Featured

ಮಂಗಳೂರು:  ಭಾರತೀಯ ಜನತಾ ಪಾರ್ಟಿಯಲ್ಲಿ ನಳಿನ್ ವಿದೂಷಕ ಇದ್ದ ಹಾಗೆ : ಸಿದ್ಧರಾಮಯ್ಯ – Vishwanews24

ಮಂಗಳೂರು:  ಭಾರತೀಯ ಜನತಾ ಪಾರ್ಟಿಯಲ್ಲಿ ನಳಿನ್ ವಿದೂಷಕ ಇದ್ದ ಹಾಗೆ : ಸಿದ್ಧರಾಮಯ್ಯ ವ್ಯಂಗ್ಯ

ಮಂಗಳೂರು: ‘ಈ ಕಟೀಲ್ ಇದ್ದಾರಲ್ಲ ಅವರು ಜೋಕರ್ ಇದ್ದ ಹಾಗೆ. ಅವರು ಬಹಳ ಬಾಲಿಶವಾಗಿ, ಬೇಜವಬ್ದಾರಿಯಿಂದ ಮಾತಾಡ್ತಾರೆ. ಭಾರತೀಯ ಜನತಾ ಪಾರ್ಟಿಯಲ್ಲಿ ಅವರು ವಿದೂಷಕ ಇದ್ದ ಹಾಗೆ’ ಎಂದು ವಿರೋಧ ಪಕ್ಷದ ನಾಯಕ ಸಿದ್ಧರಾಮಯ್ಯ ವ್ಯಂಗ್ಯವಾಡಿದ್ದಾರೆ.

ಮಂಗಳೂರು ಹೊರವಲಯದ ಹರೇಕಳ ಕಾಂಗ್ರೆಸ್ ಕಾರ್ಯಕರ್ತರ ಸಮಾವೇಶದಲ್ಲಿ ಭಾಗವಹಿಸಲು ಮಂಗಳೂರಿಗೆ ಆಗಮಿಸಿದ ಅವರು ಕುದ್ರೋಳಿ ದೇವಳಕ್ಕೆ ಆಗಮಿಸಿ ಪೂಜೆ ಸಲ್ಲಿಸಿದರು.

ನಂತರ ಮಾಧ್ಯಮದವರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು ‘ನಾನು ಮುಖ್ಯಮಂತ್ರಿಗೆ ನಾಯಿಮರಿ ಅಂತ ಹೇಳಿಲ್ಲ. ಧೈರ್ಯವಿರಬೇಕು. ಧೈರ್ಯದಲ್ಲಿ ಕೇಂದ್ರ ಸರ್ಕಾರದ ಜೊತೆ ಮಾತನಾಡಬೇಕು.

ಅಲ್ಲಿಂದ ಅನುದಾನ ಬರೋದು ಕಡಿಮೆ ಆಗಿದೆ. ನಾಯಿಮರಿ ಥರ ಇರಬೇಡಿ ಅಂತ ಹೇಳಿದಷ್ಟೇ. ನಮಗೆ ಟಗರು, ಹುಲಿಯ ಅಂತಾರೆ ಹಾಗಂದ ಮಾತ್ರಕ್ಕೆ ನಾನು ಟಗರು ಆದ್ನಾ…?

ಯಡಿಯೂರಪ್ಪನವರನ್ನು ರಾಜಾಹುಲಿ ಅಂತಾರೆ. ಅದೂ ಅವರ ಪಕ್ಷದವರೇ ಕರೆಯೋದು. ಹಾಗಂದ ಮಾತ್ರಕ್ಕೆ ಯಡಿಯೂರಪ್ಪ ಹುಲಿನಾ…? ಇವರ ಸರ್ಕಾರದಲ್ಲಿ ಭ್ರಷ್ಟಾಚಾರ ಇಲ್ಲದೆ ಏನೂ ನಡೆಯೋದಿಲ್ಲ. ಎಲ್ಲದರಲ್ಲೂ ಲಂಚ ಲಂಚ’ ಎಂದು ಹೇಳಿದರು.

ಮತ್ತೆ ಮಾಧ್ಯಮದವರು ನಳಿನ್ ಕುಮಾರ್ ಕಟೀಲ್ ಬಗ್ಗೆ ಪ್ರಶ್ನೆ ಮಾಡಲು ಹೋದಾಗ ‘ಐ ಡು ನಾಟ್ ರಿಪ್ಲೈ ಟು ಮಿಸ್ಟರ್ ಕಟೀಲ್. ಬಿಕಾಸ್ ಹಿ ಇಸ್ ಜೋಕರ್ ಆಫ್ ಬಿಜೆಪಿ ಪಾರ್ಟಿ’ ಎಂದು ನುಡಿದಿದ್ದಾರೆ.

Vishwa News 24

Recent Posts

ಶಿರ್ವ : ಸೂಡ ಪರಿಸರದಲ್ಲಿ ಚಿರತೆ ಪ್ರತ್ಯಕ್ಷ: ಗ್ರಾಮಸ್ಥರು, ಶಾಲಾ ಮಕ್ಕಳಲ್ಲಿ ಆತಂಕ – vishwanews24

ಶಿರ್ವ : ಸೂಡ ಪರಿಸರದಲ್ಲಿ ಚಿರತೆ ಪ್ರತ್ಯಕ್ಷ: ಗ್ರಾಮಸ್ಥರು, ಶಾಲಾ ಮಕ್ಕಳಲ್ಲಿ ಆತಂಕ ಶಿರ್ವ: ಸೂಡ ಶ್ರೀ ಸುಬ್ರಹ್ಮಣ್ಯ ದೇವಸ್ಥಾನ…

8 minutes ago

ಭಾರತೀಯ ವಾಯುಪಡೆಯ ನೂತನ ಮುಖ್ಯಸ್ಥರಾಗಿ ಏರ್ ಮಾರ್ಷಲ್ ಅಶುತೋಷ್ ದೀಕ್ಷಿತ್ ನೇಮಕ – vishwanews24

ಭಾರತೀಯ ವಾಯುಪಡೆಯ ನೂತನ ಮುಖ್ಯಸ್ಥರಾಗಿ ಏರ್ ಮಾರ್ಷಲ್ ಅಶುತೋಷ್ ದೀಕ್ಷಿತ್ ನೇಮಕ ನವದೆಹಲಿ: ಭಾರತೀಯ ವಾಯುಪಡೆಯ ಮುಂದಿನ ಮುಖ್ಯಸ್ಥರಾಗಿ ಏರ್…

16 minutes ago

ಕಾರ್ಕಳ : ಮನೆಯ ಗೋಡೌನ್‌ನಿಂದ 95 ಸಾವಿರ ರೂ. ಮೌಲ್ಯದ ಅಡಿಕೆ ಕಳವು – vishwanews24

ಕಾರ್ಕಳ : ಮನೆಯ ಗೋಡೌನ್‌ನಿಂದ 95 ಸಾವಿರ ರೂ. ಮೌಲ್ಯದ ಅಡಿಕೆ ಕಳವು ಕಾರ್ಕಳ: ತಾಲೂಕಿನ ಮಿಯ್ಯಾರು ಗ್ರಾಮದ ಮನೆಯೊಂದರ…

24 minutes ago

ಮೋದಿ ಸರ್ಕಾರದಿಂದ ಸರ್ವಾಂಗೀಣ ಅಭಿವೃದ್ಧಿಗೆ ಹೊಸ ದಿಕ್ಕು: ಬಿ.ವೈ .ವಿಜಯೇಂದ್ರ – vishwanews24

ಮೋದಿ ಸರ್ಕಾರದಿಂದ ಸರ್ವಾಂಗೀಣ ಅಭಿವೃದ್ಧಿಗೆ ಹೊಸ ದಿಕ್ಕು: ಬಿ.ವೈ .ವಿಜಯೇಂದ್ರ ಗದಗ: ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ…

30 minutes ago

ದಸರಾ ಸಂಭ್ರಮಕ್ಕೆ KSRTC ವಿಶೇಷ ಟೂರ್ ಪ್ಯಾಕೇಜ್: ಅ.11ರಿಂದ 20ರವರೆಗೆ ಮಂಗಳೂರಿನಿಂದ ವಿಶೇಷ ಬಸ್ ಸೇವೆ – vishwanews24

ಅ.11 ರಿಂದ 20ರವರೆಗೆ ಮಂಗಳೂರು-ಉಡುಪಿ ಕೆಎಸ್‌ಆರ್‌ಟಿಸಿಯಿಂದ ದಸರಾ ಸ್ಪೆಷಲ್ ಟೂರ್ ಪ್ಯಾಕೇಜ್ ಮಂಗಳೂರು: ನವರಾತ್ರಿ ಹಾಗೂ ದಸರಾ ಮಹೋತ್ಸವದ ಹಿನ್ನೆಲೆಯಲ್ಲಿ…

36 minutes ago

ಅ.11ರಿಂದ ಉಚ್ಚಿಲ ದಸರಾ ವೈಭವ : ಚಿನ್ನದ ಹೊಳಪಿನಲ್ಲಿ ಕಂಗೊಳಿಸಲಿದೆ ದಸರಾ ದರ್ಬಾರ್ ಮಂಟಪ – vishwanews24

ಉಚ್ಚಿಲ ದಸರಾಗೆ ಭರ್ಜರಿ ಸಿದ್ಧತೆ:ಶಾರದಾ ಮಾತೆ, ನವದುರ್ಗೆಯರ ಆರಾಧನೆಗೆ ಸಜ್ಜು ಉಚ್ಚಿಲ: ಉಚ್ಚಿಲ ಶ್ರೀ ಮಹಾಲಕ್ಷ್ಮೀ ದೇವಸ್ಥಾನದಲ್ಲಿ ಪಂಚಮ ವರ್ಷದ…

51 minutes ago