Featured

ಮಂಗಳೂರು ನೈಋತ್ಯ ವಲಯ ಸೇರ್ಪಡೆ ; ಶೀಘ್ರ ಸಂಭ್ರಮೋತ್ಸವ: ಸತೀಶ್‌ ಕುಂಪಲ – vishwanews24

ಮಂಗಳೂರು ನೈಋತ್ಯ ವಲಯ ಸೇರ್ಪಡೆ ; ಶೀಘ್ರ ಸಂಭ್ರಮೋತ್ಸವ: ಸತೀಶ್‌ ಕುಂಪಲ

ಮಂಗಳೂರು : ರೈಲ್ವೇ ಪ್ರದೇಶವನ್ನು ನೈಋತ್ಯ ವಲಯಕ್ಕೆ ಸೇರ್ಪಡೆ ಮಾಡಿರುವ ಹಿನ್ನೆಲೆಯಲ್ಲಿ ಶೀಘ್ರವೇ ಸಂಭ್ರಮ ಆಚರಣೆಯ ಸಾರ್ವಜನಿಕ ಕಾರ್ಯಕ್ರಮ ಆಯೋಜಿಸಲಾಗುವುದು ಎಂದು ದ. ಕ. ಜಿಲ್ಲಾ ಬಿಜೆಪಿ ಅಧ್ಯಕ್ಷ ಸತೀಶ್ ಕುಂಪಲ ಹೇಳಿದರು.

ನಗರದ ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಕುರಿತು ಕೇಂದ್ರ ಸಚಿವ ಸೋಮಣ್ಣ ಅವರೊಂದಿಗೆ ಮಾತುಕತೆ ನಡೆಸಲಾಗಿದ್ದು, ಅವರ ಲಭ್ಯತೆ ಆಧರಿಸಿ ಕಾರ್ಯಕ್ರಮ ಆಯೋಜಿಸಲಾಗುವುದು ಎಂದರು.

ಇದನ್ನೂ ಓದಿ:

ಸಚಿವ ವಿ. ಸೋಮಣ್ಣ, ಸಂಸದ ಕ್ಯಾ | ಬ್ರಿಜೇಶ್ ಚೌಟ ಹಾಗೂ ದ. ಕ.ದ ಹಿಂದಿನ ಸಂಸದರು ಈ ಬಗ್ಗೆ ಬಹಳಷ್ಟು ಶ್ರಮಪಟ್ಟಿದ್ದಾರೆ. ಕೇಂದ್ರ ಸರಕಾರದ ನಿರ್ಧಾರವು ಜಿಲ್ಲೆಯ ಅಭಿವೃದ್ಧಿಗೆ ಪೂರಕವಾಗಿದೆ. ಕೇರಳದ ಬಿಜೆಪಿ ನಾಯಕ ರಾಜೀವ್ ಚಂದ್ರಶೇಖರ್ ಅವರೂ ಈ ನಿರ್ಧಾರದಿಂದ ಕೇರಳಕ್ಕೆ ತೊಂದರೆಯಾಗುವುದಿಲ್ಲ ಮತ್ತು ಕರ್ನಾಟಕಕ್ಕೆ ನ್ಯಾಯ ಸಿಕ್ಕಿದೆ ಎಂದು ಸ್ಪಷ್ಟಪಡಿಸಿದ್ದಾರೆ. ಆದರೆ, ಸ್ಥಳೀಯ ಕಾಂಗ್ರೆಸ್ ನಾಯಕರು ಬೆಂಬಲಿಸಿಲ್ಲ ಎಂದರು.

ರೈಲುಗಳು ಮಂಗಳೂರು ಸೆಂಟ್ರಲ್ ಬದಲಿಗೆ ಪಡೀಲ್ ಮಾರ್ಗವಾಗಿ ಸಂಚರಿ ಸಿದರೆ ಸುಮಾರು ಒಂದೂ ವರೆ ಗಂಟೆ ಸಮಯ ಉಳಿತಾಯ ಆಗಲಿದ್ದು, ಉಡುಪಿ ಹಾಗೂ ಉತ್ತರ ಕನ್ನಡ ಜಿಲ್ಲೆಯ ಪ್ರಯಾಣಿಕರಿಗೆ ಹೆಚ್ಚಿನ ಅನುಕೂಲವಾಗಲಿದೆ. ಈ ಬಗ್ಗೆ ಉಡುಪಿ ಹಾಗೂ ದ.ಕ.ದ ಸಂಸದರ ಮಟ್ಟದಲ್ಲಿರುವ ಸಣ್ಣಪುಟ್ಟ ಅಭಿಪ್ರಾಯ ಭಿನ್ನತೆಗಳನ್ನು ಶೀಘ್ರವೇ ಬಗೆಹರಿಸಲಾಗುವುದು ಎಂದರು.

ಇದನ್ನೂ ಓದಿ:

ಪರಿಷತ್ ಸದಸ್ಯ ಕಿಶೋರ್ ಕುಮಾರ್ ಪುತ್ತೂರು, ಪ್ರಮುಖರಾದ ಯತೀಶ್ ಅರ್ವಾರ್, ಪ್ರೇಮಾನಂದ ಶೆಟ್ಟಿ, ಸಂಜಯ್ ಪ್ರಭು ಮೊದಲಾದವರಿದ್ದರು.

Vishwa News 24

Recent Posts

ನೇಪಾಳ ಭೀಕರ ಪ್ರವಾಹ : 5 ಲಕ್ಷ ಡಾಲರ್‌ಗಳ ತುರ್ತು ನೆರವು ಘೋಷಿಸಿದ ಅಮೆರಿಕ – vishwanews24

ನೇಪಾಳ ಭೀಕರ ಪ್ರವಾಹ : 5 ಲಕ್ಷ ಡಾಲರ್‌ಗಳ ತುರ್ತು ನೆರವು ಘೋಷಿಸಿದ ಅಮೆರಿಕ ಕಠ್ಮಂಡು: ನೇಪಾಳದ ಭೋಟೆ ಕೋಶಿ…

7 minutes ago

ಶಿರ್ವ : ಹುಚ್ಚುನಾಯಿ ಹಾವಳಿ ; ಹಲವರಿಗೆ ಕಡಿತ , ಸ್ಥಳೀಯರಲ್ಲಿ ಆತಂಕ – vishwanews24

ಶಿರ್ವ : ಹುಚ್ಚುನಾಯಿ ಹಾವಳಿ ; ಹಲವರಿಗೆ ಕಡಿತ , ಸ್ಥಳೀಯರಲ್ಲಿ ಆತಂಕ ಶಿರ್ವ: ಶಿರ್ವ ಮತ್ತು ಕುತ್ಯಾರು ಗ್ರಾ.ಪಂ.…

34 minutes ago

ಗ್ಯಾಸ್ ಏಜೆನ್ಸಿಗಳಿಂದ ಎಲ್‌ಪಿಜಿ ಪೂರೈಕೆ: ನೆಟ್‌ವರ್ಕ್ ಇಲ್ಲದ ಕಡೆ ಒಟಿಪಿ ರಿಯಾಯಿತಿ : ಕೋಟ ಶ್ರೀನಿವಾಸ ಪೂಜಾರಿ – vishwanews24

ಗ್ಯಾಸ್ ಏಜೆನ್ಸಿಗಳಿಂದ ಎಲ್‌ಪಿಜಿ ಪೂರೈಕೆ: ನೆಟ್‌ವರ್ಕ್ ಇಲ್ಲದ ಕಡೆ ಒಟಿಪಿ ರಿಯಾಯಿತಿ : ಕೋಟ ಶ್ರೀನಿವಾಸ ಪೂಜಾರಿ ಮಣಿಪಾಲ: ನೆಟ್‌ವರ್ಕ್‌…

44 minutes ago

ಕಟಪಾಡಿ:  ಮಟ್ಟು ಬೀಚ್‌ನಲ್ಲಿ ತೀವ್ರಗೊಂಡ ಕಡಲ್ಕೊರೆತ : ತುರ್ತು  ಸುರಕ್ಷ ಕಾಮಗಾರಿ ಆರಂಭ – vishwanews24

ಕಟಪಾಡಿ:  ಮಟ್ಟು ಬೀಚ್‌ನಲ್ಲಿ ತೀವ್ರಗೊಂಡ ಕಡಲ್ಕೊರೆತ : ತುರ್ತು  ಸುರಕ್ಷ ಕಾಮಗಾರಿ ಆರಂಭ ಕಟಪಾಡಿ: ಕಾಪು ತಾಲೂಕು ಕೋಟೆ ಗ್ರಾ.…

54 minutes ago

ನೇಪಾಳ ಪ್ರವಾಹ: ನಾಪತ್ತೆಯಾದ ಕನ್ನಡಿಗರ ಮಾಹಿತಿ ನೀಡಲು ಸರ್ಕಾರ ಮನವಿ – vishwanews24

ನೇಪಾಳ ಪ್ರವಾಹ: ನಾಪತ್ತೆಯಾದ ಕನ್ನಡಿಗರ ಮಾಹಿತಿ ನೀಡಲು ಸರ್ಕಾರ ಮನವಿ ಬೆಂಗಳೂರು: ನೇಪಾಳದಲ್ಲಿ ಸಂಭವಿಸಿದ ಪ್ರಕೃತಿ ವಿಕೋಪ ಹಾಗೂ ದಿಢೀರ್…

1 hour ago

ಈ ಬಾರಿಯ ದಸರಾದಲ್ಲಿ ಕಂಬಳ ಇರುತ್ತದೆ: ಯತೀಂದ್ರ – vishwanews24

ಈ ಬಾರಿಯ ದಸರಾದಲ್ಲಿ ಕಂಬಳ ಇರುತ್ತದೆ: ಯತೀಂದ್ರ ಮೈಸೂರು: ಈ ಬಾರಿಯ ದಸರಾದಲ್ಲಿ ಕಂಬಳ ಇರುತ್ತದೆ ಎಂದು ಸಚಿವ ಡಾ.…

1 hour ago