Featured

ಮಂಗಳೂರು:  ನಾರಾಯಾಣ ಗುರು ಸ್ತಬ್ಧ ಚಿತ್ರ ವಿವಾದ :  ಸಚಿವ ಸುನೀಲ್‌ ಕುಮಾರ್‌, ಕೋಟ ಶ್ರೀನಿವಾಸ್ ಪೂಜಾರಿ ಕೂಡಲೇ ರಾಜೀನಾಮೆ ನೀಡಬೇಕು : ಐವನ್‌ ಡಿಸೋಜಾ ಆಗ್ರಹ – Vishwanews24

ಮಂಗಳೂರು:  ನಾರಾಯಾಣ ಗುರು ಸ್ತಬ್ಧ ಚಿತ್ರ ವಿವಾದ :  ಸಚಿವ ಸುನೀಲ್‌ ಕುಮಾರ್‌, ಕೋಟ ಶ್ರೀನಿವಾಸ್ ಪೂಜಾರಿ ಕೂಡಲೇ ರಾಜೀನಾಮೆ ನೀಡಬೇಕು : ಐವನ್‌ ಡಿಸೋಜಾ ಆಗ್ರಹ – Vishwanews24

ಮಂಗಳೂರು: ಬ್ರಹ್ಮಶ್ರೀ ನಾರಾಯಾಣ ಗುರುಗಳ ಸ್ತಬ್ಧ ಚಿತ್ರ- ಗಣರಾಜ್ಯೋತ್ಸವ ಪೇರೆಡ್‍ನಲ್ಲಿ ಪ್ರದರ್ಶನಕ್ಕೆ ನಿರಾಕರಣೆ ಬಗ್ಗೆ, ಸುಳ್ಳು ಹೇಳಿಕೆಯನ್ನು ಸಮರ್ಥನೆ ಮಾಡುತ್ತಿರುವ ರಾಜ್ಯ ಸರಕಾರದ ಮಂತ್ರಿ ಸುನಿಲ್ ಕುಮಾರ್ ಮತ್ತು ಕೋಟ ಶ್ರೀನಿವಾಸ್ ಪೂಜಾರಿಯವರು ಕೂಡಲೇ ರಾಜೀನಾಮೆ ನೀಡಬೇಕು ಬ್ರಹ್ಮಶ್ರೀ ನಾರಾಯಾಣ ಗುರುರವರ ತತ್ವ ಸಿದ್ಧಾಂತದ ಮೇಲೆ ನಂಬಿಕೆಯಿಲ್ಲ ಎಂಬುದು ಸ್ಪಷ್ಟಪಡಿಸಿದ ಇವರುಗಳು ಬ್ರಹ್ಮಶ್ರೀ ನಾರಾಯಾಣ ಗುರುಗಳ ಮೂರ್ತಿಯನ್ನು ತೆಗೆದು ಶಂಕರಾಚಾರ್ಯರವರ ಮೂರ್ತಿಯನ್ನು ಅಳವಡಿಸಲು ಕೇಂದ್ರ ಸರಕಾರದ ಟ್ಯಾಬ್ಲೊ ಸಮಿತಿ ಸೂಚಿಸಿದ್ದು, ಯಾವ ಉದ್ದೇಶಕ್ಕಾಗಿ ಎಂಬುವುದನ್ನು ಕೇಂದ್ರ ಸರಕಾರದ ರಕ್ಷಣಾ ಸಚಿವಾಲಯಕ್ಕೆ ಪ್ರಶ್ನೆ ಮಾಡಿ, ಅಲ್ಲಿ ಉಂಟಾದ ಲೋಪವನ್ನು ಸರಿಪಡಿಸುವ ಬದಲು ರಾಜ್ಯಾದ್ಯಾದಂತ ಸುಳ್ಳು ಹೇಳಿ, ಸಮರ್ಥನೆ ಮಾಡುತ್ತಿರುವುದು ತೀರಾ ಖಂಡನೀಯ.

ಇದನ್ನೂ ಓದಿ :

ಮಹಿಳಾ ಸಬಲೀಕರಣಕ್ಕಾಗಿ ಹೆಚ್ಚು ಒತ್ತು ನೀಡಿ ಹೋರಾಟ ನಡೆಸಿದ ಬ್ರಹ್ಮಶ್ರೀ ನಾರಾಯಾಣ ಗುರುಗಳ ಬಗ್ಗೆ ತಯಾರಿಸಿದ ಟ್ಯಾಬ್ಲೊ ಉತ್ತಮವಾಗಿದೆ ಎಂದು ಸಮಿತಿ ಹೇಳಿಕೊಂಡಿದ್ದರೂ, ಆ ಟ್ಯಾಬ್ಲೊದಲ್ಲಿ ಇದ್ದ ಬ್ರಹ್ಮಶ್ರೀ ನಾರಾಯಾಣ ಗುರುಗಳ ಮೂರ್ತಿಯನ್ನು ಬದಲಾಯಿಸಿ, ಶಂಕರಾಚಾರ್ಯರವರ ಮೂರ್ತಿಯನ್ನು ಹಾಕುವಂತೆ ಅಧಿಕಾರಿಶಾಹಿಗಳು ನಿರ್ದೇಶನ ನೀಡಿದ್ದರ ಹಿಂದೆ ಇರುವ ಷಡ್ಯಂತರವನ್ನು ಸಚಿವರುಗಳು ಬಯಲುಗೊಳಿಸಬೇಕು ಮತ್ತು ಅದನ್ನು ಸರಿಪಡಿಸಿ, ಅನುಷ್ಠಾನಗೊಳಿಸುವುದರ ಬೇಕೆ ಹೊರತು ಅದನ್ನು ಸಮರ್ಥಿಸುವ ಮೂಲಕ ಬ್ರಹ್ಮಶ್ರೀ ನಾರಾಯಾಣ ಗುರುಗಳ ಅನುಯಾಯಿಗಳಿಗೆ, ಪ್ರಪಂಚದ್ಯಾದಂತ ಇರುವ ಸಮಸ್ತರಿಗೆ ನೋವು ಉಂಟಾಗಿರುವುದನ್ನು ಪ್ರತಿಭಟಿಸಿದರೆ, ಅದನ್ನು ರಾಜಕೀಯ ಷಡ್ಯಂತರ ಎಂದು ಟೀಕಿಸುವ ಮಂತ್ರಿಗಳಿಗೆ ಮತ್ತು ಬಿಜೆಪಿ ಜಿಲ್ಲಾಧ್ಯಕ್ಷರಿಗೆ ಬ್ರಹ್ಮಶ್ರೀ ನಾರಾಯಾಣ ಗುರುಗಳ ಹೆಸರು ಬಳಸಿ, ಅವರ ಅನುಯಾಯಿಗಳ ಸಿದ್ಧಾಂತದ ಪ್ರಯೋಜನ ಪಡೆದು, ಮಂತ್ರಿಗಳು ಆಗಿರುವ ನಿಮಗೆ “ಅನ್ಯಾಯದ ವಿರುದ್ಧ ಧ್ವನಿಯೆತ್ತಲು ಅಸಮರ್ಥರಾದ ನೀವುಗಳು ಮಂತ್ರಿ ಸ್ಥಾನದಲ್ಲಿರಲು ಯೋಗ್ಯರಲ್ಲ, ಕೂಡಲೇ ರಾಜೀನಾಮೆ ನೀಡಿ, ಬ್ರಹ್ಮಶ್ರೀ ನಾರಾಯಾಣ ಗುರುಗಳ ಪರವಾಗಿ ನಿಲ್ಲಿ” ಎಂದು ಮಾಜಿ ಶಾಸಕ ಮತ್ತು ಎಐಸಿಸಿ ಕಾರ್ಯದರ್ಶಿ ಶ್ರೀ ಐವನ್ ಡಿ ಸೋಜರವರು ಪತ್ರಿಕಾ ಗೋಷ್ಠಿಯಲ್ಲಿ ಸವಾಲು ಹಾಕಿದ್ದಾರೆ.

ಇದನ್ನೂ ಓದಿ :

ರಾಜ್ಯದ ಕನ್ನಡ ಮತ್ತು ಸಂಸ್ಕೃತ ಸಚಿವರಾದ ಸುನಿಲ್ ಕುಮಾರ್ ಇವರು ಜನರಿಗೆ ಸುಳ್ಳು ಹೇಳಿ, ಬ್ರಹ್ಮಶ್ರೀ ನಾರಾಯಾಣ ಗುರುಗಳನ್ನು ಅವಮಾನಿಸುತ್ತಿರುವುದು ಖೇದಕರ. ಬದಲಾಗಿ ರಕ್ಷಣ ಸಚಿವರುಗಳ ಬಳಿ ಉಂಟಾದ ತಪ್ಪನ್ನು ಸರಿಪಡಿಸಲು ಧೈರ್ಯ ವಿಲ್ಲ ಎಂಬುವುದನ್ನು ಸ್ಪಷ್ಟಪಡಿಸಿದೆ.

ಕರ್ನಾಟಕದಲ್ಲಿ 13 ವರ್ಷಗಳಿಂದ ನಿರಂತರವಾಗಿ ರಾಜ್ಯದ ಟ್ಯಾಬ್ಲೊ, ಗಣರಾಜ್ಯೋತ್ಸವದ ಪೇರೆಡಿನಲ್ಲಿ ಭಾಗವಹಿಸುತ್ತಿದೆ. ರಾಜ್ಯದ ಸಚಿವರುಗಳು ಒಂದೊಂದು ಹೇಳಿಕೆ ನೀಡುವ ಮೂಲಕ ಸುಳ್ಳು ಹೇಳಿ, ಸಮರ್ಥನೆ ಮಾಡಿಕೊಳ್ಳುತ್ತಿದ್ದಾರೆ. ಅದರ ಬದಲು ಉಂಟಾದ ತಪ್ಪನ್ನು ಸರಿಪಡಿಸಿ, ಗಣರಾಜ್ಯೋತ್ಸವದ ಟ್ಯಾಬ್ಲೊನಲ್ಲಿ ಬ್ರಹ್ಮಶ್ರೀ ನಾರಾಯಾಣ ಗುರುಗಳ ಸ್ತಬ್ಧ ಚಿತ್ರದ ಟ್ಯಾಬ್ಲೊವನ್ನು ಪ್ರದರ್ಶಿಸಲು ಕೂಡಲೇ ಕ್ರಮ ಕೈಗೊಳ್ಳಬೇಕು. 25 ಮಂದಿ ಲೋಕಸಭಾ ಸದಸ್ಯರುಗಳು, ಕೇಂದ್ರದ ಮಂತ್ರಿಗಳು ಮತ್ತು ರಾಜ್ಯ ಸರಕಾರ ಬಿಜೆಪಿ ಇದ್ದು, ಬ್ರಹ್ಮಶ್ರೀ ನಾರಾಯಾಣ ಗುರುಗಳಿಗೆ ಅವಮಾನ ಆದಾಗ, ಅದನ್ನು ಸರಿಪಡಿಸುವ ರಾಜಕೀಯ ಇಚ್ಛಾಸಕ್ತಿ ಇಲ್ಲದ ಸರಕಾರವು ಯಾವ ಪುರುಷಾರ್ಥಾಕ್ಕಾಗಿ? ಬದಲಾಗಿ, ಜನಗಳ ಮಧ್ಯದಲ್ಲಿ ದ್ವೇಷ ಹೆಚ್ಚಿಸಲು ಬ್ರಹ್ಮಶ್ರೀ ನಾರಾಯಾಣ ಗುರುಗಳ ತತ್ವಗಳಿಗೆ ಸೈತಾಂತಿಕವಾಗಿ ವಿರೋಧ ವ್ಯಕ್ತಪಡಿಸಿದ ಬಿಜೆಪಿ ಆಡಳಿತಕ್ಕೆ ಮುಂದಿನ ದಿನಗಳಲ್ಲಿ ಗಂಡಾಂತರ ಕಾಯುತ್ತಿದೆ ಎಂದು ಐವನ್ ಡಿ ಸೋಜರವರು ತಿಳಿಸಿದ್ದಾರೆ.

ಇದನ್ನೂ ಓದಿ :

Vishwa News 24

Recent Posts

ನಕಲಿ ಔಷಧಿ ಜಾಲದಲ್ಲಿ ದೊಡ್ಡ ದೊಡ್ಡ ಖಾಸಗಿ ಆಸ್ಪತ್ರೆಗಳು , ಮೆಡಿಕಲ್ ಸ್ಟೋರ್‌ಗಳು: ಯು.ಟಿ.ಖಾದರ್ – vishwanews24

ನಕಲಿ ಔಷಧಿ ಜಾಲದಲ್ಲಿ ದೊಡ್ಡ ದೊಡ್ಡ ಖಾಸಗಿ ಆಸ್ಪತ್ರೆಗಳು ,  ಮೆಡಿಕಲ್ ಸ್ಟೋರ್‌ಗಳು : ಶೀಘ್ರವೇ ತಪ್ಪಿತಸ್ಥ ಆಸ್ಪತ್ರೆಗಳ ಲಿಸ್ಟ್…

4 days ago

ಉಚ್ಚಿಲ : ಮೊಗವೀರ ಕುಲಗುರು ಕೀರ್ತಿಶೇಷ ಶ್ರೀ ಮಾಧವ ಮಂಗಲ ಪೂಜಾರ್ಯರ ಕಂಚಿನ ಪುತ್ಥಳಿ ಅನಾವರಣ – vishwanews24

ಉಚ್ಚಿಲ ಮೊಗವೀರ ಭವನದಲ್ಲಿ ಕೀರ್ತಿಶೇಷ ಮಾಧವ ಮಂಗಲ ಪೂಜಾರ್ಯರ ಕಂಚಿನ ಪುತ್ಥಳಿ ಅನಾವರಣ ಉಚ್ಚಿಲ : ಮೊಗವೀರ ಸಮಾಜದ ಗುರು…

4 days ago

ಮೈಸೂರು ದಸರಾದಲ್ಲಿ ಕರಾವಳಿಯ ಕಂಬಳ : ಅ. 18-19ರಂದು ವಿಜಯ ದಶಮಿ ಕರೆಯಲ್ಲಿ ಜೋಡುಕರೆ ಕಂಬಳ – vishwanews24

ಮೈಸೂರು ದಸರಾದಲ್ಲಿ ಕರಾವಳಿಯ ಕಂಬಳ; ಅ. 18-19ರಂದು ‘ವಿಜಯ ದಶಮಿ’ ಜೋಡುಕರೆ ಕಂಬಳ ಮಂಗಳೂರು: ಮೈಸೂರು ದಸರಾ ಉತ್ಸವದ ಅಂಗವಾಗಿ…

4 days ago

2028ಕ್ಕೂ ಡಿಕೆ ಶಿವಕುಮಾರ್‌ ಅವರೇ ಮುಖ್ಯಮಂತ್ರಿ ಆಗಲಿ, ಅವರಿಂದಲೇ ಪಕ್ಷ ಅಧಿಕಾರಕ್ಕೆ ಬರಲಿ : ಸತೀಶ್ ಜಾರಕಿಹೊಳಿ – vishwanews24

2028ಕ್ಕೂ ಡಿಕೆ ಶಿವಕುಮಾರ್‌ ಅವರೇ ಮುಖ್ಯಮಂತ್ರಿ ಆಗಲಿ, ಅವರಿಂದಲೇ ಪಕ್ಷ ಅಧಿಕಾರಕ್ಕೆ ಬರಲಿ : ಸತೀಶ್ ಜಾರಕಿಹೊಳಿ ಮೈಸೂರು: 2028ಕ್ಕೂ…

4 days ago

ಶಿರ್ವ, ಉಡುಪಿಯಲ್ಲಿ ಮಾದಕ ವಸ್ತು ಮಾರಾಟ ಪ್ರಕರಣ : ಬಂಧಿತರ ಪೈಕಿ ಹಲವರು ಅಪರಾಧ ಕೃತ್ಯಗಳಲ್ಲಿ ಭಾಗಿ – vishwanews24

ಶಿರ್ವ, ಉಡುಪಿಯಲ್ಲಿ ಮಾದಕ ವಸ್ತು ಮಾರಾಟ ಪ್ರಕರಣ : ಬಂಧಿತರ ಪೈಕಿ ಹಲವರು ಅಪರಾಧ ಕೃತ್ಯಗಳಲ್ಲಿ ಭಾಗಿ ಉಡುಪಿ: ಉಡುಪಿ…

4 days ago

ಕುಂದಾಪುರ:  ಶಾರ್ಜಾದಲ್ಲಿ ಕೊಲೆಯಾದ ಅಲ್ವಿನ್ ಪ್ರಕಾಶ್ ಕುಂದರ್ ಅಂತ್ಯಸಂಸ್ಕಾರ ; ಕುಟುಂಬಸ್ಥರ ಆಕ್ರಂದನ – vishwanews24

ಕುಂದಾಪುರ:  ಶಾರ್ಜಾದಲ್ಲಿ ಕೊಲೆಯಾದ ಅಲ್ವಿನ್ ಪ್ರಕಾಶ್ ಕುಂದರ್ ಅಂತ್ಯಸಂಸ್ಕಾರ ; ಕುಟುಂಬಸ್ಥರ ಆಕ್ರಂದನ ಕುಂದಾಪುರ: ಶಾರ್ಜಾದಲ್ಲಿ ಅಮಾನುಷವಾಗಿ ಕೊಲೆಯಾದ ಕುಂದಾಪುರ…

4 days ago