ಮಂಗಳೂರು: ಪ್ರೀತಿಸಿ ಮದುವೆಯಾದ ಬಳಿಕ ಪತಿ ತನಗೆ ಜೀವ ಬೆದರಿಕೆ ಹಾಕಿ ಹಣ, ಒಡವೆ ಇತ್ಯಾದಿ ಪಡೆದು, ವಿದೇಶಕ್ಕೆ ಹೋಗಿ ಇನ್ನೊಂದು ಯುವತಿಯನ್ನು ಪ್ರೀತಿಸುವ ನಾಟಕವಾಡಿ ಮದುವೆಯಾಗಲು ಸಿದ್ಧತೆ ನಡೆಸುವ ಮೂಲಕ ವಂಚಿಸಿದ್ದಾನೆ. ಆತನ ಮನೆಯವರೂ ದೈಹಿಕ ಮಾನಸಿಕ ಹಿಂಸೆ ನೀಡಿದ್ದಾರೆ ಎಂದು ಆರೋಪಿಸಿ ಮಹಿಳೆಯೊಬ್ಬರು ಮಂಗಳೂರಿನ ಮಹಿಳಾ ಠಾಣೆಗೆ ದೂರು ನೀಡಿದ್ದು, ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಪೆರ್ಮುದೆ ನಿವಾಸಿಗಳಾದ ಪತಿ ಮನೀಷ್, ಅತ್ತೆ ಕುಮಾರಿ, ಮೈದುನ ಕಾರ್ತಿಕ್ ಮತ್ತು ಆತನ ಪತ್ನಿ ದೀಕ್ಷಾ ಎಂಬವರ ವಿರುದ್ಧ ಕಾವೂರು ನಿವಾಸಿ ಪ್ರೀತಿ ದೂರು ನೀಡಿದ್ದಾರೆ.
2017ರಲ್ಲಿ ಪೆರ್ಮುದೆ ನಿವಾಸಿ ಮನೀಷ್ ಪರಿಚಯವಾಗಿದೆ. ಆತ ಪ್ರೀತಿಸುವುದಾಗಿ ನಂಬಿಸಿ, ಮನೆಯವರೊಡನೆ ಒಳ್ಳೆಯವನಾಗಿ ವರ್ತಿಸಿದ್ದಾನೆ. 2021ರ ನ.21ರಂದು ಬಂಟ್ವಾಳದಲ್ಲಿ ಆತನನ್ನು ಮದುವೆಯಾಗಿದ್ದೇನೆ. ಮದುವೆಯ ಎಲ್ಲ ಖರ್ಚು ವೆಚ್ಚವನ್ನು ನನ್ನ ಮನೆಯವರೇ ಭರಿಸಿದ್ದಾರೆ.
ಇದನ್ನೂ ಓದಿ:
ಬಳಿಕ ಆತನ ಮನೆಯಾದ ಪೆರ್ಮುದೆಯಲ್ಲಿ ವಾಸವಾಗಿದ್ದೆ. ಅಲ್ಲಿ ಮನಿಷ್, ಅತ್ತೆ, ಮೈದುನ, ಆತನ ಹೆಂಡತಿ ದೈಹಿಕ ಮತ್ತು ಮಾನಸಿಕವಾಗಿ ಹಿಂಸೆ ನೀಡಲು ಆರಂಭಿಸಿದ್ದಾರೆ. ತವರು ಮನೆಯಿಂದ ಕೊಟ್ಟಿದ್ದ ಚಿನ್ನಾಭರಣಗಳನ್ನು ಮಾರಾಟ ಮಾಡಿ, ಮನೆಯ ಖರ್ಚಿಗೂ ಹಣ ಪಡೆದಿದ್ದಾರೆ. ಈ ಬಗ್ಗೆ ಆಕ್ಷೇಪಿಸಿದರೆ ಹೊಡೆದು, ಬೈಯುತ್ತಿದ್ದರು. ಯಾರಿಗಾದರೂ ತಿಳಿಸಿದರೆ ಜೀವ ಸಹಿತ ಬಿಡುವುದಿಲ್ಲ ಎಂದು ಬೆದರಿಕೆ ಹಾಕಿದ್ದಾರೆ.
ಮದುವೆಯ ಒಂದು ವರ್ಷದ ಬಳಿಕ ಮನೀಷ್ ವಿದೇಶಕ್ಕೆ ಹೋಗಿದ್ದು, 2024ರ ಜೂನ್ ನಲ್ಲಿ ವಾಪಾಸು ಬಂದಾಗ ಮತ್ತೆ ಅವಾಚ್ಯ ಶಬ್ದಗಳಿಂದ ಬೈದು ಜೀವ ಬೆದರಿಕೆ ಹಾಕಿದ್ದಾನೆ. ಆಗಸ್ಟ್ ನಲ್ಲಿ ವಿದೇಶಕ್ಕೆ ಹೋದ ಬಳಿಕ ಅಲ್ಲಿ ಸ್ವಾತಿ ಎಂಬಾಕೆಯನ್ನು ಪ್ರೀತಿಸುತ್ತಿರುವ ವಿಚಾರ ತಿಳಿದು ಬಂದಿದೆ. ಈ ಬಗ್ಗೆ ವಿಚಾರಿಸಿದಾಗ ಕೆಟ್ಟದಾಗಿ ಬೈದು, ವಿಚ್ಛೇದನ ಕೊಟ್ಟು ಆಕೆಯನ್ನು ಮದುವೆಯಾಗುವುದಾಗಿ ತಿಳಿಸಿ ಸಂಪರ್ಕ ಕಡಿತಗೊಳಿಸಿದ್ದಾನೆ ಎಂದು ದೂರಿನಲ್ಲಿ ವಿವರಿಸಿದ್ದಾರೆ.
ಇದನ್ನೂ ಓದಿ:
ಸುರತ್ಕಲ್ : ಪ್ರೀತಿಸುವುದಾಗಿ ನಂಬಿಸಿ ದೈಹಿಕ ಸಂಪರ್ಕ ಬೆಳೆಸಿ ವಂಚನೆ ಆರೋಪ: ಅಪ್ರಾಪ್ತೆ ಆತ್ಮಹತ್ಯೆ; ಯುವಕನ ವಿರುದ್ಧ ಪೋಕ್ಸೊ ಪ್ರಕರಣ ದಾಖಲು…
ರಾಜ್ಯ ಸರ್ಕಾರದಿಂದ 133 ಪ್ರಧಾನಮಂತ್ರಿ ಜನೌಷಧಿ ಕೇಂದ್ರಗಳಿಗೆ ಶೋಕಾಸ್ ನೋಟಿಸ್ ಬೆಂಗಳೂರು: ರಾಜ್ಯ ಸರ್ಕಾರ 133 ಪ್ರಧಾನಮಂತ್ರಿ ಜನೌಷಧಿ ಕೇಂದ್ರಗಳಿಗೆ …
ಉಡುಪಿ: ಅಸ್ವಸ್ಥಗೊಂಡ ಪ್ರಯಾಣಿಕ ; ಬಸ್‌ನಲ್ಲೇ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಪ್ರಾಣ ಉಳಿಸಿದ ಚಾಲಕ ಉಡುಪಿ : ಶಿವಮೊಗ್ಗದಿಂದ ಬರುತ್ತಿದ್ದ ಖಾಸಗಿ…
ಮುಂಬೈನಲ್ಲಿ ಮುಂಗಾರು: ತಗ್ಗು ಪ್ರದೇಶಗಳು ಜಲಾವೃತ, ರೈಲು ಸಂಚಾರ ವ್ಯತ್ಯಯ ಮುಂಬೈ: ಮುಂಬೈನಲ್ಲಿ ಮುಂಗಾರು ಆರಂಭವಾದ ಒಂದು ದಿನದ ನಂತರ,…
ಜೂ.25ಕ್ಕೆ ಮಂಗಳೂರಿಗೆ ಶಾರುಖ್ ಖಾನ್: ರೋಹನ್ ಕಾರ್ಪೊರೇಶನ್ ವಿಶೇಷ ಕಾರ್ಯಕ್ರಮದಲ್ಲಿ ಭಾಗಿ ಮಂಗಳೂರು: ಬಾಲಿವುಡ್ ನ ಖ್ಯಾತ ನಟ ಹಾಗೂ…
ಕರ್ತವ್ಯದ ವೇಳೆ ಹೃದಯಾಘಾತ : ಡಿಎಆರ್ ಪೊಲೀಸ್ ಕಾನ್ಸ್‌ಟೇಬಲ್ ಸಾವು ರಾಯಚೂರು: ಜಿಲ್ಲೆಯ ದೇವದುರ್ಗ ಜಿಲ್ಲಾ ಸಶಸ್ತ್ರ ಮೀಸಲು ಪಡೆ ಕಾನ್ಸ್‌ಟೇಬಲ್…