ಮಂಗಳೂರು : ಕಾವೂರು ಪರಿಸರದ ಸಹಕಾರಿ ಸಂಸ್ಥೆಯೊಂದರಲ್ಲಿ ನಕಲಿ ಚಿನ್ನದ ಬಳೆಗಳನ್ನು ಅಡವಿಟ್ಟು 14.89 ಲಕ್ಷ ರೂ. ಸಾಲ ಪಡೆದ ನಾಲ್ವರು ಆರೋಪಿಗಳ ಪೈಕಿ ಮೂವರನ್ನು ಕಾವೂರು ಪೊಲೀಸರು ಬಂಧಿಸಿದ್ದಾರೆ. ಮೊಹಮ್ಮದ್ ನಝೀರ್, ಜಮಾಲುದ್ದೀನ್ ಎ.ಎಚ್. ಮತ್ತು ಸೈನಾಝ್ ಬಂಧಿತ ಆರೋಪಿಗಳು. ಇನ್ನೋರ್ವ ಆರೋಪಿ ದಿಲ್ಶಾದ್ ತಲೆಮರೆಸಿಕೊಂಡಿದ್ದಾಳೆ.
ಈ ನಾಲ್ವರು ಆರೋಪಿಗಳು 2024ರ ಜೂ.24ರಿಂದ 2024ರ ಅ.5ವರೆಗೆ ಸುಮಾರು 14.89ಲಕ್ಷ ರೂ. ಮೌಲ್ಯದ ಬಳೆಗಳನ್ನು ಅಡವಿಟ್ಟಿದ್ದರು. ಬ್ಯಾಂಕಿನ ಚಿನ್ನಾಭರಣ ಪರೀಕ್ಷಕರು ಅಸಲಿ ಎಂದು ದೃಢೀಕರಿಸಿದ ಬಳಿಕ ಚಿನ್ನಾಭರಣದ ಪರೀಕ್ಷಕರು ನೀಡಿದ ಆಧಾರದ ಮೇಲೆಯೇ ಸಾಲ ನೀಡಲಾಗಿತ್ತು. 2025 ಜು.7ರಂದು ಸದಸ್ಯರು ಅಡವಿಟ್ಟ ಚಿನ್ನವನ್ನು ವಾರ್ಷಿಕವಾಗಿ ಪರೀಕ್ಷಿಸಲು ಪರೀಕ್ಷಕರನ್ನು ಕರೆಸಿದಾಗ ಮೊಹಮ್ಮದ್ ನಝೀರ್, ಜಮಾಲುದ್ದೀನ್ ಹಾಗೂ ದಿಲ್‌ಶಾದ್ ಅಡವಿಟ್ಟ ಬಳೆಗಳೆಲ್ಲವೂ ನಕಲಿ ಎಂದು ತಿಳಿದು ಬಂದಿದೆ. ಈ ಬಗ್ಗೆ ಆರೋಪಿಗಳಲ್ಲಿ ವಿಚಾರಿಸಿದಾಗ ಹಣ ಕಟ್ಟುವುದಾಗಿ ತಿಳಿಸಿದ್ದರು. ಆದರೆ ಈ ವರೆಗೆ ಹಣ ಕಟ್ಟಿಲ್ಲ.
ಆರೋಪಿಗಳು ಜಾಲವೊಂದನ್ನು ರಚಿಸಿ ಮೋಸ ಮಾಡುವ ಉದ್ದೇಶದಿಂದಲೇ ನಕಲಿ ಚಿನ್ನವನ್ನು ಅಡವಿಟ್ಟು ಸಾಲ ಪಡೆದಿದ್ದಾರೆ. ಪ್ರಕರಣದಲ್ಲಿ ಆರೋಪಿಗಳಾದ ಮೊಹಮ್ಮದ್ ನಝೀರ್, ಜಮಾಲುದ್ದೀನ್ ಎ.ಎಚ್., ದಿಲ್‌ಶಾದ್ ಹಾಗೂ ನಕಲಿ ಚಿನ್ನ ಅಡಮಾನ ಇರಿಸಲು ಬಂದಿದ್ದ ಸೈನಾಝ್ ವಿರುದ್ಧ ಸಹಕಾರಿ ಸಂಘದ ಮೆನೇಜರ್ ದೂರು ನೀಡಿದ್ದಾರೆ.
ಬೆಳಪು ಪ್ರದೇಶದಲ್ಲಿ ಎಲ್ಲಾ ಅಗತ್ಯ ಸೌಲಭ್ಯಗಳೊಂದಿಗೆ ಘಟಕ ನಿರ್ಮಿಸಿದರೆ ನಮ್ಮಿಂದ ಯಾವುದೇ ವಿರೋಧ ಇರುವುದಿಲ್ಲ : ದೇವಿಪ್ರಸಾದ್ ಶೆಟ್ಟಿ ಮೂಳೂರು…
ಪ್ರಿಯಕರನ ಜೊತೆ ಸೇರಿ ಗಂಡನ ಮನೆಗೆ ಕನ್ನಹಾಕಿದ ಪತ್ನಿ; 21 ಲಕ್ಷ ಮೌಲ್ಯದ ಚಿನ್ನಾಭರಣ ಕಳ್ಳತನ ಬೆಳಗಾವಿ: ಪ್ರಿಯಕರನ ಜೊತೆ…
ದೇಶದ ಜಾತ್ಯತೀತ ಮೌಲ್ಯಗಳನ್ನು ರಕ್ಷಿಸಲು ಕಾಂಗ್ರೆಸ್ ಪಕ್ಷ ಸದಾ ಸಮಾನ ಚಿಂತನೆಯ ಪಕ್ಷಗಳೊಂದಿಗೆ ಕೈಜೋಡಿಸಿದೆ : ಬಿ.ಕೆ.ಹರಿಪ್ರಸಾದ್ ಬೆಂಗಳೂರು: ‘ಬಿಜೆಪಿ…
ಪಡುಬಿದ್ರಿ: ಕಿಶೋರ್ ಆಳ್ವ ಅವರಿಗೆ ಪ್ರತಿಷ್ಠಿತ ಮಹಾತ್ಮ ಗಾಂಧಿ ಸಬರಮತಿ ಸಂತ ಪ್ರಶಸ್ತಿ ಪ್ರದಾನ ಪಡುಬಿದ್ರಿ: ಸನಾತನ ಫೌಂಡೇಶನ್‌ನ ಅಧ್ಯಕ್ಷ,…
ವಿವಾಹಿತ ಮಹಿಳೆ ಜತೆ ಲಿವ್ ಇನ್ ರಿಲೇಶನ್‌ಶಿಪ್‌ನಲ್ಲಿದ್ದ ಯುವಕ ಶವವಾಗಿ ಪತ್ತೆ ಬೆಂಗಳೂರು: ಲಿವ್ ಇನ್ ರಿಲೇಶನ್‌ಶಿಪ್‌ನಲ್ಲಿದ್ದ ಯುವಕ ನೇಣುಬಿಗಿದ…
ಪಶ್ಚಿಮ ಬಂಗಾಳದ ರಾಜಕೀಯ ಇತಿಹಾಸದಲ್ಲಿ ಹೊಸ ಪರ್ವ.. ಬಿಜೆಪಿ ಮೊದಲ ಸಿಎಂ ಆಗಿ ಪ್ರಮಾಣ ಸ್ವೀಕಾರ.. ಐತಿಹಾಸಿಕ ಕ್ಷಣಕ್ಕೆ ಮೋದಿ,…