Featured

ಮಂಗಳೂರು: ಪ್ರಚೋದನಕಾರಿ ಭಾಷಣ ಮಾಡುವವರನ್ನು ಕೆಲ ಸಂಘಟನೆಗಳು ರಕ್ಷಣೆ ಮಾಡುತ್ತಿವೆ : ದಿನೇಶ್‌ ಗುಂಡೂರಾವ್ – vishwanews24

ಮಂಗಳೂರು: ಪ್ರಚೋದನಕಾರಿ ಭಾಷಣ ಮಾಡುವವರನ್ನು ಕೆಲ ಸಂಘಟನೆಗಳು ರಕ್ಷಣೆ ಮಾಡುತ್ತಿವೆ ..

ಕೋಮು ಭಾಷಣಗಳನ್ನು ಹತ್ತಿಕ್ಕಲು ಒಂದು ಕಾನೂನು ರೂಪಿಸಬೇಕು..

ಎಲ್ಲಾ ಕಾನೂನು ಬಾಹಿರ ಚಟುವಟಿಕೆಗೆ ಇತಿಶ್ರೀ ಹಾಡುತ್ತೇವೆ : ದಿನೇಶ್‌ ಗುಂಡೂರಾವ್

ಮಂಗಳೂರು: ಪ್ರಚೋದನಕಾರಿ ಭಾಷಣ ಮಾಡುವವರನ್ನು ಕೆಲ ಸಂಘಟನೆಗಳು ರಕ್ಷಣೆ ಮಾಡುತ್ತಿವೆ. ಅವರಿಗೆ ವಕೀಲರನ್ನು ಕೊಡುತ್ತಾರೆ, ನ್ಯಾಯಾಧೀಶರ ಹತ್ತಿರ ಮಾತನಾಡಿಸುತ್ತಾರೆ. ಎಫ್ಐಆರ್ ಆದರೂ ಅವರಿಗೆ ಸುಲಭವಾಗಿ ಜಾಮೀನು ಸಿಗುತ್ತಿದೆ ಎಂದು ದ.ಕನ್ನಡ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಕಳವಳ ವ್ಯಕ್ತಪಡಿಸಿದರು.

ಮಂಗಳೂರಿನಲ್ಲಿ ಶನಿವಾರ (ಮೇ 31) ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕೋಮು ಭಾಷಣಗಳನ್ನು ಹತ್ತಿಕ್ಕಲು ಒಂದು ಕಾನೂನು ರೂಪಿಸಬೇಕು. ಯತ್ನಾಳ್ ಹಾಗೂ ಈ ಜಿಲ್ಲೆಯ ಶಾಸಕರು ಪ್ರಚೋದನಕಾರಿ ಭಾಷಣ ಮಾಡುತ್ತಾರೆ. ಭಾಷಣ ಮಾಡಿದವರ ಮೇಲೆ ಎಫ್ಐಆರ್ ಆದರೂ ಕೂಡಲೇ ಜಾಮೀನು ಆಗುತ್ತದೆ. ಈ ರೀತಿ ಕೇಸ್ ಆದರೂ ಅವರಿಗೆ ಸಂಘಟನೆಯ ಬೆಂಬಲ ಇದೆ, ರಾಜಕೀಯ ರಕ್ಷಣೆಯೂ ಇದೆ ಎಂದರು.

ಬಜಪೆ ಚಲೋ ವಿಚಾರದಲ್ಲಿ ಪೊಲೀಸರು ಸ್ಟ್ರಿಕ್ಟ್ ಆಗಿ ಇರಬೇಕಾಗಿತ್ತು. ಈಗಾಗಲೇ ವಿಶೇಷ ಕಾರ್ಯಪಡೆ ರಚನೆ ಮಾಡಿದ್ದೇವೆ. ಮಂಗಳೂರು, ಉಡುಪಿ, ಶಿವಮೊಗ್ಗಕ್ಕೆ ರಚನೆ ಮಾಡಲು ಆದೇಶ ಆಗಿದೆ. ಎಲ್ಲಾ ಕಾನೂನು ಬಾಹಿರ ಚಟುವಟಿಕೆಗೆ ಇತಿಶ್ರೀ ಹಾಡುತ್ತೇವೆ. ಏನು ಮಾಡಬೇಕು ಆ ಕ್ರಮ ಕೈಗೊಳ್ಳುತ್ತೇವೆ ಎಂದರು.

ಕೋಮುಗಲಭೆ, ಕೋಮುಭಾವನೆಯನ್ನು ಕೆರಳಿಸುವವರು ಅಪರಾಧಿ ಚಟುವಟಿಕೆಯಲ್ಲಿ ಭಾಗಿಯಾದವರು. ಯಾವುದೇ ಸಂಘಟನೆಯನ್ನು ಬ್ಯಾನ್ ಮಾಡುವುದಕ್ಕೆ ನಮಗೆ ಅಧಿಕಾರವಿಲ್ಲ ಎಂದು ದಿನೇಶ್ ಗುಂಡೂರಾವ್‌ ಹೇಳಿದರು.

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಅವೈಜ್ಞಾನಿಕ ಕಾಮಗಾರಿಗಳಿಂದ ಗುಡ್ಡ ಕುಸಿತ ವಿಚಾರಕ್ಕೆ ಮಾತನಾಡಿದ ಅವರು, ಜನರು ಅಭಿವೃದ್ಧಿ ಮಾಡುವಾಗ ಪ್ರಕೃತಿ ಜೊತೆ ಎಚ್ಚರಿಕೆಯಿಂದ ಇರುವುದಿಲ್ಲ. ಇದು ಸರಕಾರದ ಸಾರ್ವಜನಿಕರ ಜವಾಬ್ದಾರಿ. ಅಪಾಯಕಾರಿ ಸ್ಥಳಗಳನ್ನು ಗುರುತು ಮಾಡಿ ಎಚ್ಚರಿಕೆ ನೀಡಿರುತ್ತೇವೆ. ಆದರೆ ಅವರನ್ನು ಶಿಫ್ಟ್ ಮಾಡುವುದಕ್ಕೆ ಅವರ ಒಪ್ಪಿಗೆ ಬೇಕು. ನಿರ್ದಿಷ್ಟವಾಗಿ ಯಾವ ಗುಡ್ಡ ಕುಸಿಯುತ್ತದೆ ಎಂದು ಹೇಳಲು ಆಗುವುದಿಲ್ಲ. ಹೀಗಿದ್ದಾಗ ಯಾರನ್ನ ಎಲ್ಲಿಗೆ ಎಂದು ಸ್ಥಳಾಂತರ ಮಾಡುವುದು. ಗುಡ್ಡ ಕುಸಿತ ಬಗ್ಗೆ ಅಷ್ಟು ಸ್ಪಷ್ಟತೆ ಇರುವುದಿಲ್ಲ. ಪರಿಹಾರ ವಂಚಿತರಿಗೆ ಮಾನದಂಡಗಳ ಆಧಾರದ ಮೇಲೆ ಶೀಘ್ರ ಪರಿಹಾರ ನೀಡುತ್ತೇವೆ ಎಂದು ದಿನೇಶ್ ಗುಂಡೂರಾವ್ ಹೇಳಿದರು.

Vishwa News 24

Recent Posts

ಶಿಳ್ಳೆ ಹಾಕಿದ ಪ್ರೇಕ್ಷಕನಿಗೆ ರಂಗಸ್ಥಳದಲ್ಲೇ ತರಾಟೆ: ಉಜಿರೆ ಅಶೋಕ್ ಭಟ್ ಸಮರ್ಥನೆ – vishwanews24

ಶಿಳ್ಳೆ ಹಾಕಿದ ಪ್ರೇಕ್ಷಕನಿಗೆ ರಂಗಸ್ಥಳದಲ್ಲೇ ತರಾಟೆ: ಉಜಿರೆ ಅಶೋಕ್ ಭಟ್ ಸಮರ್ಥನೆ ಬೆಳ್ತಂಗಡಿ: ಕಲೆಯ ಪ್ರದರ್ಶನದಲ್ಲಿ ಕೆಲವೊಮ್ಮೆ ಪ್ರೇಕ್ಷಕರ ವರ್ತನೆ…

11 hours ago

ಮಂಗಳೂರು: ಯಕ್ಷಗಾನ ಪ್ರದರ್ಶನ ನಡೆಯುತ್ತಿದ್ದಾಗ  ಶಿಳ್ಳೆ  ಹಾಕಿದ್ದಕ್ಕೆ ಪ್ರೇಕ್ಷಕರ ವಿರುದ್ಧ ಕಲಾವಿದ ಉಜಿರೆ ಅಶೋಕ್‌ ಭಟ್‌ ಗರಂ – vishwanews24

ಮಂಗಳೂರು: ಯಕ್ಷಗಾನ ಪ್ರದರ್ಶನ ನಡೆಯುತ್ತಿದ್ದಾಗ  ಶಿಳ್ಳೆ  ಹಾಕಿದ್ದಕ್ಕೆ ಪ್ರೇಕ್ಷಕರ ವಿರುದ್ಧ ಕಲಾವಿದ ಉಜಿರೆ ಅಶೋಕ್‌ ಭಟ್‌ ಗರಂ ಮಂಗಳೂರು: ಯಕ್ಷಗಾನ…

1 day ago

ನೇಪಾಳದ ನೂತನ ಪ್ರಧಾನಿಯಾಗಿ ಬಾಲೇಂದ್ರ ಶಾ ಪ್ರಮಾಣ ವಚನ ಸ್ವೀಕಾರ – vishwanews24

ನೇಪಾಳದ ನೂತನ ಪ್ರಧಾನಿಯಾಗಿ ಬಾಲೇಂದ್ರ ಶಾ ಪ್ರಮಾಣ ವಚನ ಸ್ವೀಕಾರ ಕಠ್ಮಂಡು: ಬಾಲೇಂದ್ರ ಶಾ ಅವರು ಶುಕ್ರವಾರ ನೇಪಾಳದ ನೂತನ…

1 day ago

SSLC ಪರೀಕ್ಷೆ 625 ಅಂಕದಿಂದ 525ಕ್ಕೆ ಇಳಿಕೆ : ಈ ವರ್ಷದಿಂದ ತೃತೀಯ ಭಾಷೆ ಕಡ್ಡಾಯವಲ್ಲ – vishwanews24

SSLC ಪರೀಕ್ಷೆ 625 ಅಂಕದಿಂದ 525ಕ್ಕೆ ಇಳಿಕೆ : ಈ ವರ್ಷದಿಂದ ತೃತೀಯ ಭಾಷೆ ಕಡ್ಡಾಯವಲ್ಲ ಬೆಂಗಳೂರು: ಇನ್ನು ಮುಂದೆ…

2 days ago

ಹರೇಕಳ ಹಾಜಬ್ಬ, ಸೂರಿಕುಮೇರು ಗೋವಿಂದ ಭಟ್, ರವೀಶ್ ಪಡುಮಲೆಗೆ ಮಂಗಳೂರು ವಿವಿ ಗೌರವ ಡಾಕ್ಟರೇಟ್ – vishwanews24

ಮಾ.28ರಂದು ಮಂಗಳೂರು ವಿವಿ 44ನೇ ಘಟಿಕೋತ್ಸವ  :ಹರೇಕಳ ಹಾಜಬ್ಬ, ಸೂರಿಕುಮೇರು ಗೋವಿಂದ ಭಟ್, ರವೀಶ್ ಪಡುಮಲೆಗೆ  ಗೌರವ ಡಾಕ್ಟರೇಟ್ ಮಂಗಳೂರು…

2 days ago

ದ.ಕ ಜಿಲ್ಲೆಯಲ್ಲಿ ಜೆಡಿಎಸ್ ಪಕ್ಷ ಬಲವರ್ಧನೆಗೆ ಹೆಚ್ಚಿನ ಒತ್ತು : ಅಕ್ಷಿತ್ ಸುವರ್ಣ – vishwanews24

ದ.ಕ ಜಿಲ್ಲೆಯಲ್ಲಿ ಜೆಡಿಎಸ್ ಪಕ್ಷ ಬಲವರ್ಧನೆಗೆ ಹೆಚ್ಚಿನ ಒತ್ತು : ಅಕ್ಷಿತ್ ಸುವರ್ಣ ಮಂಗಳೂರು: ಯುವ ಜನತಾದಳ (ಜಾ) ದಕ್ಷಿಣ…

2 days ago