ಮಂಗಳೂರು : ಜಿಲ್ಲೆಯಾದ್ಯಂತ ರಾತ್ರಿಯಿಂದ ಮಳೆಯ ಆರ್ಭಟ ಜೋರಾಗಿದ್ದು, ಈಗಾಗಲೇ ಮುಂಜಾಗ್ರತಾ ಕ್ರಮವಾಗಿ ಇಂದು ಜಿಲ್ಲೆಯ ಎಲ್ಲಾ ಶಾಲೆ, ಕಾಲೇಜುಗಳಿಗೆ ಜಿಲ್ಲಾಡಳಿತ ರಜೆ ಘೋಷಿಸಿದ್ದು, ವಸತಿ ಪ್ರದೇಶಕ್ಕೆ ನೀರು ನುಗ್ಗಿ ಹಲವೆಡೆ ಹಾನಿ ಸಂಭವಿಸಿದೆ
ನಗರದ ಕುಲಶೇಖರದ ಬಜ್ಜೋಡಿಯಲ್ಲಿ ಕ್ಲಾಡಿ ಲೋಬೊ ಎಂಬವರಿಗೆ ಸೇರಿದ ವರ್ಕ್ ಶಾಪ್ ಗೆ ಮಳೆ ನೀರು ನುಗ್ಗಿದ್ದು, ಬೆಳ್ಳಂಬೆಳಗ್ಗೆ ಚರಂಡಿ ನೀರು ನುಗ್ಗಿದ್ದರಿಂದ ಸಿಬ್ಬಂದಿ ತಮ್ಮ ವಸ್ತುಗಳನ್ನು ರಕ್ಷಿಸಿಕೊಳ್ಳಲು ಪರದಾಡುವಂತಾಗಿದೆ.
ಇನ್ನು ಬಿಕರ್ನಕಟ್ಟೆಯಲ್ಲಿರುವ ಜೆರಾಲ್ಡ್ ಲೋಬೋ ಎಂಬವರ ಮನೆಗೆ ಕಾಂಪೌಡ್ ಕುಸಿದು ಬಿದಿದ್ದು, ಮನೆಗೆ ಹಾನಿಯಾಗಿದೆ.
ಬಿಜೆಪಿ ದ.ಕ ಜಿಲ್ಲೆಯ ಕಚೇರಿ ಮುಂದುಗಡೆಯಿಂದ ಅಲೋಶಿಯಸ್ ಪ.ಪೂ ಕಾಲೇಜು ಕಡೆ ಹೊಗಲು ಇರುವ ಕಚ್ಚಾ ರಸ್ತೆ ಕೈಬರ್ ಪಾಸ್ ಮೇಲ್ಗಡೆ ಕೋರ್ಟ್ ರಸ್ತೆ ಇದ್ದು, ಅದರಲ್ಲಿ ಭೂಕುಸಿತ ಆರಂಭಿಕ ಹಂತದಲ್ಲಿ ಇದ್ದು, ವಕೀಲರು, ಪೋಲಿಸ್, ಹಾಗೂ ಸಾರ್ವಜನಿಕ ಸಾವಿರಾರು ಜನ ವಾಹನದ ಹಾಗೂ ನಡೆದು ಓಡಾಡುವ ಸ್ಥಳವಾಗಿದ್ದು, ದೊಡ್ಡದಾದ ದುರಂತವಾಗುವ ಸೂಚನೆ ಕಾಣುತ್ತಿದ್ದು ಮುಂಜಾಗ್ರತೆ ಕ್ರಮ ಕೈಗೊಳ್ಳುವಂತೆ ಸೂಚಿಸಲಾಗಿದೆ.
ಕುಂದಾಪುರ: ನಿಂತ ಲಾರಿಗಳಿಗೆ ಬಸ್ ಢಿಕ್ಕಿ: ಎರಡು ಸಾವು, ಹಲವರಿಗೆ ಗಾಯ ಕುಂದಾಪುರ: ಮರವಂತೆ ಸಮುದ್ರ ಕಿನಾರೆಯ ಎದುರಿನ ರಾಷ್ಟ್ರೀಯ…
ರೇಣುಕಾಸ್ವಾಮಿ ಹತ್ಯೆ ಪ್ರಕರಣ : ಜಾಮೀನಿಗಾಗಿ ಸುಪ್ರೀಂ ಕೋರ್ಟ್ ಮೊರೆ ಹೋದ ದರ್ಶನ್ ನವದೆಹಲಿ : ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ಜೈಲು…
ದ. ಕ, ಉಡುಪಿ ಸೇರಿದಂತೆ 5 ದಿನಗಳ ಕಾಲ ಭಾರೀ ಮಳೆಯ ಮುನ್ಸೂಚನೆ ; 25 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ …
ಉಡುಪಿ ಶ್ರೀಕೃಷ್ಣ ದರ್ಶನಕ್ಕೆ ನೂತನ ಸರತಿ ಸಾಲು ಹಾಗೂ ಐಡಿ ಆಧಾರಿತ ಪ್ರವೇಶ ವ್ಯವಸ್ಥೆ ಉದ್ಘಾಟನೆ ಉಡುಪಿ : ಶ್ರೀ…
ಮಂಗಳೂರು: ಸ್ಕೂಟರ್ ಸವಾರನಿಗೆ ಖಾರದ ಪುಡಿ ಎರಚಿ ದರೋಡೆ; ಪ್ರಕರಣ ದಾಖಲು ಮಂಗಳೂರು: ಗುರುಪುರ ಬಂಗ್ಲಗುಡ್ಡೆ ಬಳಿ ಸ್ಕೂಟರ್ ಸವಾರರೊಬ್ಬರಿಗೆ…
ಪಿಯು ವಿದ್ಯಾರ್ಥಿನಿಯರ ನಾಪತ್ತೆ ಪ್ರಕರಣ: ಸಿಐಡಿ ತನಿಖೆಗೆ ಆದೇಶ 8 ತಿಂಗಳ ಹಿಂದೆ ನಾಪತ್ತೆಯಾಗಿದ್ದ ವಿದ್ಯಾರ್ಥಿಗಳು ಬೆಂಗಳೂರು: ನಗರದ ವಿದ್ಯಾರಣ್ಯಪುರ…