ಮಂಗಳೂರು: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಮಂಗಳೂರು ವಿಭಾಗದಿಂದ ಮಂಗಳೂರು-ಮಂತ್ರಾಲಯ-ಮಂಗಳೂರು ಮಾರ್ಗದಲ್ಲಿ ವೋಲ್ವೋ ಸಾರಿಗೆ ಪ್ರಾರಂಭಿಸಲಾಗುತ್ತಿದೆ.
ಸಾರ್ವಜನಿಕ ಪ್ರಯಾಣಿಕರ ಹಾಗೂ ಭಕ್ತಾಧಿಗಳ ಅನುಕೂಲಕ್ಕಾಗಿ ಅತ್ಯಂತ ಕಡಿಮೆ ದರದಲ್ಲಿ ಮಂಗಳೂರು-ಮಂತ್ರಾಲಯ-ಮಂಗಳೂರು ವಯಾ ಉಡುಪಿ-ಕುಂದಾಪುರ-ಅಂಪಾರು-ಸಿದ್ದಾಪುರ-ತೀರ್ಥಹಳ್ಳಿ-ಶಿವಮೊಗ್ಗ-ಹೊನ್ನಾಳಿ-ಹರಿಹರ-ಹರಪನಹಳ್ಳಿ-ಹಗರಿಬೊಮ್ಮನಹಳ್ಳಿ- ಹೊಸಪೇಟೆ-ಕುಡುತಿನಿ-ಬಳ್ಳಾರಿ-ಆಲೂರು-ಅದೋನಿ ಮಾರ್ಗದಲ್ಲಿ ಈಗಾಗಲೇ ಕಾರ್ಯಾಚರಿಸುತ್ತಿದ್ದ ನಾನ್ ಎಸಿ ಸ್ಲೀಪರ್ ಸಾರಿಗೆಯನ್ನು ಮೇಲ್ದರ್ಜೇಗೆ ಏರಿಸಿ ಪ್ರತಿಷ್ಠಿತ ವೋಲ್ವೋ ಸಾರಿಗೆಯನ್ನು 2022ರ ಮಾ. 30 ರಿಂದ ಪ್ರಾರಂಭಿಸಲಾಗುತ್ತಿದೆ.
ಈ ಸಾರಿಗೆಯು ಮಂಗಳೂರು ಬಸ್ಸು ನಿಲ್ದಾಣದಿಂದ ಸಂಜೆ 6 ಗಂಟೆಗೆ ಹೊರಟು ಉಡುಪಿ 7.15-7.20, ಮಣಿಪಾಲ 7.30, ಕುಂದಾಪುರ 8.15, ಹೊಸಪೇಟೆ ಬೆಳಿಗ್ಗೆ 4.30-4.45, ಕುಡುತಿನಿ, ಬಳ್ಳಾರಿ 5.45-6.00,ಆಲೂರು, ಆದೋನಿ ಮಾರ್ಗವಾಗಿ ಮಂತ್ರಾಲಯಕ್ಕೆ ಬೆಳಿಗ್ಗೆ 7.45ಕ್ಕೆ ತಲುಪುವುದು ಹಾಗೂ ಮರು ಪ್ರಯಾಣವು ಮಂತ್ರಾಲಯದಿಂದ ಸಂಜೆ 6.30 ಗಂಟೆಗೆ ಹೊರಟು ಅದೋನಿ, ಆಲೂರು, ಬಳ್ಳಾರಿ 2100-2115, ಕುಡುತಿನಿ, ಹೊಸಪೇಟೆ 2215, ಮಾರ್ಗವಾಗಿ ಮಂಗಳೂರು ಬೆಳಿಗ್ಗೆ 8.15ಕ್ಕೆ ತಲುಪುವುದು.
ಈ ಸಾರಿಗೆಯಲ್ಲಿ ಮಂಗಳೂರಿನಿಂದ ಮಂತ್ರಾಲಯಕ್ಕೆ ಪ್ರತಿ ಪ್ರಯಾಣಿಕರಿಗೆ ಒಟ್ಟು ಪ್ರಯಾಣದರ 1,150 ರೂ.ಗಳು. ಉಡುಪಿ-ಮಂತ್ರಾಲಯಕ್ಕೆ ಒಟ್ಟು ಪ್ರಯಾಣ ದರ 1,100 ರೂ.ಗಳು ಹಾಗೂ ಕುಂದಾಪುರದಿಂದ-ಮಂತ್ರಾಲಯ ಒಟ್ಟು ಪ್ರಯಾಣದರ 1,050 ರೂ.ಗಳಾಗಿವೆ.
ಈ ಸಾರಿಗೆಗೆ ಅವತಾರ್‍ವ್ಯವಸ್ಥೆ ಮೂಲಕ ಮುಂಗಡ ಆಸನ ಕಾದಿರಿಸುವ ವ್ಯವಸ್ಥೆ ಇದೆ. ಸಾರ್ವಜನಿಕರು ಹತ್ತಿರದ ರಿಸರ್ವೇಶನ್ ಕೌಂಟರ್‍ಗೆ ಸಂಪರ್ಕಿಸಬಹುದಾಗಿದೆ ಹಾಗೂ ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಬೇಕಾದ ದೂರವಾಣಿ ಸಂಖ್ಯೆ- ಮಂಗಳೂರು ಬಸ್ಸು ನಿಲ್ದಾಣ: 7760990720, ಮಂಗಳೂರು ಮುಂಗಡ ಬುಕ್ಕಿಂಗ್ ಕೌಂಟರ್: 9663211553, ಉಡುಪಿ ಬಸ್ಸು ನಿಲ್ದಾಣ: 9663266400, ಕುಂದಾಪುರ ಬಸ್ಸು ನಿಲ್ದಾಣ: 9663266009, ಮಂತ್ರಾಲಯ ಬಸ್ಸು ನಿಲ್ದಾಣ: 08512279444, ಮಂಗಳೂರು-02ನೇ ಘಟಕ 7760990714/7760990728.
ಸಾರ್ವಜನಿಕ ಪ್ರಯಾಣಿಕರು ಸಾರಿಗೆಯ ಪ್ರಯೋಜನವನ್ನು ಪಡೆದುಕೊಳ್ಳುವಂತೆ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಮಂಗಳೂರು ವಿಭಾಗೀಯ ನಿಯಂತ್ರಣಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ನಕಲಿ ಔಷಧಿ ಜಾಲದಲ್ಲಿ ದೊಡ್ಡ ದೊಡ್ಡ ಖಾಸಗಿ ಆಸ್ಪತ್ರೆಗಳು , ಮೆಡಿಕಲ್ ಸ್ಟೋರ್‌ಗಳು : ಶೀಘ್ರವೇ ತಪ್ಪಿತಸ್ಥ ಆಸ್ಪತ್ರೆಗಳ ಲಿಸ್ಟ್…
ಉಚ್ಚಿಲ ಮೊಗವೀರ ಭವನದಲ್ಲಿ ಕೀರ್ತಿಶೇಷ ಮಾಧವ ಮಂಗಲ ಪೂಜಾರ್ಯರ ಕಂಚಿನ ಪುತ್ಥಳಿ ಅನಾವರಣ ಉಚ್ಚಿಲ : ಮೊಗವೀರ ಸಮಾಜದ ಗುರು…
ಮೈಸೂರು ದಸರಾದಲ್ಲಿ ಕರಾವಳಿಯ ಕಂಬಳ; ಅ. 18-19ರಂದು ‘ವಿಜಯ ದಶಮಿ’ ಜೋಡುಕರೆ ಕಂಬಳ ಮಂಗಳೂರು: ಮೈಸೂರು ದಸರಾ ಉತ್ಸವದ ಅಂಗವಾಗಿ…
2028ಕ್ಕೂ ಡಿಕೆ ಶಿವಕುಮಾರ್ ಅವರೇ ಮುಖ್ಯಮಂತ್ರಿ ಆಗಲಿ, ಅವರಿಂದಲೇ ಪಕ್ಷ ಅಧಿಕಾರಕ್ಕೆ ಬರಲಿ : ಸತೀಶ್ ಜಾರಕಿಹೊಳಿ ಮೈಸೂರು: 2028ಕ್ಕೂ…
ಶಿರ್ವ, ಉಡುಪಿಯಲ್ಲಿ ಮಾದಕ ವಸ್ತು ಮಾರಾಟ ಪ್ರಕರಣ : ಬಂಧಿತರ ಪೈಕಿ ಹಲವರು ಅಪರಾಧ ಕೃತ್ಯಗಳಲ್ಲಿ ಭಾಗಿ ಉಡುಪಿ: ಉಡುಪಿ…
ಕುಂದಾಪುರ: ಶಾರ್ಜಾದಲ್ಲಿ ಕೊಲೆಯಾದ ಅಲ್ವಿನ್ ಪ್ರಕಾಶ್ ಕುಂದರ್ ಅಂತ್ಯಸಂಸ್ಕಾರ ; ಕುಟುಂಬಸ್ಥರ ಆಕ್ರಂದನ ಕುಂದಾಪುರ: ಶಾರ್ಜಾದಲ್ಲಿ ಅಮಾನುಷವಾಗಿ ಕೊಲೆಯಾದ ಕುಂದಾಪುರ…