Featured

ಮಂಗಳೂರು : ಪಕ್ಷ ನಿಂತ ನೀರಾಗಬಾರದು, ಹೊಸಬರು ಬರ್ತಾ ಇರಬೇಕು, ಅದನ್ನು ಸ್ವಾಗತಿಸ್ತೇನೆ : ಕಟೀಲ್ ಭಾವುಕ – Vishwanews24

ಮಂಗಳೂರು: ಪಕ್ಷದ ನಾಯಕರು ಗುಡಿಸಿ ಅಂದ್ರೆ ಗುಡಿಸ್ತೇವೆ, ಒರೆಸಿ ಅಂದ್ರೆ ಒರೆಸ್ತೇವೆ.ಅಧಿಕಾರ ಪ್ರಮುಖ ಅಲ್ಲ ..

ಅವಕಾಶ ಸಿಕ್ಕಾಗ ನ್ಯಾಯ ಸಿಕ್ಕಿದೆ, ಸಿಗದೇ ಇದ್ದಾಗ ಅನ್ಯಾಯ ಆಗಿದೆ ಅನ್ನೋ ಹಕ್ಕು ನನಗಿಲ್ಲ..

ಪಕ್ಷದ ರಾಷ್ಟ್ರೀಯ ನಾಯಕರ ನಿರ್ಧಾರಕ್ಕೆ ನಾವು ಬದ್ದ ..

ಮೋದಿ ಪ್ರಧಾನಿಯಾಗಬೇಕು, ಬಿಜೆಪಿ ಮತ್ತೆ ಗೆಲ್ಲಬೇಕು..

ಮಂಗಳೂರು: ಸಾಮಾನ್ಯ ಕಾರ್ಯಕರ್ತರನ್ನ ಗುರುತಿಸೋದು ನಮ್ಮ ಪಾರ್ಟಿಯ ವಿಶೇಷತೆ ಪಕ್ಷದ ರಾಷ್ಟ್ರೀಯ ನಾಯಕರು ಯೋಚನೆ ಮಾಡಿಕೊಂಡು ಆಯ್ಕೆ ಮಾಡ್ತಾರೆ. ರಾಷ್ಟ್ರೀಯ ನಾಯಕರ ಯೋಚನೆಗೆ ನಾವು ಬದ್ದರಾಗಿ ಕೆಲಸ ಮಾಡ್ತೇವೆ ಎಂದು ಸಂಸದ ನಳಿನ್ ಕುಮಾರ್ ಕಟೀಲ್ ಭಾವುಕರಾಗಿ ಅಚ್ಚರಿ ಹೇಳಿಕೆ ನೀಡಿದ್ದಾರೆ.

ಅವರು ಬಿಜೆಪಿ ಟಿಕೆಟ್ ಕೈ ತಪ್ಪೋ ಸಾಧ್ಯತೆ ವಿಚಾರಕ್ಕೆ ಪ್ರತಿಕ್ರಿಯಿಸಿ, ಪಕ್ಷ ನಿಂತ ನೀರಾಗಬಾರದು, ಹೊಸಬರು ಬರ್ತಾ ಇರಬೇಕು, ಅದನ್ನು ಸ್ವಾಗತಿಸ್ತೇನೆ. ಪಕ್ಷದ ರಾಷ್ಟ್ರೀಯ ನಾಯಕರ ನಿರ್ಧಾರಕ್ಕೆ ನಾವು ಬದ್ದರಾಗಿದ್ದೇವೆ. ಯಾರೇ ಆದರೂ ಮೋದಿ ಪ್ರಧಾನಿಯಾಗಬೇಕು, ಬಿಜೆಪಿ ಮತ್ತೆ ಗೆಲ್ಲಬೇಕು .ರಾಷ್ಟ್ರೀಯ ನಾಯಕರ ಯೋಚನೆಗೆ ನಾವು ಬದ್ದರಾಗಿ ಕೆಲಸ ಮಾಡ್ತೇವೆ. ಪಾರ್ಟಿ ಏನು ಹೇಳುತ್ತೋ ಅದನ್ನ ನಾವು ಮಾಡ್ತೇವೆ ಎಂದು ಹೇಳಿದರು.

ಗುಡಿಸಿ ಅಂದ್ರೆ ಗುಡಿಸ್ತೇವೆ, ಒರೆಸಿ ಅಂದ್ರೆ ಒರೆಸ್ತೇವೆ.ಅಧಿಕಾರ ಪ್ರಮುಖ ಅಲ್ಲ, ರಾಷ್ಟ್ರೀಯ ನಾಯಕರ ಚಿಂತನೆ ಮುಖ್ಯ ನಾನು ಸಾಮಾಜಿಕ ತಾಣಗಳ ಬಗ್ಗೆ ತಲೆ ಕೆಡಿಸಿಕೊಳ್ಳಲ್ಲ, ಪಕ್ಷದ ನಿರ್ಧಾರಕ್ಕೆ ಬದ್ದ ನಾವು ಅದನ್ನೇ ನಂಬಿ ಇದ್ದವರಲ್ಲ, ಸಂಘಟನೆ ಕಾರ್ಯವನ್ನು ನಂಬಿದವರು ಕಾರ್ಯಕರ್ತರ ಆಧಾರದಲ್ಲಿ ಇದೆಲ್ಲಾ ಕಾರ್ಯಗಳು ಆಗುತ್ತದೆ. ರಾಷ್ಟ್ರೀಯ ನಾಯಕರ ಯಾವ ತೀರ್ಮಾನಕ್ಕೂ ನಾವು ಬದ್ದ ಎಂದರು.

ನನಗೆ ಮೂರು ಬಾರಿ ಅವಕಾಶ ಕೊಡಲಾಗಿದೆ, 15 ವರ್ಷ ಕೆಲಸ ಮಾಡಿದ್ದೇನೆ. ಎಲ್ಲೂ ವ್ಯತ್ಯಾಸಗಳಿಲ್ಲ, ನಮ್ಮ ಪಕ್ಷದಲ್ಲಿ ತುಳಿಯೋ ಕೆಲಸ ನಡೆಯಲ್ಲ, ಬೆಳೆಸೋ ಕೆಲಸ ಮಾಡ್ತಾರೆ. ನಾನು ಸಾಮಾನ್ಯ ಕಾರ್ಯಕರ್ತನಾಗಿದ್ದೆ, ಸಂಘದ ವಿಚಾರ ಇಟ್ಟುಕೊಂಡಿದ್ದೆ.ಬಿಜೆಪಿ ಕೆಲಸ ಮಾಡು ಅಂತ ಹೇಳಿದ್ರು, ಲೋಕಸಭೆಗೆ ನಿಂತೆ ಸಾಮಾನ್ಯ ಕಾರ್ಯಕರ್ತನಿಗೆ ರಾಜ್ಯಾಧ್ಯಕ್ಷ ಸ್ಥಾನ ಕೂಡ ಕೊಟ್ಟರು.ಅವಕಾಶ ಸಿಕ್ಕಾಗ ನ್ಯಾಯ ಸಿಕ್ಕಿದೆ, ಸಿಗದೇ ಇದ್ದಾಗ ಅನ್ಯಾಯ ಆಗಿದೆ ಅನ್ನೋ ಹಕ್ಕು ನನಗಿಲ್ಲ ಎಂದು ನುಡಿದರು.

ಪಕ್ಷ ಎಲ್ಲರನ್ನೂ ಬೆಳೆಸಿದೆ, ಪಕ್ಷದ ಕೆಲಸಕ್ಕೆ ಜನ ಬೇಕಿದೆ ಅಸಮಾಧಾನ ಯಾಕೆ? ನಾವು ಮಾಡೋದು ಸಂಘಟನೆ ಕಾರ್ಯ ಅಸಮಾಧಾನ ಯಾವುದೇ ಸಂಧರ್ಭದಲ್ಲಿ ಇರಲ್ಲ, ಅದು ಅಸಾಧ್ಯ ಎಂದರು.

Vishwa News 24

Recent Posts

ಉಡುಪಿ ಮಲಬಾರ್ ಗೋಲ್ಡ್‌ನಲ್ಲಿ ಹಫೀಝ್ ರೆಹಮಾನ್‌ಗೆ ಬೀಳ್ಕೊಡುಗೆ -vishwanews24

ಉಡುಪಿ ಮಲಬಾರ್ ಗೋಲ್ಡ್‌ನಲ್ಲಿ ಹಫೀಝ್ ರೆಹಮಾನ್‌ಗೆ ಬೀಳ್ಕೊಡುಗೆ ಉಡುಪಿ : ಉಡುಪಿ ಮಲಬಾರ್ ಗೋಲ್ಡ್ ಆಂಡ್ ಡೈಮಂಡ್ಸ್ ಶಾಖೆಯಲ್ಲಿ ಕಳೆದ…

5 days ago

ದೋಣಿ ಮುಗುಚಿ ಇಬ್ಬರು ಯುವಕರು ನೀರುಪಾಲು : ಓರ್ವನ ಮೃತದೇಹ ಪತ್ತೆ, ಇನ್ನೋರ್ವನಿಗಾಗಿ ಶೋಧ – vishwanews24

ಫಲ್ಗುಣಿ ನದಿಯಲ್ಲಿ ಮಗುಚಿ ಬಿದ್ದ ದೋಣಿ: ಇಬ್ಬರು ಯುವಕರು ನೀರುಪಾಲು  ಮೀನುಗಾರಿಕೆಗೆ ತೆರಳಿದ್ದಾಗ ಆಕಸ್ಮಿಕವಾಗಿ ದೋಣಿ ಮುಗುಚಿ ಇಬ್ಬರು ಯುವಕರು…

6 days ago

ಬಿಜೆಪಿ ಬೆಂಬಲಿಸುವವರೂ ನಮ್ಮ ಗ್ಯಾರಂಟಿಗಳ ಫಲಾನುಭವಿಗಳು : ಸಿದ್ದರಾಮಯ್ಯ – vishwanews24

 ನಮ್ಮದು ಪಕ್ಷಾತೀತ ಅಭಿವೃದ್ಧಿಪರ ಸರ್ಕಾರ.. ದಲಿತರಿಗೆ ಮೀಸಲಾತಿ ತಂದವರು ನಾವು .. ರಾಜ್ಯದಲ್ಲಿ ಬಿಜೆಪಿ ಸ್ವಂತ ಬಲದಿಂದ ಯಾವತ್ತೂ ಅಧಿಕಾರಕ್ಕೆ…

6 days ago

ಕಾಪು : 94/ಸಿಯಡಿ ಹಕ್ಕುಪತ್ರ ; ಉಚಿತ ಉಪಕರಣಗಳ ವಿತರಣೆ – vishwanews24

ಕಾಪು : 94/ಸಿಯಡಿ ಹಕ್ಕುಪತ್ರ ; ಉಚಿತ ಉಪಕರಣಗಳ ವಿತರಣೆ ಕಾಪು : ವಿಧಾನಸಭಾ ಕ್ಷೇತ್ರದ ಕಾಪು ತಾಲ್ಲೂಕು ವ್ಯಾಪ್ತಿಯ…

6 days ago

ರೈಲು ಪ್ರಯಾಣಿಕರ ಗಮನಕ್ಕೆ: ಇಂದಿನಿಂದ ಬುಕ್ಕಿಂಗ್ ಮತ್ತು ರದ್ದತಿ  ನಿಯಮದಲ್ಲಿ ಭಾರಿ ಬದಲಾವಣೆ ; ಇಲ್ಲಿದೆ ಪೂರ್ಣ ಮಾಹಿತಿ – vishwanews24

ರೈಲ್ವೆ ಇಲಾಖೆಯ 5 ಹೊಸ ನಿಯಮ ಜಾರಿ: ತತ್ಕಾಲ್ ಬುಕಿಂಗ್‌ಗೆ ಆಧಾರ್ ಕಡ್ಡಾಯ; ರೀಫಂಡ್ ನಿಯಮ ಹೇಗಿದೆ? ರೈಲ್ವೆ ಇಲಾಖೆಯ…

6 days ago

ಉಡುಪಿ:  ಯುವ‌ ಪತ್ರಕರ್ತ ಪ್ರಶಾಂತ ಪಾದೆಗೆ ‘ಮಂಡಿಬೆಲೆ ಶಾಮಣ್ಣ ಸ್ಮಾರಕ ಪ್ರಶಸ್ತಿ’ – vishwanews24

ಉಡುಪಿ:  ಯುವ‌ ಪತ್ರಕರ್ತ ಪ್ರಶಾಂತ ಪಾದೆಗೆ ‘ಮಂಡಿಬೆಲೆ ಶಾಮಣ್ಣ ಸ್ಮಾರಕ ಪ್ರಶಸ್ತಿ’ ಉಡುಪಿ: ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ(ಕೆಯುಡಬ್ಲೂಜೆ)ದ 2024ನೇ…

6 days ago