Featured

ಮಂಗಳೂರು : ನಾಗರಾಧನೆಗೆ ಸ್ವಂತ ಜಮೀನು ದಾನ ಮಾಡಿದ ಸ್ಪೀಕರ್ ಯು.ಟಿ ಖಾದರ್ – Vishwanews24

ಮಂಗಳೂರು : ನಾಗರಾಧನೆಗೆ ಸ್ವಂತ ಜಮೀನು ದಾನ ಮಾಡಿದ ಸ್ಪೀಕರ್ ಯು.ಟಿ ಖಾದರ್

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆ ಅಂದ್ರೇ ಸದಾ ಒಂದಿಲ್ಲೊಂದು ಕೋಮುಗಲಭೆಗಳು ಸಾಮಾನ್ಯ. ಆಗಾಗ ಕೋಮುಗಳ ಗಲಭೆಗಳು ನಡೆಯುತ್ತಲೇ ಇರ್ತಾವೆ. ಈ ನಡುವೆಯೂ ಸ್ಪೀಕರ್ ಯು.ಟಿ ಖಾದರ್ ಮಾತ್ರ ಧಾರ್ಮಿಕ ಸಾಮರಸ್ಯ ಮೆರೆದಿದ್ದಾರೆ. ಅದೇ ನಾಗರಾಧನೆಗೆ ಸ್ವಂತ ಜಮೀನು ದಾನ ಮಾಡಿದ್ದಾರೆ.

ಸ್ಪೀಕರ್ ಯು.ಟಿ ಖಾದರ್ ಅವರು ತಮ್ಮ ಪಿತ್ರಾರ್ಜಿತ ಸೊತ್ತಾಗಿ ಬಂದಿದ್ದಂತ ಜಾಗದಲ್ಲಿ ಹಿಂದೂಗಳು ನಾಗರಕಟ್ಟೆಯನ್ನು ನಿರ್ಮಿಸಿ, ನಾಗಾರಾಧನೆ ಮಾಡಿಕೊಂಡು ಬರ್ತಾ ಇದ್ದರು. ಅಂತಹ ನಾಗಾರಾಧನೆ ಮಾಡುತ್ತಿದ್ದಂತ ಜಾಗವನ್ನೇ ದಾನ ಮಾಡಿ, ದೇವಸ್ಥಾನಕ್ಕೆ ನೀಡಿದ್ದಾರೆ.

ದಕ್ಷಿಣ ಕನ್ನಡ ಜಿಲ್ಲೆಯ ವಿಟ್ಲ ಸಮೀಪದ ಪುಣಚ ಪರಿಯಾಲ್ತಡ್ಕ ಎಂಬಲ್ಲಿ ಯು.ಟಿ ಖಾದರ್ ಅವರು ಜಮೀನನ್ನೇ ದಾನ ಮಾಡಿರೋದಾಗಿದೆ. ಹಿಂದಿನ ಕಾಲದಿಂದಲೂ ಆ ಜಮೀನಿನಲ್ಲಿ ನಾಗಾರಾಧನೆ ನಡೆಯುತ್ತಿತ್ತು. ಹಿಂದೂಗಳ ದಳವಾಯಿ ಕುಟುಂಬಕ್ಕೆ ಸೇರಿದ್ದ ಜಾಗವು, ಭೂ ಮಸೂದೆ ಕಾನೂನಿನ ನಂತ್ರ ಖಾದರ್ ಕುಟುಂಬದ ಹಿರಿಯರಿಗೆ ಬಂದಿತ್ತು.

ಮುಸ್ಲೀಂ ಸಮುದಾಯದಕ್ಕೆ ಜಮೀನು ಹೋದ ನಂತ್ರ, ಮೂಲ ನಾಗಾರಾಧನೆಯ ಸ್ಥಳದಲ್ಲಿ ಪೂಜೆ ಮಾಡದೇ, ಬೇರೆಡೆ ನಾಗಾರಾಧನೆಯಲ್ಲಿ ತೊಡಗಿದ್ದರು. ಆದ್ರೇ ದಳವಾಯಿ ಕುಟುಂಬಕ್ಕೆ ಒಂದಿಲ್ಲೊಂದು ಸಮಸ್ಯೆಗಳು ಕಾಡತೊಡಗಿದ್ದವು. ಆಗ ಅಷ್ಟಮಂಗಲ ಪ್ರಶ್ನೆ ಕೇಳಿದಾಗ ಮೂಲ ಜಾಗದಲ್ಲೇ ನಾಗಾರಾಧನೆ ಮಾಡುವಂತೆ ಉತ್ತರ ಸಿಕ್ಕಿತ್ತು.

ಈ ಬಳಿಕ ಯು.ಟಿ ಖಾದರ್ ಅವರನ್ನು ಭೇಟಿಯಾಗಿದ್ದಂತ ದಳವಾಯಿ ಕುಟುಂಬ, ಮೂಲ ನಾಗಾರಾಧನೆ ಬಿಟ್ಟನಂತ್ರ ತಮಗೆ ಆದಂತ ಸಮಸ್ಯೆ ವಿವರಿಸಿದ್ದರು. ಅಲ್ಲದೇ ನಾಗರಕಟ್ಟೆ ಇರುವಂತ 10 ಸೆಂಟ್ಸ್ ಸ್ಥಳವನ್ನು ಖರೀದಿಗಾದರೂ ಕೊಡಿ. ನಾಗಾರಾಧನೆ ಮುಂದುವರೆಸಿಕೊಂಡು ಹೋಗಲಿದ್ದೇವೆ ಎಂಬುದಾಗಿ ಮನವಿ ಮಾಡಿದ್ದಾರೆ.

ಅವರ ಮನವಿಗೆ ಕೂಡಲೇ ಪ್ರತಿ ಸ್ಪಂದಿಸಿದಂತ ಸ್ಪೀಕರ್ ಯು.ಟಿ ಖಾದರ್ ಅವರು 10 ಸೆಂಟ್ಸ್ ಕೇಳಿದ ಜಮೀನಿನ ಜೊತೆಗೆ 10 ಸೆಂಟ್ಸ್ ಜಮೀನು ಸೇರಿಸಿ ಒಟ್ಟು 20 ಸೆಂಟ್ಸ್ ನಾಗಾರಾಧನೆಯ ಸ್ಥಳವನ್ನು ದಳವಾಯಿ ಕುಟುಂಬಕ್ಕೆ ದಾನವಾಗಿ ನೀಡಿದ್ದಾರೆ. ಈ ಮೂಲಕ ಮುಸ್ಲೀಂ ಸಮುದಾಯಕ್ಕೆ ಸೇರಿದ 12 ಎಕರೆ ಜಮೀನಿನ ಮಧ್ಯದಲ್ಲೇ ನಾಗಾರಾಧನೆ ನಡೆಸೋದಕ್ಕೆ ಜಮೀನು ದಾನ ನೀಡಿ, ಧಾರ್ಮಿಕ ಸಾಮರಸ್ಯತೆಯನ್ನು ಸ್ಪೀಕರ್ ಯು.ಟಿ ಖಾದರ್ ಮೆರೆದಿದ್ದಾರೆ.

Vishwa News 24

Recent Posts

ಎಸ್‌ಐಆರ್‌ ವಿವಾದ: ಬಿಜೆಪಿ ಕಾರ್ಯಕರ್ತರಿಗೆ ಕಿರುಕುಳ ನೀಡಿದರೆ ರಾಜ್ಯಾದ್ಯಂತ ಹೋರಾಟ :ಯಡಿಯೂರಪ್ಪ ಎಚ್ಚರಿಕೆ – vishwanews24

ಬಿಜೆಪಿ ಕಾರ್ಯಕರ್ತರ ಮೇಲಿನ FIR ರದ್ದಿಗೆ ಆಗ್ರಹ : ರಾಜ್ಯಾದ್ಯಂತ ಹೋರಾಟದ ಎಚ್ಚರಿಕೆ ನೀಡಿದ ಬಿಎಸ್‌ವೈ ಬೆಂಗಳೂರು: ಎಸ್‍ಐಆರ್ ಸಂಬಂಧ…

1 day ago

ಮಂಗಳೂರು: ಮನೆ ಕನ್ನ ಕಳವು ಪ್ರಕರಣ ಭೇದಿಸಿದ ಪೊಲೀಸರು; ದೆಹಲಿ ಮೂಲದ ಇಬ್ಬರ ಬಂಧನ – vishwanews24

ಮಂಗಳೂರು: ಮನೆ ಕನ್ನ ಕಳವು ಪ್ರಕರಣ ಭೇದಿಸಿದ ಪೊಲೀಸರು; ದೆಹಲಿ ಮೂಲದ ಇಬ್ಬರ ಬಂಧನ, 18 ಲಕ್ಷ ಮೌಲ್ಯದ ಸೊತ್ತು…

1 day ago

ಏಷ್ಯನ್ ಗೇಮ್ಸ್ : ಕುಸ್ತಿಯಲ್ಲಿ ಚಿನ್ನ ಗೆದ್ದ ಅಮನ್ ಸೆಹ್ರಾವತ್ – vishwanews24

ಏಷ್ಯನ್ ಗೇಮ್ಸ್ : ಕುಸ್ತಿಯಲ್ಲಿ ಚಿನ್ನ ಗೆದ್ದ ಅಮನ್ ಸೆಹ್ರಾವತ್ ನಗೋಯಾ: ಜಪಾನ್‌ನ ಐಚಿ-ನಗೋಯಾದಲ್ಲಿ ನಡೆಯುತ್ತಿರುವ 2026ರ ಏಷ್ಯನ್ ಗೇಮ್ಸ್‌ನಲ್ಲಿ…

1 day ago

ಕಾರ್ಕಳ : ಅ. 5 ರಂದು ರಾಜ್ಯ ಸರ್ಕಾರದ ವಿರುದ್ಧ ಬಿಜೆಪಿಯಿಂದ ಬೃಹತ್ ಪ್ರತಿಭಟನೆ – vishwanews24

ಕಾರ್ಕಳ : ಅ. 05 ರಂದು ರಾಜ್ಯ ಸರ್ಕಾರದ ವಿರುದ್ಧ ಬಿಜೆಪಿಯಿಂದ ಬೃಹತ್ ಪ್ರತಿಭಟನೆ ಕಾರ್ಕಳ: ರಾಜ್ಯ ಕಾಂಗ್ರೆಸ್ ಸರ್ಕಾರದ…

2 days ago

ಮಂಗಳೂರು: ಯುವನಿಧಿ ಫಲಾನುಭವಿಗಳಿಗೆ ಕೌಶಲ ಭಾಗ್ಯ: ಉಚಿತ ತರಬೇತಿ ಮತ್ತು ಉದ್ಯೋಗಾವಕಾಶಕ್ಕಾಗಿ ಅರ್ಜಿ ಆಹ್ವಾನ – vishwanews24

ಮಂಗಳೂರು: ಯುವನಿಧಿ ಫಲಾನುಭವಿಗಳಿಗೆ ಕೌಶಲ ಭಾಗ್ಯ: ಉಚಿತ ತರಬೇತಿ ಮತ್ತು ಉದ್ಯೋಗಾವಕಾಶಕ್ಕಾಗಿ ಅರ್ಜಿ ಆಹ್ವಾನ ಮಂಗಳೂರು: ಕರ್ನಾಟಕ ಸರ್ಕಾರದ ಮಹತ್ವಾಕಾಂಕ್ಷೆಯ…

2 days ago

180 ಜನರ ಪ್ರಾಣ ಉಳಿಸಿದ ಭಾರತೀಯ ಪೈಲಟ್ ಸ್ಮಿತ್ ಮಚ್ಚಾರ್‌ಗೆ 1 ಕೋಟಿ ರೂ. ಘೋಷಣೆ – vishwanews24

180 ಜನರ ಪ್ರಾಣ ಉಳಿಸಿದ ಭಾರತೀಯ ಪೈಲಟ್ ಸ್ಮಿತ್ ಮಚ್ಚಾರ್‌ಗೆ 1 ಕೋಟಿ ರೂ. ಘೋಷಣೆ ನವದೆಹಲಿ : ದುಬೈನಿಂದ…

2 days ago