Featured

ಮಂಗಳೂರು : ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣ – ತಲೆಮರೆಸಿಕೊಂಡಿದ್ದ ಪ್ರಮುಖ ಆರೋಪಿ ಮಹಮ್ಮದ್ ಶರೀಫ್ ಬಂಧನ – vishwanews24

ಮಂಗಳೂರು : ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣ – ತಲೆಮರೆಸಿಕೊಂಡಿದ್ದ ಪ್ರಮುಖ ಆರೋಪಿ ಮಹಮ್ಮದ್ ಶರೀಫ್ ಬಂಧನ

ಮಂಗಳೂರು: ಬಿಜೆಪಿ ಯುವ ಮುಖಂಡ ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ತಲೆಮರೆಸಿಕೊಂಡಿದ್ದ ಪ್ರಮುಖ ಆರೋಪಿಯೊಬ್ಬನನ್ನು ರಾಷ್ಟ್ರೀಯ ತನಿಖಾ ದಳವು ನವದೆಹಲಿಯ ಇಂದಿರಾ ಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬಂಧಿಸಿದ್ದಾರೆ. ಕೊಡಾಜೆ ಮೊಹಮ್ಮದ್ ಷರೀಫ್ ಬಂಧಿತ ಆರೋಪಿ.

ಬಿಜೆಪಿ ಯುವ ಮೋರ್ಚಾ ಸದಸ್ಯ ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಲುಕ್‌ಔಟ್ ನೋಟಿಸ್ ಜಾರಿಯಾಗಿದ್ದ ಪ್ರಮುಖ ಆರೋಪಿ, ನಿಷೇಧಿತ ಪಿಎಫ್‌ಐ ಸಂಘಟನೆಯ ರಾಜ್ಯ ಕಾರ್ಯಕಾರಿಣಿ ಸದಸ್ಯನಾಗಿದ್ದ ಕೊಡಾಜೆ ಮೊಹಮ್ಮದ್ ಷರೀಫ್ ಎಂಬಾತನನ್ನು ಎನ್‌ಐಎ ಅಧಿಕಾರಿಗಳು ಬಂಧಿಸಿದ್ದಾರೆ.

ಲುಕ್‌ಔಟ್ ನೋಟಿಸ್ ಜಾರಿಯಾಗಿದ್ದ ಆರೋಪಿ ಬಹ್ರೇನ್‌ನಿಂದ ದೆಹಲಿಗೆ ಬರುತ್ತಿದ್ದಂತೆ ಎನ್‌ಐಎ ಅಧಿಕಾರಿಗಳು ಬಂಧಿಸಿದ್ದಾರೆ. ಮಿತ್ತೂರಿನ ಫ್ರೀಡಂ ಕಮ್ಯುನಿಟಿ ಹಾಲ್‌ನಲ್ಲಿ ಪಿಎಫ್ಐನ ಬಾಹ್ಯ ತಂಡದ ಸದಸ್ಯರಿಗೆ ಶಸ್ತ್ರಾಸ್ತ್ರ ತರಬೇತಿ. ಪಿಎಫ್‌ಐನ ರಾಜ್ಯ ಕಾರ್ಯಕಾರಿ ಸಮಿತಿಯಲ್ಲಿ ಚರ್ಚಿಸಿದ ಬಳಿಕ ಪ್ರವೀಣ್ ನೆಟ್ಟಾರು ಹತ್ಯೆಯ ಆದೇಶ ನೀಡುವ ಜವಾಬ್ದಾರಿಯನ್ನು ಮೊಹಮ್ಮದ್ ಷರೀಫ್ ವಹಿಸಿದ್ದನು ಎನ್ನಲಾಗಿದೆ.

ಮೊಹಮ್ಮದ್ ಸೂಚನೆಯ ಮೇರೆಗೆ ಆರೋಪಿ ಮುಸ್ತಫಾ ಪೈಚಾರ್ ಮತ್ತು ಆತನ ತಂಡ ಪ್ರವೀಣ್ ನೆಟ್ಟಾರು ಅವರನ್ನು ಬರ್ಬರವಾಗಿ ಹತ್ಯೆಗೈದಿತ್ತು ಎಂಬ ಮಾಹಿತಿ ಲಭ್ಯವಾಗಿದೆ. ಬಂಧಿತ ಮೊಹಮ್ಮದ್ ಶರೀಫ್ ಕೂಡಾ PFI ಸದಸ್ಯನಾಗಿದ್ದು, ಮಿತ್ತೂರಿನ ಪ್ರೀಡಂ ಕಮ್ಯೂನಿಟಿ ಹಾಲ್ ನಲ್ಲಿ ತಂಡದ ಸದಸ್ಯರಿಗೆ ಶಸಾಸ್ತ್ರ ತರಬೇತಿಯಲ್ಲಿ ಸಹ ಆರೋಪಿಗಳೊಂದಿಗೆ ಭಾಗಿಯಾಗಿದ್ದ ಎಂದು ಪ್ರಕರಣದ ತನಿಖೆ ನಡೆಸುತ್ತಿರುವ NIA ಅಧಿಕಾರಿಗಳು ತಿಳಿಸಿದ್ದಾರೆ.

Vishwa News 24

Recent Posts

ಉಡುಪಿ: ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಜೆಸಿಟಿಯು ನೇತೃತ್ವದಲ್ಲಿ ಜೈಲ್ ಭರೋ ಪ್ರತಿಭಟನೆ; ಕಾರ್ಯಕರ್ತರು ಪೊಲೀಸ್ ವಶಕ್ಕೆ – vishwanews24

ಉಡುಪಿ: ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಜೆಸಿಟಿಯು ನೇತೃತ್ವದಲ್ಲಿ ಜೈಲ್ ಭರೋ ಪ್ರತಿಭಟನೆ; ಕಾರ್ಯಕರ್ತರು ಪೊಲೀಸ್ ವಶಕ್ಕೆ ಉಡುಪಿ: ಕೇಂದ್ರ…

17 hours ago

ಕಾಪು: ಎಲ್ಲೂರಿನಲ್ಲಿ ಮನೆಯ ಮೇಲ್ಛಾವಣಿ ಕುಸಿತ; ಮಹಿಳೆ ಪವಾಡಸದೃಶ ಪಾರು, ಲಕ್ಷಾಂತರ ರೂ. ನಷ್ಟ – vishwanews24

ಕಾಪು: ಎಲ್ಲೂರಿನಲ್ಲಿ ಮನೆಯ ಮೇಲ್ಛಾವಣಿ ಕುಸಿತ; ಮಹಿಳೆ ಪವಾಡಸದೃಶ ಪಾರು, ಲಕ್ಷಾಂತರ ರೂ. ನಷ್ಟ ಕಾಪು,: ಎಲ್ಲೂರಿನ ರೇವತಿ ಕುಂದರ್…

17 hours ago

ಮದರಂಗಡಿ : ಡೇವಿಡ್ ಡಿಸೋಜಾ ಹತ್ಯೆ ಪ್ರಕರಣ ; ಇಬ್ಬರು ಆರೋಪಿಗಳು 10 ದಿನಗಳ ಕಾಲ ಪೊಲೀಸ್ ಕಸ್ಟಡಿಗೆ – vishwanews24

ಮದರಂಗಡಿ : ಡೇವಿಡ್ ಡಿಸೋಜಾ ಹತ್ಯೆ ಪ್ರಕರಣ ; ಇಬ್ಬರು ಆರೋಪಿಗಳು 10 ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ಉಡುಪಿ:ಮುದರಂಗಡಿ…

18 hours ago

ಟೈಮಿಂಗ್‌ ವಿವಾದ: ಕಾಪು ಸರ್ವಿಸ್ ರಸ್ತೆಯಲ್ಲಿ ಮತ್ತೆ ಖಾಸಗಿ ಎಕ್ಸ್‌ಪ್ರೆಸ್ ಬಸ್‌ ಚಾಲಕರ ವಾಗ್ವಾದ – vishwanews24

ಟೈಮಿಂಗ್‌ ವಿವಾದ: ಕಾಪು ಪೇಟೆಯಲ್ಲಿ ಮತ್ತೆ ಖಾಸಗಿ ಎಕ್ಸ್‌ಪ್ರೆಸ್ ಬಸ್‌ ಚಾಲಕರ ವಾಗ್ವಾದ ; ಸ್ಥಳೀಯರಲ್ಲಿ ಆತಂಕ ಕಾಪು: ರಾಷ್ಟ್ರೀಯ…

19 hours ago

ಉಡುಪಿ: ‘ಭಗವತಿ ಟೂರಿಸ್ಟ್’ ಟ್ರಾವೆಲ್ ಬುಕ್ಕಿಂಗ್ ಸಂಸ್ಥೆಯ ಮಾಲೀಕ ವಿನಯ್ ರಾಜ್ ವಿಧಿವಶ – vishwanews24

ಉಡುಪಿ: 'ಭಗವತಿ ಟೂರಿಸ್ಟ್' ಟ್ರಾವೆಲ್ ಬುಕ್ಕಿಂಗ್ ಸಂಸ್ಥೆಯ ಮಾಲೀಕ ವಿನಯ್ ರಾಜ್ ವಿಧಿವಶ ಉಡುಪಿ: ನಗರದ ಸರ್ವಿಸ್ ಬಸ್ ನಿಲ್ದಾಣದ…

19 hours ago

ಉಳ್ಳಾಲ: ತಲವಾರು ಹಿಡಿದು ದಾಂಧಲೆ ನಡೆಸಿದ ರೌಡಿ ಶೀಟರ್ ಸಹಿತ ಇಬ್ಬರ ಬಂಧನ – vishwanews24

ಉಳ್ಳಾಲ: ತಲವಾರು ಹಿಡಿದು ದಾಂಧಲೆ ನಡೆಸಿದ ರೌಡಿ ಶೀಟರ್ ಸಹಿತ ಇಬ್ಬರ ಬಂಧನ ಮಂಗಳೂರು: ಇಲ್ಲಿನ ಬಾರ್ ಒಂದರಲ್ಲಿ ತಲವಾರು…

19 hours ago