Featured

ಮಂಗಳೂರು: ಬುರ್ಕಾ ಧರಿಸಿ ಹಿಂದಿ ಐಟಂ ಸಾಂಗ್‌ಗೆ ಸ್ಟೆಪ್ ; ನಾಲ್ವರು ಮುಸ್ಲಿಂ ವಿದ್ಯಾರ್ಥಿಗಳ ಅಮಾನತು – Vishwanews24

ಬುರ್ಕಾ ಧರಿಸಿ ಹಿಂದಿ ಐಟಂ ಸಾಂಗ್‌ಗೆ ಸ್ಟೆಪ್..

ನಾಲ್ವರು ಮುಸ್ಲಿಂ ವಿದ್ಯಾರ್ಥಿಗಳ ಅಮಾನತು..

ಮಂಗಳೂರು: ಬುರ್ಕಾ ಧರಿಸಿ ಹಿಂದಿ ಐಟಂ ಸಾಂಗ್‌ಗೆ ಸ್ಟೆಪ್ ಹಾಕಿದ ನಾಲ್ವರು ಮುಸ್ಲಿಂ ವಿದ್ಯಾರ್ಥಿಗಳನ್ನು ಅಮಾನತುಗೊಳಿಸಿರುವ ಘಟನೆ ಮಂಗಳೂರಿನ ವಾಮಂಜೂರು ಸೇಂಟ್‌ ಜೋಸೆಫ್ ಇಂಜಿನಿಯರಿಂಗ್ ಕಾಲೇಜಿನಲ್ಲಿ ನಡೆದಿದೆ.

ಮುಸ್ಲಿಂ ವಿದ್ಯಾರ್ಥಿಗಳು ಕಾಲೇಜಿನ ವಿದ್ಯಾರ್ಥಿ ಘಟಕ ಕಾರ್ಯಕ್ರಮದಲ್ಲಿ ಬುರ್ಖಾ ಧರಿಸಿ ನೃತ್ಯ ಮಾಡಿದ ವೀಡಿಯೋ ಜಾಲತಾಣದಲ್ಲಿ ಹರಿದಾಡುತ್ತಿದೆ.

ಸಾಮಾಜಿಕ ಜಾಲತಾಣದಲ್ಲಿ ಮುಸ್ಲಿಂ ವಿದ್ಯಾರ್ಥಿಗಳ ನೃತ್ಯಕ್ಕೆ ಭಾರೀ ಆಕ್ರೋಶ ವ್ಯಕ್ತವಾಗುತ್ತಿದ್ದಂತೆ ಪ್ರಾಂಶುಪಾಲ ಡಾ.ಸುಧೀರ್ ವಿದ್ಯಾರ್ಥಿನಿಯರನ್ನು ಅಮಾನತುಗೊಳಿಸಿದ್ದಾರೆ.

ಈ ಡ್ಯಾನ್ಸ್‌ ಅನ್ನು ಮುಸ್ಲಿಂ ವಿದ್ಯಾರ್ಥಿಗಳೇ ಮಾಡಿದ್ದಾರೆ ಎಂದು ಹೇಳಲಾಗಿದೆ. ಬಳಿಕ ಡ್ಯಾನ್ಸ್‌ ಮಾಡಿದ ವಿಡಿಯೊವನ್ನು ಸೋಷಿಯಲ್‌ ಮೀಡಿಯಾದಲ್ಲಿ ಹರಿಬಿಡಲಾಗಿದ್ದು, ವೈರಲ್‌ ಆಗಿದೆ. ಈ ವೇಳೆ ಇದು ಮುಸ್ಲಿಂ ಸಮುದಾಯದವರ ಆಕ್ರೋಶಕ್ಕೆ ಗುರಿಯಾಗಿದೆ. ಅಲ್ಲದೆ, ಕಾಲೇಜಿನ ಮೇಲೆ ಆಕ್ರೋಶವನ್ನು ವ್ಯಕ್ತಪಡಿಸಿದ್ದರು.

ಈ ಹಿನ್ನಲೆಯಲ್ಲಿ ಬುರ್ಕಾ ಹಾಕಿಕೊಂಡು ಡ್ಯಾನ್ಸ್‌ ಮಾಡಿದ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ವಾಮಂಜೂರು ಸೈಂಟ್ ಜೋಸೆಫ್ ಇಂಜಿನಿಯರಿಂಗ್ ಕಾಲೇಜಿನ ಪ್ರಾಂಶುಪಾಲ ಡಾ.ಸುಧೀರ್ ಅವರು ನಾಲ್ಕೂ ವಿದ್ಯಾರ್ಥಿಗಳನ್ನು ಅಮಾನತುಗೊಳಿಸಿ ಆದೇಶಿಸಿದ್ದಾರೆ. ಮುಂದಿನ ವಿಚಾರಣೆವರೆಗೆ ಈ ಆದೇಶ ಚಾಲ್ತಿಯಲ್ಲಿರಲಿದೆ ಎಂದು ಹೇಳಿದ್ದಾರೆ. ಅಲ್ಲದೆ, ಯಾವುದೇ ಸಮುದಾಯಗಳ ಧಾರ್ಮಿಕ ಭಾವನೆಗಳಿಗೆ ಧಕ್ಕೆ ಬರುವ ಯಾವುದೇ ರೀತಿಯ ಚಟುವಟಿಕೆಯನ್ನು ಬೆಂಬಲಿಸುವುದಿಲ್ಲ ಹಾಗೂ ಆಯೋಜನೆಗೆ ಅವಕಾಶ ಕೊಡುವುದಿಲ್ಲ. ಕ್ಯಾಂಪಸ್‌ನಲ್ಲಿರುವ ಎಲ್ಲ ವಿದ್ಯಾರ್ಥಿಗಳು ನಮ್ಮ ಕಾಲೇಜಿನ ನೀತಿಯನ್ನು ಅಳವಡಿಕೆ ಮಾಡಿಕೊಳ್ಳುವುದು ಕಡ್ಡಾಯ ಎಂದು ಆದೇಶದಲ್ಲಿ ಉಲ್ಲೇಖಿಸಲಾಗಿದೆ.

Vishwa News 24

Recent Posts

ಉಳ್ಳಾಲ: ನಾಪತ್ತೆಯಾಗಿದ್ದ ಕುಂದಾಪುರ ಮೂಲದ ಮೀನುಗಾರನ  ಮೃತದೇಹ ಪತ್ತೆ -vishwanews24

ಉಳ್ಳಾಲ: ನಾಪತ್ತೆಯಾಗಿದ್ದ ಕುಂದಾಪುರ ಮೂಲದ ಮೀನುಗಾರನ  ಮೃತದೇಹ ಪತ್ತೆ ಉಳ್ಳಾಲ : ಮೀನುಗಾರಿಕೆಗೆ ತೆರಳಿದ್ದ ವೇಳೆ ದೈತ್ಯ ಗಾತ್ರದ ಅಲೆಗೆ…

1 day ago

ನಿರೂಪಣಾ ವೃತ್ತಿಗೆ ಅಧಿಕೃತವಾಗಿ ನಿವೃತ್ತಿ ಘೋಷಿಸಿದ ಅನುಪಮಾ ಗೌಡ -vishwanews24

ನಿರೂಪಣಾ ವೃತ್ತಿಗೆ ಅಧಿಕೃತವಾಗಿ ನಿವೃತ್ತಿ ಘೋಷಿಸಿದ ಅನುಪಮಾ ಗೌಡ ಬೆಂಗಳೂರು : ನಟಿ ಅನುಪಮಾ ಗೌಡ ಅವರು ನಟನೆಯ ಮೂಲಕ…

1 day ago

ಉಪ್ಪೂರು : ವಯೋವಂದನ ಆತಿಥ್ಯ ಗೃಹ “ಸೈಟ್ ಆಫೀಸ್” ಉದ್ಘಾಟನೆ ; ರಾಷ್ಟ್ರಧ್ವಜಾರೋಹಣ, ವೃಕ್ಷಾರೋಪಣ ಕಾರ್ಯಕ್ರಮ -vishwanews24

ಉಪ್ಪೂರು : ವಯೋವಂದನ ಆತಿಥ್ಯ ಗೃಹ "ಸೈಟ್ ಆಫೀಸ್" ಉದ್ಘಾಟನೆ ; ರಾಷ್ಟ್ರಧ್ವಜಾರೋಹಣ, ವೃಕ್ಷಾರೋಪಣ ಕಾರ್ಯಕ್ರಮ ಉಡುಪಿ ಜಿಲ್ಲೆ ಬ್ರಹ್ಮಾವರ…

3 days ago

ಪುತ್ತೂರು:  ಕೆಎಸ್‌ಆರ್‌ಟಿಸಿ ಬಸ್ – ಬೈಕ್ ನಡುವೆ ಭೀಕರ ಅಪಘಾತ : ಸವಾರ ಸ್ಥಳದಲ್ಲೇ ಮೃತ್ಯು – vishwanews24

ಪುತ್ತೂರು:  ಕೆಎಸ್‌ಆರ್‌ಟಿಸಿ ಬಸ್ ಮತ್ತು ಬೈಕ್ ನಡುವೆ  ಭೀಕರ ಅಪಘಾತ: ಸವಾರ ಸ್ಥಳದಲ್ಲೇ ಮೃತ್ಯು ಪುತ್ತೂರು: ಕೆಯ್ಯರು ಗ್ರಾಮದ ಬೊಳಿಕ್ಕಳ…

4 days ago

ಸೆ.30ರೊಳಗೆ ಎಲ್ಲ ಪಡಿತರ ಚೀಟಿದಾರರು e-KYC ಮಾಡಿಸುವುದು ಕಡ್ಡಾಯ : ಸಚಿವ ರಿಜ್ವಾನ್ ಅರ್ಷದ್ – vishwanews24

ಸೆ.30ರೊಳಗೆ ಎಲ್ಲ ಪಡಿತರ ಚೀಟಿದಾರರು e-KYC ಮಾಡಿಸುವುದು ಕಡ್ಡಾಯ : ಸಚಿವ ರಿಜ್ವಾನ್ ಅರ್ಷದ್ ಬೆಂಗಳೂರು : ಕೇಂದ್ರ ಸರಕಾರದ…

4 days ago

ಬೆಂಗಳೂರು: ಕೌಟುಂಬಿಕ ಕಲಹ ; ಹೆಂಡತಿ ಕೊಂದು ಗಂಡ ಆತ್ಮಹತ್ಯೆ – vishwanews24

ಬೆಂಗಳೂರು: ಕೌಟುಂಬಿಕ ಕಲಹ ; ಹೆಂಡತಿ ಕೊಂದು ಗಂಡ ಆತ್ಮಹತ್ಯೆ ಬೆಂಗಳೂರು: ನಗರದ ರಾಜೇಶ್ವರಿ ನಗರದಲ್ಲಿ ಹೆಂಡತಿಯನ್ನು ಕೊಂದು ಗಂಡ…

4 days ago