ಮಂಗಳೂರು: ಮಂಗಳೂರು ಕ್ಷೇತ್ರದಲ್ಲಿ ಸರ್ವಧರ್ಮದ ಜನರು ಸೌಹಾರ್ದದಿಂದ ವಾಸವಾಗಿದ್ದಾರೆ. ಕೆಲವು ಯುವಕರಿಂದಾಗಿ ಕ್ಷೇತ್ರಕ್ಕೆ ಕೆಟ್ಟ ಹೆಸರು ಬಂದಿದೆ. ಬೋಳಿಯಾರ್ ನಡೆದ ಘಟನೆಯ ಬಳಿಕ ಸ್ಥಳೀಯರೆ ಮುಂದೆ ನಿಂತು ಅಲ್ಲಿ ಸೌಹಾರ್ದ ನೆಲೆಸುವಂತೆ ಮಾಡಿದ್ದಾರೆ. ಹೊರಗಿನವರು ಅಲ್ಲಿಗೆ ಹೋಗಿ ಶಾಂತಿ ಕೆಡಿಸುವ ಕೆಲಸ ಮಾಡುವುದು ಬೇಡ ಎಂದು ಕ್ಷೇತ್ರದ ಶಾಸಕ, ವಿಧಾನ ಸಭಾಧ್ಯಕ್ಷ ಯು.ಟಿ. ಖಾದರ್ ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜಕಾರಣ ಮಾಡದೆ ಎಲ್ಲರೂ ನೆಮ್ಮದಿಯಿಂದ ಇರಲು ಅವಕಾಶ ಮಾಡಿಕೊಡಬೇಕು. ಕ್ಷೇತ್ರದ ಶೇ.99ರಷ್ಟು ಒಳ್ಳೆಯವರನ್ನು ನೋಡುವ ಜವಾಬ್ದಾರಿ ನನ್ನದು. ಉಳಿದ ಶೇ.1ರಷ್ಟು ಸಮಸ್ಯೆ ಸೃಷ್ಟಿಸುವವರನ್ನು ಪೊಲೀಸರು ನೋಡಿಕೊಳ್ಳುತ್ತಾರೆ. ಆಸ್ಪತ್ರೆಯಲ್ಲಿದ್ದವರು ಒಳ್ಳೆಯವರಾಗಿದ್ದರೆ ಹೋಗಿ ನೋಡುತ್ತಿದೆ. ಸಮಸ್ಯೆ ಸೃಷ್ಟಿಸುವವರನ್ನು ಹೋಗಿ ಸಂತೈಸುವ ಅಗತ್ಯ ಇಲ್ಲ ಎಂದರು.
ಕ್ಷೇತ್ರದ ಶಾಸಕರು ಕಾಣೆಯಾಗಿದ್ದಾರೆ ಎಂದು ಸಾಮಾಜಿಕ ಜಾಲತಾಣದಲ್ಲಿ ಯಾರೋ ಹರಿಯ ಬಿಟ್ಟಿದ್ದಾರೆ. ಯಾರು ಹಾಕಿದ್ದಾರೆ ಎಂದು ಹೇಳಿದರೆ ನಾನೇ ಅವರಿಗೆ ಐದು ಸಾವಿರ ರೂ. ಕೊಡುತ್ತೇನೆ. ನಾನು ಒಳ್ಳೆಯವರಿಗೆ ಕಾಣುತ್ತೇನೆ. ಸಮಾಜ ವಿರೋಧಿಗಳಿಗೆ ಕಾಣುವುದಿಲ್ಲ ಎಂದು ಖಾದರ್ ಹೇಳಿದರು.
ನಕಲಿ ಔಷಧಿ ಜಾಲದಲ್ಲಿ ದೊಡ್ಡ ದೊಡ್ಡ ಖಾಸಗಿ ಆಸ್ಪತ್ರೆಗಳು , ಮೆಡಿಕಲ್ ಸ್ಟೋರ್‌ಗಳು : ಶೀಘ್ರವೇ ತಪ್ಪಿತಸ್ಥ ಆಸ್ಪತ್ರೆಗಳ ಲಿಸ್ಟ್…
ಉಚ್ಚಿಲ ಮೊಗವೀರ ಭವನದಲ್ಲಿ ಕೀರ್ತಿಶೇಷ ಮಾಧವ ಮಂಗಲ ಪೂಜಾರ್ಯರ ಕಂಚಿನ ಪುತ್ಥಳಿ ಅನಾವರಣ ಉಚ್ಚಿಲ : ಮೊಗವೀರ ಸಮಾಜದ ಗುರು…
ಮೈಸೂರು ದಸರಾದಲ್ಲಿ ಕರಾವಳಿಯ ಕಂಬಳ; ಅ. 18-19ರಂದು ‘ವಿಜಯ ದಶಮಿ’ ಜೋಡುಕರೆ ಕಂಬಳ ಮಂಗಳೂರು: ಮೈಸೂರು ದಸರಾ ಉತ್ಸವದ ಅಂಗವಾಗಿ…
2028ಕ್ಕೂ ಡಿಕೆ ಶಿವಕುಮಾರ್ ಅವರೇ ಮುಖ್ಯಮಂತ್ರಿ ಆಗಲಿ, ಅವರಿಂದಲೇ ಪಕ್ಷ ಅಧಿಕಾರಕ್ಕೆ ಬರಲಿ : ಸತೀಶ್ ಜಾರಕಿಹೊಳಿ ಮೈಸೂರು: 2028ಕ್ಕೂ…
ಶಿರ್ವ, ಉಡುಪಿಯಲ್ಲಿ ಮಾದಕ ವಸ್ತು ಮಾರಾಟ ಪ್ರಕರಣ : ಬಂಧಿತರ ಪೈಕಿ ಹಲವರು ಅಪರಾಧ ಕೃತ್ಯಗಳಲ್ಲಿ ಭಾಗಿ ಉಡುಪಿ: ಉಡುಪಿ…
ಕುಂದಾಪುರ: ಶಾರ್ಜಾದಲ್ಲಿ ಕೊಲೆಯಾದ ಅಲ್ವಿನ್ ಪ್ರಕಾಶ್ ಕುಂದರ್ ಅಂತ್ಯಸಂಸ್ಕಾರ ; ಕುಟುಂಬಸ್ಥರ ಆಕ್ರಂದನ ಕುಂದಾಪುರ: ಶಾರ್ಜಾದಲ್ಲಿ ಅಮಾನುಷವಾಗಿ ಕೊಲೆಯಾದ ಕುಂದಾಪುರ…