Featured

ಮಂಗಳೂರು : ಮಳಲಿ ಮಸೀದಿ ವಿವಾದ ; ಸಂಘಪರಿವಾರ ಈ ವಿಚಾರದಲ್ಲಿ ಇನ್ನು ಮುಂದೆ ವಿವಾದ ಎಬ್ಬಿಸಿದರೆ ಜಿಲ್ಲೆಯ ಮುಸ್ಲಿಮರು ಮೌನವಾಗಿರಲು ಸಾಧ್ಯ ವಿಲ್ಲ : ಅಬೂಬಕ್ಕರ್ ಕುಳಾಯಿ

ಮಸೀದಿಯ ರಚನೆ ಮಂದಿರಕ್ಕೆ ಹೋಲಿಕೆಯಾಗುತ್ತಿದೆ ಎಂಬ ಸುಳ್ಳು ಸುದ್ದಿಯನ್ನು ಶರಣ್ ಪಂಪ್ವೆಲ್  ನೇತೃತ್ವದಲ್ಲಿ ಸಂಘಪರಿವಾರ ಮಸೀದಿಯೊಳಗೆ ಹೋಗಿ ರಾದ್ದಾಂತ ಉಂಟು ಮಾಡಿ ಈ ವಿವಾದ ಸೃಷ್ಟಿ

ತಾಂಬೂಲ, ಜ್ಯೋತಿಷ್ಯ ಇತ್ಯಾದಿಗಳ ಹಿಂದೆ ಹೋಗಿ ಜನರನ್ನು ಮರಳು ಮಾಡುವುದಾದರೆ ಇಲ್ಲಿ ಕಾನೂನು, ಕೋರ್ಟ್, ಕಚೇರಿ, ಪೊಲೀಸ್ ಇಲಾಖೆ, ಜಿಲ್ಲಾಧಿಕಾರಿ ಇತ್ಯಾದಿ ಯಾಕಿದೆ?

ಸಂಘಪರಿವಾರಕ್ಕೆ ತಾಂಬೂಲ ಮಾಡಲು ಅವಕಾಶ ನೀಡಿರುವುದು ಜಿಲ್ಲಾಡಳಿತದ ಮತ್ತೊಂದು ವೈಫಲ್ಯ

ಇಂತಹ ಷಡ್ಯಂತ್ರಗಳ ಮೂಲಕ ಸಮಾಜದ ತಾಳ್ಮೆಯನ್ನು ಪರೀಕ್ಷೆಸುವ ಕೆಲಸಕ್ಕೆ ಕೈ ಹಾಕದಿರಿ..

ಸಂಘಪರಿವಾರ ಈ ವಿಚಾರದಲ್ಲಿ ಇನ್ನು ಮುಂದೆ ವಿವಾದ ಎಬ್ಬಿಸಿದರೆ ಜಿಲ್ಲೆಯ ಮುಸ್ಲಿಮರು ಮೌನವಾಗಿರಲು ಸಾಧ್ಯ ವಿಲ್ಲ

ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ದಕ್ಷಿಣ ಕನ್ನಡ ಜಿಲ್ಲಾಧ್ಯಕ್ಷರಾದ ಅಬೂಬಕ್ಕರ್ ಕುಳಾಯಿ

ಮಂಗಳೂರು: ಮಳಲಿಪೇಟೆಯಲ್ಲಿ ಹಲವಾರು ವರ್ಷಗಳಿಂದ ಮುಸ್ಲಿಮರು ಆರಾಧನೆ ಮಾಡುತ್ತಿದ್ದ ಮಸೀದಿಯನ್ನು ನವೀಕರಣ ಕಾರ್ಯಕ್ಕಾಗಿ ಕಾಮಗಾರಿ ನಡೆಸುತ್ತಿರುವ ಸಂದರ್ಭದಲ್ಲಿ ಆ ಮಸೀದಿಯ ರಚನೆ ಮಂದಿರಕ್ಕೆ ಹೋಲಿಕೆಯಾಗುತ್ತಿದೆ ಎಂಬ ಸುಳ್ಳು ಸುದ್ದಿಯನ್ನು ಹಬ್ಬಿಸಿಕೊಂಡು ಬಜರಂಗದಳದ ಗೂಂಡಾ ನಾಯಕ ಶರಣ್ ಪಂಪ್ವೆಲ್ ಎಂಬವನ ನೇತೃತ್ವದಲ್ಲಿ ಸಂಘಪರಿವಾರ ಮಸೀದಿಯೊಳಗೆ ಹೋಗಿ ರಾದ್ದಾಂತವನ್ನು ಉಂಟು ಮಾಡಿ ಈ ವಿವಾದ ಸೃಷ್ಟಿಸಿದ್ದು ಇದಕ್ಕೆ ಜಿಲ್ಲಾಡಳಿತದ ವೈಫಲ್ಯವೇ ಕಾರಣ ಎಂದು ಎಸ್‌ಡಿಪಿಐ ಆರೋಪಿಸಿದೆ.

ಮಳಲಿಪೇಟೆಯ ಪುರಾತನ ಮಸೀದಿಗೆ ಸಂಬಂಧಿಸಿದಂತೆ ಎಲ್ಲಾ ದಾಖಲೆಗಳು ಸರಿಯಾಗಿಯೇ ಇದ್ದರೂ ಅವೆಲ್ಲವನ್ನೂ ಗಾಳಿಗೆ ತೂರಿ ತಾಂಬೂಲ ಎಂಬ ನಾಟಕೀಯ ವಿಧ್ಯಮಾನವನ್ನು ಸೃಷ್ಟಿಸಿ ಜನರೆಡೆಯಲ್ಲಿ ಸುಳ್ಳು ಸುದ್ದಿಯನ್ನು ಹಬ್ಬುವ ಮೂಲಕ ಸಮಾಜದಲ್ಲಿ ಕೋಮುಗಳ ಮಧ್ಯೆ ಬಿರುಕು ಹುಟ್ಟಿಸಿ ದ್ವೇಷ ಹರಡಿಸಲು ನಡೆಸಿದ ಸಂಚಾಗಿದೆ.

ಸಂಘಪರಿವಾರಕ್ಕೆ ತಾಂಬೂಲ ಮಾಡಲು ಅವಕಾಶ ನೀಡಿರುವುದು ಜಿಲ್ಲಾಡಳಿತದ ಮತ್ತೊಂದು ವೈಫಲ್ಯವಾಗಿದೆ.

ವಿವಾದ ನಡೆದ ತಕ್ಷಣ ಅದರ ದಾಖಲೆ ಪರಿಶೀಲಿಸಿ ವಿವಾದವನ್ನು ತಕ್ಷಣ ಪರಿಹರಿಸಿಕೊಡಬೇಕಾಗಿದ್ದ ಜಿಲ್ಲಾಡಳಿತ ಮತ್ತು ಪೋಲಿಸ್ ಇಲಾಖೆ ನಿಷ್ಕ್ರಿಯವಾಗಲು ಕಾರಣವೇನು? ಮಸೀದಿ ನವೀಕರಣಕ್ಕೆ ತಡೆಯೊಡ್ಡಿದ ಜಿಲ್ಲಾಡಳಿತಕ್ಕೆ ಮಂದಿರದ ಬಗ್ಗೆ ನಡೆಸುತ್ತಿರುವ ಸುಳ್ಳು ಪ್ರಚಾರಕ್ಕೆ ತಡೆ ನೀಡಲು ಯಾಕೆ ಸಾಧ್ಯವಾಗಿಲ್ಲ?

ತಾಂಬೂಲ, ಜ್ಯೋತಿಷ್ಯ ಇತ್ಯಾದಿಗಳ ಹಿಂದೆ ಹೋಗಿ ಜನರನ್ನು ಮರಳು ಮಾಡುವುದಾದರೆ ಇಲ್ಲಿ ಕಾನೂನು, ಕೋರ್ಟ್, ಕಚೇರಿ, ಪೊಲೀಸ್ ಇಲಾಖೆ, ಜಿಲ್ಲಾಧಿಕಾರಿ ಇತ್ಯಾದಿ ಯಾಕಿದೆ? ಸದಾ ದ್ವೇಷವನ್ನು ಬಿತ್ತುವುದರಲ್ಲೇ ಕಳೆಯುವ ಗೂಂಡಾ ಶರಣ್ ಪಂಪ್ವೆಲ್‌ನ ವಿರುದ್ಧ ಜಿಲ್ಲಾಡಳಿತ ಯಾಕೆ ಮೌನವಾಗಿದೆ?

ಸಂಘಪರಿವಾರ ಈ ವಿಚಾರದಲ್ಲಿ ಇನ್ನು ಮುಂದೆ ವಿವಾದ ಎಬ್ಬಿಸಿದರೆ ಜಿಲ್ಲೆಯ ಮುಸ್ಲಿಮರು ಮೌನವಾಗಿರಲು ಸಾಧ್ಯ ವಿಲ್ಲ. ಇಲ್ಲಿನ ಯಾವುದೇ ಮಂದಿರವಾಗಲಿ, ಮಸೀದಿಯಾಗಲಿ, ಚರ್ಚ್ ಅಥವಾ ಇನ್ನಿತರ ಆರಾಧನಾಲಯಗಳ ವಿರುದ್ದ ಷಡ್ಯಂತ್ರ ರೂಪಿಸಿದರೆ ಅವೆಲ್ಲದರ ವಿರುದ್ಧ ಎಸ್‌ಡಿಪಿಐ ಹೋರಾಟ ನಡೆಸಲಿದೆ.

ಹಾಗಾಗಿ ಈ ವಿವಾದವನ್ನು ತಕ್ಷಣ ಜಿಲ್ಲಾಡಳಿತ ಮೌನ ಮುರಿದು ಇತ್ಯರ್ಥಗೊಳಿಸಬೇಕು. ಇಂತಹ ಷಡ್ಯಂತ್ರಗಳ ಮೂಲಕ ಸಮಾಜದ ತಾಳ್ಮೆಯನ್ನು ಪರೀಕ್ಷೆಸುವ ಕೆಲಸಕ್ಕೆ ಕೈ ಹಾಕದಿರಿ.

ಇದರಿಂದ ಜಿಲ್ಲೆಯ ಶಾಂತಿ ಕದಡಿದರೆ ಅದಕ್ಕೆ ಜಿಲ್ಲಾಡಳಿತವೇ ಹೊಣೆಯಾಗಲಿದೆ ಎಂದು ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ದಕ್ಷಿಣ ಕನ್ನಡ ಜಿಲ್ಲಾಧ್ಯಕ್ಷರಾದ ಅಬೂಬಕ್ಕರ್ ಕುಳಾಯಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Vishwa News 24

Recent Posts

ನಕಲಿ ಔಷಧಿ ಜಾಲದಲ್ಲಿ ದೊಡ್ಡ ದೊಡ್ಡ ಖಾಸಗಿ ಆಸ್ಪತ್ರೆಗಳು , ಮೆಡಿಕಲ್ ಸ್ಟೋರ್‌ಗಳು: ಯು.ಟಿ.ಖಾದರ್ – vishwanews24

ನಕಲಿ ಔಷಧಿ ಜಾಲದಲ್ಲಿ ದೊಡ್ಡ ದೊಡ್ಡ ಖಾಸಗಿ ಆಸ್ಪತ್ರೆಗಳು ,  ಮೆಡಿಕಲ್ ಸ್ಟೋರ್‌ಗಳು : ಶೀಘ್ರವೇ ತಪ್ಪಿತಸ್ಥ ಆಸ್ಪತ್ರೆಗಳ ಲಿಸ್ಟ್…

3 days ago

ಉಚ್ಚಿಲ : ಮೊಗವೀರ ಕುಲಗುರು ಕೀರ್ತಿಶೇಷ ಶ್ರೀ ಮಾಧವ ಮಂಗಲ ಪೂಜಾರ್ಯರ ಕಂಚಿನ ಪುತ್ಥಳಿ ಅನಾವರಣ – vishwanews24

ಉಚ್ಚಿಲ ಮೊಗವೀರ ಭವನದಲ್ಲಿ ಕೀರ್ತಿಶೇಷ ಮಾಧವ ಮಂಗಲ ಪೂಜಾರ್ಯರ ಕಂಚಿನ ಪುತ್ಥಳಿ ಅನಾವರಣ ಉಚ್ಚಿಲ : ಮೊಗವೀರ ಸಮಾಜದ ಗುರು…

3 days ago

ಮೈಸೂರು ದಸರಾದಲ್ಲಿ ಕರಾವಳಿಯ ಕಂಬಳ : ಅ. 18-19ರಂದು ವಿಜಯ ದಶಮಿ ಕರೆಯಲ್ಲಿ ಜೋಡುಕರೆ ಕಂಬಳ – vishwanews24

ಮೈಸೂರು ದಸರಾದಲ್ಲಿ ಕರಾವಳಿಯ ಕಂಬಳ; ಅ. 18-19ರಂದು ‘ವಿಜಯ ದಶಮಿ’ ಜೋಡುಕರೆ ಕಂಬಳ ಮಂಗಳೂರು: ಮೈಸೂರು ದಸರಾ ಉತ್ಸವದ ಅಂಗವಾಗಿ…

3 days ago

2028ಕ್ಕೂ ಡಿಕೆ ಶಿವಕುಮಾರ್‌ ಅವರೇ ಮುಖ್ಯಮಂತ್ರಿ ಆಗಲಿ, ಅವರಿಂದಲೇ ಪಕ್ಷ ಅಧಿಕಾರಕ್ಕೆ ಬರಲಿ : ಸತೀಶ್ ಜಾರಕಿಹೊಳಿ – vishwanews24

2028ಕ್ಕೂ ಡಿಕೆ ಶಿವಕುಮಾರ್‌ ಅವರೇ ಮುಖ್ಯಮಂತ್ರಿ ಆಗಲಿ, ಅವರಿಂದಲೇ ಪಕ್ಷ ಅಧಿಕಾರಕ್ಕೆ ಬರಲಿ : ಸತೀಶ್ ಜಾರಕಿಹೊಳಿ ಮೈಸೂರು: 2028ಕ್ಕೂ…

3 days ago

ಶಿರ್ವ, ಉಡುಪಿಯಲ್ಲಿ ಮಾದಕ ವಸ್ತು ಮಾರಾಟ ಪ್ರಕರಣ : ಬಂಧಿತರ ಪೈಕಿ ಹಲವರು ಅಪರಾಧ ಕೃತ್ಯಗಳಲ್ಲಿ ಭಾಗಿ – vishwanews24

ಶಿರ್ವ, ಉಡುಪಿಯಲ್ಲಿ ಮಾದಕ ವಸ್ತು ಮಾರಾಟ ಪ್ರಕರಣ : ಬಂಧಿತರ ಪೈಕಿ ಹಲವರು ಅಪರಾಧ ಕೃತ್ಯಗಳಲ್ಲಿ ಭಾಗಿ ಉಡುಪಿ: ಉಡುಪಿ…

3 days ago

ಕುಂದಾಪುರ:  ಶಾರ್ಜಾದಲ್ಲಿ ಕೊಲೆಯಾದ ಅಲ್ವಿನ್ ಪ್ರಕಾಶ್ ಕುಂದರ್ ಅಂತ್ಯಸಂಸ್ಕಾರ ; ಕುಟುಂಬಸ್ಥರ ಆಕ್ರಂದನ – vishwanews24

ಕುಂದಾಪುರ:  ಶಾರ್ಜಾದಲ್ಲಿ ಕೊಲೆಯಾದ ಅಲ್ವಿನ್ ಪ್ರಕಾಶ್ ಕುಂದರ್ ಅಂತ್ಯಸಂಸ್ಕಾರ ; ಕುಟುಂಬಸ್ಥರ ಆಕ್ರಂದನ ಕುಂದಾಪುರ: ಶಾರ್ಜಾದಲ್ಲಿ ಅಮಾನುಷವಾಗಿ ಕೊಲೆಯಾದ ಕುಂದಾಪುರ…

3 days ago