ಮಂಗಳೂರು,: ಬಾಲಕನಿಗೆ ಕೆಮ್ಮು, ಉಸಿರಾಟ ತೊಂದರೆ, ಜ್ವರ ಕಡಿಮೆಯಾಗದ ಹಿನ್ನೆಲೆಯಲ್ಲಿ ವೈದ್ಯರನ್ನು ಸಂಪರ್ಕಿಸಿ, ಎಕ್ಸ್‌ರೇ ತೆಗೆ ದಾಗ ಶ್ವಾಸಕೋಶದಲ್ಲಿ ಗುಂಡುಸೂಜಿ ಕಂಡು ಬಂದಿರುವ ಪ್ರಕರಣವೊಂದು ನಗರದ ಹೊರ ವಲಯದ ಬಜಾಲ್‌ನಿಂದ ವರದಿಯಾಗಿದೆ.
ಬಜಾಲ್ ಪಕ್ಕಲಡ್ಕ ನಿವಾಸಿ ಅಬ್ದುಲ್ ಖಾದರ್ ಎಂಬವರ ಪುತ್ರ ಮುಬಶ್ಶಿರ್ (12) ಎಂಬವರ ಶ್ವಾಸಕೋಶದಲ್ಲಿ ಗುಂಡುಸೂಜಿ ಪತ್ತೆಯಾಗಿದೆ.
ಸುಮಾರು 15 ದಿನಗಳಿಂದ ಮುಬಶ್ಶಿರ್‌ಗೆ ನಿರಂತವಾಗಿ ಕೆಮ್ಮು, ಜ್ವರ ಕಂಡುಬಂದಿತ್ತು. ಇದೊಂದು ಸಾಮಾನ್ಯ ರೋಗ ಲಕ್ಷಣವೆಂದು ಪರಿಗಣಿಸಿದ್ದ ಪೋಷಕರು ಚಿಕಿತ್ಸೆ ಕೊಡಿಸಿದ್ದರು. ಅಲ್ಪ ಪ್ರಮಾಣದಲ್ಲಿ ಚೇತರಿಕೆ ಕಂಡುಬಂದರೂ ಕೆಮ್ಮು ನಿಂತಿರಲಿಲ್ಲ. ಜ್ವರವೂ ಮತ್ತೆ ಕಾಡತೊಡಗಿತು. ಈ ಹಿನ್ನೆಲೆಯಲ್ಲಿ ಪೋಷಕರು ಆತನನ್ನು ತಜ್ಞ ವೈದ್ಯರಿಗೆ ತೋರಿಸಿದರು.
ಇದನ್ನೂ ಓದಿ : ಮಂಗಳೂರು : ಅನಾಥೆಯಾಗಿ ರೈಲ್ವೇ ನಿಲ್ದಾಣದಲ್ಲಿ ಪತ್ತೆಯಾಗಿದ್ದ ಈಕೆಗೆ ಪೊಲೀಸ್ ಠಾಣೆಯೇ ಆಸರೆ -Vishwanews24
ಕಂಕನಾಡಿಯ ಮಕ್ಕಳ ತಜ್ಞವೈದ್ಯ ಡಾ.ರಾಮ್‌ಗೋಪಾಲ್ ಶಾಸ್ತ್ರಿಯವರಲ್ಲಿ ಚಿಕಿತ್ಸೆಗೆ ದಾಖಲಿಸಲಾಯಿತು. ಎಕ್ಸ್‌ರೇ ತೆಗೆಸಿದಾಗ ಮುಬಶ್ಶಿರ್‌ನ ಶ್ವಾಸಕೋಶದಲ್ಲಿ ಗುಂಡುಸೂಜಿ ಇರುವುದು ಪತ್ತೆಯಾದಾಗ ವೈದ್ಯರು ಸಹಿತ ಪೋಷಕರು ಆಶ್ವರ್ಯಚಕಿತರಾಗಿದ್ದರು. ಆದರೆ ಮುಬಶ್ಶೀರ್ ನಿಗೆ ಗುಂಡುಸೂಜಿ ಹೇಗೆ ಶ್ವಾಸಕೋಶ ಸೇರಿತೆಂದೇ ಗೊತ್ತಿಲ್ಲದಿರುವುದು ಮತ್ತೊಂದು ಅಚ್ಚರಿಯಾಗಿದೆ.
ಇದನ್ನೂ ಓದಿ : ಮಂಗಳೂರು : ಚಾರ್ಮಾಡಿ ಘಾಟ್ ಸಂಚಾರಕ್ಕೆ ಮತ್ತೆ ನಿರ್ಬಂಧ -Vishwanews24
ಬಾಲಕನ ಬಲಬದಿಯ ಶ್ವಾಸಕೋಶದಲ್ಲಿ ನೋಟಿಸ್ ಬೋರ್ಡಿಗೆ ಬಳಸಲಾಗುವ ಗುಂಡುಸೂಜಿ ಪತ್ತೆಯಾಗಿದೆ. ಬಾಲಕನಿಗೆ ಶಸ್ತ್ರಚಿಕಿತ್ಸೆ ನೀಡಲೆಂದು ದೇರಳಕಟ್ಟೆಯ ಕೆ.ಎಸ್.ಹೆಗ್ಡೆ ಆಸ್ಪತ್ರೆಗೆ ದಾಖಲಿಸಲಾಯಿತು. ಕೂಲಂಕಷವಾಗಿ ಪರೀಕ್ಷಿಸಿದ ವೈದ್ಯರು, ವೈದ್ಯಕೀಯ ಉಪಕರಣವೊಂದನ್ನು ಬಳಸಿ ಪೈಪ್ ಮಾದರಿಯ ವಸ್ತುವೊಂದರ ಸಹಾಯದಿಂದ ಗುಂಡುಸೂಜಿಯನ್ನು ಯಶಸ್ವಿಯಾಗಿ ಹೊರತೆಗೆದಿದ್ದಾರೆ.
ಇದನ್ನೂ ಓದಿ : ಉಡುಪಿ : ಕೋಟ ಶ್ರೀ ಅಮೃತೇಶ್ವರಿ ದೇವಿಗೆ ಮುಸ್ಲಿಂ ಕುಟುಂಬದಿಂದ ತುಲಾಭಾರ ಸೇವೆ -Vishwanews24
ಅ.15ರಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ದ.ಕ. ಮತ್ತು ಉಡುಪಿ ಪ್ರವಾಸ ಮಂಗಳೂರು ಉಚ್ಚಿಲ ದಸರಾ ನವರಾತ್ರಿ ಮಹೋತ್ಸವ ದಲ್ಲಿ ಭಾಗಿ…
ಉಡುಪಿ ಉಚ್ಚಿಲ ದಸರಾ -2026 ರಾಜ್ಯ ಮಟ್ಟದ ನೃತ್ಯ ಸ್ಪರ್ಧೆ ; ಟ್ರೋಫಿ ಗೆದ್ದುಕೊಂಡ ಉಡುಪಿಯ ಎಕ್ಸ್ಟ್ರಿಮ್ ಡ್ಯಾನ್ಸ್ ಅಕಾಡೆಮಿ…
ಉಡುಪಿ: ‘ಭಾರತ್ ಮಾತಾ ಕೀ ಜೈ’ ಘೋಷಣೆ ಕೂಗಿದ ವಿದ್ಯಾರ್ಥಿಗಳ ಮೇಲೆ ಹಲ್ಲೆ ಆರೋಪ; ಪೊಲೀಸ್ ಅಧಿಕಾರಿಯ ವಿರುದ್ಧ ಕಠಿಣ…
ದಸರಾ ರಜೆ ವೇಳೆ ಪರೀಕ್ಷೆ ವಿವಾದ: ಅ.19 ಮತ್ತು 22ರ ಪರೀಕ್ಷೆ ಮುಂದೂಡಿದ ಸೈಂಟ್ ಆಗ್ನೆಸ್ ಕಾಲೇಜು ಮಂಗಳೂರು: ದಸರಾ…
`ಬ್ರೇಕಿಂಗ್ ಬ್ಯಾಡ್' ಖ್ಯಾತಿಯ ಹಾಲಿವುಡ್ ನಟ ಆರ್ಜೆ ಮಿಟ್ಟೆ ನಿಧನ ಅಮೆರಿಕದ ಜನಪ್ರಿಯ ಟಿವಿ ಸರಣಿ `ಬ್ರೇಕಿಂಗ್ ಬ್ಯಾಡ್’ನಲ್ಲಿ ವಾಲ್ಟರ್…
ಮಂಗಳೂರಿನಲ್ಲಿ ಹೈಕೋರ್ಟ್ ಪೀಠ ಸ್ಥಾಪನೆಗೆ ಅಧಿಕಾರಿಗಳ ಸಮಿತಿ ರಚನೆ: ಸಚಿವ ಯು.ಟಿ. ಖಾದರ್ ಮಂಗಳೂರು: ಮಂಗಳೂರಿನಲ್ಲಿ ಹೈಕೋರ್ಟ್ ಪೀಠ ಸ್ಥಾಪನೆ…