Featured

ಮಂಗಳೂರು: ಪಾರ್ಟ್ ಟೈಮ್ ಜಾಬ್‌ ಆಮಿಷ : ಲಿಂಕ್ ಕಳುಹಿಸಿ  5.31 ಲಕ್ಷ ರೂ. ವಂಚನೆ – Vishwanews24

ಮಂಗಳೂರು: ಪಾರ್ಟ್ ಟೈಮ್ ಜಾಬ್‌ ಆಮಿಷ : ಲಿಂಕ್ ಕಳುಹಿಸಿ  5.31 ಲಕ್ಷ ರೂ. ವಂಚನೆ

ಮಂಗಳೂರು : ಪಾರ್ಟ್ ಟೈಮ್ ಜಾಬ್‌ ಆಯ್ಕೆಯಾಗಿರುವುದಾಗಿ ಅಪರಿಚಿತನಿಂದ ಬಂದ ಸಂದೇಶಕ್ಕೆ ಸ್ಪಂದಿಸಿದ ವ್ಯಕ್ತಿಯೊಬ್ಬರು ತನ್ನ ಬ್ಯಾಂಕ್ ಖಾತೆಗಳಿಂದ ಹಂತ ಹಂತವಾಗಿ 5,31,200 ರೂ. ಕಳೆದುಕೊಂಡು ವಂಚನೆಗೊಳಗಾದ ಬಗ್ಗೆ ನಗರದ ಸೆನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ದೂರುದಾರರ ಮೊಬೈಲ್ ಗೆ ನ.26ರಂದು ಅಪರಿಚಿತ ವ್ಯಕ್ತಿಯಿಂದ ಸಂದೇಶವೊಂದು ಬಂದಿತ್ತು. ಪಾರ್ಟ್ ಟೈಮ್ ಜಾಬ್‌ಗೆ ತಾವು ಆಯ್ಕೆಯಾಗಿರುವುದಾಗಿ ಸಂದೇಶ ಕಳುಹಿಸಿದ್ದ ಅಪರಿಚಿತ ವ್ಯಕ್ತಿಯು ಅದರಲ್ಲಿ ಒಂದು ಲಿಂಕ್ ಕಳುಹಿಸಿದ್ದ. ಲಿಂಕ್ ಕ್ಲಿಕ್ ಮಾಡಿ ವಾಟ್ಸ್‌ಆ್ಯಪ್‌ನಲ್ಲಿ ಅಪರಿಚಿತ ವ್ಯಕ್ತಿಯ ಜತೆ ಆನ್‌ಲೈನ್ ಜಾಬ್ ವಿಷಯವಾಗಿ ಚಾಟ್ ಮಾಡಿದ್ದಾರೆ. ಜಾಬ್‌ನ ಸಂಪೂರ್ಣ ಮಾಹಿತಿ ತಿಳಿಯಲು ಅಪರಿಚಿತ ಟೆಲಿಗ್ರಾಂ ಲಿಂಕ್ ಕಳುಹಿಸಿದ್ದ. ಅದನ್ನು ಕ್ಲಿಕ್ ಮಾಡಿದಾಗ ವೆಬ್‌ಸೈಟ್‌ವೊಂದು ತೆರೆದುಕೊಂಡಿದೆ. ಅದರಲ್ಲಿ ದೂರುದಾರರು ಖಾತೆ ತೆರೆದು ಯೂಸರ್ ಐಡಿ ಮತ್ತು ಪಾಸ್‌ವರ್ಡ್ ಕ್ರಿಯೇಟ್ ಮಾಡಿದ್ದಾರೆ.

ಆನ್‌ಲೈನ್‌ನಲ್ಲಿ ವಸ್ತು ಆರ್ಡರ್ ಮಾಡಿ ಕಮಿಷನ್ ಪಡೆಯಬಹುದು ಎಂದು ಆರೋಪಿ ತಿಳಿಸಿದ್ದಾನೆ. ಡಿ.5ರಂದು ಆಕ್ಸಿಸ್ ಬ್ಯಾಂಕ್ ಖಾತೆಯಿಂದ 200 ರೂ. ಹೂಡಿಕೆ ಮಾಡಿದ್ದಾರೆ. ಡಿ.6ರಂದು 380 ರೂ. ಜಮೆಯಾಗಿದೆ. ನಂತರದಲ್ಲಿ ಹೆಚ್ಚಿನ ಹಣ ತೊಡಗಿಸಿ ಲಾಭ ಗಳಿಸುವ ಉದ್ದೇಶದಿಂದ ದೂರುದಾರರು ಆಕ್ಸಿಸ್ ಬ್ಯಾಂಕ್ ಖಾತೆಯಿಂದ ಅಪರಿಚಿತ ವ್ಯಕ್ತಿ ಕಳುಹಿಸಿದ ಕ್ಯೂಆರ್ ಕೋಡ್ ಮೂಲಕ 86 ಸಾವಿರ ರೂ., ಕೆನರಾ ಬ್ಯಾಂಕ್ ಖಾತೆಯಿಂದ ಯೆಸ್ ಬ್ಯಾಂಕ್ ಖಾತೆಗೆ 50 ಸಾವಿರ ರೂ., ಡಿ. 7ರಂದು ಅಪರಿಚಿತ ವ್ಯಕ್ತಿ ಕಳುಹಿಸಿದ ಕ್ಯೂಆರ್ ಕೋಡ್‌ಗೆ 30 ಸಾವಿರ ರೂ., ಯೆಸ್ ಬ್ಯಾಂಕ್ ಖಾತೆಗೆ 1.50 ಲಕ್ಷ ರೂ. ಹಾಗು ಕ್ಯೂಆರ್ ಕೋಡ್‌ಗೆ 20 ಸಾವಿರ ರೂ., ಐಸಿಐಸಿಐ ಬ್ಯಾಂಕ್ ಖಾತೆಗೆ 1.95 ಲಕ್ಷ ರೂ. ವರ್ಗಾಯಿಸಿದ್ದಾರೆ.

ಅಪರಿಚಿತ ವ್ಯಕ್ತಿ ತಿಳಿಸಿದ ಯೆಸ್ ಬ್ಯಾಂಕ್, ಐಸಿಐಸಿಐ ಬ್ಯಾಂಕ್ ಮತ್ತು ಕ್ಯೂಆರ್ ಕೋಡ್ ಸ್ಕಾನ್ ಮೂಲಕ ಹಂತ ಹಂತವಾಗಿ 5.31 ಲಕ್ಷ ರೂ. ವರ್ಗಾಯಿಸಿ ವಂಚನೆಗೊಳಗಾಗಿದ್ದಾರೆ. ಈ ಬಗ್ಗೆ ಸೆನ್ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

Vishwa News 24

Recent Posts

ಸುಹಾಸ್‌ ಶೆಟ್ಟಿ ಹತ್ಯೆ ಪ್ರಕರಣ : ಎನ್‌ಐಎ ಅಧಿಕಾರಿಗಳಿಂದ ಮೂವರ ವಿಚಾರಣೆ – vishwanews24

ಸುಹಾಸ್‌ ಶೆಟ್ಟಿ ಹತ್ಯೆ ಪ್ರಕರಣ : ಎನ್‌ಐಎ ಅಧಿಕಾರಿಗಳಿಂದ ಮೂವರ ವಿಚಾರಣೆ ಮಂಗಳೂರು: ಬಜಪೆಯಲ್ಲಿ ನಡೆದ ಹಿಂದೂ ಸಂಘಟನೆಯ ಕಾರ್ಯಕರ್ತ…

4 minutes ago

ಪುತ್ತೂರು: ನಾಪತ್ತೆಯಾಗಿದ್ದ ಸಾಕುನಾಯಿ ಪತ್ತೆ ಮಾಡಿದ ವ್ಯಕ್ತಿಗೆ 50 ಸಾ. ರೂ. ಹಸ್ತಾಂತರ – vishwanews24

ಪುತ್ತೂರು: ಸಾಕುನಾಯಿ ಪತ್ತೆ ಮಾಡಿದ ವ್ಯಕ್ತಿಗೆ 50 ಸಾ. ರೂ. ಹಸ್ತಾಂತರ ಪುತ್ತೂರು: ಇಲ್ಲಿನ ಕಬಕ ಸಮೀಪದ ಪೋಳ್ಯ ನಿವಾಸಿ,…

9 minutes ago

ಕಾಂಗ್ರೆಸ್ ಪಕ್ಷ ತನ್ನ ಎರಡನೇ ಇನ್ನಿಂಗ್ಸ್ ಆರಂಭಿಸಿದ್ದು , ಶೀಘ್ರದಲ್ಲೇ ಹೊಸ ಜಿಲ್ಲಾಅಧ್ಯಕ್ಷರ ನೇಮಕಾತಿ :ಬಿ.ಕೆ. ಹರಿಪ್ರಸಾದ್ – vishwanews24

ಕರ್ನಾಟಕದಲ್ಲಿ ಯಾವುದೇ ರೀತಿಯ ಹಿಂಸೆಗೆ ಅವಕಾಶ ನೀಡುವುದಿಲ್ಲ :  ಬಿ.ಕೆ. ಹರಿಪ್ರಸಾದ್ ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕಳೆದ ಒಂದು…

21 minutes ago

ಉಡುಪಿ: ನಿರೀಕ್ಷಿತ ಮುಂಗಾರು ಮಳೆಯಿಲ್ಲದೆ ಕಡಲಿಗೆ ಇಳಿಯದ ನಾಡದೋಣಿಗಳು – vishwanews24

ಉಡುಪಿ: ನಿರೀಕ್ಷಿತ ಮುಂಗಾರು ಮಳೆಯಿಲ್ಲದೆ ಕಡಲಿಗೆ ಇಳಿಯದ ನಾಡದೋಣಿಗಳು  ಉಡುಪಿ: ಕರಾವಳಿಯಲ್ಲಿ ನಿರೀಕ್ಷಿತ ಮುಂಗಾರು ಮಳೆಯಾಗದ ಕಾರಣ ಈ ಋತುವಿನಲ್ಲಿ…

34 minutes ago

ಉದ್ಯಾವರ : ಪಾಪನಾಶಿನಿ ಹೊಳೆಯ ಸೇತುವೆಯ ಮೇಲೆ ಸ್ಕೂಟರ್ ಪತ್ತೆ ; ವ್ಯಕ್ತಿ ಹೊಳೆಗೆ ಹಾರಿರುವ ಶಂಕೆ -vishwanews24

ಉದ್ಯಾವರ : ಪಾಪನಾಶಿನಿ ಹೊಳೆಯ ಸೇತುವೆಯ ಮೇಲೆ ಸ್ಕೂಟರ್ ಪತ್ತೆ ; ವ್ಯಕ್ತಿ ಹೊಳೆಗೆ ಹಾರಿರುವ ಶಂಕೆ ಉಡುಪಿ: ಉದ್ಯಾವರ…

19 hours ago

ಮಂಗಳೂರು: ಕಾಂಗ್ರೆಸ್ ಗಾಗಿ ಕೆಲಸ ಮಾಡದವರು ಪಕ್ಷದ ಬಗ್ಗೆ ಮಾತನಾಡುವುದು ಬೇಡ: ಸಚಿವ ಯು.ಟಿ.ಖಾದರ್ -vishwanews24

ಮಂಗಳೂರು: ಕಾಂಗ್ರೆಸ್ ಗಾಗಿ ಕೆಲಸ ಮಾಡದವರು ಪಕ್ಷದ ಬಗ್ಗೆ ಮಾತನಾಡುವುದು ಬೇಡ: ಸಚಿವ ಯು.ಟಿ.ಖಾದರ್ ಮಂಗಳೂರು: ಕಾಂಗ್ರೆಸ್ ಪಕ್ಷಕ್ಕಾಗಿ ಕೆಲಸ…

19 hours ago