ಮಂಗಳೂರು: ಮಂಗಳೂರಿನ ಪಂಪ್ ವೆಲ್ ಪ್ಲೈ ಓವರ್ ಕಾಮಗಾರಿ ನವಯುಗ ಕಂಪೆನಿ ವಹಿಸಿಕೊಂಡು ಕಳೆದ 10 ವರ್ಷಗಳಿಂದ ಕಾಮಗಾರಿ ನಡೆಸುತ್ತಿದ್ದರೂ ಪೂರ್ಣಗೊಳಿಸಲು ಸಾಧ್ಯವಾಗಿರಲಿಲ್ಲ. ಇದೀಗ ಕೊನೆಗೂ ಪಂಪ್ ವೆಲ್ ಕಾಮಗಾರಿ ಜನವರಿ ತಿಂಗಳಾಂತ್ಯದ ಮುಗಿಯುವಂತೆ ಕಾಣುತ್ತದೆ.
ಮೇಲ್ಸೇತುವೆ ಕಾಮಗಾರಿ ಬಹುತೇಕ ಪೂರ್ಣಗೊಂಡಿದ್ದು, ಮೇಲ್ಸೇತುವೆ ಜೋಡಿಸಿದ ರಸ್ತೆಗಳಿಗೆ ಡಾಂಬರು ಕೆಲಸ ನಡೆಯುತ್ತಿದೆ. ಇಲಾಖೆ ಹಿರಿಯ ಅಧಿಕಾರಿಗಳ ಪ್ರಕಾರ ‘ಇದೇ’ ಜ.28 ಅಥವಾ 29ರಂದು ಈ ಸೇತುವೆ ಪ್ರಯಾಣಿಕರ ವಾಹನಗಳ ಓಡಾಟಕ್ಕೆ ಸಿದ್ಧವಾಗಲಿದೆ.
ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಹಾಗೂ ನಮ್ಮದೇ ಲೋಕೋಪಯೋಗಿ ಇಲಾಖೆ ಇಂಜಿನಿಯರ್‌ಗಳು ಉಭಯ ಕಡೆಗಳಿಂದಲೂ ಕಾಮಗಾರಿ ಕಾಲಮಿತಿಯಲ್ಲಿ ಮುಗಿಸುವ ಕುರಿತು ಭರವಸೆ ದೊರೆತಿದೆ. ನಾನು ಕೂಡ ಅದೇ ರೀತಿಯ ವಿಶ್ವಾಸ ಹೊಂದಿರುವುದಾಗಿ ಜಿಲ್ಲಾಧಿಕಾರಿ ಸಿಂಧೂ ಬಿ.ರೂಪೇಶ್ ತಿಳಿಸಿದ್ದಾರೆ.
ಡಿ.31ರಂದು ಸಂಸದ ನಳಿನ್‌ಕುಮಾರ್ ಕಟೀಲು ಅವರ ಅಧ್ಯಕ್ಷತೆಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಪಂಪ್‌ವೆಲ್ ಫ್ಲೈಓವರ್ ಕಾಮಗಾರಿ ಪ್ರಗತಿ ಪರಿಶೀಲನೆ ಸಭೆಯಲ್ಲಿ ಕಾಮಗಾರಿಯ ಮೇಲ್ವಿಚಾರಣೆ ಜವಾಬ್ದಾರಿ ಜಿಲ್ಲಾಧಿಕಾರಿಯವರಿಗೆ ನೀಡಿರುವುದು ಫಲ ನೀಡಿದೆ.
ಎನ್‌ಎಚ್‌ಎಐ ಯೋಜನಾ ನಿರ್ದೇಶಕರು, ರಾಷ್ಟ್ರೀಯ ಹೆದ್ದಾರಿ ವಿಭಾಗದ ಕಾರ್ಯಪಾಲಕ ಅಭಿಯಂತರರು, ಲೋಕೋ ಪಯೋಗಿ ಇಲಾಖೆ ಕಾರ್ಯಪಾಲಕ ಅಭಿಯಂತರರು ಹಾಗೂ ಮಂಗಳೂರು ತಹಸೀಲ್ದಾರರು ಇರುವ ನಾಲ್ಕು ಮಂದಿಯ ಸಮಿತಿ ಕಾಮಗಾರಿಯ ದೈನಂದಿನ ಪ್ರಗತಿಯ ಬಗ್ಗೆ ಪರಿಶೀಲನೆ ನಡೆಸುತ್ತಿದೆ. ಈ ಸಮಿತಿ ಸದಸ್ಯರ ಜತೆ ಜಿಲ್ಲಾಧಿಕಾರಿ ದಿನಂಪ್ರತಿ ಸಭೆ ನಡೆಸುತ್ತಾರೆ. ಸಭೆ ಬಳಿಕ ಜಿಲ್ಲಾಧಿಕಾರಿ ಸಂಬಂಧಪಟ್ಟವರಿಗೆ ನಿರ್ದೇಶನ ನೀಡುತ್ತಿದ್ದಾರೆ.
ನವಯುಗ ಕಂಪೆನಿಗೆ ಕಾಮಗಾರಿ ಪೂರ್ಣಗೊಳಿಸುವ ಬಗ್ಗೆ ಈ ಹಿಂದೆ ಡೆಡ್ ಲೈನ್ ಗಳ ಮೇಲೆ ಡೆಡ್ ಲೈನ್ ನೀಡಿದರೂ ಕಾಮಗಾರಿ ಮಾತ್ರ ಪೂರ್ಣಗೊಂಡಿರಲಿಲ್ಲ. ಕಾಮಗಾರಿ ದಶಕದ ಇತಿಹಾಸ ಕಂಡು ಸಂಸದ ನಳಿನ್ ಕುಮಾರ್ ಸೇರಿ ಪಂಪ್ ವೆಲ್ ಪ್ಲೈ ಓವರ್ ಟ್ರೋಲಿಗರ ಆಹಾರವಾಗಿತ್ತು. ಇದೀಗ ಇದೆಲ್ಲದಕ್ಕೂ ಪೂರ್ಣವಿರಾಮ ನೀಡುವಂತೆ ಪಂಪ್ ವೆಲ್ ಪ್ಲೈ ಓವರ್ ಕಾಮಗಾರಿ ಶರವೇಗದ ಚುರುಕು ಪಡೆದು ಕಾಮಗಾರಿ ಬಹುತೇಕ ಪೂರ್ಣಗೊಂಡಿದೆ. ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಇಲಾಖೆಯ ಅಧಿಕಾರಿಗಳ ಪ್ರಕಾರ ಜ.೨೯ ರ ಒಳಗೆ ಪ್ರಯಾಣಿಕ ಓಡಾಟಕ್ಕೆ ಈ ಮೇಲ್ಸೇತುವೆ ಸಿದ್ದವಾಗಲಿದೆ.
ಇಲ್ಲಿಯವರೆಗೂ ಏಷ್ಟೋ ದೈವ ದೇವರು ಜ್ಯೋತಿಷ್ಯರಲ್ಲಿ ಕೇಳಿ ಸರಿಯಾದ ಪರಿಹಾರ ಸಿಗದೆ ನೊಂದಿದ್ದರೆ.ಅಂತಃಹ ಯಾವುದೇ ಕಠಿಣ ಸಮಸ್ಯೆ ಗಳಿದ್ದರು ಉತ್ತಮ ಸಲಹೆ ಹಾಗೂ ಶಾಶ್ವತ ಪರಿಹಾರ ತಿಳಿಸುತ್ತಾರೆ.
ಇಂದೇ ಸಂಪರ್ಕಿಸಿ ಪಂಡಿತ್ ವೈದಿಕ ಶ್ರೀ ಗಣಪತಿ ಭಟ್
8088827292
ಕಾರ್ಕಳ ಮಹಾಮಸ್ತಕಾಭಿಷೇಕ 2027 : ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯಿಂದ 1.59 ಕೋಟಿ ರೂ. ಮಂಜೂರು ಉಡುಪಿ: ಕಾರ್ಕಳದಲ್ಲಿ 2027ರಲ್ಲಿ ನಡೆಯಲಿರುವ…
ಕಾಪು: ಕ್ಷುಲ್ಲಕ ವಿಚಾರಕ್ಕೆ ಪತಿಯೊಂದಿಗೆ ಜಗಳವಾಡಿ ಅಪ್ರಾಪ್ತ ಮಗಳೊಂದಿಗೆ ಮಹಿಳೆ ನಾಪತ್ತೆ ಕಾಪು: ಕ್ಷುಲ್ಲಕ ಕಾರಣಕ್ಕಾಗಿ ಪತಿಯೊಂದಿಗೆ ಜಗಳವಾಡಿ ಬಳಿಕ…
ಖಾಲಿ ಹೊಟ್ಟೆಯಲ್ಲಿ ಎಳನೀರು ಕುಡಿಯುವುದು ಒಳ್ಳೆಯದೋ? ಅಥವಾ ಕೆಟ್ಟದೋ? ಬೆಳಿಗ್ಗೆ ಖಾಲಿ ಹೊಟ್ಟೆಗೆ ಎಳನೀರು ಕುಡಿಯುವುದರಿಂದಾಗುವ ಪ್ರಯೋಜನಗಳೇನು ಗೊತ್ತಾ? ಇದು ನಿಮ್ಮ…
ಕಾಪು: ತಮಿಳುನಾಡು ಮೂಲದ ದೋಣಿ ಡಿಕ್ಕಿ ; ಸ್ಥಳೀಯ ನಾಡದೋಣಿ ಮುಗುಚಿ ಮೀನುಗಾರ ನಾಪತ್ತೆ ಕಾಪು: ಕಾಪು ಕಡಲ ಕಿನಾರೆಯಲ್ಲಿ…
ಭೀಕರ ರಸ್ತೆ ಅಪಘಾತ : ‘ಹಳ್ಳಿ ಹೈದ ಪ್ಯಾಟೆಗೆ ಬಂದ’ ಸೀಸನ್-3ರ ಸ್ಪರ್ಧಿ ಬಾವತೀಶ್ ಸಾವು ಯಲ್ಲಾಪುರ : ಉತ್ತರ ಕನ್ನಡ…
ಕುಂದಾಪುರ: ರಸ್ತೆ ಅಪಘಾತ ; ಗಾಣಿಗ ಸಂಘದ ಮಾಜಿ ಅಧ್ಯಕ್ಷ ಶ್ರೀನಿವಾಸ ಗಾಣಿಗ ಸಾವು ಕುಂದಾಪುರ: ಇಲ್ಲಿನ ರಾಷ್ಟ್ರೀಯ ಹೆದ್ದಾರಿ…