎಚ್ಚರಿಕೆ

ಮಂಗಳೂರು: ತುಳುನಾಡಿನ ಜನರು ಆರಾಧನೆ ಮಾಡುವ ದೈವಗಳಿಗೆ ಭಾರೀ ಅವಮಾನವಾಗುತ್ತಿದೆ. ಮನರಂಜನೆಗಾಗಿ ದೈವಾರಾಧನೆ ಬಳಸುತ್ತಿದ್ದಾರೆ ಎಂದು ತುಳುನಾಡಿನ ದೈವ ಪಾತ್ರಿಗಳು ಮತ್ತು ದೈವಾರಾಧಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇತ್ತೀಚಿನ ದಿನಗಳಲ್ಲಿ ಮನರಂಜನೆಗಾಗಿ ತುಳುನಾಡಿನ ದೈವಾರಾಧನೆ ಬಳಕೆ ಮಾಡಲಾಗುತ್ತಿದೆ ಎಂಬ ಆರೋಪ ಕೇಳಿ ಬರುತ್ತಿದೆ. ಕಾರ್ಯಕ್ರಮದಲ್ಲಿ ತುಳುನಾಡ ದೈವಗಳ ವೇಷಹಾಕಿ ನೃತ್ಯ ಮಾಡಲಾಗುತ್ತಿದೆ. ಭೂತ ಬಿಡಿಸಲು ತುಳುನಾಡ ದೈವಗಳಂತೆ ವೇಷತೊಟ್ಟು ನರ್ತನ ಮಾಡಲಾಗುತ್ತಿದೆ. ಕೆಲವು ಕಿಡಿಗೇಡಿಗಳು ಹಣ ಸಂಪಾದನೆಗೆ ದೈವಗಳ‌ ವೇಷತೊಡುತ್ತಿದ್ದಾರೆ. ಬೆಂಗಳೂರು ಸೇರಿದಂತೆ ಇತರ ಭಾಗಗಳಲ್ಲಿ ಇದೂಂದು ದಂಧೆಯಾಗಿ ಶುರುವಾಗಿದೆ.

 

ಇದರಿಂದ ಪಂಬದ, ಪರವ, ನಲಿಕೆ ಸಮುದಾಯದವರಿಗೆ ಅವಮಾನವಾಗುತ್ತಿದೆ ಎಂದು ದೈವ ಪಾತ್ರಿಗಳು ದಯಾನಂದ ಕತ್ತಲ್ಸಾರ್ ಹೇಳಿದ್ದಾರೆ.

ಇನ್ನು ಮುಂದೆ ದೈವಗಳಿಗೆ ಅವಮಾನಿಸುವವರ ವಿರುದ್ಧ ಅಟ್ರಾಸಿಟಿ ಕೇಸ್ ಹಾಕುವುದಾಗಿಯೂ ​ದಯಾನಂದ ಕತ್ತಲ್ಸಾರ್ ಎಚ್ಚರಿಕೆ ಕೊಟ್ಟಿದ್ದಾರೆ. ಜೊತೆಗೆ ಅಪಚಾರದ ಬಗ್ಗೆ ಧ್ವನಿ ಎತ್ತುವಂತೆ ನಟ ರಿಷಭ್​ ಶೆಟ್ಟಿಗೆ ಒತ್ತಾಯ ಮಾಡಿದ್ದಾರೆ. ಕಿಡಿಗೇಡಿಗಳ ವಿರುದ್ಧ ಸೂಕ್ತ ಕ್ರಮಕೈಗೊಳ್ಳಬೇಕು. ಕ್ರಮಕೈಗೊಳ್ಳದಿದ್ದರೆ ದೈವಾರಾಧಕರಿಂದ ಉಗ್ರ ಹೋರಾಟ ಮಾಡುವುದಾಗಿ ಎಚ್ವರಿಕೆ ನೀಡಿದ್ದಾರೆ.

Vishwa News 24

Recent Posts

ಎಸ್‌ಐಆರ್‌ ವಿವಾದ: ಬಿಜೆಪಿ ಕಾರ್ಯಕರ್ತರಿಗೆ ಕಿರುಕುಳ ನೀಡಿದರೆ ರಾಜ್ಯಾದ್ಯಂತ ಹೋರಾಟ :ಯಡಿಯೂರಪ್ಪ ಎಚ್ಚರಿಕೆ – vishwanews24

ಬಿಜೆಪಿ ಕಾರ್ಯಕರ್ತರ ಮೇಲಿನ FIR ರದ್ದಿಗೆ ಆಗ್ರಹ : ರಾಜ್ಯಾದ್ಯಂತ ಹೋರಾಟದ ಎಚ್ಚರಿಕೆ ನೀಡಿದ ಬಿಎಸ್‌ವೈ ಬೆಂಗಳೂರು: ಎಸ್‍ಐಆರ್ ಸಂಬಂಧ…

17 hours ago

ಮಂಗಳೂರು: ಮನೆ ಕನ್ನ ಕಳವು ಪ್ರಕರಣ ಭೇದಿಸಿದ ಪೊಲೀಸರು; ದೆಹಲಿ ಮೂಲದ ಇಬ್ಬರ ಬಂಧನ – vishwanews24

ಮಂಗಳೂರು: ಮನೆ ಕನ್ನ ಕಳವು ಪ್ರಕರಣ ಭೇದಿಸಿದ ಪೊಲೀಸರು; ದೆಹಲಿ ಮೂಲದ ಇಬ್ಬರ ಬಂಧನ, 18 ಲಕ್ಷ ಮೌಲ್ಯದ ಸೊತ್ತು…

17 hours ago

ಏಷ್ಯನ್ ಗೇಮ್ಸ್ : ಕುಸ್ತಿಯಲ್ಲಿ ಚಿನ್ನ ಗೆದ್ದ ಅಮನ್ ಸೆಹ್ರಾವತ್ – vishwanews24

ಏಷ್ಯನ್ ಗೇಮ್ಸ್ : ಕುಸ್ತಿಯಲ್ಲಿ ಚಿನ್ನ ಗೆದ್ದ ಅಮನ್ ಸೆಹ್ರಾವತ್ ನಗೋಯಾ: ಜಪಾನ್‌ನ ಐಚಿ-ನಗೋಯಾದಲ್ಲಿ ನಡೆಯುತ್ತಿರುವ 2026ರ ಏಷ್ಯನ್ ಗೇಮ್ಸ್‌ನಲ್ಲಿ…

18 hours ago

ಕಾರ್ಕಳ : ಅ. 5 ರಂದು ರಾಜ್ಯ ಸರ್ಕಾರದ ವಿರುದ್ಧ ಬಿಜೆಪಿಯಿಂದ ಬೃಹತ್ ಪ್ರತಿಭಟನೆ – vishwanews24

ಕಾರ್ಕಳ : ಅ. 05 ರಂದು ರಾಜ್ಯ ಸರ್ಕಾರದ ವಿರುದ್ಧ ಬಿಜೆಪಿಯಿಂದ ಬೃಹತ್ ಪ್ರತಿಭಟನೆ ಕಾರ್ಕಳ: ರಾಜ್ಯ ಕಾಂಗ್ರೆಸ್ ಸರ್ಕಾರದ…

18 hours ago

ಮಂಗಳೂರು: ಯುವನಿಧಿ ಫಲಾನುಭವಿಗಳಿಗೆ ಕೌಶಲ ಭಾಗ್ಯ: ಉಚಿತ ತರಬೇತಿ ಮತ್ತು ಉದ್ಯೋಗಾವಕಾಶಕ್ಕಾಗಿ ಅರ್ಜಿ ಆಹ್ವಾನ – vishwanews24

ಮಂಗಳೂರು: ಯುವನಿಧಿ ಫಲಾನುಭವಿಗಳಿಗೆ ಕೌಶಲ ಭಾಗ್ಯ: ಉಚಿತ ತರಬೇತಿ ಮತ್ತು ಉದ್ಯೋಗಾವಕಾಶಕ್ಕಾಗಿ ಅರ್ಜಿ ಆಹ್ವಾನ ಮಂಗಳೂರು: ಕರ್ನಾಟಕ ಸರ್ಕಾರದ ಮಹತ್ವಾಕಾಂಕ್ಷೆಯ…

18 hours ago

180 ಜನರ ಪ್ರಾಣ ಉಳಿಸಿದ ಭಾರತೀಯ ಪೈಲಟ್ ಸ್ಮಿತ್ ಮಚ್ಚಾರ್‌ಗೆ 1 ಕೋಟಿ ರೂ. ಘೋಷಣೆ – vishwanews24

180 ಜನರ ಪ್ರಾಣ ಉಳಿಸಿದ ಭಾರತೀಯ ಪೈಲಟ್ ಸ್ಮಿತ್ ಮಚ್ಚಾರ್‌ಗೆ 1 ಕೋಟಿ ರೂ. ಘೋಷಣೆ ನವದೆಹಲಿ : ದುಬೈನಿಂದ…

18 hours ago