ಮಂಗಳೂರು : ಬಿಜೆಪಿ ಕಾರ್ಯಕರ್ತ ಪ್ರವೀಣ್ ನೆಟ್ಟಾರು ಹತ್ಯೆಗೀಡಾದ ಯುವಕನ ಕುಟುಂಬದ ಸ್ವಂತ ಮನೆಯ ಕಾಮಗಾರಿಯೂಏ.15ರೊಳಗೆ ಪೂರ್ಣಗೊಳ್ಳಲಿದೆ ಎಂದು ವರದಿಯಾಗಿದೆ.
ಬಿಜೆಪಿ ರಾಜ್ಯಾಧ್ಯಕ್ಷ, ದ.ಕ. ಸಂಸದ ನಳಿನ್ ಕುಮಾರ್ ಕಟೀಲ್ ಪಕ್ಷದ ವತಿಯಿಂದಲೇ ಮನೆ ನಿರ್ಮಿಸಿಕೊಡುವ ಭರವಸೆಯನ್ನು ನೀಡಿದ್ದರು.ನ.2ರಂದು ಮನೆಗೆ ಶಂಕುಸ್ಥಾಪನೆ ನೆರವೇರಿತ್ತು. ಸುಮಾರು 50 ಲಕ್ಷ ರು. ವೆಚ್ಚದ, 2,700 ಚದರ ಅಡಿ ವಿಸ್ತೀರ್ಣದ ಮನೆಯ ವಿನ್ಯಾಸ ಹಾಗೂ ಗುತ್ತಿಗೆಯನ್ನು ಮಂಗಳೂರಿನ ಮುಗೆರೋಡಿ ಕನ್‌ಸ್ಟ್ರಕ್ಷನ್ ವಹಿಸಿದೆ. ಈಗಾಗಲೇ ಭರದಿಂದ ಮನೆ ಕಾಮಗಾರಿ ನಡೆಸಲಾಗುತ್ತಿದ್ದು, ಜೂನ್ ಮಳೆಗಾಲದೊಳಗೆ ಮನೆಯ ಪ್ರವೇಶೋತ್ಸವನ್ನು ಮಾಡಲಿದ್ದಾರೆ.
ಪ್ರವೀಣ್ ನೆಟ್ಟಾರು ಕುಟುಂಬಕ್ಕೆ ಒಬ್ಬನೆ ಮಗನಾಗಿದ್ದನು. ಈತನೆ ಮನೆಗೆ ಆಧಾರ ಸ್ಥಂಭವಾಗಿದ್ದು, ಮನೆ ಕಟ್ಟುವ ನಿರೀಕ್ಷೆಯನ್ನು ಹೊಂದಿದ್ದರು, ಮನೆ ಕಟ್ಟಲು ಪ್ಲಾನ್ ಮಾಡುತ್ತಿದ್ದಂತೆ ಮನೆಯ ಮಗನೇ ಹತ್ಯೆಗೀಡಾದನು. ಈತ ಬಿಜೆಪಿ ಪಕ್ಷದ ನಿಷ್ಠಾವಂತ ಕಾರ್ಯಕರ್ತನಾಗಿದ್ದನು. ಈತನ ಕೊಲೆಗೆ ರಾಜ್ಯದ ಜನರೇ ಬೇಸರಗೊಂಡಿದ್ದರು.
ಸ್ವಂತ ಸೂರು ಕನಸಾಗಿತ್ತು
ಪ್ರವೀಣ್ ನೆಟ್ಟಾರು ಹೆತ್ತವರಿಗೆ ಏಕೈಕ ಪುತ್ರ, ಮನೆಯ ಆಧಾರಸ್ತಂಭವಾಗಿದ್ದರು. ಸ್ವಂತ ಮನೆ ಕನಸು ಹೊಂದಿದ್ದರು. ಮನೆ ನಿರ್ಮಾಣಕ್ಕೆ ಮುಹೂರ್ತವನ್ನೂ ನಿಗದಿಗೊಳಿಸಿದ್ದರೂ, ಅದಕ್ಕೂ ಮೊದಲೇ ಹತ್ಯೆಗೀಡಾದರು. ಪ್ರವೀಣ್ ಕನಸು ನನಸು ಮಾಡಲು ಸ್ವತಃ ಬಿಜೆಪಿ ರಾಜ್ಯಾಧ್ಯಕ್ಷ, ದ.ಕ. ಸಂಸದ ನಳಿನ್ ಕುಮಾರ್ ಕಟೀಲ್ ಪಕ್ಷದ ವತಿಯಿಂದಲೇ ಮನೆ ನಿರ್ಮಿಸಿಕೊಡುವ ಭರವಸೆ ನೀಡಿದ್ದರು. ನ.2ರಂದು ಮನೆಗೆ ಶಂಕುಸ್ಥಾಪನೆ ನೆರವೇರಿತ್ತು. ಸುಮಾರು 50 ಲಕ್ಷ ರು. ವೆಚ್ಚದ, 2,700 ಚದರ ಅಡಿ ವಿಸ್ತೀರ್ಣದ ಮನೆಯ ವಿನ್ಯಾಸ ಹಾಗೂ ಗುತ್ತಿಗೆಯನ್ನು ಮಂಗಳೂರಿನ ಮುಗೆರೋಡಿ ಕನ್‌ಸ್ಟ್ರಕ್ಷನ್ ವಹಿಸಿಕೊಂಡಿದೆ.
ಬ್ರಹ್ಮಾವರ: ಖಾಸಗಿ ಬಸ್ ಬೆಂಕಿಗಾಹುತಿ ; ಅದೃಷ್ಟವಶಾತ್ ಏಳು ಪ್ರಯಾಣಿಕರು ಪಾರು ಉಡುಪಿ: ಉಡುಪಿಯಿಂದ ಸಾಗರಕ್ಕೆ ತೆರಳುತ್ತಿದ್ದ ಖಾಸಗಿ ಬಸ್ಸೊಂದು…
ಸುರತ್ಕಲ್ : ಕಾಲೇಜು ವಿದ್ಯಾರ್ಥಿಗಳಿಗೆ ಗಾಂಜಾ ಸರಬರಾಜು ಆರೋಪ: ವ್ಯಕ್ತಿಯ ಬಂಧನ 1.206 ಕೆ.ಜಿ. ಗಾಂಜಾ, KTM ಮೋಟಾರ್ ಸೈಕಲ್…
ಸಕಲೇಶಪುರ–ಸುಬ್ರಹ್ಮಣ್ಯ ಮಾರ್ಗದಲ್ಲಿ ವಂದೇ ಭಾರತ್ ರೈಲು ಪ್ರಾಯೋಗಿಕ ಸಂಚಾರ ಪರಿಶೀಲನೆ ಕಡಬ : ಸಕಲೇಶಪುರ–ಸುಬ್ರಹ್ಮಣ್ಯ ರೋಡ್ ರೈಲು ಮಾರ್ಗದಲ್ಲಿ ನಡೆದ…
ಉಡುಪಿ : ಆ. 20 ರಂದು ನೇರ ಸಂದರ್ಶನ ಉಡುಪಿ : ನಗರದ ಅಂಬಲಪಾಡಿ ಕರಾವಳಿ ಬೈಪಾಸ್ ಬಳಿಯ ರೀಗಲ್…
ಉಡುಪಿ: ಗೃಹ ಜ್ಯೋತಿ ಫಲಾನುಭವಿಗಳು ಮರುಪರಿಶೀಲನೆ ಪ್ರಕ್ರಿಯೆ ಪೂರ್ಣಗೊಳಿಸಿಕೊಳ್ಳಿ: ರಮೇಶ್ ಕಾಂಚನ್ ಗೃಹ ಜ್ಯೋತಿ ಯೋಜನೆಯ ಫಲಾನುಭವಿಗಳ ಮನೆಗಳ ಮರುಪರಿಶೀಲನೆಗೆ…
ಕರಾವಳಿಯಲ್ಲಿ ಹೈಕೋರ್ಟ್ ಪೀಠ ಸ್ಥಾಪನೆಗೆ ಆಗ್ರಹ: ಆ.22ರಂದು ಉಡುಪಿಯಲ್ಲಿ ಸಭೆ ಉಡುಪಿ: ಉಡುಪಿ, ದಕ್ಷಿಣ ಕನ್ನಡ ಹಾಗೂ ಉತ್ತರ ಕನ್ನಡ…